ಶೂನ್ಯ ಬಾವ ಆವರಿಸಿದೆ ಮನದೊಳಗೆ... 
ಎದುರಿಗಿದ್ದ ಗುರಿ ಕಾಣದಾಗಿದೆ... 
ಕಾಣದಾಗಿದೆಯಾ ಅಥವ ಅದು ಮರೆಯಾಗಿದೆಯಾ.. 
ಮರೆ ಮಾಡಲು ಯತ್ನಿಸುತ್ತಿದ್ದಾರ..? 
ಅಥವ ನನ್ನೊಳಗಿನ ನಿರಾಶಾವಾದ ಹಾಗೆ ಅರ್ಥೈಸಲು ಪ್ರೇರೇಪಿಸುತ್ತಿದೆಯಾ? 
ಗೊಂದಲದ ಗೂಡೊಳಗೆ ಅರಿವಿನ ಹೊಳೆ ಸುಳಿಗೆ ಸಿಲುಕಿ, 
ಸಿಕ್ಕುಸಿಕ್ಕಾದ ದಾರದ ಉಂಡೆಯಂತಾಗಿದೆ... 
ಅನಿಸುತ್ತದೆ... ಇದಕ್ಕೆ ಪೂರ್ಣ ’ವಿರಾಮ’ ಇಟ್ಟುಬಿಡಲೇ ಎಂದು... 
ಆದರೆ.. 
ಅದಕ್ಕಿನ್ನೂ ಕಾಲ ದೂರವಿದೆಯೆಂಬ ವಿವೇಕ ಜಾಗೃತವಾಗಿ ಎಚ್ಚರಿಸಿ ಹೆದರಿಸಿ... 
ಮತ್ತೆ ಮಲಗುತ್ತಿದೆ... 
ಏನೂ ಮಾಡಲು ತೋಚದೆ ಚಿಂತೆ ಚಿತೆಯಾಗಿ ಸುಡುತ್ತಿದೆ, 
ಈ ಹೊತ್ತಿನಲ್ಲಿ...