ಪತ್ರಿಕಾ ಪ್ರಕಟಣೆ
ರಾಜ್ಯ ಸರ್ಕಾರದ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ತನ್ನ ವಿಶೇಷ ಪ್ರಕಟಣೆಯಾದ ಂ ಊಚಿಟಿಜ ಃooಞ oಜಿ ಏಚಿಡಿಟಿಚಿಣಚಿಞಚಿ ಗ್ರಂಥದ ಪರಿಷ್ಕೃತ ಆಂಗ್ಲ ಆವೃತ್ತಿಯನ್ನು ಬಹುವರ್ಣದಲ್ಲಿ ವರ್ಣರಂಜಿತವಾಗಿ ಇಂದೀಕರಿಸಿದ ಅಂಕಿಅಂಶಗಳೊಂದಿಗೆ ಪ್ರಪ್ರಥಮವಾಗಿ ೨೦೧೦ರಲ್ಲಿ ಹೊರತರುತ್ತಿದೆ. 
ಈ ಆವೃತ್ತಿಯ ೧,೦೦೦ ಪ್ರತಿಗಳನ್ನು ಉನ್ನತ ದರ್ಜೆಯ ಆರ್ಟ್ ಮುದ್ರಣ ಕಾಗದದಲ್ಲೂ ಹಾಗೂ ೨,೦೦೦ ಪ್ರತಿಗಳನ್ನು ಮ್ಯಾಪ್‌ಲಿಥೋ ಮುದ್ರಣ ಕಾಗದದಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ಛಾಯಾಚಿತ್ರಗಳೊಂದಿಗೆ ಮುದ್ರಿಸಿ ಬಿಡುಗಡೆ ಮಾಡಲಾಗುತ್ತಿದೆ. ಕ.ಆ.ಸೇ., ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವ ಪರೀಕ್ಷಾರ್ಥಿಗಳೂ ಸೇರಿದಂತೆ ಜನಸಾಮಾನ್ಯರಿಗೂ ನಿಲುಕುವ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ಮ್ಯಾಪ್‌ಲಿಥೋ ಪ್ರತಿಗಳನ್ನು ಪ್ರಕಟಿಸಲಾಗಿದೆ. ಈ ಗ್ರಂಥವು ಪ್ರಾಸ್ತಾವಿಕ, ಇತಿಹಾಸ, ಜನತೆ, ಕೃಷಿ ಮತ್ತಿತರ ಚಟುವಟಿಕೆ, ಕೈಗಾರಿಕೆ ಮತ್ತು ವಿದ್ಯುಚ್ಫಕ್ತಿ, ಬ್ಯಾಂಕಿಂಗ್, ಸಹಕಾರ ಮತ್ತು ವಾಣಿಜ್ಯ, ಸಾರಿಗೆ ಸಂಪರ್ಕ, ಅರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆ, ಆಡಳಿತ, ಶಿಕ್ಷಣ ಮತ್ತು ಕ್ರೀಡೆ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಸಾಹಿತ್ಯ ಸಂಸ್ಕೃತಿ ಮತ್ತು ಪ್ರವಾಸಿಗರ ಸ್ವರ್ಗ-ಕರ್ನಾಟಕ ಎಂಬ ೧೪ ಅಧ್ಯಾಯಗಳನ್ನು ಒಳಗೊಂಡಿದ್ದು, ಕರ್ನಾಟಕದ ಸರ್ವತೋಮುಖ ಪ್ರಗತಿಯ ಸಮಗ್ರ ಚಿತ್ರಣವನ್ನು ನೀಡಲು ಯತ್ನಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಈ ಸಂಪುಟದ ಕನ್ನಡ ಅವತರಣಿಕೆ (ಕರ್ನಾಟಕ ಕೈಪಿಡಿ) ಯನ್ನು ಸಂಪಾದಿಸಿ ಬಹುವರ್ಣೀಯವಾಗಿ ಪ್ರಕಟಿಸಲು ಉದ್ದೇಶಿಸಿದೆ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಚಾಲ್ತಿಯಲ್ಲಿರುವ ಯೋಜನೆಯಡಿಯಲ್ಲಿ ಜಿಲ್ಲಾ ಗ್ಯಾಸೆಟಿಯರ್‌ಗಳ ಪರಿಷ್ಕರಣೆ ಮತ್ತು ಪ್ರಕಟಣೆಯನ್ನು ಪ್ರಾರಂಭದಲ್ಲಿ ಕನ್ನಡದಲ್ಲಿ ನಂತರ ಇಂಗ್ಲೀಷ್ ಆವೃತ್ತಿಯನ್ನು ರಾಷ್ಟ್ರದ ವಿವಿದ ರಾಜ್ಯಗಳೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವ ದೃಷ್ಟಿಯಿಂದ ಪ್ರಕಟಿಸುತ್ತಾ ಬಂದಿದೆ.  ಈ ಯೋಜನೆ ಅಡಿ ಪರಿಷ್ಕೃತಗೊಳಿಸಿ ಪ್ರಕಟಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಕನ್ನಡ ಆವೃತ್ತಿಯು ಸಿದ್ಧವಾಗಿದ್ದು ಈಗ ಲೋಕಾರ್ಪಣೆಗೊಳ್ಳುತ್ತಿದೆ.  