ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಬಗ್ಗೆ ಕಿರು ಪರಿಚಯ
ಗ್ಯಾಸೆಟಿಯರ್ಗಳನ್ನು ಸರ್ಕಾರವು ಸಾಪ್ತಾಹಿಕವಾಗಿ ಪ್ರಕಟಿಸುವ ರಾಜ್ಯ ಗೆಜ಼ೆಟ್ ಗಳೊಂದಿಗೆ ಹೋಲಿಸಿ ತಪ್ಪು ಮಾಡುವುದು ವಾಡಿಕೆಯಾಗಿದೆ. ಆದರೆ, ಗೆಜ಼ೆಟ್ಗಳಿಗೂ ಗ್ಯಾಸೆಟಿಯರ್ಗಳಿಗೂ ಉತ್ತರ ಧೃವ ಹಾಗೂ ದಕ್ಷಿಣ ಧೃವಗಳಿಗಿರುವಷ್ಟೇ ವ್ಯತ್ಯಾಸವಿದೆ. ಆಂಗ್ಲ ಭಾಷೆಯ ಉಚಿzಚಿ ಎಂಬ ಪದವು ಗ್ರೀಕ್ ಮೂಲದ್ದಾಗಿದ್ದು, ವಾರ್ತೆಗಳ ಗಣಿ ಎಂಬ ಅರ್ಥವಿದೆ. ಒಂದು ಜಿಲ್ಲೆಯನ್ನು ವಿವಿಧ ಆಯಾಮಗಳಲ್ಲಿ ಪರಿಚಯಿಸುವುದು ನಂತರ ಗ್ಯಾಸೆಟಿಯರ್ ಎಂಬ ಸಂಪುಟವೆಂದು ಕರೆಯಲಾಯಿತು. ಭಾರತದಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ಜಿಲ್ಲಾ ಪರಿಚಯ ಗ್ರಂಥಗಳಿಗೆ ಮ್ಯಾನ್ಯುಯಲ್ ಗಳೆಂದು ಕರೆಯುವುದು ರೂಢಿಗೆ ಬಂದಿತು. ಕರ್ನಾಟಕವು ಗ್ಯಾಸೆಟಿಯರ್ಗಳ ಪ್ರಕಟಣೆಯಲ್ಲಿ ಅತ್ಯಂತ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಬ್ರಿಟೀಷ್ ಸರ್ಕಾರವು ಆಡಳಿತವನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡಾಗ ಅನೇಕ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಭಾರತೀಯ ಪ್ರಾಂತ್ಯ ಹಾಗೂ ಜಿಲ್ಲೆಗಳಿಗೆ ಆಂಗ್ಲ ಹಾಗೂ ಯೂರೋಪಿಯನ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಯಿತು. ೧೮೬೭ರ ವೇಳೆಗಾಗಲೇ ಬ್ರಿಟನ್ನಲ್ಲಿ ಆಡಳಿತಗಾರರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಗ್ಯಾಸೆಟಿಯರ್ ಅಥವಾ ಮ್ಯಾನ್ಯುಯಲ್ಗಳನ್ನು ತಯಾರಿಸುವ ಸಂಪ್ರದಾಯವು ಆರಂಭವಾಗಿತ್ತು. ಇದೇ ಹಿನ್ನೆಲೆಯಲ್ಲಿ ಭಾರತದಲ್ಲೂ ತಮ್ಮ ಆಡಳಿತವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಆಡಳಿತಗಾರರಿಗೆ ತಾವು ಆಡಳಿತ ಮಾಡಬೇಕಾದ ಪ್ರಾಂತ್ಯ/ಜಿಲ್ಲೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಮ್ಯಾನ್ಯುಯಲ್ ಅಥವಾ ಗ್ಯಾಸೆಟಿಯರ್ಗಳನ್ನು ಸಂಕಲಿಸುವ ಕಾರ್ಯವನ್ನು ಆರಂಭಿಸಲಾಯಿತು.
ಗ್ಯಾಸೆಟಿಯರ್ ಸಂಪ್ರದಾಯ
ಮೈಸೂರು ಸಂಸ್ಥಾನದಲ್ಲಿಯೂ ಗ್ಯಾಸೆಟಿಯರ್ ಸಂಪ್ರದಾಯವು ಈ ಹಿನ್ನೆಲೆಯಲ್ಲಿ ಆರಂಭವಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ನಿರ್ದೇಶಕರಾಗಿದ್ದ ಬೆಂಜಮಿನ್ ಲೂಯಿಸ್ ರೈಸ್ ಅವರು ಬೆಂಗಳೂರಿನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಹೊಂದಿದ್ದರು. ಅವರು ಮೈಸೂರು ಮತ್ತು ಕೂರ್ಗ್ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ೧೮೭೭-೭೮ರಲ್ಲಿ ಮೂರು ಗ್ಯಾಸೆಟಿಯರ್ ಸಂಪುಟಗಳನ್ನು ಪ್ರಥಮ ಬಾರಿಗೆ ಪ್ರಕಟಿಸಿದ್ದು ಆಗ ದೇಶದಲ್ಲೇ ಅತ್ಯುತ್ತಮ ಬೌದ್ಧಿಕ ಸಾಧನೆಯೆಂದು ಪರಿಗಣಿಸಲ್ಪಟ್ಟಿತ್ತು. ನಂತರ ರಾಷ್ಟ್ರಮಟ್ಟದಲ್ಲಿ ಇಂಪೀರಿಯಲ್ ಗ್ಯಾಸೆಟಿಯರ್ ಸಂಪುಟಗಳನ್ನು ೧೮೮೧ರಲ್ಲಿ ಸಂಪಾದಿಸಿದ ಸರ್ ವಿಲಿಯಮ್ ವಿಲ್ಸನ್ ಹಂಟರ್ರವರು ಬಿ.ಎಲ್.ರೈಸ್ ಅವರ ಪ್ರಥಮ ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ ಸಂಪುಟಗಳ ಕಾರ್ಯವನ್ನು ತಮ್ಮ ಮುನ್ನುಡಿಯಲ್ಲಿ ಅತ್ಯುತ್ತಮ ಹಾಗೂ ಪರಿಪಕ್ವಯುತ ಸಂಪಾದನಾ ಗ್ರಂಥಗಳೆಂದು ಶ್ಲಾಘಿಸಿರುತ್ತಾರೆ. ನಂತರ ೧೮೯೭ರಲ್ಲಿ ಬಿ.ಎಲ್.ರೈಸ್ ಅವರೇ ಮೈಸೂರು ಗ್ಯಾಸೆಟಿಯರ್ ಸಂಪುಟಗಳನ್ನು ಮೂರು ಸಂಪುಟಗಳಲ್ಲಿ ಪುನ: ಪರಿಷ್ಕರಿಸಿ ಪ್ರಕಟಿಸಿದರು. ಬಿ.ಎಲ್.ರೈಸ್ರವರು ತಮ್ಮ ೧೮೭೭ರ ಸಂಪುಟದ ಮುನ್ನುಡಿಯಲ್ಲಿ ಎಚ್.ವೆಲ್ಲೆಸ್ಲಿ ಮತ್ತು ಕೃಷ್ಣ ಅಯ್ಯಂಗಾರ್ ಎಂಬ ಅಧಿಕಾರಿಗಳು ೧೮೬೯ರಲ್ಲೇ ಮೈಸೂರು ಮತ್ತು ಕೋಲಾರ ಜಿಲ್ಲೆಗೆ ಸಂಬಂಧಿಸಿದ ಗ್ಯಾಸೆಟಿಯರ್ ಸಂಪುಟಗಳನ್ನು ಕ್ರಮವಾಗಿ ಸಿದ್ಧಗೊಳಿಸಿ ಹಸ್ತಪ್ರತಿಗಳನ್ನು ತಯಾರಿಸಲಾಗಿತ್ತೆಂದು ತಿಳಿಸಿರುತ್ತಾರೆ. ಆದರೆ ನಮಗೆ ಈ ಸಂಪುಟಗಳು ಇಲ್ಲಿಯವರೆಗೂ ಲಭ್ಯವಿಲ್ಲದಾಗಿವೆ.
