ವಾಹನ ಚಾಲನೆಯ ಹೊಸಾ ಚಿಹ್ನೆ
ಮಿಟುಕಲಾಂಡಿ ನಳಿನಿ ತಾನು ಇತ್ತೀಚೆಗೆ ಕೊಂಡು ಕೊಂಡ ಕಾರು ಓಡಿಸುತ್ತಿದ್ದಳು. ಹೋಗಹೋಗುತ್ತ ತನ್ನ ಕೈ ಬಲಕ್ಕೆ ತೋರಿಸಿ ಕಾರನ್ನು ಎಡಕ್ಕೆ ತಿರುಗಿಸಿದಳು, ಹಿಂದಿನ ಸವಾರ ಗುಂಡ ಕಷ್ಟ ಪಟ್ಟು ಸಾವರಿಸಿಕೊಂಡ. ಮುಂದಿನ ತಿರುವಿನಲ್ಲಿ ಅವಳು ಎಡಕ್ಕೆ ತನ್ನ ಕೈ ತೋರಿಸಿದಳು, ಗುಂಡ ಇನ್ನೇನು ಅವಳನ್ನು ಬಲಬದಿಯಿಂದ ಹಿಂದಿಕ್ಕ ಬೇಕೆನ್ನುವಷ್ಟರಲ್ಲಿ ಗಾಡಿಯನ್ನು ಅವ್ಳು ಬಲಬದಿಗೆ ತಿರುಗಿಸಿದಳು.ಈ ಸಾರಿಯೂ ಗಲಿಬಿಲಿಗೊಂಡ ಗುಂಡ ಹೇಗೋ ತನ್ನ ಗಾಡಿ ತಹಬಂದಿಗೆ ತಂದ. ಮುಂದಿನ ಬಲ ತಿರುವು ಬರುವುದರೊಳಗೇ ಗುಂಡ ತಾನೇ ಅವಳ ಗಾಡಿಯ ಮುಂದೆ ತನ್ನ ಗಾಡಿ ತಂದು ನಿಲ್ಲಿಸಿ ಇಳಿದ, ನಳಿನಿ ಕೆಳಗಿಳಿಯಲೇ ಬೇಕಾಯ್ತು." ಏನ್ರೀ ಏನ್ ಗಾಡೀನ ಹೊಸದಾಗಿ ಸೇಲ್ ನಲ್ಲಿ ತಗೊಂಡದ್ದಾ? ಕಲಿತಿದ್ದೀರಾ ಹೇಗೆ?" ಕೇಳಿದ ಗುಂಡ ವ್ಯಂಗ್ಯವಾಗಿ." ಅರೇ ನಿಮಗೆ ಹೇಗೆ ಗೊತ್ತಾಯ್ತು?" ಕೇಳಿದಳು ನಳಿನಿ ಆಶ್ಚರ್ಯದಿಂದ." ಏನ್ ಮೇಡಮ್ ಅದಿರಲಿ, ಎಡಕ್ಕೆ ಕೈತೋರಿಸಿ ಬಲಕ್ಕೆ ತಿರುಗಿಸಿದ್ರಿ, ಬಲಕ್ಕೆ ಕೈ ತೋರಿಸಿ ಎಡಕ್ಕೆ ತಿರುಗಿಸಿದ್ರಿ,ಏನೂ ನಮ್ಮನ್ನೆಲ್ಲ ಯಮ ಲೋಕಕ್ಕೆ ಕಳುಹಿಸಲು ತಯಾರಿ ನಡೆಸಿದ್ರಾ ಹೇಗೆ?" ಕೇಳಿದ. ತನ್ನ ಗಾಡೀನೋ ಇಲ್ಲ ತನ್ನ ಡ್ರೈವಿಂಗನ್ನೋ ಹೊಗಳುತ್ತಾನೆಂತ ಭಾವಿಸಿದವಳಿಗೆ ಅಲ್ಲಂತ ಗೊತ್ತಾಗಿ " ಏನ್ರೀ ನಾನು ಕೈ ತೋರಿಸಿದ್ದು ನೋಡಿದ್ರಿ, ಸರಿ ಹಾಗೇ ನಾನು ಅದನ್ನ ಕ್ಯಾನ್ಸಲ್ ಮಾಡಿದ್ದು ಯಾಕ್ರೀ ನೋಡಿಲ್ಲ? ಪೆದ್ದ ಗುಂಡನ್ನ ತಂದೂ" ಎಂದು ತನ್ನ ಗಾಡಿ ಹತ್ತಿ ನಡೆದೇ ಬಿಟ್ಟಳು." ಗುಂಡ ಮಾತ್ರ ಇದೇನೋ ಹೊಸ ಚಿಹ್ನೆ ಯಾವುದ್ಸು ಬಂತಪ್ಪಾ ಅಂತಾನೇ ಯೋಚಿಸುತ್ತಿದ್ದು ಬಿಟ್ಟ.
