ಜರ್ಮನಿಯ ಥಾಮಸ್ ಮುಲ್ಲರ್ ಎಗರಿ ಒದ್ದ ಚೆಂಡು, ಗೋಲು ಪೆಟ್ಟಿಗೆಯಲ್ಲಿ ಬಿತ್ತು.
-ಟೈಮ್ಸ್ ಆಫ್ ಇಂಡಿಯ ಸೌಜನ್ಯದಿಂದ.
ಬ್ಲೂಮ್ಫೌಂಟೇನ್ ಫ್ರೀ ಸ್ಟೇಟ್ ಕ್ರೀಡಾಂಗಣದಲ್ಲಿ, ೨೭, ಜೂನ್, ೨೦೧೦ ರ ರವಿವಾರದ ಸಂಜೆ ನಡೆದ ರೋಚಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಜರ್ಮನಿ ತಂಡ ೪-೧ ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಸೋಲಿಸಿತು. ಯುವ-ಆಟಗಾರರ ಪಡೆಯನ್ನು ಹೊಂದಿದ ಜರ್ಮನಿ ತಂಡ, ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ನ್ನು ಅತ್ಯಂತ ಸಮರ್ಥರೀತಿಯಲ್ಲಿ ಗೆದ್ದು, ಪ್ರವೇಶಿಸಿತು.
ಜಗತ್ತಿಗೆ ಪುಟ್ಬಾಲ್ ಆಟವನ್ನು ಹೇಳಿಕೊಟ್ಟ ಪ್ರಬಲ ಇಂಗ್ಲೆಂಡ್ ತಂಡವನ್ನು ಭಾರಿ ಅಂತರದಲ್ಲಿ ಮಣಿಸಿ, ಮುಂದುವರೆದ ಜರ್ಮನಿ ಫುಟ್ಬಾಲ್ ಇತಿಹಾಸದ ಹೊತ್ತಿಗೆಗೆ ಒಂದು ಹೊಸಪುಟವನ್ನು ಸೇರಿಸಿದರು. ೨೦ ವರ್ಷಪ್ರಾಯದ ಜರ್ಮನಿಯ ಆಟಗಾರ, ಥಾಮಸ್ ಮುಲ್ಲರ್ ಅವರು ೬೭ ಹಾಗೂ ೭೦ ನೇ ನಿಮಿಷಗಳಲ್ಲಿ ಗೋಲು ಗಳಿಸಿ ತಮ್ಮ ತಂಡದ ಗೆಲುವಿನ ಅಂತರವನ್ನು ೪-೧ ಕ್ಕೆ ಹಿಗ್ಗಿಸಿದರು. ಈ ಮನೋಜ್ಞ ಪ್ರದರ್ಶನಕ್ಕಾಗಿ ಮುಲ್ಲರ್ ಪಂದ್ಯದ ಪುರುಷೋತ್ತಮ ಗೌರವ ಪಡೆದರು.
೧೯೬೬ ರಲ್ಲಿ, ಇಂಗ್ಲೆಂಡ್ ನ,'ವೆಂಬ್ಲಿ' ಯಲ್ಲಿ ನಡೆದ ಫೈನಲ್ ಪಂದ್ಯದದಲ್ಲಿ ಇಂಗ್ಲೆಂಡಿನಮೇಲೆ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಜರ್ಮನಿ, ಆರಂಭದಿಂದಲೂ, ಜಿಗಣಿಯಂತೆ ಕಾಡಿಸುತ್ತುವರಿದ, ಜರ್ಮನಿಯ ಫಿಲಿಪ್ ಲಹಾಮ್ ಪಡೆಗೆ ಜಯವಧು ವರಮಾಲೆಯನ್ನು ಹಾಕಿ ಸಂಭ್ರಮಿಸಿದಳು.
ಹಸಿದ ಹುಲಿಯಂತ, ಅರ್ಭಟಿಸುತ್ತಾ ನುಗ್ಗಿದ ಮಿರೋಸ್ಲಾವ್ ಕ್ಲೋಸ್ ಅವರು (೨೦ ನೇ ನಿಮಿಷದಲ್ಲೇ), ಜರ್ಮನಿಯ ಗೋಲು ಖಾತೆ ತೆರೆದರು ಲೂಕಾಸ್ ಪೋಡೊಲಸ್ಕಿ (೩೨ ನೇ ನಿಮಿಷದಲ್ಲಿ.), ಥಾಮಸ್ ಮುಲ್ಲರ್ (೬೭ ನೇ ಮತ್ತು ೭೦ ನೇ ನಿಮಿಷದಲ್ಲಿ) ಹಾಗೂ ಇಂಗ್ಲೆಂಡ್ನ ಮ್ಯಾಥ್ಯೂ ಅಪ್ಸನ್ (೩೭ ನೇ ನಿಮಿಷದಲ್ಲಿ.) ಗೋಲು ಗಳಿಸಿದರು.
