ಅರ್ಥವಾಗದ ಭಾವನೆಗಳು
 
  ನಾನೆಷ್ಟೇ ಕೋಪ ಮಾಡಿಕೊಂಡರು
  ಅದು ಅರೆ ಕ್ಷಣ ಮಾತ್ರ
  ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .
 
  ನನಗೆ ನಿನ್ನ ಮೇಲಿರುವ ಅಸಮಧಾನ
  ನಿಜವಾದುದೆ ಎಂದು ನನಗೆಯೇ ಅನುಮಾನ
  ಏಕೆಂದರೆ ಅದು ಕೇವಲ ಕ್ಷಣಿಕ ಮಾತ್ರ
 
  ನನ್ನೀ ಚುಚ್ಚು ನಡವಳಿಕೆಯನು ನೋಡಿ
  ಮನ ನೊಂದಿದೆಯೇ?
  ನಿನಗೂ ಇದೆಯೇ ಮತಾಡಿಸಬೇಕೆಂದು ನನ್ನ ಜೊತೆ?
 
  ನಾನು ನನ್ನೀ ಭಾವನೆಗಳ ಅರ್ಥೈಸುವ
  ಪ್ರಯತ್ನದಲ್ಲಿರುವೆ.
  ನನ್ನೀ ತಾಕಲಾಟಕ್ಕೆ  ಹುಡುಕಲೆತ್ನಿಸುವೆ ಉತ್ತರ.
 
  ನನ್ನ ಮನದೊಳ ದ್ವಂದ್ವ ವನು ಬಿಡಿಸಿ
  ಅರ್ಥೈಸಿದೆನಿಸಿದರೂ
  ನಿನ್ನ ಮನದಾಳ ಅರಿಯಲು ಬೇಕು ನಿನ್ನ ಪಾತ್ರ.
 
  ಎಷ್ಟೇ ಪ್ರಯತ್ನ ಪಟ್ಟರು ಮನದೊಳ ಭಾವನೆ

  ಸುಳ್ಳಾದೀತೆ? ಬದಲಾದೀತೇ?
  ಆದರೂ ನಿನ್ನ ಅರಿಯಬೇಕೆಂದಿದೆ ನನ್ನಲ್ಲಿನ ಕಾತರ
 
  ಛೆ!! ಬೇಡ ಬೇಡವೆಂದರೂ ಮನಸು ಕೇಳುವುದು
  ನಿನ್ನ ಅಂತರಾಳದ ಬಗ್ಗೆ
  ನನ್ನ ಬಗ್ಗೆ ಇದೆಯೇ ಕಿಂಚಿತ್ ಒಲವಿನ ಚಿತ್ತಾರ?
 
  ನಿಧಾನವಾಗಿ ಮರೆಯಲೆತ್ನಿಸುವೆ ಆದರೂ ಒಮ್ಮೆ
  ನೀ ಅಂತರಂಗ ಬಿಚ್ಚಿ ಹೇಳಿಬಿಡು
  ಶಾಶ್ವತವಾಗಿಯೇ ಉಳಿಯುವೆ ನಿನ್ನಿಂದ ನಾನು ದೂರ.  
 
  - ತೇಜಸ್ವಿ.ಎ.ಸಿ