ಮೊದಲು ಕೇಳುತ್ತಿದ್ದ ಕಿವಿಗಳು

ಈಗ ಕಿವುಡಾಗಿವೆ

ದಾರಿಯಲಿ ಕಾಣುತಿದ್ದ ಕಲ್ಲುಗಳಿಗೆ

ಕಾಲು ಹೋಗಿ ಬಡಿಯುತಿವೆ

 

ಹಣವಿಲ್ಲವೆಂದು ಬಿಟ್ಟ ಕಾಪಿ ಡೆ

ವಾರಾಂತ್ಯದ ತಂಗುದಾಣವಾಗಿದೆ

ಸೇರದಿದ್ದ ಪಿಜ್ಜಾ ಗಳೆಲ್ಲ

ಅರಿಯದೇ ಉದರ ಸೇರಿವೆ

 

ರಸ್ತೆಪಕ್ಕದ ಚಹದ ಅಂಗಡಿ

ಮರೆತು ತಿಂಗಳಾಗಿವೆ

ಶನಿವಾರದ ಪಾರ್ಟಿಗಳೆಲ್ಲ

ಫೋನಿನೊಳಗೇ ನಡೆದಿದೆ

 

ಕುಂಭಕರ್ಣನಂತಿದ್ದ  ನಿದ್ದೆ

ಹಾಸಿಗೆಯಲಿ ಹೊರಳಾಡುತಿದೆ

 

ನಿಶ್ಚಿತಾರ್ಥವಾದ ಮೇಲೆ ತಿಳಿವೆ

ಎಂಬ ಉಪದೇಶ ಸಹ ಬರುತಿದೆ

 

ಗೆಳೆಯನ ಚಲನವಲನ

ಕವನವಾಗಿ ಮೂಡಿದೆ

ಸ್ವಲ್ಪ ಕಲ್ಪನೆ ಸಹ ಸೇರಿದೆ..

 

**ಮೂರ್ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ  ಮಾಡಿಕೊಂಡ ಗೆಳೆಯನ ಬಗ್ಗೆ ಬರೆದದ್ದು..