ಉತ್ತರ ಕರ್ನಾಟಕದ ಭಾಗವು ಮುಂಬೈ ಪ್ರೆಸಿಡೆನ್ಸಿಯ ಆಡಳಿತದಲ್ಲಿದ್ದು, ೧೮೮೩ ರಿಂದ ೧೮೮೪ರ ನಡುವೆ ಸರ್.ಜೇಮ್ಸ್ಕ್ಯಾಂಬೆಲ್ ಅವರು ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಕೆನರಾ (ಉತ್ತರ ಕನ್ನಡ) ಜಿಲ್ಲೆಗಳ ಗ್ಯಾಸೆಟಿಯರ್ ಸಂಪುಟಗಳನ್ನು ಪ್ರಕಟಿಸಿದರು. ಮದರಾಸ್ ಪ್ರಾಂತ್ಯದಲ್ಲಿದ್ದ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯ ಮ್ಯಾನ್ಯುಯಲ್ ಸಂಪುಟವನ್ನು ಎರಡು ಭಾಗಗಳಲ್ಲಿ (೧೮೯೪-೧೮೯೫) ಜಾನ್ ಸ್ಟರ್ರೋಕ್ ಮತ್ತು ಹೆರಾಲ್ಡ್ ಎ.ಸ್ಟೂಯರ್ಟ್ ಅವರ ಸಂಪಾದಕತ್ವದಲ್ಲಿ ಮದರಾಸ್ ಪ್ರಾಂತೀಯ ಸರ್ಕಾರವು ಪ್ರಕಟಿಸಿತು. ಈ ಎಲ್ಲಾ ಗ್ಯಾಸೆಟಿಯರ್ಗಳಿಗೆ ೧೯೦೦-೧೯೨೪ರ ಅವಧಿಯಲ್ಲಿ ಹಲವಾರು ಪುರವಣಿಗಳು ಬಂದವು. ಇದೇ ರೀತಿ ಬಳ್ಳಾರಿ ಜಿಲ್ಲಾ ಮ್ಯಾನ್ಯುಯಲ್ ಸಂಪುಟವನ್ನು ಜಾನ್ ಕೆಲ್ಸಾಲ್ ೧೮೭೨ರಲ್ಲಿ ಪ್ರಥಮ ಬಾರಿಗೆ ಪ್ರಕಟಿಸಿದ್ದು, ಅದನ್ನು ಪುನ: ಪರಿಷ್ಕರಿಸಿ ವಿಲಿಯಮ್ ಫ್ರಾನ್ಸಿಸ್ರವರು ೧೯೦೪ರಲ್ಲಿ ಪ್ರಕಟಿಸಿದರು. ಅಂತೆಯೇ ಹೈದರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆಯೂ ಗ್ಯಾಸೆಟಿಯರ್ಗಳು ಇಪ್ಪತ್ತನೇ ಶತಮಾನದ ಆರಂಭದಿಂದಲೂ ಬಂದಿರುವ ಬಗ್ಗೆ ಮಾಹಿತಿಯಿದ್ದು, ೧೯೩೧-೩೬ನೇ ಸಾಲಿಗೆ ಸಂಬಂಧಿಸಿದಂತೆ ಬೀದರ್, ಗುಲ್ಬರ್ಗಾ ಹಾಗೂ ರಾಯಚೂರುಗಳ ಗ್ಯಾಸೆಟಿಯರ್ಗಳ ಮನಾರ್ ಹುಸೇನ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದು, ಇಲಾಖೆಯಲ್ಲಿ ಲಭ್ಯವಿದೆ ಅಲ್ಲದೇ, ೧೯೨೦-೩೦ನೇ ಸಾಲಿನಲ್ಲಿ ಗ್ಯಾಸೆಟಿಯರ್ನ ಒಂದು ಅಂಗವಾಗಿ ಆರ್ಥಿಕ ಪರಾಮಶೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಗ್ರಂಥ ಎಸ್.ಕೇಶವ ಅಯ್ಯಂಗಾರ್ ಅವರಿಂದ ಸಂಪಾದಿತವಾಗಿರುವುದೂ ಸಹ ಲಭ್ಯವಿದೆ. ಇಲಾಖೆಯು ಇತ್ತೀಚೆಗೆ ಈ ಸಂಪುಟಗಳನ್ನು ಆಂಧ್ರಪ್ರದೇಶ ಪತ್ರಾಗಾರ ಇಲಾಖೆಯವರಿಂದ ವರ್ಗಾವಣೆ ಆಧಾರದ ಮೇಲೆ ಪಡೆದಿದೆ.
ರಾವ್ ಬಹದ್ದೂರ್ ಸಿ.ಹಯವದನರಾವ್ ಅವರ ಅತ್ಯಂತ ಪರಿಶ್ರಮದ ವ್ಯಾಪಕ ಸರ್ವೇಕ್ಷಣೆಯ ಫಲವಾಗಿ ಅಂದಿನ ಮೈಸೂರು ರಾಜ್ಯದ ಗ್ಯಾಸೆಟಿಯರಿನ ಆರು ಸಂಪುಟಗಳನ್ನು ಪೂರ್ಣವಾಗಿ ೧೯೩೯ರ ವೇಳೆಗೆ ಪ್ರಾಂತೀಯ ಸರ್ಕಾರವು ಹೊರತಂದಿತು. ಈ ಪ್ರಯತ್ನವು ಮೈಸೂರು ರಾಜ್ಯದಲ್ಲಿ ಗ್ಯಾಸೆಟಿಯರ್ ಇಲಾಖೆಯ ಸ್ಥಾಪನೆಗೆ ಅಂಕುರವಾಯಿತೆಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಸ್ಥಾಪನೆ
ಕೇಂದ್ರ ಸರ್ಕಾರವು ೧೯೫೫ರಲ್ಲಿ ನೇಮಿಸಿದ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಗ್ಯಾಸೆಟಿಯರಿನ ಪರಿಕಲ್ಪನೆಯನ್ವಯ ೧೯೫೮ರಲ್ಲಿ ಈ ಇಲಾಖೆಯು ಉಗಮಗೊಂಡಿತು. ಕೇಂದ್ರ ಗ್ಯಾಸೆಟಿಯರ್ ಯೋಜನೆಯ ಮೇರೆಗೆ, ಪ್ರತೀ ರಾಜ್ಯವೂ ಗ್ಯಾಸೆಟಿಯರುಗಳ ಪ್ರಕಟಣಾ ಕಾರ್ಯ ಕೈಗೊಳ್ಳಬೇಕೆಂಬ ಕೇಂದ್ರ ಸರಕಾರದ ಆದೇಶದಂತೆ ಎಲ್ಲಾ ರಾಜ್ಯಗಳೂ ಈ ಕಾರ್ಯವನ್ನು ಪ್ರಾರಂಭಿಸಿದವು. ಇದರ ಸಲುವಾಗಿ ಅವಶ್ಯವಾದ ಕಚೇರಿ, ಸಿಬ್ಬಂದಿ ಮುಂತಾದವುಗಳನ್ನು ತಂತಮ್ಮ ರಾಜ್ಯಗಳಲ್ಲಿ ಒದಗಿಸಿಕೊಂಡವು.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ತಾತ್ಕಾಲಿಕ ಆಧಾರದ ಮೇಲೆ ೧೯೫೮ರಲ್ಲಿ ಅಸ್ತಿತ್ವಕ್ಕೆ ಬಂದು ಭಾರತದ ಗ್ಯಾಸೆಟಿಯರ್ ಘಟಕವು ನಿರೂಪಿಸಿದ ಗ್ಯಾಸೆಟಿಯರ್ ಸಂಕಲನಾ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿತು. ಈ ಯೋಜನೆಯನ್ವಯ ಗ್ಯಾಸೆಟಿಯರ್ ಇಲಾಖೆಯು ಅಂದಿನ ಎಲ್ಲಾ ೨೦ ಜಿಲ್ಲೆಗಳ ಗ್ಯಾಸೆಟಿಯರ್ ಸಂಪುಟಗಳನ್ನು ೧೯೯೦ರ ವೇಳೆಗೆ ಆಂಗ್ಲ ಭಾಷೆಯಲ್ಲಿ ಪ್ರಕಟಗೊಳಿಸುವಲ್ಲಿ ಯಶಸ್ವಿಯಾಯಿತು. ಇದಲ್ಲದೆ ೧೯೮೨-೧೯೮೪ರ ನಡುವೆ ಪ್ರಥಮ ಬಾರಿಗೆ ರಾಜ್ಯ ಗ್ಯಾಸೆಟಿಯರ್ನ ಆಂಗ್ಲ ಸಂಪುಟಗಳನ್ನು (ಎರಡು ಭಾಗಗಳಲ್ಲಿ) ಪ್ರಕಟಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕವು ಪಾತ್ರವಾಯಿತು. ಹತ್ತು ವರ್ಷಗಳ ನಂತರ ಸದರಿ ರಾಜ್ಯ ಗ್ಯಾಸೆಟಿಯರ್ಗೆ ೧೯೯೩ರಲ್ಲಿ ದಶವಾರ್ಷಿಕ ಪುರಣಿಯನ್ನೂ ಪ್ರಕಟಿಸಲಾಯಿತು. ಅಲ್ಲದೆ ರಾಜ್ಯ ಗ್ಯಾಸೆಟಿಯರ್ನ ಕನ್ನಡ ಅನುವಾದ ೧೯೮೪-೮೬ರ ಅವಧಿಯಲ್ಲಿ ಮೂರು ಸಂಪುಟಗಳಲ್ಲೂ ೧೯೯೬ರಲ್ಲಿ ಅದರ ದಶವಾರ್ಷಿಕ ಪುರವಣಿಯನ್ನು ಪ್ರಕಟಿಸಲಾಯಿತು. ಈ ಮಾಲಿಕೆಗಳು ಪ್ರಕಟಗೊಂಡ ಮೇಲೆ ೧೯೯೨ ರಿಂದ ಇಲಾಖೆಯ ವತಿಯಿಂದ ಜಿಲ್ಲಾ ಗ್ಯಾಸೆಟಿಯರ್ಗಳ ಪರಿಷ್ಕೃತ ಆವೃತ್ತಿಗಳನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸುವ ನೂತನ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯಡಿಯಲ್ಲಿ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ ಹಾಗೂ ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ ಸಂಪುಟಗಳನ್ನು ಇಲ್ಲಿಯವರೆಗೆ ಇಲಾಖೆಯು ಪ್ರಕಟಿಸಿರುತ್ತದೆ. ನಂತರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ ಗ್ಯಾಸೆಟಿಯರ್ ಇಲಾಖೆಯ ಸಲಹಾ ಸಮಿತಿಯ ನಿರ್ಣಯದಂತೆ ಕನ್ನಡೇತರರಿಗೆ ಹಾಗೂ ಹೊರ ರಾಜ್ಯಗಳಿಗೆ ಈ ಸಂಪುಟಗಳನ್ನು ಒದಗಿಸುವ ದೃಷ್ಟಿಯಿಂದ ಈ ಪರಿಷ್ಕೃತ ಕನ್ನಡ ಸಂಪುಟಗಳ ಆಂಗ್ಲ ಅವತರಣಿಕೆಗಳನ್ನು ಪ್ರಕಟಿಸುವ ಕಾರ್ಯಕ್ರಮವನ್ನು ಇಲಾಖೆಯು ಹಮ್ಮಿಕೊಂಡಿತು. ಈ ಯೋಜನೆಯಂತೆ ಕೊಡಗು ಹಾಗೂ ಧಾರವಾಡ ಜಿಲ್ಲಾ ಗ್ಯಾಸೆಟಿಯರ್ಗಳ ಆಂಗ್ಲ ಆವೃತ್ತಿಗಳನ್ನು (೧೯೯೩ ಮತ್ತು ೨೦೦೩ರಲ್ಲಿ) ಇಲಾಖೆಯು ಪ್ರಕಟಿಸಿದೆ.
