ಸಖಿಯರೆದುರು ರೇಗಿಸಿ ಕೋಪಗೊಂಡಾಗ

ಬರುವೆನೆಂದು ಕಾಯ್ದು ಬರದೆ ಮುನಿಸಿಕೊಂಡಾಗ

ನಾ ಹೊರಟೆನೆಂಬ ದುಃಖದಲಿ ನೀ ಮುಳುಗಿ ಹೋದಾಗ

ಕಣ್ಣಂಚಿನಲಿ ನೀರು ಕಂಡರೂ ರಮಿಸದಿದ್ದಾಗ

ನಿನ್ಯಾವ ಪತ್ರಕೂ ಉತ್ತರಿಸದಿದ್ದಾಗ

ಉಡುಗೊರೆಯ ಕಾಣದೇ ಬೇಸರಗೊಂಡಾಗ

 

ಮೀಸೆಯ ಕೆಳಗೆ ಮುಗುಳು ನಗೆಯ ಬೀರುತ್ತ

ನಕ್ಕು ಕಣ್ಣಲ್ಲೆ ನಾನಿಂಗೆ ಹೇಳಿದ್ದು

ಹೃದಯಾಳದಲಿ ಅವಿತುಕೊಂಡಿರುವ

ಮೂಕ ಪ್ರೀತಿಯ ಪಿಸುಮಾತು