ಡಚ್ ವಿರುದ್ಧ ಉರುಗ್ವೆತಂಡ-ಇಂದಿನ ವಿಶ್ವಕಪ್ ಫುಟ್ಬಾಲ್ ಸೆಮಿಫೈನಲ್ ಸಮರದಲ್ಲಿ ಸೆಣೆಸಲಿರುವ ವೀರಾಗ್ರಣಿಗಳು !
ಈಗ ಸದ್ಯಕ್ಕೆ ಉಳಿದಿರುವ ದಕ್ಷಿಣ  ಅಮೆರಿಕದ ಬಲಿಷ್ಟತಂಡ, ಉರುಗ್ವೆ, ಯೂರೊಪಿಯನ್ ವೀರರಲ್ಲೊಬ್ಬರಾದ ನೆದರ್ಲ್ಯಾಂಡ್ ಬಣವನ್ನು ಇಂದು, ದ. ’ಆಫ್ರಿಕದ ಕೇಪ್ ಟೌನ್ ನ ಗ್ರೀನ್ ಪಾಯಿಂಟ್ ಸ್ಟೇಡಿಯಮ್’ ನಲ್ಲಿ ಎದುರಿಸಲಿದೆ.
ಉರುಗ್ವೆ ತಂಡದ ಪುಟ್ಟಪೂರ್ವೊತ್ತರಗಳು :
೧೬ ನೆಯ ಶ್ರೇಯಾಂಕಾಂಕಿತ ಈ ಟೀಮು, ಉರುಗ್ವೆ ಘಾನಾ ವಿರುದ್ಧದ ಕ್ವಾರ್ಟರ್ ಫೈನಲ್ ಮ್ಯಾಚ್ ನಲ್ಲಿ ಹೆಚ್ಚುವರಿ ಸಮಯದಲ್ಲಿ ಲೂಯಿಸ್ ಸುಯೇಝ್ ರ ಭರ್ಜರಿ ಗೋಲ್ ಸಹಾಯದಿಂದ ಅದ್ಭುತ ವಿಜಯವನ್ನು ಹಾಸಿಲ್ ಮಾಡಿತ್ತು. ಉರುಗ್ವೆಯ ಡಿಫೆಂಡರ್ ವಿಕ್ಟೋರಿನೊ ಡಚ್ ಕೋಚ್ ನ್ನು ಹೊಗಳಿ ಡಚ್ ತಂಡದ ಇಂದಿನ ರೂಪಕ್ಕೇ ಅವರೇ ಕಾರಣರೆಂದು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದಾರ‍ೆ. ಬ್ರೆಝಿಲ್ ಅರ್ಜೆಂಟೀನ, ಪರಗ್ವೆ ಬಣಗಳು ಕ್ವಾರ್ಟರ್ ಒಫೈನಲ್ ನಲ್ಲಿ ನಿರ್ಗಮಿಸಿದ ಬಳಿಕ, ಉಳಿದೊಂದು ಟೀಮೇ ಅಂತಿಮ ೪ ರ ಘಟ್ಟಕ್ಕೇರಿದ ಏಕೈಕ ದಕ್ಷಿಣ ಅಮೆರಿಕದ ತಂಡ. ೧೯೩೦ ಮತ್ತು ೧೯೫೦ ರಲ್ಲಿ ವಿಶ್ವಕಪ್ ಜಯಗಳಿಸಿರುವ ಉರುಗ್ವೆ ಟೀಂ, ೧೯೭೦ ರಲ್ಲಿ ಸೆಮಿಫೈನಲ್ ಗೇರಿ, ೪ ನೆಯ ಸ್ಥಾನದಲ್ಲಿತ್ತು.
ಹಾಲೆಂಡ್ ತಂಡದ ಪುಟ್ಟಪೂರ್ವೋತ್ತರಗಳು :
೧೯೭೪ ಹಾಗೂ ೧೯೭೮ ರ ವಿಶ್ವಕಪ್ ನಲ್ಲಿ ಅಥಿತೇಯ ಜರ್ಮನಿ, ಅರ್ಜೆಂಟೀನದಿಂದ ಪರಾಜಿತವಾಗಿತ್ತು. ವಿಶ್ವಕಪ್ ನಲ್ಲಿ ನಮ್ಮ ೫ ನೆಯ ಗೆಲುವು, ೨೪ ಪಂದ್ಯಗಳಲ್ಲಿ ಅಜೇಯವಾಗಿ ನಾಗಾಲೋಟದಿಂದ ಓಡುತ್ತಿರುವ ನೆದರ್ ಲ್ಯಾಂಡ್ಸ್ ೧೯೯೮ ರ ಬಳಿಕ ಮೊದಲಬಾರಿಗೆ ವಿಶ್ವಕಪ್ ನ ಸೆಮಿಫೈನಲ್ ಹಂತಕ್ಕೇರಿದೆ. ಫ್ರಾನ್ಸ್ ನಲ್ಲಿ ಜರುಗಿದ ವಿಶ್ವಕಪ್ ನಲ್ಲಿ ಪೆನಾಲ್ಟಿ ಸಮಯದಲ್ಲಿ ಬ್ರೆಝಿಲ್ ಗೆ ಶರಣಾಗಿತ್ತು ಈ ತಂಡ.  ಬ್ರೆಝಿಲ್ ನ್ನು ಪರಾಭವಗೊಳಿಸಿದಮೇಲೆ, ನಮ್ಮ ಆತ್ಮ ವಿಶಾಸದಬಲ ನೂರ್ಮಡಿಯಾಗಿದೆ, ಅಂತಿಮ ಘಟ್ಟದಿಂದ ಮೇಲೇರಿ ಫೈನಲ್ ನಲ್ಲಿ ನಾವು ವಿಜೃಂಬಿಸುತ್ತೇವೆ ಇದು ಖಂಡಿತ", ಎನ್ನುತ್ತಾರೆ ಡಚ್ ಕ್ಯಾಪ್ಟನ್ ಜಿಯೊವೆನಿ ಬ್ರೋನ್ ಕೊರ್ಸ್ಟ್. 
