2446 ಪದಗಳು
4.05.10
(1)
ಸ್ಥಳ: ಶಾಂತಿನಿಕೇತನದ ಕಲಾಭವನದ ಹುಡುಗರ ಹಾಸ್ಟೆಲ್. 1990ರ ಜೂನ್ ತಿಂಗಳ ಎರಡನೇ ವಾರ. ಮಧ್ಯರಾತ್ರಿ. 
ರಾತ್ರಿಗಷ್ಟೇ 'ಮಧ್ಯ'ವಾಗಿದ್ದದ್ದು. ನಿಶೆಯೇರಿದಂತಿದ್ದ ರಾತ್ರಿಗಳವು. ಕಲಾಭವನದ ಹುಡುಗರ ಹಾಸ್ಟೆಲ್ಲಿನಲ್ಲಿ ಎಲ್ಲರೂ ಎಚ್ಚರವಾಗಿದ್ದರು, ಇರುತ್ತಿದ್ದರು. ಆ ಮನುಷ್ಯರ ದ್ವೀಪದಲ್ಲಿ ಅಂತಹ ವೇಳೆಯಲ್ಲಿ ಬೇರೆಲ್ಲೂ ಅಲೆದಾಡುವ ಅವಕಾಶವಿಲ್ಲದುದ್ದರಿಂದ. ವಿದ್ಯಾಥರ್ಿಗಳು ಒಂದೆಡೆ ಸೇರಿ ಜಾಗರಣೆ ಮಾಡುವ ತಾಣವನ್ನೇ ಹಾಸ್ಟೆಲ್ ಎನ್ನುವುದಲ್ಲವೆ. 
ಅತ್ತ, ರಾತ್ರಿ ಒಂಬತ್ತರ ನಂತರ ಹುಡುಗಿಯರ ಹಾಸ್ಟೆಲ್ ಬಂದ್. ಅವರುಗಳ ಒಳಿತಿಗಾಗಿಯೇ, ಅವರ ಸೇಫ್ಟಿಗಾಗಿಯೇ ಈ ನಿರ್ಬಂಧ ಎಂದು ಪಿತೃಪ್ರಧಾನ ಅಧಿಕಾರಿಗಳ ಅಭಿಪ್ರಾಯ. ಹುಡುಗಿಯರು ಎಷ್ಟು ಸುರಕ್ಷಿತವಾಗಿರುತ್ತಿದ್ದರೆಂದರೆ, ಒಮ್ಮೊಮ್ಮೆ ಗಂಡು ಕಳ್ಳ ಕಿಟಕಿಯಿಂದಲೋ, ಚಜ್ಜಾದ ಮೇಲಿನಿಂದಲೋ ಇಳಿದುಬಂದು ಹುಡುಗಿಯರ ಹಾಸ್ಟೆಲಿನಲ್ಲಿ ಕದಿವಾಗ ಸಿಕ್ಕಿಬಿದ್ದು, ತಪ್ಪಿಸಿಕೊಂಡು ಓಡುವಾಗಲೂ, ಕಿರಿಚುತ್ತ ಕೂಗಾಡುವ ಹುಡುಗಿಯರು ಮಾತ್ರ ಸುರಕ್ಷಿತವಾಗಿ ಹಾಸ್ಟೆಲಿನ ಗೇಟುಗಳ ಒಳಗಿನಿಂದಲೇ ಹಾಗೆ ಕಿರುಚಬೇಕಾಗುತ್ತಿತ್ತು. ಏಕೆಂದರೆ ಅವರೇನಾದರೂ ಹೊರಕ್ಕೆ ಓಡಿಬಂದು ಕಳ್ಳನ ಹಿಂದೆ ಬಿದ್ದರೆ, ಆತ ಹಿಂದೆ ಬಿದ್ದ ಹುಡುಗಿಯರ ಸೌಂದರ್ಯಕ್ಕೆ ಮಾರುಹೋಗಿ ಜೀವನಪೂತರ್ಿ ಈ ನಾರಿಯರ ಹಿಂದೆ ಆತನೇ ಬಿದ್ದಾನು ಎಂಬುದು ಅಧಿಕಾರಿಗಳ ಅಂಬೋಣ. ಅಂತಹ ಅಪಘಾತ ತಡೆ, ಹಾಗೂ ಸುರಕ್ಷೆ ಶಾಂತಿನಿಕೇತನದ ಹುಡುಗಿಯರ ಹಾಸ್ಟೆಲ್ಲಿನ ಅಧಿಕಾರಿ ವರ್ಗದ ಹಕ್ಕು. ಹುಡುಗರಿಗೆ ಅಲ್ಲಿ ಅಫೀಶಿಯಲಿ 'ನೋ ಎಂಟ್ರಿ'. ಅಂದರೆ ಅನ್ಅಫಿಶಿಯಲಿ, ಆಗಾಗ ಹುಡುಗರು ಅಲ್ಲಿಂದ ಅದು ಹೇಗೇಗೋ ಹೊರಬೀಳುತ್ತಿದ್ದುದನ್ನು ಕಾಣಬಹುದಾಗಿತ್ತು.
ದಿನದ ಇಪ್ಪತ್ತನಾಲ್ಕು ಗಂಟೆ ಕಲಾಭವನದ ಸ್ಟುಡಿಯೊದೊಳಗೆ ಕಲಾಕೃತಿ ರಚಿಸುವವರನ್ನು ಹುಡುಗರೆನ್ನುತ್ತೇವೆ. ಕೇವಲ ಹನ್ನೆರಡು ಗಂಟೆ ಹಾಗೆ ಮಾಡುವವರನ್ನು ಹುಡುಗಿಯರು ಎನ್ನುತ್ತೇವೆ. ಹುಡುಗರಿಗೆ ಹಾಗೂ ಹುಡುಗಿಯರಿಗೆ ಅಲ್ಲಿ ಸ್ವಾತಂತ್ರ್ಯವೋ ಸ್ವಾತಂತ್ರ. ಹುಡುಗರಿಗೆ ಪೂತರ್ಿ ಮತ್ತು ಹುಡುಗಿಯರಿಗೆ ಅರ್ಧದಿನ ಮಾತ್ರ ಸ್ವಾತಂತ್ರ. ದಿನವಹಿ ಹುಡುಗಿಯರಿಗೆ ಎಲ್ಲಿ ಬೇಕಾದರಲ್ಲಿ ಅಲೆದಾಡಲು ಅವಕಾಶವಿರುತ್ತಿತ್ತು. ರಾತ್ರಿ ಪೂರ, ಅಂದರೆ 9ರಿಂದ ಬೆಳಿಗ್ಗೆ 5 ಗಂಟೆಯವರೆಗೂ ಅವರೆಲ್ಲ ಹಾಸ್ಟೆಲ್ ಬಂಧಿಗಳು. ಭಾರತದ ಪ್ರಧಾನಿ ಯಾರೇ ಆಗಲಿ, ಆಗಿರಲಿ ಆತನೇ, ಆಕೆಯೇ ಈ ಕಲಾಭವನವಿರುವ ಶಾಂತಿನಿಕೇತನವೆಂಬ ತಾಣವಿರುವ ವಿಶ್ವಭಾರತಿ ವಿಶ್ವವಿದ್ಯಾಲಯದ ಪರ್ಮನೆಂಟ್ ಛಾನ್ಸಲರ್. ಅಂತಲ್ಲೂ ಹುಡುಗಿಯರಿಗೆ ಅಂತಹ ದುರ್ಗತಿ!
ಭಾತರದ ಮತ್ತೊಂದು ಪ್ರಖ್ಯಾತ ದೃಶ್ಯಕಲಾ ವಿಭಾಗವಿರುವ ಬರೋಡದಲ್ಲಿ ಮತ್ತೊಂದು ತೆರನಾದ ಸ್ತ್ರೀವಾದ ಜಾರಿಯಲ್ಲಿದೆ. ಊಟದ ಮೆಸ್ಸಿನಲ್ಲಿ ತಿನ್ನುವ ಹುಡುಗಿಯರು ಹಾಗೆ ಮಾಡಲು 'ಅರ್ಧ' ಬೆಲೆ ಮಾತ್ರ ತೆರಬೇಕು. ಹುಡುಗರು ಮಾತ್ರ 'ಪೂರ್ಣ' ಹಣ ಪಾವತಿ ಮಾಡಬೇಕು. ಆದರೆ ಹುಡುಗರ ಕ್ಯಾತೆ ತೆಗೆಯುತ್ತಿದ್ದುದು ಅದೇ ಕಾರಣಕ್ಕೆ : 
ಹುಡುಗಿಯರು ಕಡಿಮೆ ತಿನ್ನುತ್ತಾರಲ್ಲ, ಅದಕ್ಕೇ ಅರ್ಧ ಬೆಲೆ ಎಂದು ಮೆಸ್ ಒಡೆಯ ಸಮಜಾಯಿಷಿ ನೀಡಿದರೆ ಹುಡುಗರ ತಕರಾರು ಏನೂ ಇರುತ್ತಿರಲಿಲ್ಲ. ಆದರೆ ಆ ಒಡೆಯನಿಗೆ ಹುಡುಗರ ತಾಕೀತು ಒಂದೇ, ಹುಡುಗಿಯರಿಗೆ ಅರ್ಧ ಟಿಕೆಟ್ ಎಂದು ಬೇಕಾದರೆ ಹೇಳಿಕೊಂಡು ತಿರುಗು ಗುರು. ಆಗ ಅವರೆಲ್ಲ ರಿಸವರ್ೇಷನ್ ಕ್ಯಾಟಗರಿ ಎನ್ನಿಸಿಕೊಳ್ಳುತ್ತಾರೆ. ಆದರೆ, ಬದಲಿಗೆ ಎಲ್ಲಾದರೂ, ಹುಡುಗರು ಊಟ ಮಾಡಲು ಹುಡುಗಿಯರಿಗಿಂತಲೂ ಡಬ್ಬಲ್ ಛಾಜರ್್ ಮಾಡುತ್ತೇವೆ ನಮ್ಮ ಮೆಸ್ನಲ್ಲಿ ಎಂದು ಪ್ರಚಾರ ಮಾಡಿಯ. ನಮಗದು ಅವಮಾನ ಮಾಡಿದಂತೆ ಅರ್ಥವಾಯಿತೆ? 
ನೀವು ಹುಡುಗರು ಹೊಟ್ಟೆಬಾಕರು, ಹುಡುಗಿಯರಿಗಿಂತಲೂ ಡಬ್ಬಲ್ ತಿನ್ನುತ್ತೀರ ಎಂದು ಗುಜರಾತಮ್ಮನಾಣೆಗೂ ಯಾರಿಗೂ ಹೇಳಿಲ್ಲ ಇದೂವರೆಗೂ, ಎಂದುತ್ತರಿಸುತ್ತಿದ್ದ ಮೆಸ್ ಒಡೆಯ. ಹುಡುಗರ ಲೀಡರ್ ಆ ವಾದವನ್ನು ಒಪ್ಪದಂತೆ ತಲೆಯಾಡಿಸಿ, ಆತನ ಹೆಗಲ ಮೇಲೆ ಕೈ ಹಾಕಿ ಹೇಳುತ್ತಿದ್ದುದು ಹೀಗೆ:
ನೀನು ಮಾಡುತ್ತಿರುವುದು ಅಥವ ಹೇಳಲಿರುವುದು ತಪ್ಪು ಭ್ಹಾಯ್. ಹುಡುಗಿಯರಿಗಿಂತಲೂ ನಾವು ಕೇವಲ ಎರಡುಪಟ್ಟು ಹೆಚ್ಚು ತಿನ್ನುತ್ತೇವೆ ಎಂದರೆ ಅದು ನಮ್ಮ ಕೆಪ್ಯಾಸಿಟಿಗೆ ಅವಮಾನವೇ.  ಅವಿ ಭಯಂಕರ್ ರಾವ್ನ (ಅ.ಭ.ರಾ) ಪ್ರಸಂಗ ಮರೆತುಬಿಟ್ಟೆಯ? ಎಂದು ಕೇಳಿದ್ದ. 
'ಈಗ ಅರ್ಥವಾಯಿತು ಬಿಡಿ. ನನ್ನ ಹೇಳಿಕೆಯನ್ನು ಸರಿಮಾಡಿಕೊಳ್ಳುತ್ತೇನೆ' ಎಂಬಂತೆ ಮೆಸ್ ಭ್ಹಾಯ್ ಸಮಾಧಾನದ ದೀರ್ಘ ಉಸಿರು ಬಿಟ್ಟು, ನಗುತ್ತ ತಲೆಯಾಡಿಸುತ್ತಿದ್ದ: 
ಅ.ಭ.ರಾ ಕನರ್ಾಟಕದ ಕ್ಯಾಂಡಿಡೇಟ್. ಬರೋಡದ ಮಹಾರಾಜ ಸಯ್ಯೋಜಿರಾವ್ ಯೂನಿವಸರ್ಿಟಿಯ ಫೈನ್ ಆಟರ್್ ಫ್ಯಾಕಲ್ಟಿಯಲ್ಲಿ ಚಿತ್ರಕಲೆ ಓದುತ್ತಿದ್ದ. ಆತನ ಹೊಟ್ಟೆ ಮೋದಿಯ ವೋಟ್ ಬ್ಯಾಂಕಿಗಿಂತಲೂ ದೊಡ್ಡದಿತ್ತು. ಒಮ್ಮೆ ಹಠಕ್ಕೆ ಬಿದ್ದು, ಪಂದ್ಯ ಕಟ್ಟಿ, ಮುವತ್ತು ಪೂರಿ ತಿಂದು ಗೆದ್ದಿದ್ದ ಊಟದ ಮೆಸ್ಸಿನಲ್ಲಿ. ಅದಕ್ಕೆ ಸಿಕ್ಕ ಬಹುಮಾನ ಎರಡು ಪ್ಲೇಟ್ ಗುಜರಾತಿ ಸ್ವೀಟ್ಸ್ ಮತ್ತು ಮೂರು ಐಸ್ಕ್ರೀಂ ಕೋನ್ಗಳು, ಎಲ್ಲವೂ ಎದುರಾಳಿ ಪಕ್ಷದ ಖಚರ್ಿನಲ್ಲಿ. ಅದನ್ನು ಅ.ಭ.ರಾ ಆ ಕೂಡಲೇ, ಸ್ಪಧರ್ೆ ಗೆದ್ದ ಖುಷಿಯ 'ಟೆಂಪ್ಟೇಸನ್' ತಡೆಯಲಾರದೆ ಹೇಗೆ ಗಬಗಬ ತಿಂದನೆಂದು ಮೆಸ್ನ ಕೆಲಸಗಾರನೊಬ್ಬನ ವರ್ಣನೆಯಲ್ಲೇ ಕೇಳಬೇಕು: 
ತಿಂದು ತೇಗುವುದನ್ನು ಬಲ್ಲೆ. ಆದರೆ ತೇಗಿದ ನಂತರ ತಿಂದವರಲ್ಲಿ ಇವನೇ ಮೊದಲಿಗೆ ಎಂದಿದ್ದ ಅ ಪರಿಚಾರಕ!
(2)
ರಾತ್ರಿ ಹುಡುಗಿಯರ ಹಾಸ್ಟೆಲ್ಗೆ ಒಳಗಿನಿಂದ ಬೀಗ ಬಿದ್ದ ಕೂಡಲೇ ಸುಪ್ತ ಹಾಗೂ ಸುಷುಪ್ತಾವಸ್ಥೆಯ ಬಯಕಗಳೆಲ್ಲ ಹುಡುಗರ ಹಾಸ್ಟೆಲ್ ಪ್ರಾಂತ್ಯದಲ್ಲಿ ಪ್ರಕಟಿತವಾಗುತ್ತಿತ್ತು.
 ಹೋಯ್, ಆನಂದ್ ಸದನ್ ಹುಡುಗೀರಾ, ಎಂಗಿದೀರ್ರೇ ಎಂದು ಗುಲ್ಬರ್ಗದ ಗೆಳೆಯ ಶುದ್ಧ ಉತ್ತರ ಕನರ್ಾಟಕದ ಕನ್ನಡದಲ್ಲೇ ಹಾಸ್ಟೆಲ್ಲಿನ ಹೊರಗಿನಿಂದ ಕೂಗುತ್ತಿದ್ದ. ಎರಡು ಕಾರಣಗಳಿಂದಾಗಿ ಹುಡುಗಿಯಯರ್ಾರೂ ಆತನ ವಿರುದ್ಧ ಮಾರನೇ ದಿನ ಕಂಪ್ಲೇಟ್ ಮಾಡುತ್ತಿರಲಿಲ್ಲ. ಒಂದು: ಅವಯರ್ಾರಿಗೂ ಕನ್ನಡ ಅರ್ಥವಾಗುತ್ತಿರಲಿಲ್ಲ. ಎರಡು: ಆತ ಹುಡುಗಿಯರ ಹಾಸ್ಟೆಲ್ಲಿನ ಹೊರಗೆ ನಿಲ್ಲುವುದಕ್ಕೂ ಹುಡುಗರ ಹಾಸ್ಟೆಲ್ಲಿನ ಪ್ರಾಂಗಣದಲ್ಲಿ ನಿಲ್ಲುವುದಕ್ಕೂ ಭೌತಿಕವಾಗಿ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ! ಅಂದರೆ ಆತ ಹುಡುಗಿಯರ ಹಾಸ್ಟೆಲಿನ 'ಬಳಿ ಬಂದು' ಗಲಾಟೆ ಮಾಡಿದ ಎಂದಾಗುತ್ತಿರಲಿಲ್ಲ. 
 
