ರಂಗ
ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲಾ ಕಾಣಮ್ಮಾ||
ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|
ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ|| ||ರಂಗಾ||
ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||
ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|
ಆಸ್ಪತ್ರೆಗ್ ಕರ್ಕಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ|| ||ರಂಗಾ||
ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ|| ||ರಂಗಾ||
*************
ಕವಿನಾಗರಾಜ್.
ಲೇಖನ ಶೀರ್ಷಿಕೆಯಲ್ಲಿ ಪ್ರಕಟವಾದ ಕಥೆ 'ಪ್ರೀತಿಯ ಅಂತ್ಯ'ಕ್ಕೆ ಲಿಂಕ್: http://sampada.net/article/24217
ಪ್ರತಿಕ್ರಿಯೆ (2)