ಇದರ ಜೊತೆ ೨೦೦೬ ರಲ್ಲಿ ಪ್ರಕಟಗೊಂಡಿದ್ದ ವಿಜಾಪುರ (ಪರಿಷ್ಕೃತ) ಜಿಲ್ಲಾ ಗ್ಯಾಸೆಟಿಯರ್ ೨೦೦೮ ರಲ್ಲಿ ಪ್ರಕಟಗೊಂಡಿದ್ದ ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿಗಳನ್ನೂ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಹಿಂದಿನ ಆಂಗ್ಲ ಗ್ಯಾಸೆಟಿಯರ್ ಸಂಪುಟವನ್ನು ೧೯೭೩ರಲ್ಲಿ ಈ ಇಲಾಖೆಯು ಪ್ರಕಟಿಸಿದ್ದು, ಪ್ರಸ್ತುತ ಬಿಡುಗಡೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಸಂಪುಟವು ಸಂಪೂರ್ಣ ಪರಿಷ್ಕೃತಗೊಂಡ ಕನ್ನಡ ಆವೃತ್ತಿಯಾಗಿದೆ.  ಈ ಇಲಾಖೆಯಿಂದ ಈಗಾಗಲೇ ಪ್ರಕಟಗೊಂಡಿರುವ ಬಿಜಾಪುರ (೧೯೬೬) ಹಾಗೂ ಮಂಡ್ಯ (೧೯೬೮) ಜಿಲ್ಲಾ ಗ್ಯಾಸೆಟಿಯರ್ (ಆಂಗ್ಲ ಆವೃತ್ತಿ)ಗಳ ಕನ್ನಡ ಪರಿಷ್ಕೃತ ಆವೃತ್ತಿಗಳನ್ನು ೧೯೯೯ ಹಾಗೂ ೨೦೦೩ರಲ್ಲಿ ಪ್ರಕಟಿಸಲಾಗಿದ್ದು ಅವುಗಳ ಆಂಗ್ಲ ಭಾಷಾಂತರ ಆವೃತ್ತಿಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ.
  
ಸ್ವಾತಂತ್ರ್ಯಾನಂತರ ೧೯೫೮ ರಿಂದ ಆರಂಭಗೊಂಡು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂಚನೆಗಳನ್ನು ಅನುಸರಿಸಿ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿಗಳ ಪರಿಷ್ಕರಣೆ ಮತ್ತು ಮುದ್ರಣಕಾರ್ಯವನ್ನು ಕೈಗೆತ್ತಿಗೊಂಡು ೧೯೯೦ರಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ಯಾಸೆಟಿಯರ್ ಪ್ರಕಟಿಸುವುದರೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಯಿತು.  ಆನಂತರ ರಾಜ್ಯ ಸರ್ಕಾರದ ನೀತಿಯಂತೆ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಕನ್ನಡ ಭಾಷೆಯಲ್ಲಿ ಸಂಪಾದಿಸಿ ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.  ಈ ಯೋಜನೆಯಡಿ ಇಲಾಖೆಯು ಇಲ್ಲಿಯವರೆಗೆ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ, ಮಂಡ್ಯ, ಕೋಲಾರ ಮತ್ತು ದಕ್ಷಿಣಕನ್ನಡ ಜಿಲ್ಲಾ ಸಂಪುಟಗಳನ್ನು ಪ್ರಕಟಿಸಿರುತ್ತದೆ. ಇದೇ ಯೋಜನೆಯಡಿ ಪ್ರಸ್ತುತ ಉಡುಪಿ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಮುದ್ರಣಕಾರ್ಯವು ಅಂತಿಮಗೊಂಡಿದ್ದು, ಸಧ್ಯದಲ್ಲೇ, ಲೋಕಾರ್ಪಣೆ ಮಾಡಲಾಗುವುದು. ಅಲ್ಲದೇ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿರುವ ಸಲಹಾ ಸಮಿತಿಯ ಸೂಚನೆಯ ಪ್ರಕಾರ ಕನ್ನಡದಲ್ಲಿ ಪರಿಷ್ಕೃತಗೊಂಡಿರುವ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.  ಈ ಯೋಜನೆಯಡಿ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ (ಈಗ ಬಿಡುಗಡೆಯಾಗುತ್ತಿದೆ) ಮತ್ತು ಮಂಡ್ಯ, (ಈಗ ಬಿಡುಗಡೆಯಾಗುತ್ತಿದೆ) ಸಂಪುಟಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ.  
ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಮುಂದುವರೆದ ಯೋಜನೆಯಡಿ ೧೯೯೭ರಲ್ಲಿ ಸೃಜಿಸಲ್ಪಟ್ಟ ಚಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್ ಸಂಪುಟ, ತುಮಕೂರು ಜಿಲ್ಲಾ ಗ್ಯಾಸೆಟಿಯರ್ (ಪರಿಷ್ಕೃತ) ಸಂಪುಟಗಳನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಇದೇ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಪ್ರಕಟಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.  ಇಂಗ್ಲೀಷ್ ಆವೃತ್ತಿಗಳಾದ ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪರಿಷ್ಕೃತ ಗ್ಯಾಸೆಟಿಯರ್‌ಗಳ ಆಂಗ್ಲ ಆವೃತ್ತಿಯನ್ನು ಇದೇ ಸಾಲಿನಲ್ಲಿ ಪ್ರಕಟಿಸಲು ಇಲಾಖೆಯು ಉದ್ದೇಶಿಸಿದೆ.  ಅಲ್ಲದೇ, ಇಲಾಖೆಯು, ವಿಶೇಷ ಯೋಜನೆಯಡಿ ಮೈಸೂರು ಸಂಸ್ಥಾನದಲ್ಲಿ ಹಿಂದೆ ಆಡಳಿತ ನಡೆಸಿರುವ ದಿವಾನರುಗಳ ಆಡಳಿತ ವಿಧಾನ ಹಾಗೂ ಸುಧಾರಣೆಗಳನ್ನೊಳಗೊಂಡ ಎeತಿeಟs oಜಿ ಂಜmiಟಿisಣಡಿಚಿಣioಟಿ ಎಂಬ ಗ್ರಂಥವನ್ನು ಎರಡು ಸಂಪುಟಗಳಲ್ಲಿ ವರ್ಣರಂಜಿತವಾಗಿ ಹೊರತರಲು ಉದ್ದೇಶಿಸಿದೆ. ಇಂದು ಲೋಕಾರ್ಪಣೆಗೊಳ್ಳುತ್ತಿರುವ ಸಂಪುಟಗಳನ್ನು ಹಾಗೂ ಮುಂದೆ ಪ್ರಕಟಿಸಲಾಗುವ ಸಂಪುಟಗಳನ್ನು ಇಲಾಖೆಯು ಹೊಂದಿರುವ ವೆಬ್‌ಸೈಟ್‌ನಲ್ಲಿ ಪ್ರಸರಣಗೊಳಿಸಲು ಕ್ರಮಕೈಗೊಳ್ಳಲಾಗುವುದು.
ಎಸ್.ಎ.ಜಿಲಾನಿ ಕ.ಆ.ಸೇ.,
ಮುಖ್ಯ ಸಂಪಾದಕರು
ಕರ್ನಾಟಕ ಗ್ಯಾಸೆಟಿಯರ್ ಇಲಾಖೆ
ಬೆಂಗಳೂರು
ಪತ್ರಿಕಾ ಪ್ರಕಟಣೆ
ರಾಜ್ಯ ಸರ್ಕಾರದ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ತನ್ನ ವಿಶೇಷ ಪ್ರಕಟಣೆಯಾದ ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಗ್ರಂಥದ ಪರಿಷ್ಕೃತ ಆಂಗ್ಲ ಆವೃತ್ತಿಯನ್ನು ಬಹುವರ್ಣದಲ್ಲಿ ವರ್ಣರಂಜಿತವಾಗಿ ಇಂದೀಕರಿಸಿದ ಅಂಕಿಅಂಶಗಳೊಂದಿಗೆ ಪ್ರಪ್ರಥಮವಾಗಿ ೨೦೧೦ರಲ್ಲಿ ಹೊರತರುತ್ತಿದೆ. 
