ಗಣತಿಗೆ ಗಣಕ ಏಕಿಲ್ಲ?

ಗಣತಿಗೆ ಗಣಕ ಏಕಿಲ್ಲ?
ಹತ್ತುವರ್ಷಗಳಿಗೊಮ್ಮೆ ನಡೆಯುವ ಮಹಾಗಣತಿಗೆ ಅಧಿಕೃತ ಚಾಲನೆ ಸಿಕ್ಕಿದೆ.ಗಣತಿದಾರರು ಮನೆಗಳನ್ನು ಗುರುತಿಸಿ,ಅಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವ ಕಾರ್ಯ ಪ್ರಗತಿಯಲ್ಲಿದೆ.ಆದರೆ ಅವರುಗಳು ಮನೆ ಮನೆಗೆ ಭೇಟಿ ನೀಡುವಾಗ ಕಾಗದ-ಪೆನ್ನು ಹಿಡಿದು ಹೋಗುತ್ತಿದ್ದಾರೆ.ಇಂದಿನ ಆಧುನಿಕ ತಂತ್ರಜ್ಞಾನಗಳು ಲಭ್ಯವಿರುವಾಗ,ಗಣತಿದಾರರು ಕೈಯಲ್ಲಿ ಹಿಡಿದ ಸಾಧನಗಳಲ್ಲಿ ಮಾಹಿತಿ ಕಲೆಹಾಕುವುದು ಸಾಧ್ಯವಿತ್ತು.ಇಂತಹ ಸಾಧನಗಳ ಬಳಕೆಯಾದರೆ,ಕಲೆ ಹಾಕಿದ ಮಾಹಿತಿಯನ್ನು ಕಂಪ್ಯೂಟರುಗಳಿಗೆ ವರ್ಗಾಯಿಸಿ,  ವಿಶ್ಲೇಷಿಸುವುದು ಸುಲಭವಾಗುತ್ತಿತ್ತು.ಕಾಗದದಲ್ಲಿ ಬರೆದುಕೊಂಡ ಮಾಹಿತಿಯನ್ನು ಮತ್ತೆ ಕಂಪ್ಯೂಟರೀಕರಣಗೊಳಿಸುವುದು,ತ್ರಾಸದಾಯಕ ಕೆಲಸ.ಕೈಯಲ್ಲಿ ಹಿಡಿಯುವ ಸಾಧನಗಳನ್ನು ಬಳಸಲು ಗಣತಿದಾರರಿಗೆ ತರಬೇತಿ ಅವಶ್ಯಕ,ಮಾಹಿತಿ ಕಲೆಹಾಕಲು ತಂತ್ರಾಂಶ ರಚನೆಯೂ ಆಗಬೇಕಿತ್ತು ಎನ್ನುವುದು,ಅಂತಹ ತಂತ್ರಜ್ಞಾನ ಬಳಕೆ ಆಗದಿರಲು ಕಾರಣವಾಗಿರಬಹುದು.ಕನಿಷ್ಟ ಪಕ್ಷ ನಗರಗಳ ನಿವಾಸಿಗಳಿಗೆ ತಮ್ಮ ವಿವರಗಳನ್ನು ಅಂತರ್ಜಾಲ ತಾಣದ ಮೂಲಕವೇ ನೀಡಲು ಅವಕಾಶ ನೀಡಿ,ಗಣತಿಕಾರ್ಯವನ್ನು ಸುಲಭವಾಗಿಸುವ ಮೊದಲ ಹೆಜ್ಜೆಯನ್ನಾದರೂ ತೆಗೆದುಕೊಳ್ಳಬಹುದಿತ್ತು.ಗಣತಿದಾರರು ಬಂದಾಗ ಮನೆಯವರೆಲ್ಲರೂ ಮನೆಯಲ್ಲಿಲ್ಲದೆ,ಗಣತಿಕಾರ್ಯ ಸರಿಯಾಗಿ ನಡೆಯದೆ ಇರುವ ಸಮಸ್ಯೆಯ ನಿವಾರಣೆಗೂ ಅಂತರ್ಜಾಲ ಮೂಲಕ ಗಣತಿ ವಿವರ ನೀಡುವ ಸೌಕರ್ಯ ಕಲ್ಪಿಸುವುದು ಪರಿಹಾರವಾಗಬಲ್ಲುದು.