ಗ್ಯಾಸೆಟಿಯರ್ ಸಂಪುಟಗಳೇ ಅಲ್ಲದೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಯಾತ್ರಿಕರಿಗೆ ಅತ್ಯಗತ್ಯ ಮಾಹಿತಿ ನೀಡುವ ದೃಷ್ಟಿಯಿಂದ ಇಲಾಖೆಯು ೧೯೯೫-೧೯೯೬ರಲ್ಲಿ ಕರ್ನಾಟಕ ಕೈಪಿಡಿ (ಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ) ಎಂಬ ಸಂಕ್ಷಿಪ್ತ ಸಂಪುಟವನ್ನು ಪ್ರಕಟಿಸಿರುವುದು ಇಲಾಖೆಯ ಸಾಧನೆಯಾಗಿದೆ. ಆಂಗ್ಲ ಭಾಷೆಯ ಕರ್ನಾಟಕ ಕೈಪಿಡಿಯು ಪರಿಷ್ಕೃತಗೊಂಡು ೨೦೦೦ದಲ್ಲಿ ಪುನ: ಮುದ್ರಣಗೊಂಡಿತು. ೨೦೦೪-೦೫ನೇ ಸಾಲಿನಲ್ಲಿ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಸಂಪುಟವನ್ನು ೨೦೦೫ರವರೆಗೆ ಅಂಕಿ-ಅಂಶಗಳನ್ನು ಅಳವಡಿಸಿರುವ ಆಂಗ್ಲ ಆವೃತ್ತಿಯನ್ನು ೨೦೦೫ ಮಾರ್ಚಿಯಲ್ಲಿ ಇಲಾಖೆಯು ಪ್ರಕಟಿಸಿದ್ದು ಇದರ ಬಹುತೇಕ ಪ್ರತಿಗಳು ಕೇವಲ ಎರಡು ತಿಂಗಳುಗಳ ಅವಧಿಯಲ್ಲೇ ಮಾರಾಟವಾಗಿರುವುದು ಒಂದು ಪ್ರಮುಖ ದಾಖಲೆಯಾಗಿದೆ. ಈ ಸಂಪುಟವನ್ನು ಲೋಕಸೇವಾ ಆಯೋಗವು ನಡೆಸುವ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಆಕರ ಗ್ರಂಥವನ್ನಾಗಿ ಆರಿಸಿರುವುದು ಈ ಸಂಪುಟದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪ್ರಸ್ತುತ ಇಲಾಖೆಯು ಬಹುವರ್ಣೀಯವಾಗಿ ಹೊರತಂದಿರುವ ಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ ಸಂಪುಟವು ಪರಿಷ್ಕರಣೆ ಮತ್ತು ಇಂದೀಕರಣಕ್ಕೊಳಗಾಗಿ ೨೦೦೮ರವರೆಗೆ ಅಂಕಿ-ಅಂಶಗಳನ್ನು ಹೊಂದಿರುತ್ತದೆ. ಈ ಸಂಪುಟವನ್ನು ೩,೦೦೦ ಪ್ರತಿಗಳಲ್ಲಿ ಮುದ್ರಿಸಿದ್ದು, ೧,೦೦೦ ಪ್ರತಿಗಳು ಆರ್ಟ್ ಕಾಗದದಲ್ಲೂ ಹಾಗೂ ಉಳಿದ ೨,೦೦೦ ಪ್ರತಿಗಳನ್ನು ಮ್ಯಾಪ್ಲಿಥೋ ಕಾಗದದಲ್ಲೂ ಪ್ರಕಟಿಸಲಾಗುತ್ತಿದೆ. ಕ.ಆ.ಸೇ., ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಗ್ಗದ ಬೆಲೆಯಲ್ಲಿ ಲಭ್ಯ ಮಾಡುವ ದೃಷ್ಟಿಯಿಂದ ಈ ರೀತಿ ಮುದ್ರಿಸಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ನೂರು ವರ್ಷಗಳಿಗೂ ಹಿಂದೆ ಪ್ರಕಟಗೊಂಡ ಗ್ಯಾಸೆಟಿಯರ್/ಮ್ಯಾನ್ಯುಯಲ್ಗಳನ್ನು ಆಕರತೆ ಹಾಗೂ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಯವರಿಗೆ ಲಭ್ಯ ಮಾಡುವ ದೃಷ್ಟಿಯಿಂದ ಪುನರ್ ಮುದ್ರಣ ಮಾಡುವ ಯೋಜನೆಯನ್ನು ಇಲಾಖೆಯು ಸಲಹಾ ಸಮಿತಿಯ ನಿರ್ಣಯದಂತೆ ಹಮ್ಮಿಕೊಂಡಿತು. ಈ ಯೋಜನೆಯಡಿಯಲ್ಲಿ ಈಗಾಗಲೇ ಮುಂಬಯಿ ಪ್ರಾಂತ್ಯದ ಸರ್.ಜೇಮ್ಸ್ ಕ್ಯಾಂಬೆಲ್ ಸಂಪಾದಿಸಿರುವ ಬಿಜಾಪುರ ಗ್ಯಾಸೆಟಿಯರ್ಅನ್ನು ಆಧುನಿಕ ಗಣಕ ತಂತ್ರಜ್ಞಾನವನ್ನು ಬಳಸಿ ಸ್ಕ್ಯಾನ್ ಮಾಡಿಸಿ ಯಥಾವತ್ತಾಗಿ ಮುದ್ರಿಸಿ ೨೦೦೦ದಲ್ಲಿ ಇಲಾಖೆ ಪ್ರಕಟಿಸಿದೆ. ಇದೇ ಯೋಜನೆಯಡಿಯಲ್ಲಿ ಈಗ ಇಲಾಖೆಯು ಪ್ರಕಟಿಸಿರುವ ಪುನರ್ ಮುದ್ರಿತ ಧಾರವಾಡ, ಕೆನರಾ (ಉತ್ತರ ಕನ್ನಡ) ಮತ್ತು ಸೌತ್ ಕೆನರಾ (ದಕ್ಷಿಣ ಕನ್ನಡ) ಇತ್ತೀಚೆಗೆ ಬಿಡುಗಡೆಯಾಗಿವೆ. ಇವುಗಳ ಹಳೇ ಆವೃತ್ತಿಗಳು ರಾಜ್ಯದ ಯಾವುದೇ ಗ್ರಂಥಾಲಯಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ. ಒಂದು ವೇಳೆ ಲಭ್ಯವಿದ್ದರೂ ಅವು ಶಿಥಿಲವಾದ ಸ್ಥಿತಿಯಲ್ಲಿರುತ್ತವೆ. ಈಗ ಪ್ರಕಟಿಸಿರುವ ಈ ಗ್ರಂಥವು ಸಂಶೋಧಕರಿಗೆ, ಆಸಕ್ತಿಯುತ ಓದುಗರಿಗೆ ಹಾಗೂ ವಿದ್ವಾಂಸರಿಗೆ ಉತ್ತಮ ಆಕರ (ಖeಜಿeಡಿeಟಿಛಿe voಟume) ಗ್ರಂಥವಾಗಿ ಲಭಿಸಿರುವುದರಿಂದ ಇವುಗಳ ಬಹುತೇಕ ಪ್ರತಿಗಳು ಸಹ ಶೀಘ್ರವಾಗಿ ಮಾರಾಟವಾಗಿರುತ್ತವೆ. ಕಳೆದ ಸಾಲಿನಲ್ಲಿ ಇಲಾಖೆಯು ಬೆಂಜಮಿನ್ ಲೂಯಿರೈಸ್ ಅವರು ಸಂಪಾದಿಸಿ ಪ್ರಕಟಿಸಿರುವ (೧೮೯೮) ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ನ ಮೂರು ಸಂಪುಟಗಳನ್ನು ಹಾಗೂ ಬಳ್ಳಾರಿ ಮ್ಯಾನ್ಯುಯಲ್ನ ಎರಡು ಸಂಪುಟಗಳನ್ನು (೧೮೭೮ರಲ್ಲಿ ಪ್ರಕಟಗೊಂಡ ಕೂರ್ಗ್ ಗ್ಯಾಸೆಟಿಯರ್ ಸಹ ಇದರಲ್ಲಿ ಸೇರಿದೆ) ಇಲಾಖೆಯು ಈಗಾಗಲೇ ಪುನರ್ ಮುದ್ರಿಸಿ ಲೋಕಾರ್ಪಣೆ ಮಾಡಲಾಗಿದೆ.