ಈ ಆವೃತ್ತಿಯ ೧,೦೦೦ ಪ್ರತಿಗಳನ್ನು ಉನ್ನತ ದರ್ಜೆಯ ಆರ್ಟ್ ಮುದ್ರಣ ಕಾಗದದಲ್ಲೂ ಹಾಗೂ ೨,೦೦೦ ಪ್ರತಿಗಳನ್ನು ಮ್ಯಾಪ್‌ಲಿಥೋ ಮುದ್ರಣ ಕಾಗದದಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ಛಾಯಾಚಿತ್ರಗಳೊಂದಿಗೆ ಮುದ್ರಿಸಿ ಬಿಡುಗಡೆ ಮಾಡಲಾಗುತ್ತಿದೆ. ಕ.ಆ.ಸೇ., ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವ ಪರೀಕ್ಷಾರ್ಥಿಗಳೂ ಸೇರಿದಂತೆ ಜನಸಾಮಾನ್ಯರಿಗೂ ನಿಲುಕುವ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ಮ್ಯಾಪ್‌ಲಿಥೋ ಪ್ರತಿಗಳನ್ನು ಪ್ರಕಟಿಸಲಾಗಿದೆ. ಈ ಗ್ರಂಥವು ಪ್ರಾಸ್ತಾವಿಕ, ಇತಿಹಾಸ, ಜನತೆ, ಕೃಷಿ ಮತ್ತಿತರ ಚಟುವಟಿಕೆ, ಕೈಗಾರಿಕೆ ಮತ್ತು ವಿದ್ಯುಚ್ಫಕ್ತಿ, ಬ್ಯಾಂಕಿಂಗ್, ಸಹಕಾರ ಮತ್ತು ವಾಣಿಜ್ಯ, ಸಾರಿಗೆ ಸಂಪರ್ಕ, ಅರ್ಥಿಕ ಪ್ರವೃತ್ತಿಗಳು ಮತ್ತು ಯೋಜನೆ, ಆಡಳಿತ, ಶಿಕ್ಷಣ ಮತ್ತು ಕ್ರೀಡೆ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಸಾಹಿತ್ಯ ಸಂಸ್ಕೃತಿ ಮತ್ತು ಪ್ರವಾಸಿಗರ ಸ್ವರ್ಗ-ಕರ್ನಾಟಕ ಎಂಬ ೧೪ ಅಧ್ಯಾಯಗಳನ್ನು ಒಳಗೊಂಡಿದ್ದು, ಕರ್ನಾಟಕದ ಸರ್ವತೋಮುಖ ಪ್ರಗತಿಯ ಸಮಗ್ರ ಚಿತ್ರಣವನ್ನು ನೀಡಲು ಯತ್ನಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಈ ಸಂಪುಟದ ಕನ್ನಡ ಅವತರಣಿಕೆ (ಕರ್ನಾಟಕ ಕೈಪಿಡಿ) ಯನ್ನು ಸಂಪಾದಿಸಿ ಬಹುವರ್ಣೀಯವಾಗಿ ಪ್ರಕಟಿಸಲು ಉದ್ದೇಶಿಸಿದೆ.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಚಾಲ್ತಿಯಲ್ಲಿರುವ ಯೋಜನೆಯಡಿಯಲ್ಲಿ ಜಿಲ್ಲಾ ಗ್ಯಾಸೆಟಿಯರ್‌ಗಳ ಪರಿಷ್ಕರಣೆ ಮತ್ತು ಪ್ರಕಟಣೆಯನ್ನು ಪ್ರಾರಂಭದಲ್ಲಿ ಕನ್ನಡದಲ್ಲಿ ನಂತರ ಇಂಗ್ಲೀಷ್ ಆವೃತ್ತಿಯನ್ನು ರಾಷ್ಟ್ರದ ವಿವಿದ ರಾಜ್ಯಗಳೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವ ದೃಷ್ಟಿಯಿಂದ ಪ್ರಕಟಿಸುತ್ತಾ ಬಂದಿದೆ.  ಈ ಯೋಜನೆ ಅಡಿ ಪರಿಷ್ಕೃತಗೊಳಿಸಿ ಪ್ರಕಟಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಕನ್ನಡ ಆವೃತ್ತಿಯು ಸಿದ್ಧವಾಗಿದ್ದು ಈಗ ಲೋಕಾರ್ಪಣೆಗೊಳ್ಳುತ್ತಿದೆ.  