ಈಗಾಗಲೇ ಮೀಡಿಯಾದಲ್ಲಿ ಧೋನಿ ಬಳಗ ಬೈಸಿಕೊಳ್ಳುತ್ತಿದೆ ಸಿಕ್ಕ ಸಿಕ್ಕವರೆಲ್ಲ ಕ್ಯಾಕರಿಸಿ ಉಗಿಯುತ್ತಿದ್ದಾರೆ
ಬೋರ್ಡು ಮಾತ್ರ ರಿಪೋರ್ಟಗೆ ಕಾಯುತ್ತಿರುವುದಾಗಿ ಹೇಳಿ ಎಂದಿನ ಜಾಣ್ಮೆ ತೋರಿಸಿದೆ. ನಮ್ಮ ನಾಯಕನಿಗೆ ಅರಿವು ಮೂಡಿ
ಐಪಿಎಲ್ ಪಾರ್ಟಿಯಲ್ಲಿ ಲಲನೆಯರ ಜೊತೆ ಚಕ್ಕಂದವಾಡಿ ಚೊಕ್ಕವಾಗಿ ಮಧು ಹೀರಿದ್ದೇ ಸೋಲಿಗೆ ಕಾರಣ ಎಂದಿದ್ದಾನೆ.
ಹಾಗೂ ಮುಂದಿನ ವರ್ಷ ಐಪಿಎಲ್ ಆದಮೇಲೆ ವಿಶ್ವಕಪ್ ಇಲ್ಲ ಎಂದು ಖುಷಿ ಪಟ್ಟಿದ್ದಾನೆ. ಈ ಲೇಖನದ ಉದ್ದೇಶ ನಿರಾಶೆ
ಅಥವಾ ಹತಾಶೆ ವ್ಯಕ್ತಪಡಿಸುವುದಲ್ಲ ಬದಲು ಈ ಮಂಡಳಿ ತಮ್ಮ ರಾಜಕೀಯ ಬಿಟ್ಟು ಕ್ರಿಕೆಟ್ ಅಥವಾ ಅದರ ಉನ್ನತಿಗಾಗಿ
ಇನ್ನಾದರೂ ಪ್ರಯತ್ನಮಾಡುತ್ತದೆಯೋ ಅಥವಾ ತಂಡದ ಆಡಳಿತಾಧಿಕಾರಿ ನೀಡೋ ವರದಿ ಓದಿ ತಿಪ್ಪೆ ಸಾರಿಸುತ್ತದೆಯೋ
ಎಂಬುದು. ರಾಜೀವ್ ಶುಕ್ಲಾ ಮಾತಾಡಿದ್ದು ನೋಡಿದರೆ ಎರಡನೇಯದರ ಸಾಧ್ಯತೆಯೇ ಹೆಚ್ಚು.
ಈಗಾಗಲೇ ಘಟಾನುಘಟಿಗಳು ಸೋಲು ಅದರ ಕಾರಣ ಕುರಿತು ಸಾಕಷ್ಟು ಹೇಳಿದ್ದಾರೆ ಹೇಳುತ್ತಿದ್ದಾರೆ ಟಿವಿಯಲ್ಲಿ
ಮತ್ತೆ ಮತ್ತೆ ಅದೇ ಕತೆ ಪುನರಾವರ್ತನೆ ಯಾಗುತ್ತಿದೆ. ಕಪ್ಪು ಪಟ್ಟಿ ಕಟ್ಟಿಕೊಂಡು ಶ್ರೀಕಾಂತ್ ಮತ್ತು ಇತರರುಆರಿಸಿದ ವಿಜಯ್ , ಚಾವ್ಲಾ ಹಾಗೂ ಪ್ರವೀಣಕುಮಾರ ಕೆರಿಬಿಯನ್ ದ್ವೀಪಗಳ ಸೌಂದರ್ಯ ಆಸ್ವಾದಿಸಿದರು ಅಂತ ಕೇಳಿ ಪಟ್ಟೆ. ಧೋನಿ ತನ್ನ
ಏಜೆಂಟಗೆ ಫೋನಾಯಿಸಿ ತನ್ನ ಮುಂದಿನ ಜಾಹೀರಾತನ್ನು ಸೆಂಟ್ ಲೂಸಿಯಾದಲ್ಲಿ ಶೂಟ್ ಮಾಡಲು ಕೇಳಿಕೊಂಡನಂತೆ...
ಭಾರತಕ್ಕೆ ಇಷ್ಟು ಬೇಗ ಬರಲು ಮನಸ್ಸಿಲ್ಲದೆ ಭಾರತ ತಂಡ ಕೆರಿಬಿಯನ್ ನಲ್ಲಿ ಇನ್ನೂ ಸ್ವಲ್ಪದಿನ ಉಳಿದು ಮಜಾಮಾಡಲಿದೆಯಂತೆ.....ಇವು ಈ ಕ್ಷಣದ ಸುದ್ದಿಗಳು....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅಪ್ಪ--ನಾಟಕ
ಮಳೆ ಬರೆಯಿಸಿದ ಹನಿಗಳು.....
ಝಾಗಟೆ....
ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?
ರಾಮುಲು ಬಿಜೆಪಿ ಸೇರ್ಪಡೆಯಿಂದ ಯಾರಿಗೆ ಲಾಭ - ಒಂದು ಅವಲೋಕನ
ರಾಜಕಾರಣಿಗಳು ಮತ್ತು ಚುನಾವಣೆಃ ಕೇಳುವವರೇ ಇಲ್ಲ ಜನಗಳ ಬವಣೆ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)