ಬಹಳ ದಿನಗಳ ಹಿಂದೆ ಸಂಪದಿಗ ಮಂಜುನಾಥ್ ನಮ್ಮಲ್ಲಿ ___LINK_OPEN_href="http://sampada.net/blog/ksmanjunatha/26/05/2010/25608" target=_blank___ಒಂದು ಗ್ರಂಥಸಂಗ್ರಹದ ವಿಷಾದನೀಯ ಕಥೆ ಹೇಳಿ ಅದನ್ನು ಉಳಿಸಲು ಮತ್ತು ಆ ಪುಸ್ತಕ ಪ್ರೇಮಿಯ ಸಹಾಯಕ್ಕಾಗಿ ಕರೆ ನೀಡಿದ್ದರು. ಕೆಲವಷ್ಟು ಸಮಾನ ಮನಸ್ಕ ಆಸಕ್ತರು ಒಂದಾಗಿ ಆ ಒಂದು ಆಶಯವನ್ನು ಇನ್ನೂ ಒಂದು ಹೆಜ್ಜೆ ಮುಂದೆ ಒಯ್ದು ಬೆಳೆಸಲು ಬಯಸಿದ್ದೇವೆ. ಅದರ ಫಲಶೃತಿಯೇ ರಸಧ್ವನಿ ಕಲಾಕೇಂದ್ರ (ರಿ). 

ಈ ಕಲಾಕೇಂದ್ರವು ಫಲಾಪೇಕ್ಷೆಯಿಲ್ಲದ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗಾಗಿ ಇರುವ ಸಂಸ್ಥೆಯಾಗಿರುತ್ತದೆ. ಭಾರತೀಯ, ಅದರಲ್ಲೂ ಕನ್ನಡದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವ ಕಾರ್ಯವು ಇದರ ಉದ್ದೇಶ. ಸಮಾನ ಮನಸ್ಕ ಸನ್ಮಿತ್ರರು ಒಂದಾಗಿ ರಚಿಸುವ, ನಡೆಸುವ ಕಾರ್ಯಕ್ರಮಗಳೇ ಇದರ ಜೀವಾಳ. 

ಗುರಿ ಮತ್ತು ಉದ್ದೇಶ: 

೧. ಶಿಕ್ಷಣ, ಕಲೆ, ಸಂಸ್ಕೃತಿ, ತತ್ತ್ವಶಾಸ್ತ್ರ, ಆಧ್ಯಾತ್ಮ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸರ್ವಾಂಗೀಣ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು.

೨. ಮೇಲಿನ ವಿಷಯಗಳಲ್ಲಿ ಹಾಗೂ ಪರಿಸರ ರಕ್ಷಣೆಯ ಕುರಿತಾಗಿಯೂ ಇರುವ ಅಧ್ಯಯನ ಕೇಂದ್ರ, ಅಭಿವೃದ್ಧಿ ಕೆಂದ್ರ ಮುಂತಾದವುಗಳನ್ನು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಿ, ಬೆಳೆಸುವುದು.

೩. ನಮ್ಮ ಸಂಸ್ಕೃತಿ-ಕಲೆಗೆ ಸಂಬಂಧಿಸಿದ ಉತ್ತಮ ವಿಚಾರ ಸಂಕಿರಣ, ಬೋಧನಾ ಅವಧಿಗಳು, ವಿಚಾರವಿನಿಮಯ ಇತ್ಯಾದಿಗಳನ್ನು ಆಯಾ ಕ್ಷೇತ್ರದ ಪರಿಣಿತರು ಮತ್ತು ಪ್ರಸಿದ್ಧರಿಂದ ನಡೆಸುವುದು. ಯುವಕರಲ್ಲಿ ಇವುಗಳ ಬಗ್ಗೆ ಆಸಕ್ತಿ ಬರುವಂತಹ ವಿಧಾನಗಳನ್ನು ಅಳವಡಿಸುವುದು.

೪. ಆಗಾಗ್ಗೆ ಸಂಗೀತ ಕಾರ್ಯಕ್ರಮಗಳ ಆಯೋಜನೆ.

೫. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಂಶೋಧಕರಿಗೆ ಮತ್ತು ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ / ಮಾಡುತ್ತಿರುವ ವ್ಯಕ್ತಿಗಳಿಗೆ ವಿವಿಧ ರೀತಿಯ ಸಹಾಯ ಮತ್ತು ಪ್ರೋತ್ಸಾಹ ನೀಡುವುದು.

೬. ಸಾಮೂಹಿಕ ವಿಚಾರ ವಿನಿಮಯ, ಚರ್ಚೆ ಮತ್ತು ಕಲಿಕೆಗಾಗಿ ಸಮಾನಾಸಕ್ತರ ಗುಂಪುಗಳಾಗಿ ಸೇರುವುದು.

೭. ಉಚಿತ ಗ್ರಂಥಾಲಯ ಮತ್ತು ಓದುವ ತಾಣವನ್ನು ಸ್ಥಾಪಿಸಿ ಸಾರ್ವಜನಿಕರಿಗಾಗಿ ಕಲ್ಪಿಸುವುದು.

೮. ಉತ್ತಮ ಪುಸ್ತಕ, ಸಿ.ಡಿ, ಮಾಹಿತಿ ಪತ್ರ ಇತ್ಯಾದಿಗಳನ್ನು ಪ್ರಕಟಿಸುವುದು.

೯. ಕಾಲ ಕಾಲಕ್ಕೆ ಅಗತ್ಯವಾದ ಮತ್ತು ಪ್ರಯೋಜಕವಾದ ಇತರೆ ಕಾರ್ಯಗಳನ್ನು ಸದಸ್ಯ ಸಭೆಯ ತೀರ್ಮಾನದಂತೆ ಅಳವಡಿಸಿ ಮುಂದುವರೆಸುವುದು. 

ಇಲ್ಲಿಯವರೆಗೆ ಕೆಲವು ಆಸಕ್ತರು ಮತ್ತು ದಾನಿಗಳ ಸಹಾಯದಿಂದ ಸುಮಾರು ೧ ಲಕ್ಷದಷ್ಟು ಹಣ ಸಂಗ್ರಹವಾಗಿದ್ದು, ಇನ್ನೂ ೨ ಲಕ್ಷದವರೆಗೆ ಅಗತ್ಯವಿದೆ. ನೋಂದಣಿ ಕಾರ್ಯವು ಮುಗಿದಿದೆ. ಕಲಾಕೇಂದ್ರವು ಬೆಂಗಳೂರಿನಲ್ಲಿದ್ದು ಧನಸಹಾಯವಲ್ಲದೆ ಕೆಲವು ಆಸಕ್ತ ಸ್ವಯಂಸೇವಕರ ಅಗತ್ಯವಿದೆ. ಯಾವುದೇ ರೀತಿಯಲ್ಲಿ ಈ ಕಾರ್ಯದಲ್ಲಿ ಕೈಜೋಡಿಸುವ ಮನಸ್ಸಿದ್ದಲ್ಲಿ ದಯವಿಟ್ಟು ಈ ಕೆಳಗಿನವರನ್ನು ಸಂಪರ್ಕಿಸಿ.

ಶ್ರೀಕಾಂತ್ : 9900231097 ; [email protected]

ಮಂಜುನಾಥ್ : [email protected]

ಪ್ರಸನ್ನ ಕಾಕುಂಜೆ: [email protected]