ರಾತ್ರಿ ಎಂಟೊಂಬತ್ತು ಗಂಟೆಗೆಲ್ಲ ಇಡಿಯ ಶಾಂತಿನಿಕೇತನದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳೆಲ್ಲ ದಿನವೂ ಬಂದ್ ಆಗುತ್ತಿದ್ದವು. ದೀಪದ ಬೆಳಕುಗಳೆಲ್ಲ (1) ತೀರ ಹತ್ತಿರದವರ್ಯಾರನ್ನೋ ಕಳೆದುಕೊಂಡಂತೆಯೋ ಅಥವ (2) ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟಿನಲ್ಲಿ ಸೋತಂತೆಯೋ ಅಥವ (3) ಕೊಲ್ಕೊತ್ತ ನೈಟ್ ರೈಡಸರ್್ ಐ.ಪಿ.ಎಲ್ನ ಆಟಗಾರರ ನಾಯಕರುಗಳ ನಿರಂತರ ಮುಖಭಾವದಂತೆ -- ನಿರಂತರವಾಗಿ ಮಂಕಾಗಿರುತ್ತಿದ್ದವು. 1990ರಲ್ಲಿ ದಿನಕ್ಕೆ ಐದುಗಂಟೆ ಕಾಲ, ಅದರಲ್ಲೂ ರಾತ್ರಿಯ ಹೊತ್ತಿನಲ್ಲೇ ಲೋಡ್ ಶೆಡ್ದಿಂಗ್ ಇರುತ್ತಿತ್ತು. ಶಾಂತಿನಿಕೇತನದ ನೀರವತೆ ವಿಕ್ಷಿಪ್ತವಾದುದು. ಬೆಂಗಳೂರಿನಿಂದ ಕಲಾಇತಿಹಾಸದಲ್ಲಿ ಎಂ.ಏಫ್.ಎ ಕೋಸರ್್ ಮಾಡಲು ಕಲಾಭವನವನ್ನು ಸೇರಿದ್ದ ನನಗೆ ಕತ್ತಲೆ ಎಂದರೇನೆಂದು ಕೇಳಿ, ಓದಿ ತಿಳಿದಿದ್ದೆ. ಆಗೆಲ್ಲ ಬೆಂಗಳೂರಿನಲ್ಲಿ ಸಾಕಷ್ಟು ಬೆಳಕಿರುತ್ತಿತ್ತು, ರಾತ್ರಿಯ ಹೊತ್ತಿನಲ್ಲೂ ಸಹ. ಆದರೆ ಕಗ್ಗತ್ತಲೆ ಎಂದರೆ, ಪೂರ್ಣ ಬೆಳದಿಂಗಳು ಎಂದರೆ ಏನೆಂದು ಕಣ್ಣಾರೆ ಕಂಡದ್ದು ಅಥವ ಕಾಣದೇ ಹೋದುದು ಅಲ್ಲಿಯೇ. ಅಲ್ಲಿನ ಕಗ್ಗತ್ತಲೆಂದರೆ ಬ್ಲಾಕ್ ಹೋಲ್ನ ಅನುಭವದಂತೆ: ನಿಮ್ಮ ಕಾಲೇ ನಿಮಗೆ ಯಾರೋ ಬೇರೆಯವರ ಕಾಲಿನಂತೆನಿಸಿಬಿಡುತ್ತದೆ. ಬೆಳದಿಂಗಳ ಪ್ರಖರತೆ ತಡೆಯಲಾರದೆ ಒಮ್ಮೊಮ್ಮೆ ಕಣ್ಣುಗಳನ್ನೂ ಮುಚ್ಚಿಬಿಡಬೇಕಾಗುತ್ತದೆ!
ಅಂದು ಮಧ್ಯರಾತ್ರಿಯಲ್ಲಿ ಅಚಾನಕವಾಗಿ ಗಲಭೆ ಎದ್ದಿತ್ತು, ಹುಡುಗರ ನಡುವೆ. ಹಾಗೆ ಗದ್ದಲವಾದಾಗಲೆಲ್ಲ ಇರುವ ಸ್ಥಿತಿಯಲ್ಲಿಯೇ ಎದ್ದೆವೋ ಬಿದ್ದೆವೋ ಎಂದು ಹೊರಕ್ಕೆ, ದಿಕ್ಕುದೆಸೆಯಿಲ್ಲದೆ ಓಡುವುದು ಅಲ್ಲಿನ ನಿಯಮ. ನಾನು ಅಲ್ಲಿಗೆ ಹೊಸಬನಾದ್ದರಿಂದ ನಾನೊಬ್ಬನೇ ಅಜ್ಞಾನದಿಂದ ಉಟ್ಟಬಟ್ಟೆಯಲ್ಲಿ ರೂಮಿನಿಂದ ಹೊರಕ್ಕೆ ಬಂದವನು. ಕೆಲವರು ಹುಟ್ಟಿದದಿನ ತೊಟ್ಟಿದ್ದ ಬಟ್ಟೆಯನ್ನೇ ಹೊದ್ದಿದ್ದರು. ಬರೀ ಹುಡುಗರೇ ಇರುತ್ತಾರೆಂಬ ಗ್ಯಾರಂಟಿಯಿರುವ 'ಹೊರಗಡೆ' ಸಂಕೋಚವೆಂತಹದ್ದು! ಆಗೆಲ್ಲ, ಅಂದರೆ ಇಪ್ಪತ್ತು ವರ್ಷದ ಹಿಂದೆ, ಅಲ್ಲಿ, ಹುಡುಗರೆಲ್ಲ ಬರೀ ಹ್ಯಾಪಿಯಾಗಿರುತ್ತಿದ್ದರು 'ಹ್ಯಾಪಿ ಅಂಡ್ ಗೇ' ಎಂಬ ಜನಪ್ರಿಯ ಗದ್ಯದಲ್ಲಿ. ಸಲಿಂಗಕಾಮಿಗಳು ತೀರ ಅಪರೂಪವೆನ್ನಿಸುವಂತಿದ್ದರು. 
(3)
ಎಲ್ಲರೂ ಹೊರಕ್ಕೆ ಓಡಿಬರಲು ಕಾರಣವು ಹೊರಗೆ ಬಂದಾದ ಮೇಲೆ ಗೊತ್ತಾಯಿತು. ಅಥವ ಎಲ್ಲರ ಕಣ್ಣೆದುರಿಗೇ ನಿಂತಿತ್ತು ಆ ಕಾರಣ. ನಿರ್ಜರ್ ಎಂಬ ಸಣ್ಣ ಆಕಾರದ ಬೆಂಗಾಲಿ ಗ್ರಾಫಿಕ್ ವಿದ್ಯಾಥರ್ಿಯು ಕೈಯಲ್ಲಿ ಬಾಟೆಲ್ ಹಿಡಿದು ನಿಂತಿದ್ದಾನೆ. ಆತನ ಎದುರಿಗೆ ಕೆ.ಕೆ.ಮೊಹಮ್ಮದ್ ಎಂಬ ಬೃಹದಾಕಾರದ ಕೇರಳದ ಗ್ರಾಫಿಕ್ ವಿದ್ಯಾಥರ್ಿ ನಿಂತಿದ್ದಾನೆ. ಇಬ್ಬರೂ ಕಬಡ್ಡಿ ಆಡುವ ಪೋಸು ಕೊಡುತ್ತಿರುವ ಮೇಡಮ್ ತುಸ್ಸಾಡ್ ಮೇಣದ ಶಿಲ್ಪಗಳಂತೆ ಸ್ಥಿರವಾಗಿ ಬಹಳ ಹೊತ್ತು ನಿಂತೇ ಇದ್ದಾರೆ. ಆದರೆ ಸುತ್ತಲಿಯವಯರ್ಾರೂ ನಿರ್ಜರನ ಹತ್ತಿರ ಅಥವ ಆತನ ಬಾಟೆಲಿನ ಹತ್ತಿರ ಹೋಗಲು ನಿರಾಕರಿಸುತ್ತಿದ್ದಾರೆ. ಅವರೆಲ್ಲರೂ ತಮ್ಮ ದೃಷ್ಟಿಯನ್ನು ಮಾತ್ರ ಆ ಬಾಟೆಲ್ಲಿನ ಒಳಕ್ಕೇ ಒಟ್ಟಾರೆಯಾಗಿ ತೂರಿಸಿಬಿಟ್ಟಿದ್ದಾರೆ--ಬೆಂಗಳೂರಿನ ಗೂಡ್ಸ್ಶೆಡ್ ರಸ್ತೆಯ ಬಾಟೆಲ್ ನೆಕ್ನಲ್ಲಿ ಸಿಕ್ಕಿಕೊಂಡ ಟ್ರಾಫಿಕ್ ಗಾಡಿಗಳಂತೆ. 
ಆ ಬಾಟೆಲ್ಲಿನ ಒಳಗೆ ಗ್ರಾಫಿಕ್ ವಿಭಾಗದಿಂದ ಕದ್ದು ತರಲಾಗಿದ್ದ ನೈಟ್ರಿಕ್ ಆಸಿಡ್ ಇತ್ತು. ಝಿಂಕ್ ಪ್ಲೇಟ್ಗಳಲ್ಲಿ ರೇಖಾಚಿತ್ರಗಳನ್ನು ಸೂಜಿಯಿಂದ ಬರೆದಾಗ, ಅದರ ಮೇಲಿರುವ ಆಸಿಡ್ ತಡೆಯುವ ಹೊದಿಕೆಯು ಗೀಟು ಹಾಕಿದೆಡೆಯೆಲ್ಲ, ಅಲ್ಲಿ ಮಾತ,್ರ ತೆರೆದುಕೊಳ್ಳುತ್ತದೆ. ಮಿಕ್ಕೆಡೆ ಹಾಗೆಯೇ ಹೊದಿಕೆ ಉಳಿದುಕೊಂಡಿರುತ್ತದೆ. ಗೀಟುಗಳ ಮೂಲಕ ಪ್ಲೇಟಿನ ಮೇಲೆ ರೇಖಾಚಿತ್ರಗಳನ್ನು ರಚಿಸುವ ಗ್ರಾಫಿಕ್ ಕಲಾವಿದರು, ತೆಳುಗೊಳಿಸಲಾದ ನೈಟ್ರಿಕ್ ಆಸಿಡ್ನ ಟಬ್ಬಿನಲ್ಲಿ ಕೆಲವೇ ನಿಮಿಷ ಆ ಪ್ಲೇಟನ್ನು ಇರಿಸುತ್ತಾರೆ. ಆಗ ಗೀಟಾದ ಕಡೆಯೆಲ್ಲ ರೇಖೆಗಳು ಆಳಕ್ಕಿಳಿಯುತ್ತವೆ. ನಂತರ ಪ್ಲೇಟನ್ನು ನೀರಲ್ಲಿ ತೊಳೆದು, ಪ್ಲೇಟಿನಾದ್ಯಂತ ಇಂಕನ್ನು ಉಜ್ಜಿ, ತೆಳು ಕಾಗದದಿಂದ ಒರೆಸಿದಾಗ, ಆಳವಾದ ರೇಖೆಗಳೊಳಗೆ ಮಾತ್ರ ಇಂಕ್ ಉಳಿಯುತ್ತದೆ. ಆ ಪ್ಲೇಟಿನ ಮೇಲೆ ಕಾಗದ ಇರಿಸಿ ಒತ್ತಡ ಹಾಕಿ, ಕಾಗದ ತೆಗೆದುನೋಡಿದಾಗ ಪ್ಲೇಟಿನ ಮೇಲೆ ಬರೆಯಲಾಗಿದ್ದ ರೇಖಾಚಿತ್ರದ ಬಿಂಬರೂಪವು ಕಾಗದದಲ್ಲಿ ಮೂಡಿರುತ್ತದೆ. ಅದನ್ನೇ ಗ್ರಾಫಿಕ್ ಪ್ರಿಂಟ್ ಎನ್ನುವುದು. ನೈಟ್ರಿಕ್ ಆಸಿಡ್ಗೆ ಸಾಕಷ್ಟು ನೀರು ಬೆರೆಸಲಾಗಿರುತ್ತದೆ, ಟಬ್ಬಿನಲ್ಲಿ. ನೈಟ್ರಿಕ್ ಆಸಿಡ್ ಎಂಬುದು ಗ್ರಾಫಿಕ್ ವಿಭಾಗಕ್ಕೆ ಬ್ರೆಡ್ ಪೀಸ್ಗಳ ನಡುವೆ ಇರುವ ಬೆಂಗಾಲಿ ಸ್ವೀಟ್ಸ್ನಂತೆ, ಅನಿವಾರ್ಯ. 
ಇಂತಹ ನೈಟ್ರಿಕ್ ಆಸಿಡನ್ನು, ಅದೂ ಕಾನ್ಸನ್ಟ್ರೇಟೆಡ್ ರೂಪದಲ್ಲಿ ಕುಡಿದುಬಿಡುತ್ತೇನೆಂದು ನಿರ್ಜರ್ ಮೊದಲೇ ಎಲ್ಲರಿಗೂ ಘೋಷಿಸಿ ಹೇಳುತ್ತಿದ್ದಾನೆ. ಏಕೆಂದರೆ ಕುಡಿದ ನಂತರ ಗಂಟಲು ತೂತು ಬೀಳುವುದರಿಂದ ಹೇಳಲಾಗುವುದಿಲ್ಲವಲ್ಲ, ಅದಕ್ಕೇ ಇರಬೇಕು.  ಅಥವ ಮಾಕರ್ಿಸ್ಟ್ ದೇಶವಾದ ಬೆಂಗಾಲದ ರಾಜ್ಯವು ಮಾಕ್ಸರ್್ವಾದದ ಭಾರತೀಯ ತಾಣವಾದ್ದರಿಂದ, ಕೆಲಸ ಮಾಡುವ ಮೊದಲೇ ಮ್ಯಾನಿಫೆಸ್ಟೊವನ್ನು ಘೋಷಿಸುವುದು ಅಲ್ಲಿನವರ ಗುಣಲಕ್ಷಣ. 
ದೀತೇ ಹೋಬೆ, ಕೊತರ್ೇ ಹೋಬೆ ('ಕೊಡಲೇ ಬೇಕು, ಮಾಡಲೇ ಬೇಕು' ಎಂಬ ಅರ್ಥಕ್ಕೆ ಹತ್ತಿರವಾದ ಅರ್ಥ) ಎಂದು ಇದ್ದಕ್ಕಿದ್ದಂತೆ, ಬೆಳಗಾಗೆದ್ದು ಹುಡುಗ-ಹುಡುಗಿಯರೆಲ್ಲರೂ ಸ್ಟ್ರೈಕ್ ಮಾಡುತ್ತ ಹೊರಡುವುದು ಕಲಾಭವನದ ಒಂದು ಧರ್ಮವೇ ಆಗಿಹೋಗಿದೆ. ಒಮ್ಮೆ ಅಲ್ಲಿನ ಪ್ರಿನ್ಸಿಪಾಲರು ಹಾಗೆ ಮೆರವಣಿಗೆ ಹೊರಟಿದ್ದ ಹುಡುಗನೊಬ್ಬನನ್ನು ಕೇಳಿದ್ದರು, 
ಯಾವ ವಿಷಯಕ್ಕೆ ಹರತಾಳ ಆಚರಿಸುತ್ತಿದ್ದೀರ? 
ಅದಕ್ಕೆ ಆ ಭೂಪ ಸ್ಪಷ್ಟವಾಗಿ ಉತ್ತರಿಸಿದ್ದ, ನನಗೆ ಕ್ಲಿಯರಾಗಿ ಏನೂ ಗೊತ್ತಿಲ್ಲ ಸಾ. ಮೊದಲು ಹರತಾಳ. ಆಮೇಲೆ ಕಾರಣ ಹುಡುಕುತ್ತೇವೆ, ನಂತರ ನಿಮಗೆ ತಿಳಿಸುತ್ತೇವೆ ಎಂದು ಗಂಭೀರವಾಗಿ ನುಡಿದಿದ್ದ. 
(4)
ಆಸಿಡ್ ಕುಡಿದುಬಿಡುವೆ. ನನಗೆ ಅನ್ಯಾಯವಾಗಿದೆ, ಎಂದು ನಿರ್ಜರ್, ಆ ನಿರ್ಜರ ರಾತ್ರಿಯಲ್ಲಿ, ಮೌನವಾಗಿದ್ದ ಸಹಪಾಠಿಗಳೆದುರು ಘೋಷಿಸಿದ. 
ಕಾರಣ ಹೇಳು ಗೆಳೆಯ ಎಂದಿದ್ದ ಮೊಹಮ್ಮದ ಮತ್ತಿತರರು. 
ಇಲ್ಲ. ನನಗೆ ಅನ್ಯಾಯ ಖಂಡಿತ ಆಗಿದೆ. ಆಸಿಡ್ ಕುಡಿಯುತ್ತೇನೆ
ಕೊಕೊಕೋಲ ಕುಡಿಯುವಷ್ಟು ಅವಸರದಲ್ಲಿದ್ದಂತಿದೆ. ಕಾರಣ ಹೇಳು ಗೆಳೆಯ
ನನಗೆಷ್ಟು ಅನ್ಯಾಯವಾಗಿದೆ ಎಂದರೆ, ಅದನ್ನು ಹೇಳಿಕೊಳ್ಳಲಾಗದಷ್ಟು. ನಾನು ಆಸಿಡ್ ಕುಡಿಯುತ್ತೇನೆ
ನಿನಗೆ ಏನನ್ಯಾಯವಾಗಿದೆ ಎಂದು ಕೇಳುತ್ತಿಲ್ಲ. ಬೆಂಗಾಲ ಮತ್ತು ಕೇರಳದಲ್ಲಿ ನಮಗೆ ಸರಿ ಹೊಂದಲಾರದ್ದೇಲ್ಲವನ್ನೂ ಅನ್ಯಾಯ ಎಂದೇ ಐಡೆಂಟಿಫೈ ಮಾಡುತ್ತೇವೆ. ಆದರೆ ಆಸಿಡ್ ಕುಡಿಯಲು ಕಾರಣ ಹೇಳಿಹೋಗು ಗೆಳೆಯ. ಏಕೆಂದರೆ ನಾಳೆ ಪೋಲಿಸು, ಕಛೇರಿ ಎಂದೆಲ್ಲ ಆದರೆ ಅದಕ್ಕೆ ಸೂಕ್ತ ಸಮಜಾಯಿಷಿ ಬೇಕಲ್ಲ
ನಿರ್ಜರನ ಮುಖಚಹರೆ ಬದಲಾಯಿತು. ಕತ್ತಲಲ್ಲಿ ಅದು ಯಾವ ಭಾವದ ಚಹರೆ ಎಂಬುದಕ್ಕಿಂತಲೂ ಅದು ಬದಲಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟವಾಗುತ್ತಿತ್ತು. ತನ್ನ ಬಗ್ಗೆ, ತನಗಾದ ಅನ್ಯಾಯದ ಬಗ್ಗೆ ಚಿಂತೆಯಿಲ್ಲದೆ ಔಪಚಾರಿಕ ನ್ಯಾಯಾಂಗ ಕ್ರಮಗಳಿಗಾಗಿ ಗೆಳೆಯರು ಕಾರಣ ಕೇಳುತ್ತಿರುವುದು ನಿರ್ಜರನಿಗೆ ಬಹಳ ದು:ಖಕ್ಕೀಡುಮಾಡಿಬಿಟ್ಟಿತು. ಅದೇ ದು:ಖದಲ್ಲಿ ಡಿಸೈನ್ ವಿಭಾಗದ ಹಿಂದಕ್ಕೆ ಓಡಿದ. ರಾಮ್ಕಿಂಕರ್ ಬೈಜ್ 1930ರ ದಶಕದಲ್ಲಿ ಸೃಷ್ಟಿಸಿದ್ದ ಸಂತಾಲ್ ಸಂಸಾರ ಎಂಬ ಶಿಲ್ಪಸಮೂಹವನ್ನು ಪ್ರತಿಷ್ಠಾಪಿಸಲಾಗಿರುವ ತಾಣ ಮತ್ತು ಡಿಸೈನ್ ವಿಭಾಗದ ನಡುವೆ ನಿಂತುಬಿಟ್ಟ. 
ಎಲ್ಲ ಹುಡುಗರೂ ಅವನ ಹಿಂದೆಯೇ ಓಡಿದ್ದರು. ಆತ ತಿರುಗಿ ನಿಂತ ಕೂಡಲೇ ಎಲ್ಲರು ಸ್ಥಿರವಾಗಿಬಿಟ್ಟರು. ಆಗ ನಿರ್ಜರ್ ಹಾಗೂ ಮೊಹಮ್ಮದ್ ಇಬ್ಬರನ್ನು ಹೊರತುಪಡಿಸಿ ಉಳಿದವರಿಗೆ ತಿಳಿದದ್ದು ಇದು: ತಾವೆಲ್ಲ ಏಕೆ ಓಡುತ್ತಿದ್ದೇವೆಂದು ಯಾರಿಗೂ ತಿಳಿದಿಲ್ಲವೆಂಬುದು ಅವರಿಗೆಲ್ಲ ಆಗ ಹೊಳೆಯಿತು! ಅಂತೆಯೇ ಹೆಚ್ಚೂಕಡಿಮೆ ನಿರ್ಜರನಿಗೂ ತಾನೇಕೆ ಬಿಸಿ ಬಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೇನೆಂದು ತಿಳಿದಿರಲಿಲ್ಲವೆನಿಸುತ್ತದೆ. ಮಾರನೇ ದಿನ ಅಸಫಲ ಆತ್ಮಹತ್ಯೆಗೆ ಆತ ಪ್ರಯತ್ನಿಸಿದ್ದೇಕೆಂದು ನೀಡಿದ ಕಾರಣವು ಮಾರನೇ ದಿನವೇ ಫ್ರೆಷ್ ಆಗಿ ಹುಟ್ಟಿಕೊಂಡಿದ್ದು ಎಂದು ಬಿಡಿಸಿ ಹೇಳಬೇಕಿಲ್ಲ. ಹುಡುಗರಿಗೆ ತಾವೇಕೆ ನಿರ್ಜರನನ್ನು ತಡೆಯುತ್ತೇವೆಂದು ತಿಳಿದಿರಲಿಲ್ಲ. ಏಕೆಂದರೆ ಆ ಬಾಟಲಿಯೊಳಗಡೆ ನೈಟ್ರಿಕ್ ಆಸಿಡ್ ಇದೆ ಎಂದು ಅವರಿಗೆಲ್ಲ ತಿಳಿದಿದ್ದರೂ ಸಹ ನಿರ್ಜರ್ ಅದನ್ನು ಕುಡಿದುಬಿಡುವ ಸಾಧ್ಯತೆ ಇದೆ ಎಂದು ನಂಬಿದ್ದವರು ಇಬ್ಬರು ಮಾತ್ರ - ನಿರ್ಜರ್ ಮತ್ತು ಮೊಹ್ಮದ್!
ನಿರ್ಜರನಿಗೆ ಆಸಿಡ್ ಬಾಟಲಿ ಒಂದೇ ಸಾಧ್ಯತೆಯನ್ನು ಸೂಚಿಸುತ್ತಿತ್ತು. ಆದರೆ ಮೊಹಮ್ಮದನಿಗೆ ಎರಡು ಕಾರಣಗಳಿಂದ ಅದೇ ಬಾಟಲಿ ಚಿಂತೆಗೀಡುಮಾಡಿತ್ತು. (ಅ) ನಿರ್ಜರ್ ಆಸಿಡ್ ಕುಡಿದುಬಿಟ್ಟಾನೆಂಬ ಚಿಂತೆ ಮತ್ತು (ಆ) ಹಾಗೆ ಮಾಡಿದಲ್ಲಿ ಆತನಿಗೆ ಆಸಿಡ್ ಹೇಗೆ ಸಿಕ್ಕಿತೆಂಬ ಪೋಲಿಸ್ ಎನ್ಕ್ವೈರಿಗೆ ನೇರವಾಗಿ 'ಮೊಹ್ಮದ್' ಕಾರಣವಾಗುತ್ತಿದ್ದನೆಂಬ ಚಿಂತೆ. ಏಕೆಂದರೆ ಗ್ರಾಫಿಕ್ ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಪ್ರಿಂಟ್ಗಳನ್ನು ತೆಗೆಯಬೇಕಿದ್ದರೆ, ಡಿಪಾಟರ್್ಮೆಂಟಿನ ಹೆಡ್ಡು ಒಬ್ಬ ಹಿರಿಯ ವಿದ್ಯಾಥರ್ಿಗೆ ಜವಾಬ್ದಾರಿ ವಹಿಸುತ್ತಿದ್ದರು, ಈಗ ಮೊಹ್ಮದನಿಗೆ ವಹಿಸಿದಂತೆ.