------------------------------------------------------------

ಲಿಪಿ ಬದಲಾಯಿಸುವ ಗೂಗಲ್ ಸೇವೆ

___LINK_OPEN_ href="http://4.bp.blogspot.com/_PU7BmR35lao/S94OIZLlqXI/AAAAAAAABSM/UHi4V5JYtDw/s1600/script.jpg"___

ಕನ್ನಡದಲ್ಲಿ ನೀವು ಟೈಪಿಸಿದ ಪದವನ್ನು ಹಿಂದಿಗೋ ಇನ್ನಾವುದೋ ಭಾಷೆಗೆ ಬದಲಾಯಿಸುವುದೀಗ ಬಹುಸುಲಭ.ಗೂಗಲ್ ಅಂತರ್ಜಾಲ ತಾಣ ಇಂತಹ ಸೇವೆ ಒದಗಿಸುತ್ತದೆ.ನೀವು ಪದವನ್ನು ಟೈಪಿಸಿದ ಭಾಷೆಯನ್ನು ತಿಳಿಸಿದರೂ ಸರಿ,ಇಲ್ಲವಾದರೂ ಸರಿ.ಗೂಗಲ್ ತಂತಾನೇ ಭಾಷೆಯನ್ನು ಗುರುತಿಸುತ್ತದೆ.ಯಾವ ಭಾಷೆಗೆ ಬದಲಿಸಬೇಕಾಗಿದೆಯೆಂದು ತಿಳಿಸಿದರೆ,ಕ್ಷಣದಲ್ಲಿ ಲಿಪಿ ಬದಲಾವಣೆ ಆಗುತ್ತದೆ."google script converter" ಎಂದು ಗೂಗಲಿನಲ್ಲಿ ಶೋಧಿಸಿ,ಪುಟದ ಕೊಂಡಿಯನ್ನು ಕಂಡುಕೊಳ್ಳಿ.
-----------------------------------------------------------
ಪ್ರಯೋಗಾಲಯದಲ್ಲಿ ನಕ್ಷತ್ರ ಮಿನುಗಲಿದೆಯೇ?
ಅಣು ವಿದಳನದಿಂದ ಅಣುಶಕ್ತಿ ಉತ್ಪಾದಿಸಲು ಭಾರತವೂ ಸೇರಿದಂತೆ ಹಲವು ದೇಶಗಳು ಸಮರ್ಥವಾಗಿವೆ.ಆದರೆ ಅಣು ಸಂಮಿಳನದಿಂದ ಶಕ್ತಿಯ ಉತ್ಪಾದನೆ ಇನ್ನೂ ಸಾಧ್ಯವಾಗಿಲ್ಲ.ವಿಕಿರಣಶಾಲಿ ಡ್ಯುಟಿರಿಯಂ ಮತ್ತು ಟ್ರೀಟಿಯಂ ಪರಮಾಣುಗಳನ್ನು ಅಧಿಕ ಒತ್ತಡ ಮತ್ತು ಉಷ್ಣತೆಯಲ್ಲಿ ಒಂದಾಗುವಂತೆ ಮಾಡಿದರೆ,ಅಪಾರಶಕ್ತಿಯ ಬಿಡುಗಡೆಯಾಗುತ್ತದೆ.ಇಂತಹ ಅಣುಸಂಮಿಳನವೇ ನಕ್ಷತ್ರಗಳಿಂದ ಬರುವ ಬೆಳಕು ಮತ್ತು ವಿಕಿರಣಗಳ ಮೂಲವಾಗಿದೆ.ಇಂತಹ ಅಣು ಸಂಮಿಳನವನ್ನು ಪ್ರಯೋಗಾಲಯದಲ್ಲಿ ಮಾಡುವ ಕನಸು ಇನ್ನೂ ನನಸಾಗಿಲ್ಲ.ಅದಕ್ಕೆ ಅಗತ್ಯವಾದ ಅತ್ಯಧಿಕ ಶಾಖ ಮತ್ತು ಒತ್ತಡವನ್ನು ಪ್ರಯೋಗಾಲಯದಲ್ಲಿ ಉಂಟು ಮಾಡುವುದು ನಿಜಕ್ಕೂ ಸವಾಲು.ಜತೆಗೆ ಅಂತಹ ಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯನ್ನು ನಿಯಂತ್ರಿಸದಿದ್ದರೆ,ಹಾನಿಯೂ ಕಟ್ಟಿಟ್ಟ ಬುತ್ತಿ.