ವಿರಾಮದ ವೇಳೆಗೆ ೨-೧ ಗೋಲು ಗಳಿಂದ ಮುಂದಿದ್ದ ಜರ್ಮನಿ ತಂಡ ಬಳಿಕ, ರಣತಂತ್ರ ಬದಲಿಸಿಕೊಂಡು ಕಣಕ್ಕೆ ಇಳಿಯಿತು. ಪರಿಣಾಮವಾಗಿ ಇಂಗ್ಲೆಂಡ್ ಅಂಗಳದಲ್ಲಿಯೇ ಚೆಂಡನ್ನು ನಿಯಂತ್ರಣಕ್ಕೆ ಪಡೆದು ಎದುರಾಳಿ ಅಂಕಣದ ಮೇಲೆ ದಾಳಿ ನಡೆಸುವುದಕ್ಕೆ ಮುಂದಾಯಿತು. ಮೊದಲು ಇಂಗ್ಲೆಂಡ್ ಹಾಗೂ ಜರ್ಮನಿಯ ಅತ್ಯಂತ ಸಮರ್ಥರಾಗಿ ಕಂಡುಬಂದರು. ಆದರೆ ಬರಬರುತ್ತಾ ಜರ್ಮನಿ ತಂಡದವರ ಪ್ರಹಾರ ಏರುತ್ತಾ ಹೋದಂತೆ ಇಂಗ್ಲೆಂಡ್ ನ ಸ್ಕೋರ್ ಮೊತ್ತವೂ ಒಂದು ಗೊಲಿನಿಂದ ಮೇಲೇರಲೇ ಇಲ್ಲ. ರೆಫ್ರಿ ಇಂಗ್ಲೆಂಡ್ ನ ತಂಡದವರು ಹೊಡೆದ ಗೋಲನ್ನು ಒಪ್ಪಿಕೊಳ್ಳದೆ ನಿರಾಕರಿಸಿದರು :
ಪಂದ್ಯದ ೩೮ ನೇ ನಿಮಿಷದಲ್ಲಿ ಇಂಗ್ಲೆಂಡ್ನ ಫ್ರಾಂಕ್ ಲಾಂಪಾರ್ಡ್ ಅವರು ಗುರಿಯತ್ತ ಹೊಡೆದ ಚೆಂಡು ಕ್ರಾಸ್ಬಾರ್ಗೆ ಬಡಿದು ಲೆನ್ ಒಳಗೆ ಬಿದ್ದಿದ್ದನ್ನು ವಿಶ್ವದ ಪುಟ್ಬಾಲ್ ರಸಿಕರೆಲ್ಲಾ ನೋಡಿ ಮೂಗಿನಮೇಲೆ ಬೆರಳಿಟ್ಟುಕೊಂಡರು. ಆದರೆ, ಉರುಗ್ವೆಯ ರೆಫರಿ ಜಾರ್ಗ್ ಲಾರಿಯೊಂಡಾ ಗೋಲು ನಿರಾಕರಿಸಿದರು. ಟೆಲಿವಿಜನ್ ನಲ್ಲಿ ಪುನಃ ಪ್ರಸಾರವಾದಮೇಲೂ ಅದರಲ್ಲಿ ಸ್ಪಸ್ಟವಾಗಿ, ಚೆಂಡು ಗೋಲು ಪಟ್ಟಿಯನ್ನು ದಾಟಿದ್ದು ಕಾಣಿಸಿದಮೇಲೂ, ಲೈನ್ಸ್ಮನ್ ಚೆಂಡು ನೆಲಕ್ಕೆ ತಗಲುವ ಸಮಯದಲ್ಲಿ ಪೋಸಿಷನ್ನಲ್ಲಿ ಇಲ್ಲವಾದ್ದರಿಂದ ಇಂಗ್ಲೆಂಡ್ಗೆ ಗೋಲು ದಕ್ಕದೆ ವಿಧಿಕೈಕೊಟ್ಟಿತು. ಜರ್ಮನ್ ಪಡೆ, ಜೋಕಿಮ್ ಲೋ ರವರ ಬಳಿ ತರಪೇತು ಹೊಂದಿತ್ತು,
ಹದಿನಾರರ ಘಟ್ಟದ ಪಂದ್ಯಕ್ಕಾಗಿ, ಸಂಪೂರ್ಣ ಪೂರ್ವ ಸಿದ್ಧತೆಯನ್ನು ಹಾಸಿಲ್ ಮಾಡಿದ್ದನ್ನು ರಸಿಕರೆಲ್ಲಾ ಗಮನಿಸಿದರು. ಕರಾರುವಾಕ್ ಪಾಸ್ಗಳು ಹಾಗೂ ಲೆಕ್ಕಾಚಾರದ ಆಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಜರ್ಮನ್ ಆಟಗಾರರನ್ನು ಸಂಕಷ್ಟದಲ್ಲಿ ಸಿಲುಕಿಸುವುದಕ್ಕೆ ಇಂಗ್ಲೆಂಡ್, ತಮ್ಮ ತಲೆಯಲ್ಲಿದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿದರೂ ಸಹಿತ, ಅವೆಲ್ಲಾ ಯಾವ ಕೆಲಸಕ್ಕೂ ಬಾರದೆ, ನಿರರ್ಥಕವಾದವು.
ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿ ತಂಡ, ಅರ್ಜೆಂಟೀನಾ- ಮೆಕ್ಸಿಕೊ ತಂಡಗಳ ನಡುವಣ ವಿಜೇತರನ್ನು ಎದುರಿಸಲಿದೆ. ಮಿಡ್ ಫೀಲ್ಡರ್ ರಿಯೊ ಫರ್ನಾಂಡೀಸ್ ಅವರ ಅನುಪಸ್ಥಿಯಲ್ಲಿ ಅವರ ಜಾಗವನ್ನು ಮ್ಯಾಥ್ಯೂ ಅಪ್ಸನ್ ತುಂಬಿದ್ದರಾದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ.
ಪ್ರತಿಕ್ರಿಯೆ (2)