ಗುರಿ ಮುಟ್ಟು ಮನುಜ
 
  ಗುರಿಯಿಲ್ಲದ ಜೀವನ ಬದುಕಿನುತ್ಸಾಹಕ್ಕೆ ಮಂಕು
  ಈ ಸುಧೀರ್ಘ ಜೀವನಕ್ಕೊಂದು ಗುರಿ ಬೇಕೇ ಬೇಕು
 
  ನಾವಿಡುವ ಗುರಿ ವಾಸ್ತವದ ಆವರಣದಲ್ಲಿ ಇರಬೇಕು
  ಗುರಿ ಮುಟ್ಟುವ ಹಾದಿಯನು ಅಳಿಯುವಂತಿರ ಬೇಕು
 
  ನಿಗದಿ ಪಡಿಸುವ ಗುರಿ ನಮಗೆ ಸ್ಪಷ್ಟವಾಗಿರಲಿ
  ಆ ಸ್ಪಷ್ಟ  ಗುರಿಗೊಂದು ಸಮಯದ ಅಂಕುಶವಿರಲಿ
 
  ಸೋಲದಿದ್ದರೆ ಸಾಕು ಎಂದರೆ ಗುರಿ ಮುಟ್ಟುವುದಿಲ್ಲ
  ಗೆಲ್ಲಲೇ ಬೇಕೆಂಬ ಛಲ ಮುಟ್ಟಿಸದೆ ಬಿಡುವುದಿಲ್ಲ
 
  ನಿನ್ನ ದುರ್ಬಲ ಆಸೆ ಎಂದೂ ಗುರಿ ಮುಟ್ಟಿಸುವುದಿಲ್ಲ
  ಧೈರ್ಯದಿ  ಹಟ ಕಟ್ಟಿ  ನಿಂತವರು ನುಗ್ಗುತಿರುವರೆಲ್ಲ
 
  ಗುರಿಯ ಹಾದಿಯಲ್ಲಿ ಸೋಲುಗಳು ಎದೆ ಕುಗ್ಗುಸಿವುದು
  ಈ ಸೋಲು ಸವಾಲುಗಳೇ ನಿನ್ನ ಪ್ರಭುದ್ದವಾಗಿಸುವುದು
 
  ಮಡಿಕೆಯೊಳ ಕುಂಬಳದಂತೆ ಮಿತಿಯೊಳಗೆ ನಿಲ್ಲ ಬೇಡ
  ನಿನ್ನ ಆತ್ಮ ಗೌರವವನು ನೀನೆಂದೂ ಮೊಟಕು ಗೊಳಿಸಬೇಡ 
 
  ತಾಳ್ಮೆ , ಬುದ್ದಿ, ಧ್ರುಡತೆ  ಗುರಿಗೆ ನಿನ್ನ ಅಸ್ತ್ರವಾಗಿರಲಿ
  ಎಲ್ಲಾ ಗುರಿ ಸಾಧಿಸುತ್ತ ಆತ್ಮ ವಿಶ್ವಾಸ ತುಂಬುತಿರಲಿ
 
  -ತೇಜಸ್ವಿ. ಎ.ಸಿ