ಇಲಾಖೆಯ ಗಣಕೀಕರಣದ ಮೈಲಿಗಲ್ಲುಗಳು
ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳು ಹಮ್ಮಿಕೊಂಡ ಇ ಆಡಳಿತ (ವಿದ್ಯುನ್ಮಾನ ಆಡಳಿತ) ಕಾರ್ಯಕ್ರಮಕ್ಕೆ ಕ್ಷಿಪ್ರವಾಗಿ ಸ್ಪಂದಿಸುವ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸನ್ಮಾನ್ಯ ಸಚಿವರು ಹಾಗೂ ಕಾರ್ಯದರ್ಶಿಗಳ ದೂರದರ್ಶಿತ್ವದ ಮಾರ್ಗದರ್ಶನದ ಮೇಲೆ ಇಲಾಖೆಯು ಗಣಕೀಕರಣವನ್ನು ಯೋಜನೇತರ ಕಾರ್ಯಕ್ರಮದಡಿಯಲ್ಲಿ ೨೦೦೨-೨೦೦೩ರಲ್ಲಿ ಆರಂಭಿಸಿತು. ಈ ಯೋಜನೆಯು ಕಾರ್ಯರೂಪಕ್ಕೆ ಬರುವ ವೇಳೆಗೆ ಆಗಲೇ ಇಲಾಖೆಯು ೧೮೮೪ರಲ್ಲಿ ಮುಂಬೈ ಪ್ರಾಂತ್ಯವು ಸರ್ ಜೇಮ್ಸ್ ಕ್ಯಾಂಬೆಲ್ ಅವರು ಸಂಪಾದಿಸಿದ್ದ ಶಿಥಿಲವಾಗಿದ್ದ ಬಿಜಾಪುರ ಗ್ಯಾಸೆಟಿಯರ್ ಸಂಪುಟವನ್ನು (೨೦೦೨) ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಉಪಯೋಗಿಸಿ (ವ್ಯಾಸ ಎಂಬ ಸಾಫ್ಟ್ವೇರ್ ಟೂಲ್ ಮುಖೇನ ಸ್ಕ್ಯಾನ್ ಮಾಡಿ) ಪುನರ್ ಮುದ್ರಿಸಲಾಗಿತ್ತು. ಇದೇ ಪ್ರಥಮಬಾರಿಗೆ ಈ ಸಂಪುಟದ ಪುಟಗಳನ್ನು ಸಿ.ಡಿ ಸ್ವರೂಪದಲ್ಲಿ ಸಂಕ್ಷಿಸಲಾಯಿತು. ಒಂದು ದೃಷ್ಟಿಯಲ್ಲಿ ಇಲಾಖೆ ಪ್ರಕಟಿಸಿದ ಪ್ರಥಮ ಇ ಸಂಪುಟವು ಬಿಜಾಪುರ (೧೮೮೪) ಗ್ಯಾಸೆಟಿಯರ್ ಆಗಿದೆ. ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟವಾಗಿದ್ದ ಗ್ಯಾಸೆಟಿಯರ್ ಸಂಪುಟಗಳು ಹಾಗೂ ೧೯೫೮ರ ನಂತರ ಪ್ರಕಟಗೊಂಡಿದ್ದ ಸಂಪುಟಗಳನ್ನು ಆಧುನಿಕ ತಂತ್ರಾಂಶಗಳ ಮೂಲಕ ಸ್ಕ್ಯಾನ್ ಮಾಡಿಸುವ ಗಣಕೀಕರಣ ಕಾರ್ಯಕ್ರಮವು ಇಲಾಖೆಗೆ ಪ್ರಮುಖ ಸವಾಲಾಗಿತ್ತು. ಈ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯದ ಮಾಹಿತಿ ತಂತ್ರಜ್ಞಾನ ಪರಿಣತರ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನೊಳಗೊಂಡ ಒಂದು ಗಣಕೀಕರಣ ತಾಂತ್ರಿಕ ಸಲಹಾ ಸಮಿತಿಯು ನೀಡಿದ ಅಮೂಲ್ಯ ಸಲಹೆಗಳಿಂದ ಇಲ್ಲಿಯವರೆಗೆ ಇಲಾಖೆಯು ಪ್ರಕಟಿಸಿದ್ದ ಎಲ್ಲಾ ಸಂಪುಟಗಳನ್ನು ಸ್ಕ್ಯಾನ್ ಮಾಡಿಸಿ ಸಿ.ಡಿ.ಗಳಲ್ಲಿ ಸೆರೆಹಿಡಿದಿಡಲು ಸಾಧ್ಯವಾಯಿತು. ಸುಮಾರು ೬೦,೦೦೦ ಪುಟಗಳ ಮಾಹಿತಿಯುಳ್ಳ ೯೧ ಸಂಪುಟಗಳನ್ನು ಕೇವಲ ೯ ಸಿ.ಡಿ.ಗಳಲ್ಲಿ ಅಧಿಕ ತಂತ್ರಾಂಶದಿಂದ ಸ್ಕ್ಯಾನ್ ಮಾಡಿ ಅಳವಡಿಸಲಾಗಿರುವುದು ಅತ್ಯಂತ ಪರಿಶ್ರಮದ ಸಾಧನೆಯಾಗಿದೆ. ಈ ಸಿ.ಡಿ.ಗಳಲ್ಲಿ ಹುಡುಕಾಟದ (ಸರ್ಚ್) ವಿಶೇಷ ಸೌಲಭ್ಯವನ್ನು ಹೊಂದಿದ್ದು, ಯಾವುದೇ ವಿಷಯದ ಬಗ್ಗೆ ಅಥವಾ ಮಾಹಿತಿಯ ಬಗ್ಗೆ ಪ್ರಾಧಾನ್ಯತೆಯಿಂದ ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಜಟಿಲ ತರ್ಕದೊಂದಿಗೆ ಹುಡುಕಬಲ್ಲ ವಿಶೇಷ ಸೌಲಭ್ಯವನ್ನು ಹೊಂದಿರುತ್ತದೆ. ಈ ಸಿ.ಡಿ. ಆವೃತ್ತಿಗಳನ್ನು ಪ್ರಕಟಿಸುವುದರೊಂದಿಗೆ ಇಲಾಖೆಯು ಇಲ್ಲಿಯವರೆಗೆ ಲಭ್ಯವಿರುವ ಹಾಗೂ ಪ್ರಕಟವಾಗಿರುವ ಆಂಗ್ಲ ಭಾಷಾ ಗ್ಯಾಸೆಟಿಯರ್ಗಳ ಸ್ಕ್ಯಾನಿಂಗ್ ಕಾರ್ಯವನ್ನು ಮುಗಿಸಿ ಒಂದು ಮೈಲಿಗಲ್ಲನ್ನು ದಾಟಿರುತ್ತದೆ. ಅಲ್ಲದೇ ಈ ಸಿ.ಡಿ.ಗಳನ್ನು ಮತ್ತು ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ನ ಪ್ರಥಮ ಕನ್ನಡ ಸಿ.ಡಿ.ಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಸರಣಗೊಳಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇಲಾಖೆಯು ಪ್ರಕಟಿಸಿದ ೯ ಸಿ.ಡಿ.ಗಳ ನೂರು ಪ್ರತಿಗಳು ಮಾರಾಟವಾಗಿದ್ದು, ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಒಂಭತ್ತು ಸಿ.ಡಿ.ಗಳ ನೂರು ಸೆಟ್ಗಳನ್ನು ಪುನ: ತಯಾರಿಸಿದ್ದು, ತಕ್ಷಣದಿಂದಲೇ ಹಿಂದೆ ನಿಗಧಿಪಡಿಸಿರುವ ೧,೦೦೦ ರೂ.ಗಳಿಗೆ ಒಂದು ಸೆಟ್ನಂತೆ ಸಂಶೋಧನಾ ಆಸಕ್ತರಿಗೆ ಖರೀದಿಸಲು ಅನುವಾಗುವಂತೆ ಬಿಡುಗಡೆ ಮಾಡಿರುತ್ತದೆ. ಇದೀಗ ಲೋಕಾರ್ಪಣೆಗೊಳ್ಳುತ್ತಿರುವ ಮಂಡ್ಯ, ವಿಜಾಪುರ, ದಕ್ಷಿಣ ಕನ್ನಡ ಮತ್ತು ಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ ಸಂಪುಟಗಳನ್ನು ಸಧ್ಯದಲ್ಲೇ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಸರಣಗೊಳಿಸಲಾಗುವುದು.
ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಮುಂದುವರೆದ ಯೋಜನೆಯಡಿ ಚಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್ ಮತ್ತು ತುಮಕೂರು ಜಿಲ್ಲಾ ಪರಿಷ್ಕೃತ ಕನ್ನಡ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ನಂತರ ೧೯೯೭ರಲ್ಲಿ ಸೃಜಿಸಲ್ಪಟ್ಟ ದಾವಣಗೆರೆ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಣೆಯನ್ನೂ ಆರಂಭಿಸಲಿದೆ. ಇದಲ್ಲದೇ ಕೋಲಾರ ಮತ್ತು ದಕ್ಷಿಣ ಕನ್ನಡ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್ಗಳ ಕನ್ನಡ ಅವತರಿಣಿಕೆಯನ್ನೂ ಸಂಪಾದಿಸಿ ಪ್ರಕಟಿಸಲು ಉದ್ದೇಶಿಸಿದೆ. ಇದಲ್ಲದೇ ೧೯೮೨-೮೩ ರಲ್ಲಿ ಪ್ರಕಟಗೊಂಡಿದ್ದ ರಾಜ್ಯ ಗ್ಯಾಸೆಟಿಯರ್ ಎರಡು ಭಾಗಗಳನ್ನು ಪರಿಷ್ಕರಿಸಿ ಹಾಗೂ ಇಂದೀಕರಿಸಿ ಪ್ರಕಟಿಸಲು ಯೋಜಿಸಿದೆ. ಹಾಗೆಯೇ ಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ ಬಹುವರ್ಣೀಯ ಸಂಪುಟದ ಕನ್ನಡ ಅವತರಿಣಿಕೆಯನ್ನೂ ಸಂಪಾದಿಸಿ ಪ್ರಕಟಿಸಲು ತೊಡಗಿರುತ್ತದೆ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಬಗ್ಗೆ ಕಿರು ಪರಿಚಯ
ಗ್ಯಾಸೆಟಿಯರ್ಗಳನ್ನು ಸರ್ಕಾರವು ಸಾಪ್ತಾಹಿಕವಾಗಿ ಪ್ರಕಟಿಸುವ ರಾಜ್ಯ ಗೆಜೆಟ್ ಗಳೊಂದಿಗೆ ಹೋಲಿಸಿ ತಪ್ಪು ಮಾಡುವುದು ವಾಡಿಕೆಯಾಗಿದೆ. ಆದರೆ, ಗೆಜೆಟ್ಗಳಿಗೂ ಗ್ಯಾಸೆಟಿಯರ್ಗಳಿಗೂ ಉತ್ತರ ಧೃವ ಹಾಗೂ ದಕ್ಷಿಣ ಧೃವಗಳಿಗಿರುವಷ್ಟೇ ವ್ಯತ್ಯಾಸವಿದೆ. ಆಂಗ್ಲ ಭಾಷೆಯ ಗಾಜ ಎಂಬ ಪದವು ಗ್ರೀಕ್ ಮೂಲದ್ದಾಗಿದ್ದು, ವಾರ್ತೆಗಳ ಗಣಿ ಎಂಬ ಅರ್ಥವಿದೆ. ಒಂದು ಜಿಲ್ಲೆಯನ್ನು ವಿವಿಧ ಆಯಾಮಗಳಲ್ಲಿ ಪರಿಚಯಿಸುವುದು ನಂತರ ಗ್ಯಾಸೆಟಿಯರ್ ಎಂಬ ಸಂಪುಟವೆಂದು ಕರೆಯಲಾಯಿತು. ಭಾರತದಲ್ಲಿ ಬ್ರಿಟೀಷರ ಆಡಳಿತಾವಧಿಯಲ್ಲಿ ಜಿಲ್ಲಾ ಪರಿಚಯ ಗ್ರಂಥಗಳಿಗೆ ಮ್ಯಾನ್ಯುಯಲ್ ಗಳೆಂದು ಕರೆಯುವುದು ರೂಢಿಗೆ ಬಂದಿತು. ಕರ್ನಾಟಕವು ಗ್ಯಾಸೆಟಿಯರ್ಗಳ ಪ್ರಕಟಣೆಯಲ್ಲಿ ಅತ್ಯಂತ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಬ್ರಿಟೀಷ್ ಸರ್ಕಾರವು ಆಡಳಿತವನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡಾಗ ಅನೇಕ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಭಾರತೀಯ ಪ್ರಾಂತ್ಯ ಹಾಗೂ ಜಿಲ್ಲೆಗಳಿಗೆ ಆಂಗ್ಲ ಹಾಗೂ ಯೂರೋಪಿಯನ್ ಅಧಿಕಾರಿಗಳನ್ನು ನೇಮಕ ಮಾಡಬೇಕಾಯಿತು. ೧೮೬೭ರ ವೇಳೆಗಾಗಲೇ ಬ್ರಿಟನ್ನಲ್ಲಿ ಆಡಳಿತಗಾರರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಗ್ಯಾಸೆಟಿಯರ್ ಅಥವಾ ಮ್ಯಾನ್ಯುಯಲ್ಗಳನ್ನು ತಯಾರಿಸುವ ಸಂಪ್ರದಾಯವು ಆರಂಭವಾಗಿತ್ತು. ಇದೇ ಹಿನ್ನೆಲೆಯಲ್ಲಿ ಭಾರತದಲ್ಲೂ ತಮ್ಮ ಆಡಳಿತವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಆಡಳಿತಗಾರರಿಗೆ ತಾವು ಆಡಳಿತ ಮಾಡಬೇಕಾದ ಪ್ರಾಂತ್ಯ/ಜಿಲ್ಲೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಮ್ಯಾನ್ಯುಯಲ್ ಅಥವಾ ಗ್ಯಾಸೆಟಿಯರ್ಗಳನ್ನು ಸಂಕಲಿಸುವ ಕಾರ್ಯವನ್ನು ಆರಂಭಿಸಲಾಯಿತು.
ಗ್ಯಾಸೆಟಿಯರ್ ಸಂಪ್ರದಾಯ
ಮೈಸೂರು ಸಂಸ್ಥಾನದಲ್ಲಿಯೂ ಗ್ಯಾಸೆಟಿಯರ್ ಸಂಪ್ರದಾಯವು ಈ ಹಿನ್ನೆಲೆಯಲ್ಲಿ ಆರಂಭವಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ನಿರ್ದೇಶಕರಾಗಿದ್ದ ಬೆಂಜಮಿನ್ ಲೂಯಿಸ್ ರೈಸ್ ಅವರು ಬೆಂಗಳೂರಿನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಹೊಂದಿದ್ದರು. ಅವರು ಮೈಸೂರು ಮತ್ತು ಕೂರ್ಗ್ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ೧೮೭೭-೭೮ರಲ್ಲಿ ಮೂರು ಗ್ಯಾಸೆಟಿಯರ್ ಸಂಪುಟಗಳನ್ನು ಪ್ರಥಮ ಬಾರಿಗೆ ಪ್ರಕಟಿಸಿದ್ದು ಆಗ ದೇಶದಲ್ಲೇ ಅತ್ಯುತ್ತಮ ಬೌದ್ಧಿಕ ಸಾಧನೆಯೆಂದು ಪರಿಗಣಿಸಲ್ಪಟ್ಟಿತ್ತು. ನಂತರ ರಾಷ್ಟ್ರಮಟ್ಟದಲ್ಲಿ ಇಂಪೀರಿಯಲ್ ಗ್ಯಾಸೆಟಿಯರ್ ಸಂಪುಟಗಳನ್ನು ೧೮೮೧ರಲ್ಲಿ ಸಂಪಾದಿಸಿದ ಸರ್ ವಿಲಿಯಮ್ ವಿಲ್ಸನ್ ಹಂಟರ್ರವರು ಬಿ.ಎಲ್.ರೈಸ್ ಅವರ ಪ್ರಥಮ ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ ಸಂಪುಟಗಳ ಕಾರ್ಯವನ್ನು ತಮ್ಮ ಮುನ್ನುಡಿಯಲ್ಲಿ ಅತ್ಯುತ್ತಮ ಹಾಗೂ ಪರಿಪಕ್ವಯುತ ಸಂಪಾದನಾ ಗ್ರಂಥಗಳೆಂದು ಶ್ಲಾಘಿಸಿರುತ್ತಾರೆ. ನಂತರ ೧೮೯೭ರಲ್ಲಿ ಬಿ.ಎಲ್.ರೈಸ್ ಅವರೇ ಮೈಸೂರು ಗ್ಯಾಸೆಟಿಯರ್ ಸಂಪುಟಗಳನ್ನು ಮೂರು ಸಂಪುಟಗಳಲ್ಲಿ ಪುನ: ಪರಿಷ್ಕರಿಸಿ ಪ್ರಕಟಿಸಿದರು. ಬಿ.ಎಲ್.ರೈಸ್ರವರು ತಮ್ಮ ೧೮೭೭ರ ಸಂಪುಟದ ಮುನ್ನುಡಿಯಲ್ಲಿ ಎಚ್.ವೆಲ್ಲೆಸ್ಲಿ ಮತ್ತು ಕೃಷ್ಣ ಅಯ್ಯಂಗಾರ್ ಎಂಬ ಅಧಿಕಾರಿಗಳು ೧೮೬೯ರಲ್ಲೇ ಮೈಸೂರು ಮತ್ತು ಕೋಲಾರ ಜಿಲ್ಲೆಗೆ ಸಂಬಂಧಿಸಿದ ಗ್ಯಾಸೆಟಿಯರ್ ಸಂಪುಟಗಳನ್ನು ಕ್ರಮವಾಗಿ ಸಿದ್ಧಗೊಳಿಸಿ ಹಸ್ತಪ್ರತಿಗಳನ್ನು ತಯಾರಿಸಲಾಗಿತ್ತೆಂದು ತಿಳಿಸಿರುತ್ತಾರೆ. ಆದರೆ ನಮಗೆ ಈ ಸಂಪುಟಗಳು ಇಲ್ಲಿಯವರೆಗೂ ಲಭ್ಯವಿಲ್ಲದಾಗಿವೆ.