ಕ್ಯಾಲಿಫೋರ್ನಿಯಾದ ಪ್ರಯೋಗಾಲಯದಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಇಂತಹ ಬೈಜಿಕ ಸಂಮಿಳನವನ್ನು ಸಾಧಿಸಲು ವಿಜ್ಞಾನಿಗಳು ಹೊರಟಿದ್ದಾರೆ.ಆರೂವರೆ ಅಡಿ ದಪ್ಪದ ಕಾಂಕ್ರೀಟಿನ ಗುಮ್ಮಟದೊಳಗೆ ಈ ಪ್ರಯೋಗ ನಡೆಯಲಿದೆ.ಲೇಸರ್ ಕಿರಣಗಳನ್ನು ಬಳಸಿ,ಅಗತ್ಯವಾದ ಶಾಖ ಮತ್ತು ಒತ್ತಡವನ್ನು ಈ ಗುಮ್ಮಟದೊಳಗೆ ಸಾಧಿಸಬೇಕಿದೆ.ಫುಟ್‌ಬಾಲ್ ಮೈದಾನದಷ್ಟು ಅಗಲದ ಲೇಸರ್ ಕಿರಣಗಳನ್ನು ಅಣುವಿನಷ್ಟು ಗಾತ್ರಕ್ಕೆ ಕೇಂದ್ರೀಕರಿಸಿ,ಬೈಜಿಕ ಸಂಮಿಳನವನ್ನು ಸಾಧಿಸುವುದು ಕ್ಯಾಲಿಫೋರ್ನಿಯಾದ ಲಿವರ್‌ಮೋರ್ ಪ್ರಯೋಗಾಲಯದ ಸಂಶೋಧಕರ ಯೋಜನೆ.ಒಂದು ಗ್ಯಾಲನ್ ಶುದ್ಧ ನೀರಿನಿಂದ ಮುನ್ನೂರು ಗ್ಯಾಲನ್ ಪೆಟ್ರ‍ೋಲಿನಿಂದ ಪಡೆದ ಶಕ್ತಿಯನ್ನು ಪಡೆಯಲು ಅಣು ಸಂಮಿಳನದಿಂದ ಸಾಧ್ಯ.ಇನ್ನೊಂದು ವಿಧವಾಗಿ ಹೇಳುವುದಿದ್ದರೆ,ಐವತ್ತು ಕಪ್ ನೀರಿನಿಂದ,ಎರಡು ಟನ್ ಕಲ್ಲಿದ್ದಲಿನಿಂದ ಪಡೆದ ಶಕ್ತಿಗೆ ಸಮಾನವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರಯೋಗಾಲಯದಲ್ಲಿ ಮಿನುಗಲಿರುವ ಈ ನಕ್ಷತ್ರದ ಅಳತೆ ಕೇವಲ ಐದು ಮೈಕ್ರಾನ್ ಆಗಿದ್ದು,ಅದು ಕೇವಲ ಸೆಕೆಂಡಿನ ಇನ್ನೂರು ಟ್ರಿಲಿಯನ್‌ನ ಒಂದು ಭಾಗದಷ್ಟು ಕಿರಿದು ಸಮಯ ಮಿನುಗಲಿದೆ.ಈ ಪ್ರಯೋಗದ ಸಿದ್ಧತೆಗೆ ಇದುವರೆಗೆ ಎರಡು ಬಿಲಿಯನ್ ಡಾಲರು ವೆಚ್ಚ ಮಾಡಲಾಗಿದೆ ಎಂದರೆ ನಂಬುವಿರಾ?ಇಡೀ ಪ್ರಯೋಗಾಲಯವು ಲೇಸರ್ ಕಿರಣವನ್ನು ಉತ್ಪಾದಿಸುವ ನಳಿಕೆಗಳಿಂದ ತುಂಬಿದೆ.ಲೇಸರ್ ಕಿರಣಗಳನ್ನು ನೂರತೊಂಭತ್ತೆರಡು ಪುಂಜಗಳಾಗಿಸಿ,ಅಣುಗಾತ್ರಕ್ಕೆ ಕೇಂದ್ರೀಕರಿಸಲಾಗುತ್ತದೆ.ಈ ಬಿಂದುವಿನಲ್ಲಿ ಜಲಜನಕದ ಐಸೋಟೋಪುಗಳಾದ ಡ್ಯುಟೀರಿಯಂ ಮತ್ತು ಟ್ರ‍ೀಟಿಯಮ್ ಪರಮಾಣುಗಳನ್ನು ಇರಿಸಿ,ಈ ಪರಮಾಣುಗಳು ಬಂಗಾರದ ಕ್ಯಾಪ್ಸೂಲಿನೊಳಗೆ ಸಂಮಿಳನ ಹೊಂದುವಂತೆ ಮಾಡಲಾಗುತ್ತದೆ.ಅಣುಸಂಮಿಳನವೇನಾದರೂ ನಡೆದರೆ ನೂರು ದಶಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ,ನೂರು ಬಿಲಿಯನ್ ಪಟ್ಟು ವಾತಾವರಣದ ಒತ್ತಡವೇರ್ಪಡುತ್ತದೆ!