ಇದರ ಜೊತೆ ೨೦೦೬ ರಲ್ಲಿ ಪ್ರಕಟಗೊಂಡಿದ್ದ ವಿಜಾಪುರ (ಪರಿಷ್ಕೃತ) ಜಿಲ್ಲಾ ಗ್ಯಾಸೆಟಿಯರ್ ೨೦೦೮ ರಲ್ಲಿ ಪ್ರಕಟಗೊಂಡಿದ್ದ ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿಗಳನ್ನೂ ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಹಿಂದಿನ ಆಂಗ್ಲ ಗ್ಯಾಸೆಟಿಯರ್ ಸಂಪುಟವನ್ನು ೧೯೭೩ರಲ್ಲಿ ಈ ಇಲಾಖೆಯು ಪ್ರಕಟಿಸಿದ್ದು, ಪ್ರಸ್ತುತ ಬಿಡುಗಡೆಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಗ್ಯಾಸೆಟಿಯರ್ ಸಂಪುಟವು ಸಂಪೂರ್ಣ ಪರಿಷ್ಕೃತಗೊಂಡ ಕನ್ನಡ ಆವೃತ್ತಿಯಾಗಿದೆ.  ಈ ಇಲಾಖೆಯಿಂದ ಈಗಾಗಲೇ ಪ್ರಕಟಗೊಂಡಿರುವ ಬಿಜಾಪುರ (೧೯೬೬) ಹಾಗೂ ಮಂಡ್ಯ (೧೯೬೮) ಜಿಲ್ಲಾ ಗ್ಯಾಸೆಟಿಯರ್ (ಆಂಗ್ಲ ಆವೃತ್ತಿ)ಗಳ ಕನ್ನಡ ಪರಿಷ್ಕೃತ ಆವೃತ್ತಿಗಳನ್ನು ೧೯೯೯ ಹಾಗೂ ೨೦೦೩ರಲ್ಲಿ ಪ್ರಕಟಿಸಲಾಗಿದ್ದು ಅವುಗಳ ಆಂಗ್ಲ ಭಾಷಾಂತರ ಆವೃತ್ತಿಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ.  ಸ್ವಾತಂತ್ರ್ಯಾನಂತರ ೧೯೫೮ ರಿಂದ ಆರಂಭಗೊಂಡು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂಚನೆಗಳನ್ನು ಅನುಸರಿಸಿ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿಗಳ ಪರಿಷ್ಕರಣೆ ಮತ್ತು ಮುದ್ರಣಕಾರ್ಯವನ್ನು ಕೈಗೆತ್ತಿಗೊಂಡು ೧೯೯೦ರಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ಯಾಸೆಟಿಯರ್ ಪ್ರಕಟಿಸುವುದರೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಯಿತು.  ಆನಂತರ ರಾಜ್ಯ ಸರ್ಕಾರದ ನೀತಿಯಂತೆ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಕನ್ನಡ ಭಾಷೆಯಲ್ಲಿ ಸಂಪಾದಿಸಿ ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.  ಈ ಯೋಜನೆಯಡಿ ಇಲಾಖೆಯು ಇಲ್ಲಿಯವರೆಗೆ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ, ಮಂಡ್ಯ, ಕೋಲಾರ ಮತ್ತು ದಕ್ಷಿಣಕನ್ನಡ ಜಿಲ್ಲಾ ಸಂಪುಟಗಳನ್ನು ಪ್ರಕಟಿಸಿರುತ್ತದೆ. ಇದೇ ಯೋಜನೆಯಡಿ ಪ್ರಸ್ತುತ ಉಡುಪಿ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಮುದ್ರಣಕಾರ್ಯವು