ವ್ಯಕ್ತಿಯೊಬ್ಬನನ್ನು/ಳನ್ನು ತುಂಬ ಸಲ ಕರೆದಾವ ಅದು ಸಲುಗೆಯಿಂದಾಗಿ ಚಿಕ್ಕದಾಗಿಬಿಡುತ್ತದೆ, ಅವರ ಹೆಸರು ಮತ್ತು ಅವರ ಬಗ್ಗೆ ನಮಗಿರುವ ಕೃತಕ ಗೌರವ. ಶತ್ರುಗಳು ಯಾವ ಕಾರಣಕ್ಕೆ ಹಾಗಾದರೆಂಬ ಮತ್ತು ನಿಮ್ಮನ್ನು ಕುರಿತ ಎಲ್ಲ ಘಟನೆಯ ವಿವರಗಳನ್ನೂ ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ. ಆದರೆ ನೀವು ಕ್ಷಮಿಸುತ್ತೀರಿ ಎಂದು ಸ್ಫಷ್ಟವಾಗಿ ಗೊತ್ತಿದ್ದರಿಂದಲೇ ನಿಮ್ಮನ್ನು ಕುರಿತ ಪ್ರಮುಖ ವಿವರಗಳನ್ನು ಮರೆತು ನಿಮ್ಮೊಡನಿರುವವರನ್ನು ಗೆಳೆಯರು ಎಂದು ಕರೆಯಬಹುದು. ಮೊಹ್ಮದ್ ಎರಡು ವರ್ಷ ನನ್ನ ಜೂನಿಯರ್ ಆಗಿದ್ದರಿಂದ ಆತನ ಹೆಸರನ್ನು - ವಾಸ್ತು ಪ್ರಕಾರವಾಗಲ್ಲದಿದ್ದರೂ -- ಮೊಹ್ಮದ್ ಎಂದು ಇನ್ನು ಮುಂದೆ ಪುಟ್ಟದಾಗಿಸುವೆ. 
(5)
 ಆತನ ಆತ್ಮಹತ್ಯಾ ಪ್ರಯತ್ನದ ಹಿಂದಿನ ಕಾರಣ ಮಾತ್ರ ಯಾರಿಗೂ, ಅವನನ್ನೂ ಒಳಗೊಂಡಂತೆ, ಕೊನೆಯವರೆಗೂ ತಿಳಿಯಲಿಲ್ಲ. ಅದೂ ಆತ್ಮಹತ್ಯೆಯ ಪ್ರಯತ್ನದಲ್ಲಿ ನಿರ್ಜರ್ ಅಂತಿಮವಾಗಿ ಸೋತ ನಂತರವೂ ಸಹ ಕಾರಣ ತಿಳಿಯಲಿಲ್ಲ. ಒಂದು ನಂಬಲರ್ಹವಾದ ಮೂಲದ ಪ್ರಕಾರ ಗುಟ್ಟು ಹೊರಬಿತ್ತು: ಆತ್ಮಹತ್ಯೆಗೆ ಕಾರಣವೇನೂ ಇರಲಿಲ್ಲ ಆದರೆ ಹಾಗೆ ಮಾಡಿಕೊಳ್ಳಬೇಕೆಂದು ನಿರ್ಜರನಿಗೆ ಅನಿಸಿದ್ದರಲ್ಲಿ ಯಾವುದೇ ಸುಳ್ಳು ತಟವಟಗಳು ಇಲ್ಲವೆಂಬುದು. ಡಿಪ್ರೆಷನ್ನಿನಿಂದ ಬಳಲುವವರು ಮಾಡಿಕೊಳ್ಳುವ ಅವಗಢಗಳಿಗೆ ಯಾವುದೇ ಕಾರಣ ಇರುವುದಿಲ್ಲ ಮತ್ತು ಅದು ಬೇಕಾಗಿಯೂ ಇರುವುದಿಲ್ಲ. ಕಲಾಭವನದಲ್ಲಿ ಒಂದೆರೆಡು ವರ್ಷಕಾಲ ಇದ್ದರೆ ಮೊದಲು ನಮ್ಮನ್ನಾವರಿಸಿಕೊಳ್ಳುವುದು ಡಿಪ್ರೆಷನ್, ಕಾರಣವಿಲ್ಲದ ಡಿಪ್ರೆಷನ್! 
ಕಾರಣವಿಲ್ಲದ ಡಿಪ್ರೆಷನ್ನಿಗೆ ಕಾರಣವಾದರೂ ಎಲ್ಲಿಂದ ಹುಡುಕುವುದು, ಹೇಳಿ! 
ಕಲಾಭವನದ ಆಗುಹೋಗುಗಳ ವಿಕ್ಷಿಪ್ತತೆ ಹೊರಗಿನವರಿಗಿರಲಿ, ಬೆಂಗಾಲಿ ಹಿನ್ನೆಲೆ ಇರುವವರನ್ನೇ ಸೀಳು-ವ್ಯಕ್ತಿತ್ವಗಳನ್ನಾಗಿಸಿಬಿಡುತ್ತದೆ. ಇರಲಿ, ಮನುಷ್ಯ ಯಾವಾಗಲೂ ಒಂದೇ ತರಹ ಇರುವುದು, ಮನಸ್ಸಿಗೆ, ಬುದ್ಧಿಗೆ, ದೇಹಕ್ಕೆ ವಯಸ್ಸೇ ಆಗದಿರುವುದು ಕೇವಲ ಭಾತರದ ಚಲನಚಿತ್ರ ಹೀರೋಗಳಲ್ಲಿ ಮಾತ್ರ ಸಾಧ್ಯ. ವಯಸ್ಸು ಎಪ್ಪತ್ತಾದರೂ ಮುವತ್ತೈದರ ಪಾತ್ರಗಳನ್ನೇ ಅಂತಹವರು ನಿರ್ವಹಿಸುವುದು. ಚಿಕ್ಕವಯಸ್ಸಿನ ನಟರಾದರೆ ಮುವತ್ತೈದು ಆಗುವವರೆಗೂ ಕಾಯುತ್ತಾರೆ, ನಟಿಸಲು. ಅಲ್ಲಿಯವರೆಗೂ ಪರದೆಯ ಮೇಲೆ ಇರುವ-ಬರುವ ಎಲ್ಲಾ ಫ್ಯಾಷನ್ ಷೋರೂಮ್ಗಳ ಅಂಗವಸ್ತ್ರಗಳನ್ನೂ ಹೊದ್ದಿರುವ ಮಾನೆಕ್ವಿನ್ಗಳ (ಕನ್ನಡದಲ್ಲಿ ಇದನ್ನು ಲಕ್ಷಣವಾಗಿ ಬೆದರುಬೊಂಬೆ ಎನ್ನುತ್ತೇವೆ) ಪಾತ್ರವಹಿಸುತ್ತಾರೆ. ಮುವತ್ತೈದು ಆಗುವವರೆಗೂ ಅಂತಹವರು ಯಾವುದೇ ಪಾತ್ರವಹಿಸಿದರೂ ನಿರ್ವಹಿಸುವ ಪಾತ್ರ ಮಾತ್ರ ಒಂದೆ: ಬೆದರುಬೊಂಬೆಗಳು ಓಡಿಯಾಡಿದರೆ ಹೇಗಿರುತ್ತಾರೆಂಬುದು! ಮನುಷ್ಯ ಒಂದೇ ತರಹ ಇರುತ್ತಾನೆಂದುಕೊಳ್ಳುವುದೆಂದರೆ ಇದೇ.  
ನಮಗೆಲ್ಲ ಆಗಾಗ ಕಲಾಭವನದ ಮಾಮಾನ ಕ್ಯಾಂಟೀನಿನಲ್ಲಿ ಐವತ್ತು ಪೈಸೆಯ ಮಣ್ಣಿನ ಕಪ್ಪಿನ ಚಾಯ್ ಹತ್ತಾರು ಸಲ ಕುಡಿಯಬೇಕೆಂದು ಆಗೆಲ್ಲ ಅನ್ನಿಸುತ್ತಿದ್ದಂತೆ ನಿರ್ಜರನಂತಹವರಿಗೆ ಸುಮ್ಮನೆ ಆತ್ಮಹತ್ಯೆಯ ಯೋಚನೆ ಡಿಪ್ರೆಷನ್ನಿನಿಂದ ಬಂದುದರಲ್ಲಿ ನನಗೇನೂ ಅತಿಶಯ ಕಾಣುತ್ತಿಲ್ಲ. 
ನಿರ್ಜರ ಕಾರ್ಗತ್ತಲಲ್ಲಿ ನಿರ್ಜರ್ನೆಡೆಗೆ ಮೊಹ್ಮದ್ ನುಗ್ಗಿಹೋದ. ಎಲ್ಲರೂ ಓಡಿ ಅವರಿಬ್ಬರನ್ನೂ ಸುತ್ತುವರೆದರು, ಏನೇ ಆದರೂ ನಾಲ್ಕು ಕೈಗಳ ಮಧ್ಯೆ ಆಗಬೇಕು, ಹೊರಕ್ಕೆ ಅದು ಗೊತ್ತಾಗದಿರಲಿ ಎಂಬಂತೆ. ಒಂದು ಮತ್ತು ಎರಡು ನಿಮಿಷಗಳ ನಡುವೆ ಅಯ್ಯೋ, ಅಮ್ಮಾ!' ಎಂದು ಯಾರೋ ಕಿರಿಚಿಕೊಂಡದ್ದು ಕೇಳಿಬಂತು. ಆ ಕೂಗಿಗೆ ಸ್ವಲ್ಪ ಮಲಯಾಳಿ ಟಚ್ ಇತ್ತು. ಗುಂಪಿನೊಳಗಿಂದ ಮೊಹ್ಮದ್ ಪ್ರೇತವನ್ನು ಕಂಡಂತೆ ಓಡಿ ಬಂದು ಅತ್ತಿತ್ತ ನೋಡಿದ. ಡಿಸೈನ್ ವಿಭಾಗವನ್ನು ಬಳಸಿ, ಶಿಲ್ಪಕಲಾ ವಿಭಾಗದ ಸಮೀಪ ಓಡಿದ. ಒಂದು ವಿಡಿಯೋ ಚಿತ್ರಣವನ್ನು ಫಾಸ್ಟ್ ಫಾರ್ವಡರ್್ ಮಾಡಿದಷ್ಟು ವೇಗವಾಗಿ ಓಡಿದ್ದ. ಎಲ್ಲರಲ್ಲದಿದ್ದರೂ ಬಹುಪಾಲು ಹುಡುಗರು ಆತನ ಹಿಂದೆ ಓಡಿದ್ದರಿಂದ ನಾನು ಅವರೊಡನೆ ಓಡಿದೆ. 
ಶಿಲ್ಪಕಲಾ ವಿಭಾದದೆದುರು ಎಂಟಡಿ ಹತ್ತಡಿ ಅಗಲದ, ಆರಡಿ ಆಳದ ತೊಟ್ಟಿಯ ತುಂಬ ಯಾವಾಗಲೂ ನೀರು ತುಂಬಿರುತ್ತಿದ್ದರು. ಮಣ್ಣಿನ ಕೆಲಸ ಮಾಡಿದ ನಂತರ ಕೈಗಳನ್ನು ಶುದ್ಧಿಗೊಳುಸಿಕೊಳ್ಳುವ ಮೊದಲು ಒರಟು ಸಿಮೆಂಟು, ಜೇಡಿಮಣ್ಣು ಮುಂತಾದುವನ್ನು ತೊಳೆಯಲು ಆ ತೊಟ್ಟಿ. ಪ್ಲಾಸ್ಟರ್ನಲ್ಲಿ ಮೋಲ್ಡ್ ತೆಗೆದಾಗ ಅಥವ ಸಿಮೆಂಟ್ ಶಿಲ್ಪವನ್ನು ರಚಿಸುವಾಗ ಅವುಗಳನ್ನು ನೀರಿನಲ್ಲಿ ನೆನೆಹಾಕಲು ಈ ತೊಟ್ಟಿ ಅವಶ್ಯವಿತ್ತು. ಒಮ್ಮೊಮ್ಮೆ ಜೀವಂತ-ಆಕಾರದ ಶಿಲ್ಪಗಳನ್ನು ತೊಟ್ಟಿಯ ಒಳಗೆ ನೋಡಿ ನಾವು, ಈ ಶಿಲ್ಪಕಲಾ ವಿಭಾಗದ ವಿದ್ಯಾಥರ್ಿಗಳು ದಿನಕ್ಕೊಂದು ಹೆಣಾನ ನೀರಲ್ಲಿ ಹಾಕ್ತಾರಲ್ಲ ಎನ್ನುತ್ತಿದ್ದೆವು. ರಾತ್ರಿಯ ಗಾಢಾಂದಕಾರದಲ್ಲಿ ರ್ಯಾಗಿಂಗ್ ಮಾಡುವಾಗ, ಹೊಸಹುಡುಗರನ್ನು ಆ ತೊಟ್ಟಿಯ ಬಳಿ ಒಬ್ಬೊಬ್ಬರನ್ನೇ ಕಳಿಸುತ್ತಿದ್ದರು ಸೀನಿಯಸರ್್ಗಳು. ಆ ತೊಟ್ಟಿಯಲ್ಲಿ ಒಟ್ಟು ಎಷ್ಟು ಹೆಣಗಳಿದ್ದಾವೆಂದು ಎಣಿಸಿಕೊಂಡು ಬರುವಂತೆ ತಿಳಿಸುತ್ತಿದ್ದರು. ಅವರು ಸರಿಯಾಗಿ ಎಣಿಸಿದರೂ ಸಹ 'ಅಲ್ಲಿದ್ದದರ ಸಂಖ್ಯೆಯೇನೋ ಸರಿ, ಆದರೆ ಅವುಗಳು ಹೆಣಗಳಲ್ಲ'ವೆಂದು ಮತ್ತೆ ಗೋಳಾಡಿಸಲಾಗುತ್ತಿತ್ತು ಅವರುಗಳನ್ನ. 
ಈಗ ನೋಡಿದರೆ ಮೊಹ್ಮದ್ ಕೊರೆವ ನೀರಿನಲ್ಲಿ ಆಲ್ಮೋಸ್ಟ್ ಅರೆನಗ್ನ ಸ್ಥಿತಿಯಲ್ಲಿ ಮುಳುಗಿಬಿಟ್ಟಿದ್ದಾನೆ. ಆಗಾಗ ತಲೆಯನ್ನು ಮೇಲೆ ತಂದರೂ ಸಹ, ಒಳಗಿರುವುದೇ ನೆಮ್ಮದಿ ಎಂಬಂತೆ ಮತ್ತೆ ಮತ್ತೆ ಒಳಕ್ಕೆ ಮುಳುಗುತ್ತಿದ್ದಾನೆ, ಮುನ್ನುಗ್ಗುತ್ತಿದ್ದಾನೆ. ಮೀನು ತಿನ್ನುವುದೆಂದರೆ ಬಹಳ ಇಷ್ಟಪಡುವ ಮೊಹ್ಮದ್ ಸ್ವತ: ಮೀನಿನಂತೆ ನೀರಿನಿಂದ ಹೊರಬರಲು ನಿರಾಕರಿಸುತ್ತಿದ್ದ. ಹೊರಗೆ ಬಂದಾಗಲೆಲ್ಲ 'ಕಿರ್ರೋ ಮರ್ರೋ' ಎಂದು ನರಳುತ್ತಿದ್ದಾನೆ. ಒಳಗೂ ಹಾಗೆಯೇ ನರಳಿದನೇ ಎಂದು ಒಳಗಿದ್ದ ಸಣ್ಣಪುಟ್ಟ ಮೀನುಗಳೇ ಸಾಕ್ಷಿ ಹೇಳಬೇಕಾಗಿತ್ತಷ್ಟೇ. 
ಕೂಡಲೇ ಮೊಹ್ಮದನನ್ನು ಆಸ್ಪತ್ರೆಗೆ ಕಳಿಸುವ ಏಪರ್ಾಡು ಮಾಡಿದೆವು. ಆಗಿದ್ದುದಿಷ್ಟು:  ಕಾನ್ಸೆಂಟ್ರೇಟೆಡ್ ನೈಟ್ರಿಕ್ ಆಸಿಡ್ ಬಾಟಲಿಯನ್ನು ನಿರ್ಜರನ ಕೈಯಿಂದ ಕಿತ್ತುಕೊಳ್ಳಲು ಮೊಹ್ಮದ್ ಪ್ರಯತ್ನಿಸಿದಾಗ, ಎಳೆದಾಟದಲ್ಲಿ ನೈಟ್ರಿಕ್ ಆಸಿಡ್ ಮೊಹ್ಮದನ ಬೆನ್ನಿನ ಮೇಲೆ ಚೆಲ್ಲಿ, ಬೆನ್ನ ಮೂಳೆಯ ರೂಟಿನಲ್ಲಿ ಇಳಿಜಾರಿನಲ್ಲಿ ಸಾಗಲು ಪ್ರಯತ್ನಿಸಿತ್ತು. ತನ್ನ ಬದುಕಿನ ಆಧಾರವಾದ ಬೆನ್ನಮೂಳೆಯ ಬ್ಯಾಕ್ಬೋನೇ ಸಂಕಷ್ಟದಲ್ಲಿದ್ದಾಗ ನೀರಿನ ಉಪಶಮನಕ್ಕಾಗಿ ಓಡಿದ್ದ ಮೊಹ್ಮದ್, ಈಗ ಕುಡಿ ಪರವಾಗಿಲ್ಲ ('ಎಕುನಿ ತುಮಿ ಆಸಿಡ್ ಕಾವ್') ಎಂದು ನಿರ್ಜರನಿಗೆ ಬೆಂಗಾಲಿಯ ಭಾಷೆಯಲ್ಲಿ ಅಂತಹ ಪರಿಸ್ಥಿತಿಯಲ್ಲಿಯೂ ಹೇಳಿದ್ದು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸಿತ್ತು. 
(6)
ಹುಡುಗರು ಕೇರಂ ಆಡುವುದಕ್ಕೆ, ಟಿವಿ ನೋಡುವುದಕ್ಕೆ ಮತ್ತು ಜೂನಿಯರ್ ವಿದ್ಯಾಥರ್ಿಗಳನ್ನು ರ್ಯಾಗ್ ಮಾಡಲು ಬಳಸುತ್ತಿದ್ದ ಕಾಮನ್ ರೂಮಿಗೆ ಮೊಹ್ಮದನನ್ನು ಎತ್ತಿಕೊಂಡು ಬಂದೆವು. ವಿಶ್ವವಿದ್ಯಾಲಯದ ಆಂಬ್ಯುಲೆನ್ಸ್ಗೆ ಫೋನ್ ಮಾಡಿದೆವು. ಜೋರಾಗಿ ಫ್ಯಾನ್ ಹಾಕಿದೆವು. ಮೊಹ್ಮದ್ನನ್ನು ಸಹಜ ಸ್ಥಿತಿಯಲ್ಲಿರುವಾಗಲೂ ಯಾರೂ ಆತ ಶಟರ್್ ತೊಟ್ಟಿರುವುದನ್ನು ನೋಡಿರಲಿಲ್ಲ. ಆದ್ದರಿಂದ ಈ ಅಘಾತದಲ್ಲಿ ಗಾಳಿಯಾಡಿಸುವ ಸಲುವಾಗಿ ಆತನ ಶಟರ್್ಅನ್ನು ಹರಿದು ತೆಗೆವ ಶ್ರಮ ತಪ್ಪಿತು. ಫ್ಯಾನ್ ಹಾಕಿದ್ದರೂ ಆತನನ್ನು ಬೋರಲು ಮಲಗಿಸಿ ಬೀಸಣಿಕೆಯಲ್ಲಿ ಗಾಳಿ ಹಾಕತೊಡಗಿದೆವು. ಬೀಸಣಿಗೆಯ ಗಾಳಿ ಆತನಿಗೆ, ಫ್ಯಾನ್ ಗಾಳಿ ಆತನನ್ನು ಸುತ್ತುವರೆದಿದ್ದ ನಮಗೆ. ಹದಿನೈದು  ನಿಮಿಷವಾದರೂ ಆಂಬ್ಯುಲೆನ್ಸ್ ಬರಲಿಲ್ಲ. ಆ ಹದಿನೈದು ನಿಮಿಷದಲ್ಲಿ ಗೆಳೆಯರು ಫೋನಿನಲ್ಲಿ ಅಪಘಾತವನ್ನು ವಿವರಿಸುವುದಕ್ಕೇ ಏಳು ನಿಮಿಷವಾಗಿತ್ತು.
 ವಿಶ್ವಭಾರತಿ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಇರುವ ಒಂದೇ ಆಂಬ್ಯುಲೆನ್ಸ್ನ ಡ್ರೈವರ್ ಮೊದಲು ಸೈಕಲ್ ರಿಕ್ಷಾ ಡ್ರೈವರ್ ಆಗಿದ್ದನೆಂದು ಕಾಣುತ್ತದೆ. ಅಂದರೆ ಅದು ತಡವಾಗಲು ಎರಡು ಕಾರಣ ದೊರಕಿದಂತಾಯ್ತು. ಮೊಹ್ಮದನನ್ನು ಎತ್ತಿಕೊಂಡು ಹೋಗಲು ನಿರ್ಧರಿಸಿದೆವು. ಆತ ನೋವಿನಲ್ಲೂ ನಿರಾಕರಿಸಿದ. ಬೆನ್ನಿನಿಂದ ಇನ್ನೂ ಹೊಗೆಯೇಳುತ್ತಿತ್ತು, ಫ್ಯುಜಿ ಅಗ್ನಿಪರ್ವತ ಸಾಲುಗಳಲ್ಲಿ ಅಥವ ಇತ್ತೀಚಿನ ಯುರೋಪಿನ ಏರೋಪ್ಲೇನ್ಗಳನ್ನೆಲ್ಲ ದಿನಗಟ್ಟಲೆ ನಿಲುಗಡೆ ಹಾಕಿದ 'ಏಜಾಫ್ಜಲಜಾಕುಳ್ಸ್' ಜ್ವಾಲೆಯಂತೆ. 