ಉತ್ತರ ಕರ್ನಾಟಕದ ಭಾಗವು ಮುಂಬೈ ಪ್ರೆಸಿಡೆನ್ಸಿಯ ಆಡಳಿತದಲ್ಲಿದ್ದು, ೧೮೮೩ ರಿಂದ ೧೮೮೪ರ ನಡುವೆ ಸರ್.ಜೇಮ್ಸ್ಕ್ಯಾಂಬೆಲ್ ಅವರು ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಕೆನರಾ (ಉತ್ತರ ಕನ್ನಡ) ಜಿಲ್ಲೆಗಳ ಗ್ಯಾಸೆಟಿಯರ್ ಸಂಪುಟಗಳನ್ನು ಪ್ರಕಟಿಸಿದರು. ಮದರಾಸ್ ಪ್ರಾಂತ್ಯದಲ್ಲಿದ್ದ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯ ಮ್ಯಾನ್ಯುಯಲ್ ಸಂಪುಟವನ್ನು ಎರಡು ಭಾಗಗಳಲ್ಲಿ (೧೮೯೪-೧೮೯೫) ಜಾನ್ ಸ್ಟರ್ರೋಕ್ ಮತ್ತು ಹೆರಾಲ್ಡ್ ಎ.ಸ್ಟೂಯರ್ಟ್ ಅವರ ಸಂಪಾದಕತ್ವದಲ್ಲಿ ಮದರಾಸ್ ಪ್ರಾಂತೀಯ ಸರ್ಕಾರವು ಪ್ರಕಟಿಸಿತು. ಈ ಎಲ್ಲಾ ಗ್ಯಾಸೆಟಿಯರ್ಗಳಿಗೆ ೧೯೦೦-೧೯೨೪ರ ಅವಧಿಯಲ್ಲಿ ಹಲವಾರು ಪುರವಣಿಗಳು ಬಂದವು. ಇದೇ ರೀತಿ ಬಳ್ಳಾರಿ ಜಿಲ್ಲಾ ಮ್ಯಾನ್ಯುಯಲ್ ಸಂಪುಟವನ್ನು ಜಾನ್ ಕೆಲ್ಸಾಲ್ ೧೮೭೨ರಲ್ಲಿ ಪ್ರಥಮ ಬಾರಿಗೆ ಪ್ರಕಟಿಸಿದ್ದು, ಅದನ್ನು ಪುನ: ಪರಿಷ್ಕರಿಸಿ ವಿಲಿಯಮ್ ಫ್ರಾನ್ಸಿಸ್ರವರು ೧೯೦೪ರಲ್ಲಿ ಪ್ರಕಟಿಸಿದರು. ಅಂತೆಯೇ ಹೈದರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆಯೂ ಗ್ಯಾಸೆಟಿಯರ್ಗಳು ಇಪ್ಪತ್ತನೇ ಶತಮಾನದ ಆರಂಭದಿಂದಲೂ ಬಂದಿರುವ ಬಗ್ಗೆ ಮಾಹಿತಿಯಿದ್ದು, ೧೯೩೧-೩೬ನೇ ಸಾಲಿಗೆ ಸಂಬಂಧಿಸಿದಂತೆ ಬೀದರ್, ಗುಲ್ಬರ್ಗಾ ಹಾಗೂ ರಾಯಚೂರುಗಳ ಗ್ಯಾಸೆಟಿಯರ್ಗಳ ಮನಾರ್ ಹುಸೇನ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದು, ಇಲಾಖೆಯಲ್ಲಿ ಲಭ್ಯವಿದೆ ಅಲ್ಲದೇ, ೧೯೨೦-೩೦ನೇ ಸಾಲಿನಲ್ಲಿ ಗ್ಯಾಸೆಟಿಯರ್ನ ಒಂದು ಅಂಗವಾಗಿ ಆರ್ಥಿಕ ಪರಾಮಶೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ಗ್ರಂಥ ಎಸ್.ಕೇಶವ ಅಯ್ಯಂಗಾರ್ ಅವರಿಂದ ಸಂಪಾದಿತವಾಗಿರುವುದೂ ಸಹ ಲಭ್ಯವಿದೆ. ಇಲಾಖೆಯು ಇತ್ತೀಚೆಗೆ ಈ ಸಂಪುಟಗಳನ್ನು ಆಂಧ್ರಪ್ರದೇಶ ಪತ್ರಾಗಾರ ಇಲಾಖೆಯವರಿಂದ ವರ್ಗಾವಣೆ ಆಧಾರದ ಮೇಲೆ ಪಡೆದಿದೆ.
ರಾವ್ ಬಹದ್ದೂರ್ ಸಿ.ಹಯವದನರಾವ್ ಅವರ ಅತ್ಯಂತ ಪರಿಶ್ರಮದ ವ್ಯಾಪಕ ಸರ್ವೇಕ್ಷಣೆಯ ಫಲವಾಗಿ ಅಂದಿನ ಮೈಸೂರು ರಾಜ್ಯದ ಗ್ಯಾಸೆಟಿಯರಿನ ಆರು ಸಂಪುಟಗಳನ್ನು ಪೂರ್ಣವಾಗಿ ೧೯೩೯ರ ವೇಳೆಗೆ ಪ್ರಾಂತೀಯ ಸರ್ಕಾರವು ಹೊರತಂದಿತು. ಈ ಪ್ರಯತ್ನವು ಮೈಸೂರು ರಾಜ್ಯದಲ್ಲಿ ಗ್ಯಾಸೆಟಿಯರ್ ಇಲಾಖೆಯ ಸ್ಥಾಪನೆಗೆ ಅಂಕುರವಾಯಿತೆಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಸ್ಥಾಪನೆಕೇಂದ್ರ ಸರ್ಕಾರವು ೧೯೫೫ರಲ್ಲಿ ನೇಮಿಸಿದ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಗ್ಯಾಸೆಟಿಯರಿನ ಪರಿಕಲ್ಪನೆಯನ್ವಯ ೧೯೫೮ರಲ್ಲಿ ಈ ಇಲಾಖೆಯು ಉಗಮಗೊಂಡಿತು. ಕೇಂದ್ರ ಗ್ಯಾಸೆಟಿಯರ್ ಯೋಜನೆಯ ಮೇರೆಗೆ, ಪ್ರತೀ ರಾಜ್ಯವೂ ಗ್ಯಾಸೆಟಿಯರುಗಳ ಪ್ರಕಟಣಾ ಕಾರ್ಯ ಕೈಗೊಳ್ಳಬೇಕೆಂಬ ಕೇಂದ್ರ ಸರಕಾರದ ಆದೇಶದಂತೆ ಎಲ್ಲಾ ರಾಜ್ಯಗಳೂ ಈ ಕಾರ್ಯವನ್ನು ಪ್ರಾರಂಭಿಸಿದವು. ಇದರ ಸಲುವಾಗಿ ಅವಶ್ಯವಾದ ಕಚೇರಿ, ಸಿಬ್ಬಂದಿ ಮುಂತಾದವುಗಳನ್ನು ತಂತಮ್ಮ ರಾಜ್ಯಗಳಲ್ಲಿ ಒದಗಿಸಿಕೊಂಡವು.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ತಾತ್ಕಾಲಿಕ ಆಧಾರದ ಮೇಲೆ ೧೯೫೮ರಲ್ಲಿ ಅಸ್ತಿತ್ವಕ್ಕೆ ಬಂದು ಭಾರತದ ಗ್ಯಾಸೆಟಿಯರ್ ಘಟಕವು ನಿರೂಪಿಸಿದ ಗ್ಯಾಸೆಟಿಯರ್ ಸಂಕಲನಾ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಜಿಲ್ಲಾ ಗ್ಯಾಸೆಟಿಯರ್ಗಳನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿತು. ಈ ಯೋಜನೆಯನ್ವಯ ಗ್ಯಾಸೆಟಿಯರ್ ಇಲಾಖೆಯು ಅಂದಿನ ಎಲ್ಲಾ ೨೦ ಜಿಲ್ಲೆಗಳ ಗ್ಯಾಸೆಟಿಯರ್ ಸಂಪುಟಗಳನ್ನು ೧೯೯೦ರ ವೇಳೆಗೆ ಆಂಗ್ಲ ಭಾಷೆಯಲ್ಲಿ ಪ್ರಕಟಗೊಳಿಸುವಲ್ಲಿ ಯಶಸ್ವಿಯಾಯಿತು. ಇದಲ್ಲದೆ ೧೯೮೨-೧೯೮೪ರ ನಡುವೆ ಪ್ರಥಮ ಬಾರಿಗೆ ರಾಜ್ಯ ಗ್ಯಾಸೆಟಿಯರ್ನ ಆಂಗ್ಲ ಸಂಪುಟಗಳನ್ನು (ಎರಡು ಭಾಗಗಳಲ್ಲಿ) ಪ್ರಕಟಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕವು ಪಾತ್ರವಾಯಿತು. ಹತ್ತು ವರ್ಷಗಳ ನಂತರ ಸದರಿ ರಾಜ್ಯ ಗ್ಯಾಸೆಟಿಯರ್ಗೆ ೧೯೯೩ರಲ್ಲಿ ದಶವಾರ್ಷಿಕ ಪುರಣಿಯನ್ನೂ ಪ್ರಕಟಿಸಲಾಯಿತು. ಅಲ್ಲದೆ ರಾಜ್ಯ ಗ್ಯಾಸೆಟಿಯರ್ನ ಕನ್ನಡ ಅನುವಾದ ೧೯೮೪-೮೬ರ ಅವಧಿಯಲ್ಲಿ ಮೂರು ಸಂಪುಟಗಳಲ್ಲೂ ೧೯೯೬ರಲ್ಲಿ ಅದರ ದಶವಾರ್ಷಿಕ ಪುರವಣಿಯನ್ನು ಪ್ರಕಟಿಸಲಾಯಿತು. ಈ ಮಾಲಿಕೆಗಳು ಪ್ರಕಟಗೊಂಡ ಮೇಲೆ ೧೯೯೨ ರಿಂದ ಇಲಾಖೆಯ ವತಿಯಿಂದ ಜಿಲ್ಲಾ ಗ್ಯಾಸೆಟಿಯರ್ಗಳ ಪರಿಷ್ಕೃತ ಆವೃತ್ತಿಗಳನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸುವ ನೂತನ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯಡಿಯಲ್ಲಿ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ ಹಾಗೂ ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ ಸಂಪುಟಗಳನ್ನು ಇಲ್ಲಿಯವರೆಗೆ ಇಲಾಖೆಯು ಪ್ರಕಟಿಸಿರುತ್ತದೆ. ನಂತರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ ಗ್ಯಾಸೆಟಿಯರ್ ಇಲಾಖೆಯ ಸಲಹಾ ಸಮಿತಿಯ ನಿರ್ಣಯದಂತೆ ಕನ್ನಡೇತರರಿಗೆ ಹಾಗೂ ಹೊರ ರಾಜ್ಯಗಳಿಗೆ ಈ ಸಂಪುಟಗಳನ್ನು ಒದಗಿಸುವ ದೃಷ್ಟಿಯಿಂದ ಈ ಪರಿಷ್ಕೃತ ಕನ್ನಡ ಸಂಪುಟಗಳ ಆಂಗ್ಲ ಅವತರಣಿಕೆಗಳನ್ನು ಪ್ರಕಟಿಸುವ ಕಾರ್ಯಕ್ರಮವನ್ನು ಇಲಾಖೆಯು ಹಮ್ಮಿಕೊಂಡಿತು. ಈ ಯೋಜನೆಯಂತೆ ಕೊಡಗು ಹಾಗೂ ಧಾರವಾಡ ಜಿಲ್ಲಾ ಗ್ಯಾಸೆಟಿಯರ್ಗಳ ಆಂಗ್ಲ ಆವೃತ್ತಿಗಳನ್ನು (೧೯೯೩ ಮತ್ತು ೨೦೦೩ರಲ್ಲಿ) ಇಲಾಖೆಯು ಪ್ರಕಟಿಸಿದೆ.