ಅಂತಿಮಗೊಂಡಿದ್ದು, ಸಧ್ಯದಲ್ಲೇ, ಲೋಕಾರ್ಪಣೆ ಮಾಡಲಾಗುವುದು. ಅಲ್ಲದೇ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿರುವ ಸಲಹಾ ಸಮಿತಿಯ ಸೂಚನೆಯ ಪ್ರಕಾರ ಕನ್ನಡದಲ್ಲಿ ಪರಿಷ್ಕೃತಗೊಂಡಿರುವ ಜಿಲ್ಲಾ ಗ್ಯಾಸೆಟಿಯರ್‌ಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.  ಈ ಯೋಜನೆಯಡಿ ಕೊಡಗು, ಧಾರವಾಡ, ಗುಲಬರ್ಗಾ, ವಿಜಾಪುರ (ಈಗ ಬಿಡುಗಡೆಯಾಗುತ್ತಿದೆ) ಮತ್ತು ಮಂಡ್ಯ, (ಈಗ ಬಿಡುಗಡೆಯಾಗುತ್ತಿದೆ) ಸಂಪುಟಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ.  ಪ್ರಸ್ತುತ ಸಾಲಿನಲ್ಲಿ ಇಲಾಖೆಯು ಮುಂದುವರೆದ ಯೋಜನೆಯಡಿ ೧೯೯೭ರಲ್ಲಿ ಸೃಜಿಸಲ್ಪಟ್ಟ ಚಾಮರಾಜನಗರ ಜಿಲ್ಲಾ ಗ್ಯಾಸೆಟಿಯರ್ ಸಂಪುಟ, ತುಮಕೂರು ಜಿಲ್ಲಾ ಗ್ಯಾಸೆಟಿಯರ್ (ಪರಿಷ್ಕೃತ) ಸಂಪುಟಗಳನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಇದೇ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಗ್ಯಾಸೆಟಿಯರ್ ಸಂಪುಟದ ಪ್ರಕಟಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.  ಇಂಗ್ಲೀಷ್ ಆವೃತ್ತಿಗಳಾದ ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪರಿಷ್ಕೃತ ಗ್ಯಾಸೆಟಿಯರ್‌ಗಳ ಆಂಗ್ಲ ಆವೃತ್ತಿಯನ್ನು ಇದೇ ಸಾಲಿನಲ್ಲಿ ಪ್ರಕಟಿಸಲು ಇಲಾಖೆಯು ಉದ್ದೇಶಿಸಿದೆ.  ಅಲ್ಲದೇ, ಇಲಾಖೆಯು, ವಿಶೇಷ ಯೋಜನೆಯಡಿ ಮೈಸೂರು ಸಂಸ್ಥಾನದಲ್ಲಿ ಹಿಂದೆ ಆಡಳಿತ ನಡೆಸಿರುವ ದಿವಾನರುಗಳ ಆಡಳಿತ ವಿಧಾನ ಹಾಗೂ ಸುಧಾರಣೆಗಳನ್ನೊಳಗೊಂಡ ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ೨೦೧೦  ಎಂಬ ಗ್ರಂಥವನ್ನು ಎರಡು ಸಂಪುಟಗಳಲ್ಲಿ ವರ್ಣರಂಜಿತವಾಗಿ ಹೊರತರಲು ಉದ್ದೇಶಿಸಿದೆ. ಇಂದು ಲೋಕಾರ್ಪಣೆಗೊಳ್ಳುತ್ತಿರುವ ಸಂಪುಟಗಳನ್ನು ಹಾಗೂ ಮುಂದೆ ಪ್ರಕಟಿಸಲಾಗುವ ಸಂಪುಟಗಳನ್ನು ಇಲಾಖೆಯು ಹೊಂದಿರುವ ವೆಬ್‌ಸೈಟ್‌ನಲ್ಲಿ ಪ್ರಸರಣಗೊಳಿಸಲು ಕ್ರಮಕೈಗೊಳ್ಳಲಾಗುವುದು.

ಎಸ್.ಎ.ಜಿಲಾನಿ ಕ.ಆ.ಸೇ.,ಮುಖ್ಯ ಸಂಪಾದಕರುಕರ್ನಾಟಕ ಗ್ಯಾಸೆಟಿಯರ್ ಇಲಾಖೆಬೆಂಗಳೂರು