ಮೊಹ್ಮದ್ನನ್ನು ನೋವಿನಲ್ಲೂ ನಡೆಸಿಕೊಂಡು ಹೋಗತೊಡಗಿದೆವು. ನಡೆದಾಟ ನಮ್ಮದು, ನೋವು ಅವನದ್ದು. ಎಷ್ಟೇ ಆತ್ಮೀಯರಾಗಿದ್ದರೂ ಇನ್ನೊಬ್ಬರ ನೋವನ್ನು ಲವಲೇಶವೂ ಹಂಚಿಕೊಳ್ಳಲಾಗದಿರುವುದು ಮಾನವೀಯತೆಯ ಆಂತರ್ಯದಲ್ಲೇ ಅಡಗಿದ್ದೆ. ಸುಮಾರು ಬೆಳಗಿನ ಜಾವ ಎರಡು ಗಂಟೆ. ಮೊಹ್ಮದನ ಸುತ್ತಲೂ ಹುಡುಗರ ಹಿಂಡೇ ಇದ್ದರೂ ಎಲ್ಲರೂ ಆತನಿಂದ ನಾಲ್ಕಡಿ ದೂರದಿಂದ ಹಿಂದೆ, ಮುಂದೆ, ಅಕ್ಕಪಕ್ಕಗಳಲ್ಲಿ ನಡೆಯುತ್ತಿದ್ದರು. ಆತನ ಬೆನ್ನಿನ ಮೇಲೆ ನೈಟ್ರಿಕ್ ಆಸಿಡ್ಡಿನ ಹೊಗೆ ಇನ್ನೂ ಹೊರಹೊಮ್ಮುತ್ತಿದ್ದರಿಂದ ಆತ ಸ್ವತ: ಒಂದು ನಡೆದಾಡುವ ಆರಡಿ ಅಗ್ನಿಪರ್ವತದಂತೆ ಕಾಣುತ್ತಿದ್ದ. ಎರಡು ಫಲರ್ಾಂಗ್ ದೂರ ನಡೆದ ಮೇಲೆ ಕಾಣಿಸಿತು ಆಂಬುಲೆನ್ಸ್, ಆತನ ದೇಹದ ಸುತ್ತಲೂ ಹರಡಿಕೊಂಡಿದ್ದ ಹೊಗೆ ಪರ್ವತದ ಮೂಲಕ! ಆದರದು ಮೊಹ್ಮದನಿಗಾಗಿ ಬರುತ್ತಿರಲಿಲ, ಬದಲಿಗೆ ರಸ್ತೆ ಬದಿಯಲ್ಲಿ ಕಲಾಭವನದ ಕಾಂಪೌಂಡಿನ ಹೊರಗೆ ಆಗಲೇ ನಿಂತುಬಿಟ್ಟಿತ್ತು. 
ಏನೇ ಹೇಳು ಗುರು, ಮಾಕ್ಸರ್್ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ ಎಂದೊಬ್ಬ, ನನ್ನ ಎಡಕ್ಕಿದ್ದ ಲೆಫ್ಟಿಸ್ಟ್ ಕಲಾವಿದ್ಯಾಥರ್ಿ ಭಾವುಕವಾಗಿ, ಭಾವುಕನಾಗಿ ನುಡಿದ, ಆಂಬುಲೆನ್ಸನ್ನು ನೋಡುತ್ತ. ಡ್ರೈವರ್ ಸ್ಟೀರಿಂಗಿಗೆ ಒರಗಿ ಚಿಂತಾಕ್ರಾಂತನಾಗಿದ್ದರಿಂದ, ನಾವು ಅವಸರದಲ್ಲಿದ್ದುದ್ದರಿಂದ, ಅದನ್ನು ಹಾಗೂ ಡ್ರೈವರನ್ನು ದಾಟಿ ಹೋದೆವು. 
ಶಾಂತಿನಿಕೇತನದಲ್ಲಿ ಒಂದು ನಿಯಮವಿದೆ. ವಿಶ್ವವಿದ್ಯಾಲಯದ ಆಂಬುಲೆನ್ಸನ್ನು ಫೋನ್ ಮೂಲಕ ಕರೆದ ಮೇಲೆ ಖಾಯಿಲೆ ಬಿದ್ದಾತ ಎಷ್ಟೇ ತಡವಾದರೂ ಅದರಲ್ಲೇ ಪಯಣಿಸಬೇಕು, ಕೇವಲ ಒಂದು ಕಿಲೋಮೀಟರ್ ದೂರವಿರುವ ಆಸ್ಪತ್ರೆಗೆ. ಎಮಜರ್ೆನ್ಸಿ ಎಂಬ ಪದಕ್ಕೆ ಸ್ಲೋಮೋಷನ್ ಎಂಬ ತಮಾಷೆ ಅರ್ಥವಿದೆ ಅಲ್ಲಿ. ಮೊಹ್ಮದ್ನನ್ನು ಆಸ್ಪತ್ರೆಯಲ್ಲಿ ತೋರಿಸಿದಾಗ, ಅಲ್ಲಿನ ನಸರ್ುಗಳು ಮತ್ತು ಅವರಿಗಿಂತಲೂ ಡಾಕ್ಟರ್ ಗಾಭರಿಗೊಂಡರು. 
ಇಲ್ಲ. ಬೆಂಕಿ ಈ ಹೊಗೆಯ ಮೂಲಕ ಹೆಚ್ಚುವುದಿಲ್ಲ, ಈಗ ಹೊಗೆಯೆಲ್ಲ ಕಡಿಮೆಯಾಗುತ್ತಿದೆ ಎಂದು ಡಾಕ್ಟರುಗಳಿಗೆ ಭರವಸೆ ಕೊಟ್ಟನಂತರವೇ ಅವರುಗಳು ಮೊಹ್ಮದನಿದ್ದ ಕೋಣೆಗೆ ವಾಪಸಾದುದು, ಅಲ್ಲಿಂದ ಮೊದಲಿಗೆ ಓಡಿಹೋದ ನಂತರ.
ಅದನ್ನು ಕಂಡು ರೂಢಿಯಿದ್ದ ನಾವುಗಳು ಗಾಭರಿಗೊಳ್ಳಲಿಲ್ಲ. ಮೊಹ್ಮದನನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಹೋದದ್ದು ಆತನಿಗೆ ಚಿಕಿತ್ಸೆ ಕೊಡಿಸಲಲ್ಲ. ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ತಲೆನೋವು, ನೆಗಡಿಯನ್ನು ಹೊರತುಪಡಿಸಿ, ಸಣ್ಣ ಅಪೆಂಡಿಸೈಟಸ್ ಅಂತಹವೇನಾದಲ್ಲಿಯೂ ಸೀದ ನೂರು ಕಿಲೋಮೀಟರ್ ದೂರವಿರುವ ಬಡ್ವರ್ಾನ್ ಜಿಲ್ಲೆಯ ಆಸ್ಪತ್ರೆಗೇ ಕರೆದುಕೊಂಡು ಹೋಗಬೇಕಾಗುತ್ತದೆ. ಅಂತಹ ನಿಯಮವಿದೆಯಂತೆ ವಿ.ವಿಯಲ್ಲಿ. ಯಾವ ಕಾನೂನಿನ ತಲೆಯ ನೋವನ್ನೂ ವೈದ್ಯರು ಇಲ್ಲಿ ತೆಗೆದುಕೊಳ್ಳದೇ ಇರಲಿ ಎಂಬುದು ಅಲ್ಲಿನ ಅಲಿಖಿತ ನಿಯಮ. ನಾವು ಮೊಹ್ಮದನನ್ನು ಅಲ್ಲಿ ಕರೆದೊಯ್ದದ್ದು ಬಡ್ವರ್ಾನ್ ಜಿಲ್ಲೆಗೆ ಹೋಗಲು ಅವರು ಆಂಬುಲೆನ್ಸ್ ಸಮೇತ ಶಾಂತಿನಿಕೇತನದ ಡಾಕ್ಟರನೊಬ್ಬನನ್ನು ಕಳಿಸುತ್ತಾರೋ ಹೇಗೆ ಎಂದು ವಿಚಾರಿಸಲು. ಅದೆಷ್ಟು ಫಾಸ್ಟ್ ಫಾರ್ವಡರ್ಿನಲ್ಲಿ ಮೊಹ್ಮದ್ ನೀರಿಗೆ ಧುಮುಕಿದ್ದನೆಂದರೆ, ಆಸಿಡ್ನ ಸುಡುವಿಕೆ ಚರ್ಮವನ್ನು ಮೀರಿ ಮುಂದುವರೆದಿರಲಿಲ್ಲ. 
ಪಾಪ, ಆ ನೈಟ್ರಿಕ್ ಆಸಿಡ್ ಕಲಾಭವನದ್ದಾದ್ದರಿಂದ ಶಾಖಾಹಾರಿಯಾಗಿರಬೇಕು, ಮೂಳೆಮಾಂಸಗಳ ತ್ಯಾಗ ಮಾಡಿರಬೇಕು ಎಂದು ರೋಗಿಯನ್ನು ತಮಾಷೆ ಮಾಡಿದೆವು. ಆತ ನೋವಿನಲ್ಲೂ ನಕ್ಕ ರೀತಿಯು ಡ್ರೈವ್ ಮಾಡುತ್ತಿರುವ ಗಾಡಿಯನ್ನು  ಎಡಕ್ಕೆ ಹಾಗೂ ಬಲಕ್ಕೆ ಒಮ್ಮೆಲೆ ತಿರುಗಿಸುವಂತೆ ಅಥವ ಆಫ್ಸ್ಪಿನ್ ಮತ್ತು ಲೆಗ್ಸ್ಪಿನ್ ಒಮ್ಮೆಲೆ ಒಂದೇ ಎಸೆತದಲ್ಲಿ ಮಾಡುವ ಬೌಲರ್ನ ಆಡ್ನಂತೆ. ಶಾಂತಿನಿಕೇತನದ ಆಸ್ಪತ್ರೆಯಲ್ಲೇ ವಾಸಿಗೊಂಡ ಅತ್ಯಂತ ತೀವ್ರ ವ್ಯಾದಿ ಎಂದರೆ ಕಂಕುಳಲ್ಲಿ ಈರುಳ್ಳಿ ಇರಿಸಿಕೊಂಡು ಬರಿಸಿಕೊಂಡ ಸಾಮಾನ್ಯ ಜ್ವರದ ಇಲಾಜೇ ಇರಬೇಕು. ಅಂದ ಹಾಗೆ ಅಂತಹ ಕೃತಕವಾಗಿ ಬರಿಸಿಕೊಳ್ಳುವ ಜ್ವರವನ್ನು ಸಿಮ್ಯುಲೇಟೆಡ್ ಜ್ವರವೆಂತಲೂ, ಅಂತಹ ಸಿಮ್ಯುಲೇಟೆಡ್ ಖಾಯಿಲೆಗಳಿಗೆ ಔಷದೋಪಚಾರ ಸಾಧ್ಯವಿಲ್ಲವೆಂದು ಜೀನ್ ಬೌದ್ರಿಲಾಡರ್್ ತನ್ನ ಸಿಮ್ಯುಲೇಷನ್ ಪುಸ್ತಕದಲ್ಲಿ ವಾದಿಸಿದ್ದಾನೆ. ಬೌದ್ರಿಲಾಡರ್್ ಅಸಾಧ್ಯವೆಂದದ್ದು ಶಾಂತಿನಿಕೇತನದಲ್ಲಿ ಸಾಧ್ಯವಾಗುತ್ತದೆ.
ಮೊಹ್ಮದನನ್ನು ವಾಪಸ್ ಕರೆದುಕೊಂಡು ಕಲಾಭವನದ ಹುಡುಗರ ಹಾಸ್ಟೆಲ್ಲಿಗೆ ಬರುವಾಗ ಸಮಯ ಬೆಳಗಿನ ನಾಲ್ಕು ಗಂಟೆ. ಇನ್ನು ಒಂದು ಗಂಟೆಯಾದರೆ ಹುಡುಗಿಯರು ಹಾಸ್ಟೆಲಿನಿಂದ ದಿನನಿತ್ಯದಂತೆ ಬಿಡುಗಡೆಯಾಗುವ ಹೊತ್ತಾಗುತ್ತಿತ್ತು. ಆಂಬುಲೆನ್ಸ್ ನಿಂತಲ್ಲೇ ನಿಂತಿತ್ತು. ಡ್ರೈವರ್ ಕುಂತಲ್ಲೇ -- ಸ್ಟೀರಿಂಗ್ಗೆ ಒರಗಿಕೊಂಡೇ - ಕುಳಿತಿದ್ದ. ನಮಗೆ ಆಗಲೆ ಪೀಕಲಾಟ ಶುರುವಾಗಿತ್ತು. ಮೊಹ್ಮದನ ಗಾಯವನ್ನು ಅಲ್ಲಿನ ಆಸ್ಪತ್ರೆ ವಾಸಿಮಾಡುವ ಮುನ್ನವೇ ಆಂಬುಲೆನ್ಸನ್ನು ಕರೆಸಿಕೊಂಡೂ ಅದನ್ನ ಬಳಸದಿರುವುದರ ಕುರಿತು ಆರೋಪ ವೈಸ್ ಛಾನ್ಸಲ್ಲರನ್ನು ಮುಟ್ಟಿರುತ್ತದೆ ಎಂಬ ಗ್ಯಾರಂಟಿ ಇತ್ತು ನಮಗೆ.
ಏನಾದರಾಗಲಿ ಒಂದು ಮಾತು ಕೇಳಿಬಿಡುವ ಎಂದು ಡ್ರೈವರನನ್ನು ಮಾತನಾಡಿಸಿದೆವು. 
ಕೀ ಹೋಲೊ? (ಏನಾಯ್ತು)
ಏನಿಲ್ಲ. ಕಲಾಭವನದ ರೋಗಿಯೊಬ್ಬನನ್ನು ಅಜರ್ೆಂಟಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಗಾಡಿ ಕೆಟ್ಟು ನಿಂತಿದೆ. ಇನ್ನು ಬೆಳಿಗ್ಗೆ ಎಂಟು ಗಂಟೆಗೇ ವಕರ್್ಶಾಪ್ ತೆಗೆವುದು. ಆದರೆ ನನ್ನ ರಾತ್ರಿ ಪಾಳಿ ಮುಗಿವುದು ಏಳು ಗಂಟೆಗೆ. ಒಂದು ಗಂಟೆ ಹೆಚ್ಚು ಇರಬೇಕಾಗುತ್ತೆ ಇಂದು. ಅದಕ್ಕೆ ಓ.ಟಿ ಕ್ಲೈಮ್ ಮಾಡುವೆ. ಎಂದನಾತ, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಮತ್ಯಾವುದರದ್ದೋ ಚಿಂತೆ ಎಂಬಂತಾಗಿತ್ತು ಆತನ ಸ್ಥಿತಿ. 
ಇಂದಿಗೂ ಮೊಹ್ಮದ್ ಎದೆ ಸೆಟೆದು ಓಡಾಡುತ್ತಾನೆ. ಏಕೆಂದರೆ ಆತನ ಬೆನ್ನುಮೂಳೆ ಗಟ್ಟಿ. ಜೊತೆಗೆ ನಿರ್ಜರನ ಕೊಡುಗೆಯಾಗಿ ಮತ್ತೊಂದು ಸಿಮ್ಯುಲೇಟೆಡ್ ಬೆನ್ನಮೂಳೆ ಬೇರೆ ಆತನ ಜೀವನಪೂತರ್ಿ ಅಕ್ಷರಶ: ಆತನ ಬಿನ್ನುಬಿದ್ದಿತ್ತು.
ಮರೆತಿದ್ದೆ. ನಿರ್ಜರ್-ಮೊಹ್ಮದ್ ಪ್ರಕರಣ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮುಂಚೆ ಒಬ್ಬ ವಿದ್ಯಾಥರ್ಿಯನ್ನು ನಾವೆಲ್ಲ ಸುತ್ತುವರೆದಿದ್ದೆವು. ಆ ವಿದ್ಯಾಥರ್ಿಯ ಗಂಟಲಲ್ಲಿ ಮೂಳೆ ಸೇರಿಕೊಂಡಿತ್ತು. ಮೀನು ಮೂಳೆಯದು. ಪಾಪ, ಬೆಂಗಾಲಿಯಲ್ಲದ ಆತನಿಗೆ ಅಲ್ಲಿನ ಮೂಳೆಯೇ ತುಂಬಿಕೊಂಡಿದ್ದ ಮೀನೊಂದನ್ನು ತಿಂದುದರಿಂದ ಆತ ಗಾಭರಿಗೊಂಡಿದ್ದ. ಆತನ ಬಾಯನ್ನು 'ಆ'ಗೊಳಿಸಿ ನೋಡಿದರೆ, ಸ್ಪೀಷಿಸ್ ಹಾಲಿವುಡ್ ಸಿನೆಮಸರಣಿಯಲ್ಲಿ ಪಾತ್ರಧಾರಿಗಳ ನವರಂದ್ರಗಳಿಂದ ಹೊರಬರುವ ಏಲಿಯನ್ ಪ್ರಾಣಿಗಳಂತೆ ಈ ಮುಳ್ಳು ಹೊರಬರಬಹುದೆಂದು ಮೀನಿನ ಅಭ್ಯಾಸವಿಲ್ಲದ ಕೆಲವರು ಊಹಿಸುತ್ತಿದ್ದರು. ಅನ್ನದ ಉಂಡೆ ಮಾಡಿ ಆತನಿಗೆ ನುಂಗಿಸುತ್ತಿದ್ದರು. ನೀರು ಕುಡಿಸುತ್ತಿದ್ದರು. ಹೊರಗೆ ನಿರ್ಜರ್-ಮೊಹ್ಮದ್ ಪ್ರಸಂಗ ಪ್ರಾರಂಭವಾದ ತಕ್ಷಣ ಎಲ್ಲರೂ ಅಲ್ಲಿಗೆ ಓಡಿದ್ದೆವು. 
ಮುಂದೆ ಕೆಲವು ಪುದ-ವಾಕ್ಯ-ಪ್ಯಾರ-ಪುಟಗಳ ನಂತರ ಏನೇ ಹೇಳು ಗುರು, ಮಾಕ್ಸರ್್ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ ಎಂದು ಆಂಬುಲೆನ್ಸ್ನ ಕಾರ್ಯಕ್ಷಮತೆಯನ್ನು ತಪ್ಪಾರ್ಥ ಮಾಡಿಕೊಂಡು ಉದ್ಘಾರ ತೆಗೆದಿದ್ದಾತನೇ ಮೀನಿನ ಮುಳ್ಳನ್ನು ಗಂಟಲಲ್ಲಿ ಇಳೆಬಿಟ್ಟುಕೊಂಡಿದ್ದಾತ. ಆಸಿಡ್ ಪ್ರಸಂಗದ ಬಿಸಿಯ ಹಬೆಗೆ ಆತನನ್ನು ಆತನ ನೋವನ್ನು ಆತನೇ ಮರೆತುಬಿಟ್ಟಿದ್ದ. ಆಸ್ಪತ್ರೆಗೆ ಹೋಗಿದ್ದಾಗಲೂ ಆತ ತನ್ನ ಗಂಟಲಿಗೇ ಮಗ್ಗಲ ಮುಳ್ಳಾಗಿದ್ದ ಮೀನಿನ ಮುಳ್ಳನ್ನು ನೆನಪಿಸಿಕೊಂಡಿರಲೇ ಇಲ್ಲ.
ಮೋಸ್ಟ್ಲಿ ಗಾಭರಿಯಲ್ಲಿ ಮುಳ್ಳನ್ನು ನುಂಗಿಬಿಟ್ಟಿದ್ದೇನೆ ಅಂತ ಕಾಣುತ್ತೆ. ಅದು ಪೂತರ್ಿ ಹೊಟ್ಟೆಯಲ್ಲಿ ಕರಗಿದ ಮಾಂತ್ರಿಕತೆ ನೋಡಿಯೇ ನಾನು ಹೇಳಿದ್ದು, 'ಏನೇ ಹೇಳು ಗುರು, ಮಾಕ್ಸರ್್ವಾದಕ್ಕೂ ಭೌತಿಕ ಸಾಧ್ಯತೆ ಈಗಲೂ, ಈ ಬಾಂಗ್ ನಾಡಿನಲ್ಲೂ ಇದೆ' ಎಂದು ಎಂದನಾ ಭೂಪ. 
ಓಹೋ, ನೀನು ಆಂಬುಲೆನ್ಸ್ ಬಂದದ್ದು ನೋಡಿ, ಮೆಚ್ಚಿ ಆಡಿದ ಮಾತಲ್ಲವೆ ಅದು? ಎಂದು ಕೇಳಿದೆ.
ಉಹೂಂ. ಮೊಹ್ಮದನ ಜೊತೆ ಆಸ್ಪತ್ರೆಗೆ ಹೋದಂತಹ ಸ್ವಗರ್ಾನುಭವದ ಮೆರವಣಿಗೆ ನನ್ನ ಜನ್ಮದಲ್ಲೇ ಆದುದಿಲ್ಲ. ಜೈ ಆಂಬುಲೆನ್ಸ್, ಜೈ ಆಸಿಡ್ ಅಟಾಕ್, ಜೈ ಕಲಾಭವನ್, ಜೈ ಮೀನಿನ ಮುಳ್ಳು ಎಂದು ಖುಷಿಯ ಉದ್ಘಾರ ತೆಗೆಯುತ್ತ ಹೊರಗೋಡಿದ್ದ ಅರೆನಗ್ನಾವಸ್ಥೆಯಲ್ಲಿದ್ದ ಪವನ್ಕುಮಾರ್ ಭಟ್ಟಾಚಾರ್ಯ (ಪಕುಭ). ಮುಂದೆ ಪಕುಭ ಅಥವ 'ಪ್ರಕ್ಷುಬ್ಧ' ನನ್ನ ಈ ಪ್ರವಾಸಕಥನದ ಮುಖ್ಯ ಪಾತ್ರವಾಗಿ ಒದಗಿ ಬರುತ್ತಾನೆಂದು ಯಶವಂತ ಚಿತ್ತಾಲರ ಆಣೆಗೂ ಆಗ ನಾನು ನೆನೆಸಿರಲಿಲ್ಲ. ಮೊದಲ ಬಾರಿ ಆತನ ಹೆಸರನ್ನು ಸಂಕ್ಷಿಪ್ತಗೊಳಿಸಿ ಪ್ರಕ್ಷುಬ್ಧ ಎಂದದ್ದಕ್ಕೆ, ಆತ ಅದೇನೆಂದು ಕೇಳಿದ್ದಕ್ಕೆ, ಆತ ನನಗಿಂತಲೂ ಒಂದು ವರ್ಷ ಹಿರಿಯನಾದುದಕ್ಕೆ, ಇವೆಲ್ಲಕ್ಕೂ ಒಟ್ಟಾರೆ ಸಮಜಾಯಿಶಿ ನೀಡಿದ್ದೆ: 
ಬೆಂಗಾಲಿಗಳಲ್ಲಿ ಹಿರಿಯರನ್ನು ದಾದ ಎಂದು ಕರೆಯುವುದು ರೂಡಿಯಲ್ಲವೆ. ಪ.ಕು.ಬ ಬದಲು 'ಪ್ರಕ್ಷುಬ್ ದಾ' ಎಂದು ನಿನ್ನನ್ನು ಕರೆಯುತ್ತೇನೆ ಎಂದದ್ದಕ್ಕೆ ಆತ ಥ್ರಿಲ್ಗೊಂಡಿದ್ದ. ಆದರೆ ಮನಸ್ಸಿನಲ್ಲಿ, ಕಲಾಭವನದವರೆಲ್ಲ ಹಿರಿಯರ ಹೆಸರಿನೊಂದಿಗೆ ದಾದಾ ದೀದೀ ಸೇರಿಸಿ ಕರೆಯಬೇಕಾದ ಔಪಚಾರಿಕತೆಗೆ ರೋಸಿ ನನ್ನ ಕನ್ನಡದ ಗೆಳೆಯ ದೊಡ್ಡಮನಿಗೆ ಹೀಗೆ ಹೇಳಿದ್ದೆ, ಈ ಊರಲ್ಲೇನು ಬಿಡಪ್ಪ, ಕತ್ತೆಯನ್ನೂ ಗ-ದಾ ಎನ್ನುತ್ತಾರೆ ಎಂದು.///
(೧)

