ಹಿಂದಿ ಚಿತ್ರ ನಟಿ ಹೇಮಾಮಾಲಿನಿ ಅವರು ಬಿ.ಬಿ.ಎಮ್.ಪಿ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬೆಂಗಳೂರಿಗೆ ಬರ್ತಾ ಇದ್ದಾರಂತೆ. ನನಗೊಂದು ಪ್ರಶ್ನೆ. ಬೆಂಗಳೂರಿನ ಬಗ್ಗೆ ಆಗಲಿ, ಬೆಂಗಳೂರಿನ ಜನರ ಭಾಷೆ ಬಗ್ಗೆ ಆಗಲಿ ನಯಾ ಪೈಸೆ ಗೊತ್ತಿಲ್ಲದ ಇವರು ಬೆಂಗಳೂರಿನ ಜನರಿಗೆ ತಮ್ಮ ಭಾಷಣದಲ್ಲಿ ಏನ್ ಹೇಳ್ತಾರೆ? ಯಾರೋ ಬರೆದು ಕೊಟ್ಟ ಭಾಷಣಾನಾ ಓದ್ತಾರೆ ಅಂದುಕೊಂಡ್ರೆ, ಅಂತಹ ಪ್ರಚಾರದಿಂದ ನಿಜಕ್ಕೂ ಏನ್ ಪ್ರಯೋಜನ?