ಈ ಪ್ರಯೋಗದ ಬಗ್ಗೆ ತಾತ್ಸಾರದ ನುಡಿಗಳೂ ಕೇಳುತ್ತಿವೆ.ಒಂದು ವೇಳೆ ಪ್ರಯೋಗ ಸಫಲವಾದರೂ,ಅದನ್ನು ಶಕ್ತಿಯ ಉತ್ಪಾದನೆಗೆ ಬಳಸಲು ಸಾಧ್ಯವಾಗುವುದು ಅಸಾಧ್ಯ.ಈ ಪ್ರಯೋಗ ಬರೇ ಸೈದ್ಧಾಂತಿಕ,ನೈಜ ಪ್ರಯೋಜನ ನೀಡುವಂತದ್ದಲ್ಲ ಎನ್ನುವ ಅಭಿಪ್ರಾಯ ಕೆಲವು ವಿಜ್ಞಾನಿಗಳದ್ದು.
------------------------------------------------------------------
ಆಪಲ್‌ಗೆ ಫ್ಲಾಶ್ ಬೇಡ,ಯಾಕೆ?

___LINK_OPEN_ href="http://1.bp.blogspot.com/_PU7BmR35lao/S94OP9xtQrI/AAAAAAAABSQ/xYe031guEUU/s1600/jobs_looking.jpg"___

ಆಪಲ್ ಕಂಪೆನಿಯ ಐಪಾಡ್,ಐಫೋನ್ ಮತ್ತು ಹೊಸ ಸಾಧನವಾದ ಐಫ್ಯಾಡಿನಲ್ಲಿ ಫ್ಲಾಶ್ ತಂತ್ರಜ್ಞಾನವನ್ನು ಬಳಸಲು ಸಾಧ್ಯವಿಲ್ಲ.ಅಂತರ್ಜಾಲ ಜಾಲಪುಟಗಳಲ್ಲಿನ ಅನಿಮೇಶನ್ ಪರಿಣಾಮಗಳು,ಕಂಪ್ಯೂಟರ್ ಆಟಗಳಲ್ಲಿ ಫ್ಲಾಶ್ ತಂತ್ರಜ್ಞಾನದ ಬಳಕೆ ಹೆಚ್ಚಾಗಿ ನಡೆಯುತ್ತದೆ.ಇಂತಹ ಜನಪ್ರಿಯ ತಂತ್ರಜ್ಞಾನವನ್ನು ಆಪಲ್ ಉತ್ಪನ್ನಗಳಲ್ಲಿ ಬಳಸದಿರುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ಸ್ ಜಾಬ್ ವಿವರಣೆ ನೀಡಿದ್ದಾರೆ.ಈ ತಂತ್ರಜ್ಞಾನ ಮುಕ್ತ ತಂತ್ರಜ್ಞಾನವಲ್ಲ,ಅದರಲ್ಲಿ ಭದ್ರತಾ ಕೊರತೆಯಿದೆ ಎನ್ನುವುದು ಸ್ಟೀವ್ ಜಾಬ್ಸ್ ನೀಡಿರುವ ಕಾರಣಗಳಲ್ಲಿ ಸೇರಿವೆ.ಈಗಿನ ಸ್ಪರ್ಶ ಸಂವೇದಿ ಸಾಧನಗಳಲ್ಲಿ,ಫ್ಲಾಶ್ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡುವುದಿಲ್ಲ,ಮಾತ್ರವಲ್ಲ,ಅದು ಬ್ಯಾಟರಿಯ ಶಕ್ತಿಯ ಸೋರುವಿಕೆಗೆ ಕಾರಣವಾಗುತ್ತದೆ ಎನ್ನುವುದು ಜಾಬ್ಸ್ ನೀಡಿರುವ ಮುಖ್ಯ ಸಾಬೂಬುಗಳು.ಜಾವಾಸ್ಕ್ರಿಪ್ಟ್,ಸಿಯೆಸೆಸ್ ಮತ್ತು ಎಚ್ ಟಿ ಎಂ ಎಲ್5 ನಂತಹ ಮುಕ್ತ ಬದಲಿ ತಂತ್ರಜ್ಞಾನದ ಆಯ್ಕೆಗಳು ಲಭ್ಯವಿರುವಾಗ ಫ್ಲಾಶ್ ಏಕೆ ಎನ್ನುವುದು ಜಾಬ್ಸ್ ನಿಲುವು.