ಗ್ಯಾಸೆಟಿಯರ್ ಸಂಪುಟಗಳೇ ಅಲ್ಲದೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಯಾತ್ರಿಕರಿಗೆ ಅತ್ಯಗತ್ಯ ಮಾಹಿತಿ ನೀಡುವ ದೃಷ್ಟಿಯಿಂದ ಇಲಾಖೆಯು ೧೯೯೫-೧೯೯೬ರಲ್ಲಿ ಕರ್ನಾಟಕ ಕೈಪಿಡಿ ಎಂಬ ಸಂಕ್ಷಿಪ್ತ ಸಂಪುಟವನ್ನು ಪ್ರಕಟಿಸಿರುವುದು ಇಲಾಖೆಯ ಸಾಧನೆಯಾಗಿದೆ. ಆಂಗ್ಲ ಭಾಷೆಯ ಕರ್ನಾಟಕ ಕೈಪಿಡಿಯು ಪರಿಷ್ಕೃತಗೊಂಡು ೨೦೦೦ದಲ್ಲಿ ಪುನ: ಮುದ್ರಣಗೊಂಡಿತು. ೨೦೦೪-೦೫ನೇ ಸಾಲಿನಲ್ಲಿ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಸಂಪುಟವನ್ನು ೨೦೦೫ರವರೆಗೆ ಅಂಕಿ-ಅಂಶಗಳನ್ನು ಅಳವಡಿಸಿರುವ ಆಂಗ್ಲ ಆವೃತ್ತಿಯನ್ನು ೨೦೦೫ ಮಾರ್ಚಿಯಲ್ಲಿ ಇಲಾಖೆಯು ಪ್ರಕಟಿಸಿದ್ದು ಇದರ ಬಹುತೇಕ ಪ್ರತಿಗಳು ಕೇವಲ ಎರಡು ತಿಂಗಳುಗಳ ಅವಧಿಯಲ್ಲೇ ಮಾರಾಟವಾಗಿರುವುದು ಒಂದು ಪ್ರಮುಖ ದಾಖಲೆಯಾಗಿದೆ. ಈ ಸಂಪುಟವನ್ನು ಲೋಕಸೇವಾ ಆಯೋಗವು ನಡೆಸುವ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಆಕರ ಗ್ರಂಥವನ್ನಾಗಿ ಆರಿಸಿರುವುದು ಈ ಸಂಪುಟದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪ್ರಸ್ತುತ ಇಲಾಖೆಯು ಬಹುವರ್ಣೀಯವಾಗಿ ಹೊರತಂದಿರುವ ಂಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಸಂಪುಟವು ಪರಿಷ್ಕರಣೆ ಮತ್ತು ಇಂದೀಕರಣಕ್ಕೊಳಗಾಗಿ ೨೦೦೮ರವರೆಗೆ ಅಂಕಿ-ಅಂಶಗಳನ್ನು ಹೊಂದಿರುತ್ತದೆ. ಈ ಸಂಪುಟವನ್ನು ೩,೦೦೦ ಪ್ರತಿಗಳಲ್ಲಿ ಮುದ್ರಿಸಿದ್ದು, ೧,೦೦೦ ಪ್ರತಿಗಳು ಆರ್ಟ್ ಕಾಗದದಲ್ಲೂ ಹಾಗೂ ಉಳಿದ ೨,೦೦೦ ಪ್ರತಿಗಳನ್ನು ಮ್ಯಾಪ್ಲಿಥೋ ಕಾಗದದಲ್ಲೂ ಪ್ರಕಟಿಸಲಾಗುತ್ತಿದೆ. ಕ.ಆ.ಸೇ., ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಗ್ಗದ ಬೆಲೆಯಲ್ಲಿ ಲಭ್ಯ ಮಾಡುವ ದೃಷ್ಟಿಯಿಂದ ಈ ರೀತಿ ಮುದ್ರಿಸಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ನೂರು ವರ್ಷಗಳಿಗೂ ಹಿಂದೆ ಪ್ರಕಟಗೊಂಡ ಗ್ಯಾಸೆಟಿಯರ್/ಮ್ಯಾನ್ಯುಯಲ್ಗಳನ್ನು ಆಕರತೆ ಹಾಗೂ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಯವರಿಗೆ ಲಭ್ಯ ಮಾಡುವ ದೃಷ್ಟಿಯಿಂದ ಪುನರ್ ಮುದ್ರಣ ಮಾಡುವ ಯೋಜನೆಯನ್ನು ಇಲಾಖೆಯು ಸಲಹಾ ಸಮಿತಿಯ ನಿರ್ಣಯದಂತೆ ಹಮ್ಮಿಕೊಂಡಿತು. ಈ ಯೋಜನೆಯಡಿಯಲ್ಲಿ ಈಗಾಗಲೇ ಮುಂಬಯಿ ಪ್ರಾಂತ್ಯದ ಸರ್.ಜೇಮ್ಸ್ ಕ್ಯಾಂಬೆಲ್ ಸಂಪಾದಿಸಿರುವ ಬಿಜಾಪುರ ಗ್ಯಾಸೆಟಿಯರ್ಅನ್ನು ಆಧುನಿಕ ಗಣಕ ತಂತ್ರಜ್ಞಾನವನ್ನು ಬಳಸಿ ಸ್ಕ್ಯಾನ್ ಮಾಡಿಸಿ ಯಥಾವತ್ತಾಗಿ ಮುದ್ರಿಸಿ ೨೦೦೦ದಲ್ಲಿ ಇಲಾಖೆ ಪ್ರಕಟಿಸಿದೆ. ಇದೇ ಯೋಜನೆಯಡಿಯಲ್ಲಿ ಈಗ ಇಲಾಖೆಯು ಪ್ರಕಟಿಸಿರುವ ಪುನರ್ ಮುದ್ರಿತ ಧಾರವಾಡ, ಕೆನರಾ (ಉತ್ತರ ಕನ್ನಡ) ಮತ್ತು ಸೌತ್ ಕೆನರಾ (ದಕ್ಷಿಣ ಕನ್ನಡ) ಇತ್ತೀಚೆಗೆ ಬಿಡುಗಡೆಯಾಗಿವೆ. ಇವುಗಳ ಹಳೇ ಆವೃತ್ತಿಗಳು ರಾಜ್ಯದ ಯಾವುದೇ ಗ್ರಂಥಾಲಯಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ. ಒಂದು ವೇಳೆ ಲಭ್ಯವಿದ್ದರೂ ಅವು ಶಿಥಿಲವಾದ ಸ್ಥಿತಿಯಲ್ಲಿರುತ್ತವೆ. ಈಗ ಪ್ರಕಟಿಸಿರುವ ಈ ಗ್ರಂಥವು ಸಂಶೋಧಕರಿಗೆ, ಆಸಕ್ತಿಯುತ ಓದುಗರಿಗೆ ಹಾಗೂ ವಿದ್ವಾಂಸರಿಗೆ ಉತ್ತಮ ಆಕರ ಗ್ರಂಥವಾಗಿ ಲಭಿಸಿರುವುದರಿಂದ ಇವುಗಳ ಬಹುತೇಕ ಪ್ರತಿಗಳು ಸಹ ಶೀಘ್ರವಾಗಿ ಮಾರಾಟವಾಗಿರುತ್ತವೆ. ಕಳೆದ ಸಾಲಿನಲ್ಲಿ ಇಲಾಖೆಯು ಬೆಂಜಮಿನ್ ಲೂಯಿರೈಸ್ ಅವರು ಸಂಪಾದಿಸಿ ಪ್ರಕಟಿಸಿರುವ (೧೮೯೮) ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ನ ಮೂರು ಸಂಪುಟಗಳನ್ನು ಹಾಗೂ ಬಳ್ಳಾರಿ ಮ್ಯಾನ್ಯುಯಲ್ನ ಎರಡು ಸಂಪುಟಗಳನ್ನು (೧೮೭೮ರಲ್ಲಿ ಪ್ರಕಟಗೊಂಡ ಕೂರ್ಗ್ ಗ್ಯಾಸೆಟಿಯರ್ ಸಹ ಇದರಲ್ಲಿ ಸೇರಿದೆ) ಇಲಾಖೆಯು ಈಗಾಗಲೇ ಪುನರ್ ಮುದ್ರಿಸಿ ಲೋಕಾರ್ಪಣೆ ಮಾಡಲಾಗಿದೆ.
