ಏಡ್ಸ್ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಏಡ್ಸ್ ಎಂಬ ಭಯ ಈಗ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಕೇಕ್! ಕಾಂಡೋಮ್ ಮಾರಾಟಕ್ಕೆ, ಗ್ರೀಟಿಂಗ್ ಕಾರ್ಡ್ ಮಾರಾಟಕ್ಕೆ, ತಾರೆಯರ ಪ್ರಚಾರಕ್ಕೆ, ಔಷಧಿಗಳ ಪ್ರಯೋಗಕ್ಕೆ ಅಷ್ಟೇ ಏಕೆ ಬಿಲ್ ಗೇಟ್ಸ್ ನ ವಿಂಡೋ ಮಾರಾಟಕ್ಕೂ ಏಡ್ಸೇ ಬೇಕು!

 

 ಏಡ್ಸ್ ಎಂದರೆ ಎಲ್ಲರಿಗೂ ಗೊತ್ತಿರುವಂತೆ Aquired Immuno Deficiency syndrome!

 

 ಕೆಲ ದಿಟಗಳು ಹೀಗಿವೆ.

 

೧. ಎಲೈಸಾ (Enzyme-linked immunosorbent assay ) ಟೆಸ್ಟಿನಲ್ಲಿ ಹೆಚ್ ಐ ವಿ ಪಾಸಿಟಿವ್ ಬಂದರೆ ಅದು ಎಲ್ಲ ಸಮಯದಲ್ಲೂ ಏಡ್ಸ್ ಆಗಿರಬೇಕಿಲ್ಲ. ಏಡ್ಸ್ ಅಲ್ಲದೇ ಸುಮಾರು ಅರವತ್ತು ಕಾರಣಗಳಿಂದಾಗಿ ಎಚ್ ಐ ವಿ ಪಾಸಿಟಿವ್ ಎಂದು ಟೆಸ್ಟಿನ ಉತ್ತರಗಳು ಬರಬಹುದು.

 

೨. ಒಂದು ಗುಳಿಗೆ ತೆಗೆದುಕೊಂಡರೆ ಏಡ್ಸ್ ತಾಯಿಯಿಂದ ಮಕ್ಕಳಿಗೆ ಹರಡುವುದಿಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಗುಳಿಗೆಯು ಪ್ರಯೋಗದಲ್ಲಿರುವುದಷ್ಟೇ ಹೊರತು ಇನ್ನು ಪ್ರಮಾಣಿತವಾಗಿಲ್ಲ.

 

೩. ಏಡ್ಸ ಮುಂದೂಡಲೆಂದು ಕೊಡುವ ಔಷಧಿಗಳು ಬಹುತೇಕ ಪ್ರಯೋಗಗಳೆ ಹೊರತು ಇವುಗಳು ಏಡ್ಸ್ ದುಷ್ಪರಿಣಾಮಗಳನ್ನು ಮುಂದೂಡುತ್ತವೆ ಎಂಬುದಕ್ಕೆ ನಿಖರ ಸಾಕ್ಷ ಇಲ್ಲ.

 

೪. ಅಸುರಕ್ಷಿತ ಲೈಂಗಿಕತೆಯಲ್ಲಿ ಸಾವಿರ  ಸಂಪರ್ಕಗಳಿಗೆ ಒಂದು ಬಾರಿ ಮಾತ್ರ ಎಚ್ ಐ ವಿ ಹರಡುವ ಸಾಧ್ಯತೆಗಳಿವೆ.

 

೫. ಕಾಂಡೋಮ್ ಏಡ್ಸ್ ನ್ನು ನಿಯಂತ್ರಿಸುವುದಿಲ್ಲ.

 

೬. ಏಡ್ಸ್ ಎಂದರೆ ಹೆಚ್ ಐ ವಿ ಮಾತ್ರವೇ ಅಲ್ಲ. ಏಡ್ಸ್ ಗೆ ಇನ್ನೂ ಆಯಾಮಗಳಿವೆ.

 

೭.  ಎಲ್ಲಿಯವರೆಗೆ ನಿಮ್ಮ ದೇಹದಲ್ಲಿ ರೋಗ ನಿರೋಧಕತೆ ಬಲವಾಗಿರುತ್ತದೋ ಅಲ್ಲಿಯವರೆಗೆ ಹೆಚ್ ಐ ವಿ ನಿಮ್ಮನ್ನು ಬಾಧಿಸಲಾರದು.

