ಇದೊಂದು ದೊಡ್ಡ ಹಡಗಿನ ಚಲಿಸದ ಯಂತ್ರದ ಕಥೆ.
ಹಡಗಿನ ಒಡೆಯರು ಹಡಗನ್ನು ನಡೆಸಲಾಗದೇ ಕೈಚೆಲ್ಲಿದ್ದರು.
ಒಬ್ಬರಾದ ಮೇಲೆ ಒಬ್ಬ ಕುಶಲರು ಬಂದು ಪ್ರಯತ್ನಿಸಿ ಹಡಗನ್ನು ನಡೆಸಲಾಗದೇ ಸೋತು ಹೋದರು.
ಆಮೇಲೆ ಅವರು ಒಬ್ಬ ವೃದ್ಧ ನಿಪುಣ ತಜ್ಞನನ್ನು ಕರೆತಂದರು.
ಆತ ಚಿಕ್ಕಂದಿನಿಂದ ಇದೇ ಕೆಲಸ ಮಾಡುತ್ತಿದ್ದಾತ. ಆ ವೃದ್ಧ ತನ್ನ ಜತೆ ಒಂದು ದೊಡ್ಡ ಸಲಕರಣೆಯುಳ್ಳ ಚೀಲವನ್ನೂ ತಂದಿದ್ದ. ಆತ ಬಂದ ಕೂಡಲೇ ಕಾರ್ಯನಿರತನಾದ.
ಆತ ಹಡಗಿನಯಂತ್ರವನ್ನು ಅಮೂಲಾಗ್ರವಾಗಿ ಪರಿಶೀಲಿಸ ತೊಡಗಿದ. ಹಡಗಿನ ಒಡೆಯರು ಜತೆಯಲ್ಲೇ ಇದ್ದು ಅವನನ್ನೂ ಅವನ ಕಾರ್ಯವನ್ನೂ ಆಸಕ್ತಿಯಿಂದ ದಿಟ್ಟಿಸುತ್ತಿದ್ದರು, ಇವನ ಕಾರ್ಯ ಕ್ಷಮತ್ವತೆಯ ಬಗ್ಗೆ ಅವರಿಗೆ ಎಳ್ಳಷ್ಟೂ ಅನುಮಾನವಿರಲಿಲ್ಲ.
ನಿಪುಣ ತನ್ನ ಚೀಲದಿಂದ ಒಂದು ಸಣ್ಣ ಸುತ್ತಿಗೆಯನ್ನು ಹೊರತೆಗೆದ, ನಿಧಾನವಾಗಿ ಆತ್ಮವಿಶ್ವಾಸದಿಂದ ಆತ ಆ ಯಂತ್ರದ ಯಾವುದೋ ಭಾಗವನ್ನು ತನ್ನ ಕೈಲಿರುವ ಆ ಸುತ್ತಿಗೆಯಿಂದ ತಟ್ಟಿದ.
ಅಗೋ ಯಂತ್ರ ಒಮ್ಮೆ ನಡುಗಿ ಜೀವಂತವಾಯ್ತು. ಚಲಿಸಲು ಆರಂಭ ಮಾಡಿತು.
ಆತ ತನ್ನ ಪುಟ್ಟ ಸುತ್ತಿಗೆಯನ್ನು ತನ್ನ ಚೀಲದಲ್ಲಿ ಭದ್ರಮಾಡಿಕೊಂಡು ಹೊರನಡೆದ.
ಒಂದು ವಾರದ ಬಳಿಕ ಹಡಗಿನ ಒಡೆಯರಿಗೆ ಐವತ್ತು ಸಾವಿರ ರುಪಾಯಿಗಳ ಒಂದು ಬಿಲ್ ಬಂತು, ಹಡಗಿನ ಯಂತ್ರವನ್ನು ದುರಸ್ಥಿ ಮಾಡಿದುದಕ್ಕಾಗಿ.
ಹಡಗಿನ ಒಡೆಯರು ಆಶ್ಚರ್ಯ ಚಕಿತರಾದರು
"ಆ ಮುದುಕ ಮಾಡಿದ್ದಾದರೂ ಏನು....?, ಬರೇ ಒಂದು ಸಣ್ಣ ಸುತ್ತಿಗೆಯ ಒಂದು ಪೆಟ್ಟಿಗೆ ಐವತ್ತು ಸಾವಿರ ರುಪಾಯಿಗಳೇ.....?" .
ಅವರು ಆ ವೃದ್ಢನಿಗೆ ಸಂಪೂರ್ಣವಾಗಿ ಅವನ ಕೆಲಸದ ವಿವರ ತಿಳಿಸಲು ಕೇಳಿ ಪತ್ರ ಬರೆದರು.
ನಿಪುಣ ತಜ್ಞ ವೃದ್ಧ ತಕ್ಷಣವೇ ಉತ್ತರಿಸಿದ.
" ಸುತ್ತಿಗೆಯನ್ನು ಉಪಯೋಗಿಸಿದ್ದಕ್ಕಾಗಿ ೧೦ ರುಪಾಯಿಗಳು,
ಆದರೆ ಎಲ್ಲಿ ಸುತ್ತಿಗೆಯನ್ನು ಉಪಯೋಗಿಸಬೇಕಾಗಿತ್ತೋ ಅದನ್ನು ಯೋಚಿಸಿದ್ದಕ್ಕಾಗಿ ೪೯,೯೯೦ ರುಪಾಯಿಗಳು,
ಒಟ್ಟು ಮೊತ್ತ ಐವತ್ತು ಸಾವಿರ ರುಪಾಯಿಗಳು"
ಒಟ್ಟಾರೆ ಈ ಕಥೆಯ ಸಾರಾಂಶ
ಪ್ರಯತ್ನ ನಮ್ಮ ಜೀವನದಲ್ಲಿ ಅತೀ ಮುಖ್ಯ ಹೌದು ,
ಆದರೆ ಆ ಪ್ರಯತ್ನವನ್ನು ಎಲ್ಲಿ ಯಾವಾಗ ಎಷ್ಟು ಮಾಡಬೇಕು? ಎಂಬುದನ್ನು ತಿಳಿದುಕೊಳ್ಳುವುದೇ ನಿಪುಣತೆ.
ಪ್ರೀತಿಯಿಂದ
ನೆಟ್ ಅಧಾರ
ಪ್ರತಿಕ್ರಿಯೆ (3)