ಸ್ಥಳ: ಶಾಂತಿನಿಕೇತನದ ಕಲಾಭವನದ ಹುಡುಗರ ಹಾಸ್ಟೆಲ್. ೧೯೯೦ ರ ಜೂನ್ ತಿಂಗಳ ಎರಡನೇ ವಾರ. ಮಧ್ಯರಾತ್ರಿ. 

ರಾತ್ರಿಗಷ್ಟೇ 'ಮಧ್ಯ'ವಾಗಿದ್ದದ್ದು. ನಿಶೆಯೇರಿದಂತಿದ್ದ ರಾತ್ರಿಗಳವು. ಕಲಾಭವನದ ಹುಡುಗರ ಹಾಸ್ಟೆಲ್ಲಿನಲ್ಲಿ ಎಲ್ಲರೂ ಎಚ್ಚರವಾಗಿದ್ದರು, ಇರುತ್ತಿದ್ದರು. ಆ ಮನುಷ್ಯರ ದ್ವೀಪದಲ್ಲಿ ಅಂತಹ ವೇಳೆಯಲ್ಲಿ ಬೇರೆಲ್ಲೂ ಅಲೆದಾಡುವ ಅವಕಾಶವಿಲ್ಲದುದ್ದರಿಂದ. ವಿದ್ಯಾರ್ಥಿಗಳು ಒಂದೆಡೆ ಸೇರಿ ಜಾಗರಣೆ ಮಾಡುವ ತಾಣವನ್ನೇ ಹಾಸ್ಟೆಲ್ ಎನ್ನುವುದಲ್ಲವೆ!