ಇಲಾಖೆಯ ಗಣಕೀಕರಣದ ಮೈಲಿಗಲ್ಲುಗಳು
ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳು ಹಮ್ಮಿಕೊಂಡ ಇ ಆಡಳಿತ (ವಿದ್ಯುನ್ಮಾನ ಆಡಳಿತ) ಕಾರ್ಯಕ್ರಮಕ್ಕೆ ಕ್ಷಿಪ್ರವಾಗಿ ಸ್ಪಂದಿಸುವ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸನ್ಮಾನ್ಯ ಸಚಿವರು ಹಾಗೂ ಕಾರ್ಯದರ್ಶಿಗಳ ದೂರದರ್ಶಿತ್ವದ ಮಾರ್ಗದರ್ಶನದ ಮೇಲೆ ಇಲಾಖೆಯು ಗಣಕೀಕರಣವನ್ನು ಯೋಜನೇತರ ಕಾರ್ಯಕ್ರಮದಡಿಯಲ್ಲಿ ೨೦೦೨-೨೦೦೩ರಲ್ಲಿ ಆರಂಭಿಸಿತು. ಈ ಯೋಜನೆಯು ಕಾರ್ಯರೂಪಕ್ಕೆ ಬರುವ ವೇಳೆಗೆ ಆಗಲೇ ಇಲಾಖೆಯು ೧೮೮೪ರಲ್ಲಿ ಮುಂಬೈ ಪ್ರಾಂತ್ಯವು ಸರ್ ಜೇಮ್ಸ್ ಕ್ಯಾಂಬೆಲ್ ಅವರು ಸಂಪಾದಿಸಿದ್ದ ಶಿಥಿಲವಾಗಿದ್ದ ಬಿಜಾಪುರ ಗ್ಯಾಸೆಟಿಯರ್ ಸಂಪುಟವನ್ನು (೨೦೦೨) ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಉಪಯೋಗಿಸಿ ಪುನರ್ ಮುದ್ರಿಸಲಾಗಿತ್ತು. ಇದೇ ಪ್ರಥಮಬಾರಿಗೆ ಈ ಸಂಪುಟದ ಪುಟಗಳನ್ನು ಸಿ.ಡಿ ಸ್ವರೂಪದಲ್ಲಿ ಸಂಕ್ಷಿಸಲಾಯಿತು. ಒಂದು ದೃಷ್ಟಿಯಲ್ಲಿ ಇಲಾಖೆ ಪ್ರಕಟಿಸಿದ ಪ್ರಥಮ ಇ ಸಂಪುಟವು ಬಿಜಾಪುರ (೧೮೮೪) ಗ್ಯಾಸೆಟಿಯರ್ ಆಗಿದೆ. ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ಪ್ರಕಟವಾಗಿದ್ದ ಗ್ಯಾಸೆಟಿಯರ್ ಸಂಪುಟಗಳು ಹಾಗೂ ೧೯೫೮ರ ನಂತರ ಪ್ರಕಟಗೊಂಡಿದ್ದ ಸಂಪುಟಗಳನ್ನು ಆಧುನಿಕ ತಂತ್ರಾಂಶಗಳ ಮೂಲಕ ಸ್ಕ್ಯಾನ್ ಮಾಡಿಸುವ ಗಣಕೀಕರಣ ಕಾರ್ಯಕ್ರಮವು ಇಲಾಖೆಗೆ ಪ್ರಮುಖ ಸವಾಲಾಗಿತ್ತು. ಈ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯದ ಮಾಹಿತಿ ತಂತ್ರಜ್ಞಾನ ಪರಿಣತರ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನೊಳಗೊಂಡ ಒಂದು ಗಣಕೀಕರಣ ತಾಂತ್ರಿಕ ಸಲಹಾ ಸಮಿತಿಯು ನೀಡಿದ ಅಮೂಲ್ಯ ಸಲಹೆಗಳಿಂದ ಇಲ್ಲಿಯವರೆಗೆ ಇಲಾಖೆಯು ಪ್ರಕಟಿಸಿದ್ದ ಎಲ್ಲಾ ಸಂಪುಟಗಳನ್ನು ಸ್ಕ್ಯಾನ್ ಮಾಡಿಸಿ ಸಿ.ಡಿ.ಗಳಲ್ಲಿ ಸೆರೆಹಿಡಿದಿಡಲು ಸಾಧ್ಯವಾಯಿತು. ಸುಮಾರು ೬೦,೦೦೦ ಪುಟಗಳ ಮಾಹಿತಿಯುಳ್ಳ ೯೧ ಸಂಪುಟಗಳನ್ನು ಕೇವಲ ೯ ಸಿ.ಡಿ.ಗಳಲ್ಲಿ ಅಧಿಕ ತಂತ್ರಾಂಶದಿಂದ ಸ್ಕ್ಯಾನ್ ಮಾಡಿ ಅಳವಡಿಸಲಾಗಿರುವುದು ಅತ್ಯಂತ ಪರಿಶ್ರಮದ ಸಾಧನೆಯಾಗಿದೆ. ಈ ಸಿ.ಡಿ.ಗಳಲ್ಲಿ ಹುಡುಕಾಟದ (ಸರ್ಚ್) ವಿಶೇಷ ಸೌಲಭ್ಯವನ್ನು ಹೊಂದಿದ್ದು, ಯಾವುದೇ ವಿಷಯದ ಬಗ್ಗೆ ಅಥವಾ ಮಾಹಿತಿಯ ಬಗ್ಗೆ ಪ್ರಾಧಾನ್ಯತೆಯಿಂದ ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಜಟಿಲ ತರ್ಕದೊಂದಿಗೆ ಹುಡುಕಬಲ್ಲ ವಿಶೇಷ ಸೌಲಭ್ಯವನ್ನು ಹೊಂದಿರುತ್ತದೆ. ಈ ಸಿ.ಡಿ. ಆವೃತ್ತಿಗಳನ್ನು ಪ್ರಕಟಿಸುವುದರೊಂದಿಗೆ ಇಲಾಖೆಯು ಇಲ್ಲಿಯವರೆಗೆ ಲಭ್ಯವಿರುವ ಹಾಗೂ ಪ್ರಕಟವಾಗಿರುವ ಆಂಗ್ಲ ಭಾಷಾ ಗ್ಯಾಸೆಟಿಯರ್ಗಳ ಸ್ಕ್ಯಾನಿಂಗ್ ಕಾರ್ಯವನ್ನು ಮುಗಿಸಿ ಒಂದು ಮೈಲಿಗಲ್ಲನ್ನು ದಾಟಿರುತ್ತದೆ. ಅಲ್ಲದೇ ಈ ಸಿ.ಡಿ.ಗಳನ್ನು ಮತ್ತು ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ನ ಪ್ರಥಮ ಕನ್ನಡ ಸಿ.ಡಿ.ಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಸರಣಗೊಳಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇಲಾಖೆಯು ಪ್ರಕಟಿಸಿದ ೯ ಸಿ.ಡಿ.ಗಳ ನೂರು ಪ್ರತಿಗಳು ಮಾರಾಟವಾಗಿದ್ದು, ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಒಂಭತ್ತು ಸಿ.ಡಿ.ಗಳ ನೂರು ಸೆಟ್ಗಳನ್ನು ಪುನ: ತಯಾರಿಸಿದ್ದು, ತಕ್ಷಣದಿಂದಲೇ ಹಿಂದೆ ನಿಗಧಿಪಡಿಸಿರುವ ೧,೦೦೦ ರೂ.ಗಳಿಗೆ ಒಂದು ಸೆಟ್ನಂತೆ ಸಂಶೋಧನಾ ಆಸಕ್ತರಿಗೆ ಖರೀದಿಸಲು ಅನುವಾಗುವಂತೆ ಬಿಡುಗಡೆ ಮಾಡಿರುತ್ತದೆ. ಇದೀಗ ಲೋಕಾರ್ಪಣೆಗೊಳ್ಳುತ್ತಿರುವ ಮಂಡ್ಯ, ವಿಜಾಪುರ, ದಕ್ಷಿಣ ಕನ್ನಡ ಮತ್ತು ಂಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಸಂಪುಟಗಳನ್ನು ಸಧ್ಯದಲ್ಲೇ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಸರಣಗೊಳಿಸಲಾಗುವುದು.
ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಮುಂದುವರೆದ ಯೋಜನೆಯಡಿ ಚಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್ ಮತ್ತು ತುಮಕೂರು ಜಿಲ್ಲಾ ಪರಿಷ್ಕೃತ ಕನ್ನಡ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ನಂತರ ೧೯೯೭ರಲ್ಲಿ ಸೃಜಿಸಲ್ಪಟ್ಟ ದಾವಣಗೆರೆ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಣೆಯನ್ನೂ ಆರಂಭಿಸಲಿದೆ. ಇದಲ್ಲದೇ ಕೋಲಾರ ಮತ್ತು ದಕ್ಷಿಣ ಕನ್ನಡ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್ಗಳ ಕನ್ನಡ ಅವತರಿಣಿಕೆಯನ್ನೂ ಸಂಪಾದಿಸಿ ಪ್ರಕಟಿಸಲು ಉದ್ದೇಶಿಸಿದೆ. ಇದಲ್ಲದೇ ೧೯೮೨-೮೩ ರಲ್ಲಿ ಪ್ರಕಟಗೊಂಡಿದ್ದ ರಾಜ್ಯ ಗ್ಯಾಸೆಟಿಯರ್ ಎರಡು ಭಾಗಗಳನ್ನು ಪರಿಷ್ಕರಿಸಿ ಹಾಗೂ ಇಂದೀಕರಿಸಿ ಪ್ರಕಟಿಸಲು ಯೋಜಿಸಿದೆ. ಹಾಗೆಯೇ ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಬಹುವರ್ಣೀಯ ಸಂಪುಟದ ಕನ್ನಡ ಅವತರಿಣಿಕೆಯನ್ನೂ ಸಂಪಾದಿಸಿ ಪ್ರಕಟಿಸಲು ತೊಡಗಿರುತ್ತದೆ.
ಪ್ರತಿಕ್ರಿಯೆ (1)