ಅಂದಹಾಗೆ ಫ್ಲಾಶ್ ತಂತ್ರಜ್ಞಾನವು ಅಡೋಬ್ ಕಂಪೆನಿಯದ್ದಾಗಿದೆ. ಇಲ್ಲಿಯವರೆಗೆ ಆಪಲ್ ಸಾಧನಗಳಲ್ಲಿ ಫ್ಲಾಶ್ ಬಳಕೆಗೆ ಅವಕಾಶ ನೀಡಲೋಸುಗ,ಫ್ಲಾಶ್ ತಂತ್ರಾಂಶವನ್ನು ಆಪಲ್ ಸಾಧನದಲ್ಲಿ ಬಳಕೆಗೆ ಅವಕಾಶವಿರುವ ತಂತ್ರಜ್ಞಾನದ ತಂತ್ರಾಂಶಕ್ಕೆ ಬದಲಿಸಲು ಅನುವು ನೀಡುವ ಅನುವಾದಕ ಸಾಧನಗಳನ್ನು ಒದಗಿಸಿ,ತಂತ್ರಾಂಶ ಅಭಿವೃದ್ಧಿ ಪಡಿಸುವವರಿಗೆ ನೀಡುತ್ತಿದ್ದ ಸಹಾಯಹಸ್ತವನ್ನು ನಿಲ್ಲಿಸಲು ನಿರ್ಧರಿಸಿದ ನಿರ್ಧಾರವನ್ನು ಅಡೋಬ್ ಕಂಪೆನಿ ಪ್ರಕಟಿಸಿದ ಬೆನ್ನಲ್ಲೇ ಜಾಬ್ಸ್ ಅವರ ವಿವರಣೆ ಬಂದಿದೆ.ಹಿಂದೆಲ್ಲಾ ಹಾಲು-ಜೇನು ಸಂಬಂಧ ಹೊಂದಿದ್ದ,ಅಡೋಬ್-ಆಪಲ್ ಸಂಬಂಧ ಈಗ ಸರಿ ಪಡಿಸಲು ಕಷ್ಟವಾದ ಘಟ್ಟ ಮುಟ್ಟಿರುವುದು ಸ್ಪಷ್ಟವಾಗಿದೆ.
------------------------------------------------------------------------
ಮೈಂಡ್ ಟ್ರೀ ಕಂಪೆನಿಗೆ "ಆಧಾರ"
ಭಾರತೀಯರೆಲ್ಲರಿಗೂ ವಿಶಿಷ್ಠ ಗುರುತು ನೀಡುವ ಯೋಜನೆಗೆ ಈಗ ಆಧಾರ್ ಎಂಬ ಹೊಸ ಹೆಸರನ್ನು ನೀಡಲಾಗಿದೆ.ನಂದನ್ ನೀಲೆಕಣಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಧಾರ್‌ಗೆ ತಂತ್ರಾಂಶ ಸಿದ್ಧ ಪಡಿಸುವ ಯೋಜನೆಗೆ ಗುತ್ತಿಗೆ ನೀಡುವ ಕಾರ್ಯ ಈಗ ಮುಗಿದಿದ್ದು,ಮೈಂಡ್ ಟ್ರೀ ಕಂಪೆನಿಗೆ ಮೂವತ್ತು ಕೋಟಿ ಕೆಲಸವನ್ನು ಗುತ್ತಿಗೆ ನೀಡಲಾಗಿದೆ.ಐಬಿಎಂ,ಅಕ್ಸೆಂಚರ್,ಟಿಸಿಎಸ್,ಇನ್ಫೋಸಿಸ್ ಮುಂತಾದ ಕಂಪೆನಿಗಳು ಗುತ್ತಿಗೆಗಾಗಿ ಸ್ಪರ್ಧೆಯಲ್ಲಿದ್ದರೂ,ಸ್ಪರ್ಧಾತ್ಮಕ ದರ ಮತ್ತು ಕಂಪೆನಿಯ ಪೂರ್ಣಕಾಲಿಕ ನೌಕರರನ್ನೇ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕೆನ್ನುವ ಶರ್ತಕ್ಕೊಪ್ಪಿದ ಮೈಂಡ್ ಟ್ರೀ ಮೊದಲ ಹಂತದ ಗುತ್ತಿಗೆ ಬಗಲಿಗೆ ಹಾಕಿಕೊಳ್ಳಲು ಶಕ್ತವಾಯಿತು.

Udayavani
*ಅಶೋಕ್‌ಕುಮಾರ್ ಎ