     ಅತ್ತ, ರಾತ್ರಿ ಒಂಬತ್ತರ ನಂತರ ಹುಡುಗಿಯರ ಹಾಸ್ಟೆಲ್ ಬಂದ್. ಅವರುಗಳ ಒಳಿತಿಗಾಗಿಯೇ, ಅವರ ಸೇಫ್ಟಿಗಾಗಿಯೇ ಈ ನಿರ್ಬಂಧ ಎಂದು ಪಿತೃಪ್ರಧಾನ ಅಧಿಕಾರಿಗಳ ಅಭಿಪ್ರಾಯ!

     ಹುಡುಗಿಯರು ಎಷ್ಟು ಸುರಕ್ಷಿತವಾಗಿರುತ್ತಿದ್ದರೆಂದರೆ, ಒಮ್ಮೊಮ್ಮೆ ಗಂಡು ಕಳ್ಳ ಕಿಟಕಿಯಿಂದಲೋ, ಚಜ್ಜಾದ ಮೇಲಿನಿಂದಲೋ ಇಳಿದುಬಂದು ಹುಡುಗಿಯರ ಹಾಸ್ಟೆಲಿನಲ್ಲಿ ಕದಿವಾಗ ಸಿಕ್ಕಿಬಿದ್ದು, ತಪ್ಪಿಸಿಕೊಂಡು ಓಡುವಾಗಲೂ, ಕಿರಿಚುತ್ತ ಕೂಗಾಡುವ ಹುಡುಗಿಯರು ಮಾತ್ರ ಸುರಕ್ಷಿತವಾಗಿ ಹಾಸ್ಟೆಲಿನ ಗೇಟುಗಳ ಒಳಗಿನಿಂದಲೇ ಹಾಗೆ ಕಿರುಚಬೇಕಾಗುತ್ತಿತ್ತು! ಏಕೆಂದರೆ ಅವರೇನಾದರೂ ಹೊರಕ್ಕೆ ಓಡಿಬಂದು ಕಳ್ಳನ ಹಿಂದೆ ಬಿದ್ದರೆ, ಆತ ಹಿಂದೆ ಬಿದ್ದ ಹುಡುಗಿಯರ ಸೌಂದರ್ಯಕ್ಕೆ ಮಾರುಹೋಗಿ ಜೀವನಪೂರ್ತಿ ಈ ನಾರಿಯರ ಹಿಂದೆ ಆತನೇ ಬಿದ್ದಾನು ಎಂಬುದು ಅಧಿಕಾರಿಗಳ ಅಂಬೋಣ. ಅಂತಹ ಅಪಘಾತ ತಡೆ, ಹಾಗೂ ಸುರಕ್ಷೆ ಶಾಂತಿನಿಕೇತನದ ಹುಡುಗಿಯರ ಹಾಸ್ಟೆಲ್ಲಿನ ಅಧಿಕಾರಿ ವರ್ಗದ ಹಕ್ಕು. ಹುಡುಗರಿಗೆ ಅಲ್ಲಿ ಅಫೀಶಿಯಲಿ 'ನೋ ಎಂಟ್ರಿ'. ಅಂದರೆ ಅನ್ಅಫಿಶಿಯಲಿ, ಆಗಾಗ ಹುಡುಗರು ಅಲ್ಲಿಂದ ಅದು ಹೇಗೇಗೋ ಹೊರಬೀಳುತ್ತಿದ್ದುದನ್ನು ಕಾಣಬಹುದಾಗಿತ್ತು!


