1
ಧೀರ್ಘಾಯುವಾಗಲು
ಯುವಕ: ವೈದ್ಯರೇ ಧೀರ್ಘಾಯುವಾಗಲು ಏನಾದರೂ ಉಪಾಯವಿದೆಯೇ?
ವೈದ್ಯ: ನೀವು ಮದುವೆಯಾಗಿ ಬಿಡಿ
ಯುವಕ: ನಿಜಕ್ಕೂ ಇದು ಒಳ್ಳೆಯ ಉಪಾಯವೇ?
ವೈದ್ಯ: ಅಲ್ಲ,ಮದುವೆಯಾದರೆ ನೀವು ಇನ್ನು ಈ ಜನ್ಮದಲ್ಲಿ ಧೀರ್ಘಾಯುಷ್ಯದ ಬಗ್ಗೆ ಯೋಚಿಸಲಿಕ್ಕಿಲ್ಲ
2
ಯಾರು ಅತ್ಯಂತ ವಿಧೇಯ
ಒಮ್ಮೆ ಒಬ್ಬ ತಂದೆ ತನ್ನ ನಾಲ್ಕು ಮಕ್ಕಳನ್ನು ಕರೆದು ಅವರೆದುರಿಗೆಒಂದು ಆಟಿಕೆ ಇಟ್ಟು ನಿಮ್ಮಲ್ಲಿ ಯಾರು ಅತ್ಯಂತ ವಿಧೇಯ ರೋ ಅವರು ಈ ಆಟಿಕೆ ತೆಗೆದುಕೊಳ್ಳಿ ಅಂದನಂತೆ.
ಮಕ್ಕಳಿಗೆ ಅವನ ಮಾತುಗಳು ಅರ್ಥ ಆಗಲಿಲ್ಲ ಎನ್ನುವುದು ಅವರ ಕಣ್ಣುಗಳಲ್ಲಿಯೇ ಅರ್ಥವಾಯ್ತು ಅತನಿಗೆ.
ಆತ ಅದನ್ನು ಪುನ " ಸರಿ ಯಾರು ದಿನವೆಲ್ಲಾ ಅಮ್ಮನ ಮಾತು ಕೇಳುತ್ತಾರೋ ಅವಳಿಗೆ ಯಾವಾಗಲೂ ಸಹಾಯ ಮಾಡುತ್ತಾರೋ ಅವರು ಈ ಆಟಿಕೆ ತೆಗೆದುಕೊಳ್ಳಬಹುದು" ಎಂದ.
ಆ ನಾಲ್ಕರಲ್ಲೊಬ್ಬ ಆ ಆಟಿಕೆ ಎತ್ತಿ ಅಪ್ಪನೆಡೆಗೆ ನೀಡುತ್ತಾ " ತಗೋ ಹಾಗಿದ್ದಲ್ಲಿ ಈ ಆಟಿಕೆ ನಿನಗೇ ಸೇರಬೇಕು" ಎಂದ
3
ಒಂದೆ ಕಾರಣ
ಇಬ್ಬರು ಮಾತನಾಡುತ್ತಿದ್ದರು.
ಒಬ್ಬ: ನಾನು ಹೊರಗಡೆ ತಿನ್ನುವುದು, ಮನೆ ತೊಳೆಯುವುದು,ಇಸ್ತ್ರಿ ಮುಂತಾದ ಕೆಲಸಗಳಿಂದ ಬೇಸತ್ತು ಮದುವೆಯಾದೆ.
ಇನ್ನೊಬ್ಬ: ಪರಮಾಶ್ಚರ್ಯ, ನಾನೂ ಇವೇ ಕೆಲಸಗಳಿಂದ ಬೇಸತ್ತು ವಿಛ್ಚೇದನ ಪಡೆದಿದ್ದೆ.
4
ಸಾಯೋ ಮಾರ್ಗ
ಸಾಯಲು ತುಂಬಾ ಮಾರ್ಗಗಳಿವೆ : ವಿಷ, ನಿದ್ರೆಯ ಮಾತ್ರೆ, ನೇಣು, ದೊಡ್ಡ ಕಟ್ಟಡದಿಂದ ಹಾರುವುದು, ರೈಲ್ವೇ ಹಳಿಯ ಮೇಲೆ ಮಲಗುವುದು, ಆದರೆ ಕೆಲವರಿಗೆ ಮದುವೆ: ನಿಧಾನ ಅದರೂ ಖಂಡಿತ
5
ಮಾನಸಿಕ ಒತ್ತಡದ ವಿಷಯ
ಪಾಕ್ ಕ್ರಿಕೆಟ್ ನ ನಾಯಕನಿಗೆ ಅತ್ಯಂತ ಹೆಚ್ಚು ಮಾನಸಿಕ ಒತ್ತಡದ ವಿಷಯವೇನು ಗೊತ್ತೇ? ಅದೂ ಗೆಲ್ಲಲು ಒಂದು ರನ್ನು, ೮ ಓವರ್ ಮತ್ತು ಐದು ವಿಕೇಟ್ ಉಳಿದಿರುವಾಗ...?
ಯಾ ಅಲ್ಲಾ !! ಬಹುಮಾನ ವಿತರಣಾ ಸಮಾರಂಭದಲ್ಲಿ ಇಂಗ್ಲೀಷ್ ನಲ್ಲಿ ಮಾತನಾಡಬೇಕಲ್ಲಾ...???
6
ಧೀರ್ಘ ಕಾಲ ಬದುಕಲು
ಹೆಂಗಸರು ಗಂಡಸರಿಗಿಂತ ಜಾಸ್ತಿ ಕಾಲ ಬದುಕಲು ಕಾರಣ ವೇನು...ಗೊತ್ತೇ..??
ಸಮಾನು ಕೊಳ್ಳುವುದರಿಂದ ( ಶಾಪಿಂಗ್!!) ಹೃದಯಾಘಾತವಾಗದು, ಆದರೆ ಅದರ ಬಿಲ್ ಪಾವತಿ ಮಾಡುವುದರಿಂದ ಹಲವೊಮ್ಮೆ.
7
ಅಂತರ
ಸಂಪೂರ್ಣ ಮತ್ತು ಮುಗಿಯಿತುಎರಡು ಶಬ್ದಗಳ ಅಂತರವೇನು?
ನಿಮ್ಮ ಹೆಂಡತಿ ಒಳ್ಳೆಯವಳಾದರೆ ನೀವು ಸಂಪೂರ್ಣರು ಅಲ್ಲವಾದರೆ ನಿಮ್ಮ ಕಥೆ ಮುಗಿಯಿತು.
ನೆಟ್ ಆಧಾರ
ಪ್ರತಿಕ್ರಿಯೆ (12)