ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿ
ಸಂಜೆ ಬಾನಿನ ಮೇಘ ಉಸಿರಿತಲ್ಲಾ
ಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯ
ಇಹುದು ಸನಿಹದೆ ಸುದಿನ ಪರ್ವವೆಲ್ಲಾ //೧//
ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪು
ತೇಲಿಸುತ್ತಿದೆ ನನ್ನ ಮತ್ತಲಿಂದೂ
ಮನದ ಕಡಲಿನ ಮೇಲೆ ಬಿಚ್ಚು ನೆನಪಿನ ಹಾಯಿ
ತೇಲಿ ಸೇರಲಿ ನಾವೆ ಕನಸಲಿಂದೂ //೨//
ತಾಳು ಕೆಲವೇ ಸಮಯ ಆತುರದಿ ನಲ್ಲನಿಹ
ಕಾಯುತಿಹ ಬಳಿ ಸೇರೋ ದಾರಿಯೆಲ್ಲಾ
ಎರಡು ದೇಹವು ಮಾತ್ರ ಪ್ರಾಣ ಒಂದೇ ಒಂದು
ನಲ್ಲನಲ್ಲೆಯರೆಂದೂ ಬೇರೆಯಲ್ಲಾ //೩//
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಮತ್ತೊಮ್ಮೆ ಮಗುವಾಗಬಾರದೇ !
ಬಾವತೀರ
' ಶಿವ ಅಶಿವ '
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)