     ದಿನದ ಇಪ್ಪತ್ತನಾಲ್ಕು ಗಂಟೆ ಕಲಾಭವನದ ಸ್ಟುಡಿಯೊದೊಳಗೆ ಕಲಾಕೃತಿ ರಚಿಸುವವರನ್ನು ಹುಡುಗರೆನ್ನುತ್ತೇವೆ. ಕೇವಲ ಹನ್ನೆರಡು ಗಂಟೆ ಹಾಗೆ ಮಾಡುವವರನ್ನು ಹುಡುಗಿಯರು ಎನ್ನುತ್ತೇವೆ. ಹುಡುಗರಿಗೆ ಹಾಗೂ ಹುಡುಗಿಯರಿಗೆ ಅಲ್ಲಿ ಸ್ವಾತಂತ್ರ್ಯವೋ ಸ್ವಾತಂತ್ರ. ಹುಡುಗರಿಗೆ ಪೂರ್ತಿ ಮತ್ತು ಹುಡುಗಿಯರಿಗೆ ಅರ್ಧದಿನ ಮಾತ್ರ ಸ್ವಾತಂತ್ರ. ದಿನವಹಿ ಹುಡುಗಿಯರಿಗೆ ಎಲ್ಲಿ ಬೇಕಾದರಲ್ಲಿ ಅಲೆದಾಡಲು ಅವಕಾಶವಿರುತ್ತಿತ್ತು. ರಾತ್ರಿ ಪೂರ, ಅಂದರೆ ೯ರಿಂದ ಬೆಳಿಗ್ಗೆ ೫ ಗಂಟೆಯವರೆಗೂ ಅವರೆಲ್ಲ ಹಾಸ್ಟೆಲ್ ಬಂಧಿಗಳು.

    ಭಾರತದ ಪ್ರಧಾನಿ ಯಾರೇ ಆಗಲಿ, ಆಗಿರಲಿ, ಆತನೇ/ಆಕೆಯೇ ಈ ಕಲಾಭವನವಿರುವ ಶಾಂತಿನಿಕೇತನವೆಂಬ ತಾಣವಿರುವ ವಿಶ್ವಭಾರತಿ ವಿಶ್ವವಿದ್ಯಾಲಯದ ಪರ್ಮನೆಂಟ್ ಛಾನ್ಸಲರ್. ಅಂತಲ್ಲೂ ಹುಡುಗಿಯರಿಗೆ ಅಂತಹ ಅಭಿವ್ಯಕ್ತಿ ಸ್ವಾತಂತ್ರ್ಯ!


     ಭಾತರದ ಮತ್ತೊಂದು ಪ್ರಖ್ಯಾತ ದೃಶ್ಯಕಲಾ ವಿಭಾಗವಿರುವ ಬರೋಡದಲ್ಲಿ ಮತ್ತೊಂದು ತೆರನಾದ ಸ್ತ್ರೀವಾದ ಜಾರಿಯಲ್ಲಿದೆ. ಊಟದ ಮೆಸ್ಸಿನಲ್ಲಿ ತಿನ್ನುವ ಹುಡುಗಿಯರು ಹಾಗೆ ಮಾಡಲು 'ಅರ್ಧ' ಬೆಲೆ ಮಾತ್ರ ತೆರಬೇಕು. ಹುಡುಗರು ಮಾತ್ರ 'ಪೂರ್ಣ' ಹಣ ಪಾವತಿ ಮಾಡಬೇಕು. ಆದರೆ ಹುಡುಗರ ಕ್ಯಾತೆ ತೆಗೆಯುತ್ತಿದ್ದುದು ಅದೇ ಕಾರಣಕ್ಕೆ : 


     ಹುಡುಗಿಯರು ಕಡಿಮೆ ತಿನ್ನುತ್ತಾರಲ್ಲ, ಅದಕ್ಕೇ ಅರ್ಧ ಬೆಲೆ ಎಂದು ಮೆಸ್ ಒಡೆಯ ಸಮಜಾಯಿಷಿ ನೀಡಿದರೆ ಹುಡುಗರ ತಕರಾರು ಏನೂ ಇರುತ್ತಿರಲಿಲ್ಲ. ಆದರೆ ಆ ಒಡೆಯನಿಗೆ ಹುಡುಗರ ತಾಕೀತು ಒಂದೇ, ಹುಡುಗಿಯರಿಗೆ ಅರ್ಧ ಟಿಕೆಟ್ ಎಂದು ಬೇಕಾದರೆ ಹೇಳಿಕೊಂಡು ತಿರುಗು ಗುರು. ಆಗ ಅವರೆಲ್ಲ ರಿಸರ್ವೇಷನ್ ಕ್ಯಾಟಗರಿ ಎನ್ನಿಸಿಕೊಳ್ಳುತ್ತಾರೆ. ಆದರೆ, ಬದಲಿಗೆ ಎಲ್ಲಾದರೂ, ಹುಡುಗರು ಊಟ ಮಾಡಲು ಹುಡುಗಿಯರಿಗಿಂತಲೂ ಡಬ್ಬಲ್ ಛಾರ್ಜ್  ಮಾಡುತ್ತೇವೆ ನಮ್ಮ ಮೆಸ್ನಲ್ಲಿ ಎಂದು ಪ್ರಚಾರ ಮಾಡೀಯ. ನಮಗದು ಅವಮಾನ ಮಾಡಿದಂತೆ ಅರ್ಥವಾಯಿತೆ?


     ನೀವು ಹುಡುಗರು ಹೊಟ್ಟೆಬಾಕರು, ಹುಡುಗಿಯರಿಗಿಂತಲೂ ಡಬ್ಬಲ್ ತಿನ್ನುತ್ತೀರ ಎಂದು ಗುಜರಾತಮ್ಮನಾಣೆಗೂ ಯಾರಿಗೂ ಹೇಳಿಲ್ಲ ಇದುವರೆಗೂ, ಎಂದುತ್ತರಿಸುತ್ತಿದ್ದ ಮೆಸ್ ಒಡೆಯ. ಹುಡುಗರ ಲೀಡರ್ ಆ ವಾದವನ್ನು ಒಪ್ಪದಂತೆ ತಲೆಯಾಡಿಸಿ, ಆತನ ಹೆಗಲ ಮೇಲೆ ಕೈ ಹಾಕಿ ಹೇಳುತ್ತಿದ್ದುದು ಹೀಗೆ:
ನೀನು ಮಾಡುತ್ತಿರುವುದು ಅಥವ ಹೇಳಲಿರುವುದು ತಪ್ಪು ಭ್ಹಾಯ್. ಹುಡುಗಿಯರಿಗಿಂತಲೂ ನಾವು ಕೇವಲ ಎರಡುಪಟ್ಟು ಹೆಚ್ಚು ತಿನ್ನುತ್ತೇವೆ ಎಂದರೆ ಅದು ನಮ್ಮ ಕೆಪ್ಯಾಸಿಟಿಗೆ ಅವಮಾನವೇ.  ಅವಿ ಭಯಂಕರ್ ರಾವಣ(ಅ.ಭ.ರಾ) ಪ್ರಸಂಗ ಮರೆತುಬಿಟ್ಟೆಯ? ಎಂದು ಕೇಳಿದ್ದ. 
'ಈಗ ಅರ್ಥವಾಯಿತು ಬಿಡಿ. ನನ್ನ ಹೇಳಿಕೆಯನ್ನು ಸರಿಮಾಡಿಕೊಳ್ಳುತ್ತೇನೆ' ಎಂಬಂತೆ ಮೆಸ್ ಭ್ಹಾಯ್ ಸಮಾಧಾನದ ದೀರ್ಘ ಉಸಿರು ಬಿಟ್ಟು, ನಗುತ್ತ ತಲೆಯಾಡಿಸುತ್ತಿದ್ದ:

 
ಅ.ಭ.ರಾ ಕರ್ನಾಟಕದ ಕ್ಯಾಂಡಿಡೇಟ್. ಬರೋಡದ ಮಹಾರಾಜ ಸಯ್ಯೋಜಿರಾವ್ ಯೂನಿವರ್ಸಿಟಿಯ ಫೈನ್ ಆರ್ಟ್ ಫ್ಯಾಕಲ್ಟಿಯಲ್ಲಿ ಚಿತ್ರಕಲೆ ಓದುತ್ತಿದ್ದ. ಆತನ ಹೊಟ್ಟೆ ಮೋದಿಯ ವೋಟ್ ಬ್ಯಾಂಕಿಗಿಂತಲೂ ದೊಡ್ಡದಿತ್ತು. ಒಮ್ಮೆ ಹಠಕ್ಕೆ ಬಿದ್ದು, ಪಂದ್ಯ ಕಟ್ಟಿ, ಮುವತ್ತು ಪೂರಿ ತಿಂದು ಗೆದ್ದಿದ್ದ ಊಟದ ಮೆಸ್ಸಿನಲ್ಲಿ. ಅದಕ್ಕೆ ಸಿಕ್ಕ ಬಹುಮಾನ ಎರಡು ಪ್ಲೇಟ್ ಗುಜರಾತಿ ಸ್ವೀಟ್ಸ್ ಮತ್ತು ಮೂರು ಐಸ್ಕ್ರೀಂ ಕೋನ್ಗಳು, ಎಲ್ಲವೂ ಎದುರಾಳಿ ಪಕ್ಷದ ಖರ್ಚಿನಲ್ಲಿ. ಅದನ್ನು ಅ.ಭ.ರಾ ಆ ಕೂಡಲೇ, ಸ್ಪರ್ಧೆ ಗೆದ್ದ ಖುಷಿಯ 'ಟೆಂಪ್ಟೇಸನ್' ತಡೆಯಲಾರದೆ ಹೇಗೆ ಗಬಗಬ ತಿಂದನೆಂದು ಮೆಸ್ನ ಕೆಲಸಗಾರನೊಬ್ಬನ ವರ್ಣನೆಯಲ್ಲೇ ಕೇಳಬೇಕು: 
ತಿಂದು ತೇಗುವುದನ್ನು ಬಲ್ಲೆ. ಆದರೆ ತೇಗಿದ ನಂತರ ತಿಂದವರಲ್ಲಿ ಇವನೇ ಮೊದಲಿಗೆ ಎಂದಿದ್ದ ಅ ಪರಿಚಾರಕ!

(೨)

 ರಾತ್ರಿ ಹುಡುಗಿಯರ ಹಾಸ್ಟೆಲ್ಗೆ ಒಳಗಿನಿಂದ ಬೀಗ ಬಿದ್ದ ಕೂಡಲೇ ಸುಪ್ತ ಹಾಗೂ ಸುಷುಪ್ತಾವಸ್ಥೆಯ ಬಯಕೆಗಳೆಲ್ಲ ಹುಡುಗರ ಹಾಸ್ಟೆಲ್ ಪ್ರಾಂತ್ಯದಲ್ಲಿ ಪ್ರಕಟಿತವಾಗುತ್ತಿತ್ತು.
 "ಹೋಯ್, ಆನಂದ್ ಸದನ್ ಹುಡುಗೀರಾ, ಎಂಗಿದೀರ್ರೇ" ಎಂದು ಗುಲ್ಬರ್ಗದ ಗೆಳೆಯ ಶುದ್ಧ ಉತ್ತರ ಕರ್ನಾಟಕದ ಕನ್ನಡದಲ್ಲೇ ಹೊರಗಿನಿಂದ ಕೂಗುತ್ತಿದ್ದ . ಎರಡು ಕಾರಣಗಳಿಂದಾಗಿ ಹುಡುಗಿಯರ್ಯಾರು ಆತನ ವಿರುದ್ಧ ಮಾರನೇ ದಿನ ಕಂಪ್ಲೇಟ್ ಮಾಡುತ್ತಿರಲಿಲ್ಲ.

ಒಂದು: ಅವರ್ಯಾರಿಗೂ ಕನ್ನಡ ಅರ್ಥವಾಗುತ್ತಿರಲಿಲ್ಲ.

ಎರಡು: ಆತ ಹುಡುಗಿಯರ ಹಾಸ್ಟೆಲ್ಲಿನ ಹೊರಗೆ ನಿಲ್ಲುವುದಕ್ಕೂ ಹುಡುಗರ ಹಾಸ್ಟೆಲ್ಲಿನ ಪ್ರಾಂಗಣದಲ್ಲಿ ನಿಲ್ಲುವುದಕ್ಕೂ ಭೌತಿಕವಾಗಿ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ! ಅಂದರೆ ಆತ ಹುಡುಗಿಯರ ಹಾಸ್ಟೆಲಿನ 'ಬಳಿ ಬಂದು' ಗಲಾಟೆ ಮಾಡಿದ ಎಂದಾಗುತ್ತಿರಲಿಲ್ಲ.  ರಾತ್ರಿ ಎಂಟೊಂಬತ್ತು ಗಂಟೆಗೆಲ್ಲ ಇಡಿಯ ಶಾಂತಿನಿಕೇತನದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳೆಲ್ಲ ದಿನವೂ ಬಂದ್ ಆಗುತ್ತಿದ್ದವು.

ದೀಪದ ಬೆಳಕುಗಳೆಲ್ಲ (೧) ತೀರ ಹತ್ತಿರದವರ್ಯಾರನ್ನೋ ಕಳೆದುಕೊಂಡಂತೆಯೋ ಅಥವ (೨) ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟಿನಲ್ಲಿ ಸೋತಂತೆಯೋ ಅಥವ (೩) ಕೊಲ್ಕೊತ್ತ ನೈಟ್ ರೈಡರ್ಸ್ ಐ.ಪಿ.ಎಲ್ನ ಆಟಗಾರರ ನಾಯಕರುಗಳ ನಿರಂತರ ಮುಖಭಾವದಂತೆ -- ನಿರಂತರವಾಗಿ ಮಂಕಾಗಿರುತ್ತಿದ್ದವು.