ಯಾರದ್ದೋ ಕಷ್ಟ ಯಾರಿಗೋ ಹೆಸರು
ತ್ಯಾಂಪಿಯ ಮೊದಲ ಹೆರಿಗೆ. ಅವಳ ಅಪ್ಪ ಅಮ್ಮ ತ್ಯಾಂಪನ ಅಪ್ಪ ಅಮ್ಮ ಎಲ್ಲರೂ ಒಂದು ಗೂಡಿ ಮಗುವಿನ ಬಗ್ಗೆ ಚರ್ಚಿಸುತ್ತಿದ್ದರು, "ಮಗುವಿನ ಮೂಗು ಅಜ್ಜನದು, ಕಣ್ಣು ಅಜ್ಜಿಯದ್ದು, ಗಲ್ಲ ನೋಡಿ ಥೇಟ್ ಅದರ ಅಮ್ಮನ ಅಮ್ಮನೇ," ಎಲ್ಲ ವಿವರಣೆ ಕೇಳುತ್ತಿದ್ದ ತ್ಯಾಂಪಿಯೆಂದಳು " ಅಲ್ಲ ಇದರ ಮಧ್ಯೆ ಅಷ್ಟು ಕಷ್ಟ ಪಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತ ಅಮ್ಮನ ಸುದ್ದಿಯೇ ಇಲ್ಲ ಅಲ್ಲವಾ?" . ಆಗಲೇ ಆಸ್ಪತ್ರೆಯ ಒಳ ಹೊಕ್ಕಿದ್ದ ತ್ಯಾಂಪನಿಗೆ ಏನನ್ನಿಸಿತೋ ಹೇಳಿಯೇ ಬಿಟ್ಟ" ನಾನೂ ಏನ್ ಕಡಿಮೆ ಕಷ್ಟ ಪಟ್ಟಿದ್ನಾ?".
ಜೀವಂತ ಗೋರಿ
ತ್ಯಾಂಪ ತ್ಯಾಂಪಿಯ ಜಗಳದ ಮಧ್ಯ ತ್ಯಾಂಪಿಗೊಮ್ಮೆ ಯಾಕೋ ಪ್ರೀತಿಯ ಸಂಕೇತವಾದ ತಾಜಮಹಲ್ ನೆನಪಿಗೆ ಬಂತು. "ನೋಡೀ ಆ ರಾಜ ತನ್ನ ಹೆಂಡತಿಯ ಪ್ರೀತಿಗಾಗಿ ತಾಜ ಮಹಲ್ ಕಟ್ಟಿಸಿದ ನೀವೂ ಇದ್ದೀರಾ ದಂಡಕ್ಕೆ". ತ್ಯಾಂಪ ಉತ್ತರ ಕೊಟ್ಟ "ಹೌದೇ , ಆತ ತನ್ನ ಹೆಂಡತಿ ಸತ್ತ ಮೇಲೆ ಅದನ್ನ ಕಟ್ಟಿಸಿದ, ನಂಗಂತೂ ನಿನ್ನನ್ನ ಜೀವಂತ ಇರೋವಾಗಲೇ ನಿನ್ನ ಮೇಲೆ ಕಟ್ಟಿಸೋ ಮನಸ್ಸು ಬರುತ್ತಾ ಇದೆ ಕಣೇ"
ಕಳೆದುದು ಹೊಸದಾಗಿ ಸಿಕ್ಕಲು
ಒಂದು ಸಾರಿ ತ್ಯಾಂಪಿ ಹದಿನೈದು ದಿನಗಳಿಂದ ಮನೆಗೇ ಬರದಿದ್ದುದು ನೋಡಿ ಅಶ್ಚರ್ಯವಾಯ್ತು. ತ್ಯಾಂಪ ತನ್ನ ಪಕ್ಕದ ಮನೆಯರೊಂದಿಗೆ ಪೋಲೀಸ್ ಸ್ಟೇಶನ್ ನಲ್ಲಿ ಕಂಪ್ಲೈಂಟ್ ಕೊಡಲು ನಡೆದ.ಪೋಲೀಸರು ತ್ಯಾಂಪಿಯ ಚಹರೆ ವಿವರಿಸಲು ಹೇಳಿದಾಗ ಈತ ಕೊಟ್ಟ ವಿವರಣೆ ಕೇಳಿ ಅವನ ಪಕ್ಕದ ಮನೆಯಾತ ದಂಗಾಗಿ ಅವನನ್ನು ಪಕ್ಕಕ್ಕೆ ಕರೆದು ಕೇಳಿಯೇ ಬಿಟ್ಟ. "ಏನಯ್ಯಾ ತ್ಯಾಂಪ ನಿನ್ನ ಹೆಂಡತಿ ತ್ಯಾಂಪಿ ಹೀಗಿರಲಿಲ್ಲವಲ್ಲಾ?". ತ್ಯಾಂಪನೆಂದ "ಪೋಲೀಸರು ಹುಡುಕಿದರೆ ಯಾವುದಾದರೂ ಒಳ್ಳೇ ಹೆಂಡತಿಯನ್ನೇ ಹುಡುಕುತ್ತಾರೆ ಹುಡುಕಲಿ ಬಿಡಿ" ಖುಷಿಯನ್ನ ಅದುಮಿಕೊಂಡು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
'ಶಾಪಿಂಗ್' ಗುಬ್ಬಣ್ಣ ...!
ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)
ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)