ನಿಮ್ಮಂತೆಯೇ ಕನ್ನಡವೇ ನನ್ನುಸಿರೂ ಸಹ.
ಅಲ್ಲಿ ಇಲ್ಲಿ ಅಂತ ಕೆಲ ರಾಜ್ಯಗಳನ್ನು ಸುತ್ತಿದರೂ ಎಲ್ಲಿಯೂ ಕನ್ನಡಿಗರು ಒಂದು ಗುಂಪಾಗಿ ಕಾಣುವುದಿಲ್ಲ ಎಂಬ ಕೊರಗಿತ್ತು..
ಇಲ್ಲಿಯೂ ಸಹ(ಶಾಂಘೈ ದಲ್ಲಿ) ಅದೇ ಹಾಡು.
ಶಾಂಘೈ ದಲ್ಲಿ ಎಷ್ಟೋ ಜನ ಕನ್ನಡಿಗರು ಇರುತ್ತಾರೆ,ಬಂದು ಹೋಗಿದ್ದಾರೆ. ಆದರೆ ಅವರನ್ನು ಒಂದುಗೂಡಿಸುವ ಕಾರ್ಯ ಆಗಿರಲಿಲ್ಲ.
ಮೊನ್ನೆ ಯುಗಾದಿಯಾ ದಿನ ಶಾಂಘೈದಲ್ಲೂ ಒಂದು ಕನ್ನಡ ಸಂಘ ಏಕೆ ಮಾಡಬಾರದು ಎಂಬ ವಿಚಾರ ಬಂದಕೂಡಲೇ ಆನ್ ಲೈನ್ ನಲ್ಲಿ ಸಿಕ್ಕಿದ್ದು ಪ್ರಶಾಂತ ಕೊಣಜೆ ಎಂಬ ಮಿತ್ರರು.ಅವರ ಮುಂದೆ ಈ ವಿಚಾರವಿಟ್ಟೆ. ಅವರಿಂದ ಸಕಾರಾತ್ಮಕ ಉತ್ತರ ಬಂದದ್ದೇ ತಡ ಈ ಸಂಘ ಕಟ್ಟುವ ಕಾರ್ಯ ಪ್ರಾರಂಭವಾಯಿತು..ಸದ್ಯ ಸಂಪರ್ಕದಲ್ಲಿರುವ ಕನ್ನಡಿಗರಿಗೆ ಒಂದು ಈ-ಪತ್ರ ಹೋಯಿತು.ಎಲ್ಲರಿಂದಲೂ ಅಭೂತಪೂರ್ವ ಉತ್ಸಾಹದ ಉತ್ತರ.
ಸರಿ ತಡ ಮಾಡುವುದು ಬೇಡವೇ ಬೇಡ ಎಂದು ದಿ:18-04-2010 ರಂದು ಕನ್ನಡ ಸಂಘವನ್ನು ಉಧ್ಘಾಟನೆ ಮಾಡಲಾಯಿತು
ಈ ಕಾರ್ಯಕ್ರಮಕ್ಕೆ ಸಂಪರ್ಕಿಸಿದ ೧೨ ಜನರಲ್ಲಿ ೭ ಜನ ಭಾಗವಹಿಸಿದ್ದರೂ ಅತೀವವಾದ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದರು.ಅವರ ಉತ್ಸಾಹದಿಂದ ನಮ್ಮ ಉತ್ಸಾಹವೂ ಹೆಚ್ಚಿಗೆಯಾಯಿತು..
ಎಲ್ಲರೊಂದಿಗಿನ ಸಹಬಾಳ್ವೆಯ ಸಮೀಕರಣದ ಜೊತೆಗೆ ನಮ್ಮ ಭಾಷೆಯ ಸೊಗಡು,ಸುಂದರತೆ,ಸಂಸ್ಕೃತಿ,ಸಂಪ್ರದಾಯ,ಕಲೆ,ಸಾಹಿತ್ಯಗಳನ್ನು ಉಳಿಸಿಕೊಂಡು ಹೋಗುವುದು.
ನಮ್ಮ ಸಂಸ್ಕೃತಿ,ನಮ್ಮ ಮಾತೃಭಾಷೆಯ ಪರಿಮಳವನ್ನು ಚೀನಾದಲ್ಲೂ ಘಮ ಘಮಿಸುವಂತೆ ಮಾಡುವುದು.
ಶಾಂಘೈ ಗೆ ಹೊಸದಾಗಿ ಬರುವ ಕನ್ನಡಿಗರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಮಾರ್ಗದರ್ಶನ ಕೊಡುವುದು,
ಹಾಗೂ ಸದ್ಯ ಶಾಂಘೈ ದಲ್ಲಿ ಇರುವ ಕನ್ನಡಿಗರು ಪರಸ್ಪರ ಬೆರೆಯುವುದು ಈ ಸಂಘದ ಮುಖ್ಯ ಉದ್ದೇಶ.
ಶಾಂಘೈದಲ್ಲಿ ನಡೆಯುವ ಭಾರತೀಯರ ಯಾವುದೇ ಕಾರ್ಯಕ್ರಮಗಳಲ್ಲಿ ಕನ್ನಡ ಕಾಣುವುದೇ ಇಲ್ಲಾ ಎಂಬ ಖೇದಕರ ವಿಚಾರಕ್ಕೆ,ಈ ಗುಂಪಿನ ಮೂಲಕ ಒಂದಾಗಿ ಭಾಗವಹಿಸುವದಕ್ಕೆ ಎಲ್ಲರೂ ಸಮ್ಮತಿಸಿದರು
"ಸಂಪದ"ದ ಸಂಪರ್ಕದಲ್ಲಿರುವ ಶಾಂಘೈ ಹಾಗೂ ಸುತ್ತಮುತ್ತಲಿನ ಪ್ರದೇಶದ ಕನ್ನಡಿಗರು,
ಮುಂದೆ ಶಾಂಘೈ ಗೆ ಬರಲಿರುವ ಕನ್ನಡಿಗರು
ಈ ಮೂಲಕ ನಮ್ಮ ಸಂಪರ್ಕದಲ್ಲಿ ಬರಬಹುದು ಎಂಬುದು ಈ ಲೇಖನದ ಉದ್ದೇಶ..
ವೆಬ್ಸೈಟ್ ಇನ್ನೂ ಕಾರ್ಯಗತವಾಗಿದೆ,ಸದ್ಯಕ್ಕೆ ನನ್ನನ್ನೇ ಸಂಪರ್ಕಿಸಬಹುದು.
ಕೆಳಗೆ ಕೊಟ್ಟ ಕೊಂಡಿಯನ್ನು ವೀಕ್ಷಿಸಿ..ಇದು "ದಾಟ್ಸ್ ಕನ್ನಡ" ದಲ್ಲಿ ಪ್ರಕಟವಾದದ್ದು
http://thatskannada.oneindia.in/nri/article/2010/0426-shanghai-kannada-association-launched.html
ಪ್ರತಿಕ್ರಿಯೆ (5)