೧೯೯೦ರಲ್ಲಿ ದಿನಕ್ಕೆ ಐದುಗಂಟೆ ಕಾಲ, ಅದರಲ್ಲೂ ರಾತ್ರಿಯ ಹೊತ್ತಿನಲ್ಲೇ ಲೋಡ್ ಶೆಡ್ದಿಂಗ್ ಇರುತ್ತಿತ್ತು. ಶಾಂತಿನಿಕೇತನದ ನೀರವತೆ ವಿಕ್ಷಿಪ್ತವಾದುದು. ಬೆಂಗಳೂರಿನಿಂದ ಕಲಾಇತಿಹಾಸದಲ್ಲಿ ಎಂ.ಏಫ್.ಎ ಕೋರ್ಸ್ ಮಾಡಲು  ಕಲಾಭವನವನ್ನು ಸೇರಿದ್ದ ನನಗೆ ಕತ್ತಲೆ ಎಂದರೇನೆಂದು ಕೇಳಿ, ಓದಿ ತಿಳಿದಿದ್ದೆ. ಆಗೆಲ್ಲ ಬೆಂಗಳೂರಿನಲ್ಲಿ ಸಾಕಷ್ಟು ಬೆಳಕಿರುತ್ತಿತ್ತು, ರಾತ್ರಿಯ ಹೊತ್ತಿನಲ್ಲೂ ಸಹ. ಆದರೆ ಕಗ್ಗತ್ತಲೆ ಎಂದರೆ, ಪೂರ್ಣ ಬೆಳದಿಂಗಳು ಎಂದರೆ ಏನೆಂದು ಕಣ್ಣಾರೆ ಕಂಡದ್ದು ಅಥವ ಕಾಣದೇ ಹೋದುದು ಅಲ್ಲಿಯೇ. ಅಲ್ಲಿನ ಕಗ್ಗತ್ತಲೆಂದರೆ ಬ್ಲಾಕ್ ಹೋಲ್ನ ಅನುಭವದಂತೆ: ನಿಮ್ಮ ಕಾಲೇ ನಿಮಗೆ ಯಾರೋ ಬೇರೆಯವರ ಕಾಲಿನಂತೆನಿಸಿಬಿಡುತ್ತದೆ. ಬೆಳದಿಂಗಳ ಪ್ರಖರತೆ ತಡೆಯಲಾರದೆ ಒಮ್ಮೊಮ್ಮೆ ಕಣ್ಣುಗಳನ್ನೂ ಮುಚ್ಚಿಬಿಡಬೇಕಾಗುತ್ತದೆ!

ಅಂದು ಮಧ್ಯರಾತ್ರಿಯಲ್ಲಿ ಅಚಾನಕವಾಗಿ ಗಲಭೆ ಎದ್ದಿತ್ತು, ಹುಡುಗರ ನಡುವೆ. ಹಾಗೆ ಗದ್ದಲವಾದಾಗಲೆಲ್ಲ ಇರುವ ಸ್ಥಿತಿಯಲ್ಲಿಯೇ ಎದ್ದೆವೋ ಬಿದ್ದೆವೋ ಎಂದು ಹೊರಕ್ಕೆ, ದಿಕ್ಕುದೆಸೆಯಿಲ್ಲದೆ ಓಡುವುದು ಅಲ್ಲಿನ ನಿಯಮ. ನಾನು ಅಲ್ಲಿಗೆ ಹೊಸಬನಾದ್ದರಿಂದ ನಾನೊಬ್ಬನೇ ಅಜ್ಞಾನದಿಂದ ಉಟ್ಟಬಟ್ಟೆಯಲ್ಲಿ ರೂಮಿನಿಂದ ಹೊರಕ್ಕೆ ಬಂದವನು. ಕೆಲವರು ಹುಟ್ಟಿದದಿನ ತೊಟ್ಟಿದ್ದ ಬಟ್ಟೆಯನ್ನೇ ಹೊದ್ದಿದ್ದರು. ಬರೀ ಹುಡುಗರೇ ಇರುತ್ತಾರೆಂಬ ಗ್ಯಾರಂಟಿಯಿರುವ 'ಹೊರಗಡೆ' ಸಂಕೋಚವೆಂತಹದ್ದು! ಆಗೆಲ್ಲ, ಅಂದರೆ ಇಪ್ಪತ್ತು ವರ್ಷದ ಹಿಂದೆ, ಅಲ್ಲಿ, ಹುಡುಗರೆಲ್ಲ ಬರೀ ಹ್ಯಾಪಿಯಾಗಿರುತ್ತಿದ್ದರು 'ಹ್ಯಾಪಿ ಅಂಡ್ ಗೇ' ಎಂಬ ಜನಪ್ರಿಯ ಗದ್ಯದಲ್ಲಿ. ಸಲಿಂಗಕಾಮಿಗಳು ತೀರ ಅಪರೂಪವೆನ್ನಿಸುವಂತಿದ್ದರು. 

(೩)

ಎಲ್ಲರೂ ಹೊರಕ್ಕೆ ಓಡಿಬರಲು ಕಾರಣವು ಹೊರಗೆ ಬಂದಾದ ಮೇಲೆ ಗೊತ್ತಾಯಿತು. ಅಥವ ಎಲ್ಲರ ಕಣ್ಣೆದುರಿಗೇ ನಿಂತಿತ್ತು ಆ ಕಾರಣ. ನಿರ್ಜರ್ ಎಂಬ ಸಣ್ಣ ಆಕಾರದ ಬೆಂಗಾಲಿ ಗ್ರಾಫಿಕ್ ವಿದ್ಯಾರ್ಥಿಯ  ಕೈಯಲ್ಲಿ ಬಾಟೆಲ್ ಹಿಡಿದು ನಿಂತಿದ್ದಾನೆ. ಆತನ ಎದುರಿಗೆ ಕೆ.ಕೆ.ಮೊಹಮ್ಮದ್ ಎಂಬ ಬೃಹದಾಕಾರದ ಕೇರಳದ ಗ್ರಾಫಿಕ್ ವಿದ್ಯಾರ್ಥಿಯು ನಿಂತಿದ್ದಾನೆ. ಇಬ್ಬರೂ ಕಬಡ್ಡಿ ಆಡುವ ಪೋಸು ಕೊಡುತ್ತಿರುವ ಮೇಡಮ್ ತುಸ್ಸಾಡ್ ಮೇಣದ ಶಿಲ್ಪಗಳಂತೆ ಸ್ಥಿರವಾಗಿ ಬಹಳ ಹೊತ್ತು ನಿಂತೇ ಇದ್ದಾರೆ. ಆದರೆ ಸುತ್ತಲಿರುವರ್ಯಾರು  ನಿರ್ಜರನ ಹತ್ತಿರ ಅಥವ ಆತನ ಬಾಟೆಲಿನ ಹತ್ತಿರ ಹೋಗಲು ನಿರಾಕರಿಸುತ್ತಿದ್ದಾರೆ. ಅವರೆಲ್ಲರೂ ತಮ್ಮ ದೃಷ್ಟಿಯನ್ನು ಮಾತ್ರ ಆ ಬಾಟೆಲ್ಲಿನ ಒಳಕ್ಕೇ ಒಟ್ಟಾರೆಯಾಗಿ ತೂರಿಸಿಬಿಟ್ಟಿದ್ದಾರೆ--ಬೆಂಗಳೂರಿನ ಗೂಡ್ಸ್ಶೆಡ್ ರಸ್ತೆಯ ಬಾಟೆಲ್ ನೆಕ್ನಲ್ಲಿ ಸಿಕ್ಕಿಕೊಂಡ ಟ್ರಾಫಿಕ್ ಗಾಡಿಗಳಂತೆ. 

ಆ ಬಾಟೆಲ್ಲಿನ ಒಳಗೆ ಗ್ರಾಫಿಕ್ ವಿಭಾಗದಿಂದ ಕದ್ದು ತರಲಾಗಿದ್ದ ನೈಟ್ರಿಕ್ ಆಸಿಡ್ ಇತ್ತು. ಝಿಂಕ್ ಪ್ಲೇಟ್ಗಳಲ್ಲಿ ರೇಖಾಚಿತ್ರಗಳನ್ನು ಸೂಜಿಯಿಂದ ಬರೆದಾಗ, ಅದರ ಮೇಲಿರುವ ಆಸಿಡ್ ತಡೆಯುವ ಹೊದಿಕೆಯು ಗೀಟು ಹಾಕಿದೆಡೆಯೆಲ್ಲ, ಅಲ್ಲಿ ಮಾತ್ರ ತೆರೆದುಕೊಳ್ಳುತ್ತದೆ. ಮಿಕ್ಕೆಡೆ ಹಾಗೆಯೇ ಹೊದಿಕೆ ಉಳಿದುಕೊಂಡಿರುತ್ತದೆ. ಗೀಟುಗಳ ಮೂಲಕ ಪ್ಲೇಟಿನ ಮೇಲೆ ರೇಖಾಚಿತ್ರಗಳನ್ನು ರಚಿಸುವ ಗ್ರಾಫಿಕ್ ಕಲಾವಿದರು, ತೆಳುಗೊಳಿಸಲಾದ ನೈಟ್ರಿಕ್ ಆಸಿಡ್ನ ಟಬ್ಬಿನಲ್ಲಿ ಕೆಲವೇ ನಿಮಿಷ ಆ ಪ್ಲೇಟನ್ನು ಇರಿಸುತ್ತಾರೆ. ಆಗ ಗೀಟಾದ ಕಡೆಯೆಲ್ಲ ರೇಖೆಗಳು ಆಳಕ್ಕಿಳಿಯುತ್ತವೆ. ನಂತರ ಪ್ಲೇಟನ್ನು ನೀರಲ್ಲಿ ತೊಳೆದು, ಪ್ಲೇಟಿನಾದ್ಯಂತ ಇಂಕನ್ನು ಉಜ್ಜಿ, ತೆಳು ಕಾಗದದಿಂದ ಒರೆಸಿದಾಗ, ಆಳವಾದ ರೇಖೆಗಳೊಳಗೆ ಮಾತ್ರ ಇಂಕ್ ಉಳಿಯುತ್ತದೆ. ಆ ಪ್ಲೇಟಿನ ಮೇಲೆ ಕಾಗದ ಇರಿಸಿ ಒತ್ತಡ ಹಾಕಿ, ಕಾಗದ ತೆಗೆದುನೋಡಿದಾಗ ಪ್ಲೇಟಿನ ಮೇಲೆ ಬರೆಯಲಾಗಿದ್ದ ರೇಖಾಚಿತ್ರದ ಬಿಂಬರೂಪವು ಕಾಗದದಲ್ಲಿ ಮೂಡಿರುತ್ತದೆ. ಅದನ್ನೇ ಗ್ರಾಫಿಕ್ ಪ್ರಿಂಟ್ ಎನ್ನುವುದು. ನೈಟ್ರಿಕ್ ಆಸಿಡ್ಗೆ ಸಾಕಷ್ಟು ನೀರು ಬೆರೆಸಲಾಗಿರುತ್ತದೆ, ಟಬ್ಬಿನಲ್ಲಿ. ನೈಟ್ರಿಕ್ ಆಸಿಡ್ ಎಂಬುದು ಗ್ರಾಫಿಕ್ ವಿಭಾಗಕ್ಕೆ ಬ್ರೆಡ್ ಪೀಸ್ಗಳ ನಡುವೆ ಇರುವ ಬೆಂಗಾಲಿ ಸ್ವೀಟ್ಸ್ನಂತೆ, ಅನಿವಾರ್ಯ. 
ಇಂತಹ ನೈಟ್ರಿಕ್ ಆಸಿಡನ್ನು, ಅದೂ ಕಾನ್ಸನ್ಟ್ರೇಟೆಡ್ ರೂಪದಲ್ಲಿ ಕುಡಿದುಬಿಡುತ್ತೇನೆಂದು ನಿರ್ಜರ್ ಮೊದಲೇ ಎಲ್ಲರಿಗೂ ಘೋಷಿಸಿ ಹೇಳುತ್ತಿದ್ದಾನೆ. ಏಕೆಂದರೆ ಕುಡಿದ ನಂತರ ಗಂಟಲು ತೂತು ಬೀಳುವುದರಿಂದ ಹೇಳಲಾಗುವುದಿಲ್ಲವಲ್ಲ, ಅದಕ್ಕೇ ಇರಬೇಕು.  ಅಥವ ಮಾರ್ಕ್ಸಿಸ್ಟ್ ದೇಶವಾದ ಬೆಂಗಾಲದ ರಾಜ್ಯವು ಮಾರ್ಕ್ಸ್ ವಾದ ಭಾರತದದ  ತಾಣವಾದ್ದರಿಂದ, ಕೆಲಸ ಮಾಡುವ ಮೊದಲೇ ಮ್ಯಾನಿಫೆಸ್ಟೊವನ್ನು ಘೋಷಿಸುವುದು ಅಲ್ಲಿನವರ ಗುಣಲಕ್ಷಣ. 
ದೀತೇ ಹೋಬೆ, ಕೊರ್ತೇ ಹೋಬೆ ('ಕೊಡಲೇ ಬೇಕು, ಮಾಡಲೇ ಬೇಕು' ಎಂಬ ಅರ್ಥಕ್ಕೆ ಹತ್ತಿರವಾದ ಅರ್ಥ) ಎಂದು ಇದ್ದಕ್ಕಿದ್ದಂತೆ, ಬೆಳಗಾಗೆದ್ದು ಹುಡುಗ-ಹುಡುಗಿಯರೆಲ್ಲರೂ ಸ್ಟ್ರೈಕ್ ಮಾಡುತ್ತ ಹೊರಡುವುದು ಕಲಾಭವನದ ಒಂದು ಧರ್ಮವೇ ಆಗಿಹೋಗಿದೆ. ಒಮ್ಮೆ ಅಲ್ಲಿನ ಪ್ರಿನ್ಸಿಪಾಲರು ಹಾಗೆ ಮೆರವಣಿಗೆ ಹೊರಟಿದ್ದ ಹುಡುಗನೊಬ್ಬನನ್ನು ಕೇಳಿದ್ದರು,


ಯಾವ ವಿಷಯಕ್ಕೆ ಹರತಾಳ ಆಚರಿಸುತ್ತಿದ್ದೀರ? 

ಅದಕ್ಕೆ ಆ ಭೂಪ ಸ್ಪಷ್ಟವಾಗಿ ಉತ್ತರಿಸಿದ್ದ, ನನಗೆ ಕ್ಲಿಯರಾಗಿ ಏನೂ ಗೊತ್ತಿಲ್ಲ ಸಾ. ಮೊದಲು ಹರತಾಳ. ಆಮೇಲೆ ಕಾರಣ ಹುಡುಕುತ್ತೇವೆ, ನಂತರ ನಿಮಗೆ ತಿಳಿಸುತ್ತೇವೆ ಎಂದು ಗಂಭೀರವಾಗಿ ನುಡಿದಿದ್ದ. 

ಭಾಗ ೧- ಆಸಿಡ್ ಟೇಸ್ಟ್ ಎಂಬ ಅಗ್ನಿ ಪರೀಕ್ಷೆ. (ಆ)

http://sampada.net/article/25262