ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್|
ನಿನ್ನ ದುಡಿತದ ಬೆಮರೋ, ಪೆರರ ಕಣ್ಣೀರೋ?||
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ|
ಜೀರ್ಣಿಸದ ಋಣಶೇಷ-ಮಂಕುತಿಮ್ಮ ||