 

೮. ಹೆಚ್ ಐ ವಿಯ ಸಂಖ್ಯೆ ಪ್ರತಿಯೊಬ್ಬರಲ್ಲೂ ಏರುಪೇರಾಗುತ್ತದೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿದೆ. ಹಾಗಾಗಿ ಒಂದರ ಹಿಂದೊಂದು ಎಲೈಸಾ ಟೆಸ್ಟ್ ನಡೆಸಿದರೆ ಕೆಲವೊಮ್ಮೆ ಪಾಸಿಟಿವ್ ಮತ್ತು ಕೆಲವೊಮ್ಮೆ ನೆಗೆಟಿವ್ ಬರುತ್ತದೆ.

 

 ೯ ಏಡ್ಸ್ ಎಂಬ ಭೀತಿ ಅತ್ಯಂತ ವ್ಯವಸ್ಥಿತ ಪಿತೂರಿ. ನಾಚಿಗ್ಗೇಡಿನ ಸಂಗತಿಯೆಂದರೆ ಸರ್ಕಾರವೂ ಇದರಲ್ಲಿ ಭಾಗವಹಿಸಿದೆ.

 

  ಇಂತಹ ಅನೇಕ ಕಣ್ಣು ತೆರೆಸುವ ದಿಟಗಳು ಹರೀಶಣ್ಣರ (ಬಿ.ಪಿ.ಹರಿಚಂದ್ರ) "ಗಣಪತಿ ಪೂಜೆ ಮಾಡಿ, ಏಡ್ಸ್ ನಿಂದ ದೂರವಿರಿ" ಎಂಬ ಹೊತ್ತಗೆಯಲ್ಲಿ ದಾಖಲಾಗಿವೆ. ಸುಮಾರು ವರುಷಗಳ ಸಂಶೋಧನೆ, ಪರಿಶ್ರಮ, ಒಡನಾಟ ಓಡಾಟಗಳ ಹಿನ್ನೆಲೆಯಿದೆ ಈ ಹೊತ್ತಗೆಗೆ! ವೀಣಾಧರಿಯವರನ್ನು ಬಿಟ್ಟರೆ ಏಡ್ಸ್ ಬಗ್ಗೆ ಅತ್ಯಂತ ದಾಖಲಾತ್ಮಕವಾಗಿ, ಆಳವಾದ ಅಧ್ಯಯನ ಮಾಡಿದವರು ಹರೀಶಣ್ಣ ಎನ್ನಬಹುದು

 

 ಸಧ್ಯಕ್ಕೆ ಹೊತ್ತಗೆಯು ಕರಡು ತಿದ್ದುವಿಕೆಗಾಗಿ ನನ್ನ ಬಳಿ ಇದೆ. ಗಣೇಶ ಚೌತಿಯ ಹೊತ್ತಿಗೆ ಮಾರುಕಟ್ಟೆಗೆ ಬರಲಿದೆ. ಗಣಪತಿಯ ಪೂಜೆಯಿಂದ ಏಡ್ಸ್ ಹೇಗೆ ತಡೆಯಬಹುದು? ಏಡ್ಸ್ ಭೀತಿಯ ಮೂಲಕ ಭಾರತದೊಳಗೆ ಪ್ರವೇಶಿಸುವ ಮಾರುಕಟ್ಟೆಯ ಹುನ್ನಾರ ಎಂತಹುದು? ಇದರಿಂದ ಆರೋಗ್ಯದ ಮೇಲೆ ಮತ್ತು ಆರ್ಥ ವ್ಯವಸ್ಥೆಯ ಮೇಲ ಪರಿಣಾಮಗಳೇನು? ಇತ್ಯಾದಿ ವಿಮರ್ಶೆಗಳು ಹೊತ್ತಗೆಯಲ್ಲಿವೆ.

 

 ಕೆಲವೊಂದು ಕಡೆ ಆಧ್ಯಾತ್ಮಿಕ ಚಿಂತನೆ ನಡೆಸಿರುವುದು ಹಲವರಿಎ ಹಿಡಿಸದಿರಬಹುದು. ಆದರೆ ವೈಜ್ಞಾನಿಕ ಆಧಾರಗಳೊಂದಿಗೆ ಪ್ರಸ್ತುತ ಪಡಿಸಿರುವ ಕಡೆ ಲೇಖಕರನ್ನು ಅಲ್ಲಗಳೆಯಲಾಗದು.