ಕನ್ನಡದಲ್ಲಿ ಬಹುವಚನ ಪ್ರತ್ಯಯ ಪ್ರಯೋಗಗಳ ದ ಬಗ್ಗೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ನೋಡಿದೆ. ವಿಜಯ ಕರ್ನಾಟಕದಲ್ಲಿನ "ಎರಡು ರಸ್ತೆ " ಪ್ರಯೋಗ ಸರಿಯೇ ತಪ್ಪೇ ಎಂದು.
ಅದರ ನೆಪದಿಂದ ಈ ಬರಹ.
...................................
ಕನ್ನಡದಲ್ಲಿ ಬಹು ವಚನ ಪ್ರತ್ಯಯಗಳು ಐದು ರೀತಿಯಾಗಿ ಪ್ರಯೋಗಿಸಲ್ಪಡುತ್ತವೆ.
೧. ಗಳು ......
>ನಪುಂಸಕ ನಾಮಗಳಿಗೆ
ಉದಾ. ಕಲ್ಲುಗಳು, ಹುಳುಗಳು,
>ಕೆಲ ವಿಶಿಷ್ಟ ನಾಮಗಳಿಗೆಉದಾ. ಗುರುಗಳು, ವ್ಯಾಪಾರಿಗಳು,
೨. ಅವರು / ಅಂದಿರು
>ಸಂಬಂಧವಾಚಕ ನಾಮಗಳಿಗೆಉದಾ. ಮಾವಂದಿರು, ತಾಯಂದಿರು
ಮಾವನವರು, ತಂದೆಯವರು,
೩. ಆರು / ರು
> ವಿಶೇಷಣಗಳಿಗೆಉದಾ. ಸಣ್ಣವರು, ಜಾಣರು
>ಇತರ ನಾಮಗಳಿಗೆ
ಉದಾ. ಹುಡುಗರು
೪. ಕಳ್
ಉದಾ. ಮಕ್ಕಳು
೫. ಶೂನ್ಯ ಸಂದರ್ಭದಲ್ಲಿ
ಪ್ರತ್ಯಯವಿಲ್ಲದೆಯೇ ಬಹುವಚನ ಬಳಕೆಗೊಳ್ಳುವುದು.
ಉದಾ. ಆನೆ ಬಂದವುಎಲೆ ಉದುರಿದವು
( ಅಂದ ಹಾಗೆ ವಿಜಯ ಕರ್ನಾಟಕದಲ್ಲಿನ ಪದೋನ್ನತಿ ಅನ್ನೋ ಅಂಕಣ ವನ್ನು ನಾನು ಗಮನಿಸುತ್ತಿರುತ್ತೇನೆ. ಪ್ರತಿಯೊಂದು ಪದವನ್ನೂ ಶತಾಯ ಗತಾಯ ಸಂಸ್ಕ್ರುತದ್ದೆಂದು ಹೇಳುವ ಹೊಲಸು ಮನಸ್ಕತೆ ಅಲ್ಲಿ ಕಾಣುತ್ತೆ. ನನ್ನ ಪ್ರಕಾರ ಇದು ಭಾಷಾ ಶಾಸ್ತ್ರಕ್ಕೆ ಮಾಡುವ ದ್ರೋಹ. ಅದ್ಯಾರು ಆ ಅಂಕಣ ಬರೀತಾರೋ ?...)
ಪ್ರತಿಕ್ರಿಯೆ (3)