ಡಚ್ ತಂಡ ಶ್ರೇಷ್ಟ ಕಠಿಣ ಪರಿಶ್ರಮಿಗಳು ಹಾಗೂ ಅವರ ದಾಳಿ ಹಾಗೂ ರಕ್ಷಣಾ ಕೋಟೆಯು ಸಮತೋಲನ ಸ್ತಿತಿಯಲ್ಲಿದೆ ; ಆಟಗಾರರನ್ನು ಹೊಂದಿದೆ.
ಆಟದ ಶೈಲಿಗೆ ಟೀಕೆಗಳನ್ನು ಎದುರಿಸುತ್ತಿರುವ ಡಚ್ ತಂಡ ತನ್ನ ವಿನ್ನಿಂಗ್ ಗೆ ಹಾಕಿಕೊಂಡಿರುವ ವಿಧಾನದ ನಿಲುವನ್ನು ಬದಲಾಯಿಸಲು ಕೋಚ್ ನಿರಾಕರಿಸಿದ್ದಾರ‍ೆ.
ಡಚ್ ರ ವಿರುದ್ಧ ಅಷ್ಟು ಸುಲಭವಾಗಿಲ್ಲ. ಯೇಕೆಂದರೆ ಇದು ಅಜೇಯವಾಗಿರುವ ತಂಡ ; ಅತ್ಯುತ್ತಮ ಆಟಗಾರರ ಪಡೆಯೇ ಇದರ ಹಿಂದಿದೆ. ಎಲ್ಲರ ಎಲ್ಲರ ಕಣ್ಮಣಿಯಾಗಿ ಮೆರೆಯುತ್ತಿರುವ ಸ್ಪೇನ್ ಒಳ್ಳೆಯ ಆಟವನ್ನೇನೊ ಪ್ರದರ್ಶಿಸಲಿದೆ. ನಾವೂ ಹಿಂದೆ ಬಿದ್ದಿಲ್ಲ. ಎನ್ನುತ್ತಾರೆ ಉರುಗ್ವೆಯ ಕ್ರೀಡಾಳುಗಳು. 
ದ್ವಿತೀಯ ಸೆಮಿಫೈನಲ್ ನಲ್ಲಿ ಸ್ಪೇನ್ ಜರ್ಮನಿ ವಿರುದ್ಧ ಕಾದಲಿವೆ.
ಪಂದ್ಯದಲ್ಲಿ ಈಗ ಗಾಯಗೊಂಡು ಎದುರಿಸುತ್ತಿರುವ ಕ್ರೀಡಾಳುಗಳ ಅನುಪಸ್ಥಿಯ ಸಮಸ್ಯೆ :
ಉರುಗ್ವೆ ದಲ್ಲಿ, ಖಾಲಿ ಉಳಿದಿದ್ದ ಸ್ಥಾನದಲ್ಲಿ ವಾನ್ ಮಾರ್ವಿಜಿಕ್ ಮತ್ತು ವೋಸ್ಕರ್ ಟಬರೇಝ್ ತಂಡ ಸೇರಲಿದ್ದಾರೆ. ಡಚ್ಚರ ವಿರುದ್ಧದ ೩೯ ಮ್ಯಾಚ್ ಗಳಲ್ಲಿ ೪೩ ಬಾರಿ ಸ್ಕೋರ್ ದಾಖಲಿಸಿರುವ ಸುರೇಜ್ ಸಸ್ಪೆಂಡ್ ಆಗಿ ಹೊರಗುಳಿದ ಪ್ರಮುಖ ಕ್ರೀಡಾಳುವಾಗಿದ್ದಾರ‍ೆ.
ಘಾನ ವಿರುದ್ಧಆಡಿದ ಆಟದ ಸಮಯದಲ್ಲಿ ಬಲಮಂಡಿಗೆ ಏಟುಬಿದ್ದು ನರಳುತ್ತಿರುವ ಉರುಗ್ವೆ ನಾಯಕ ಡಿಯಾಗೋ ಲುಗಾನೋ ಇಂದಿನ  ಆಟವಾಡುವ ಪ್ರಯಾಸದಲ್ಲಿದ್ದಾರ‍ೆ.
ಬ್ರೆಝಿಲ್ ವಿರು ಪಂದ್ಯಾವಳಿಯ ಸಮಯದಲ್ಲಿ ೨ ನೇ ಬಾರಿಗೆ ಹಳದಿ ಚೀಟಿಪಡೆದ ಗ್ರೆಗೊರಿ ಮತ್ತು ಮಿಡ್ ಫೀಲ್ಡರ್ ನೈಜಿಲ್ ಅರ್ಹರಾಗಿಲ್ಲ. ಡಚ್ ತಂಡ ಇದಕ್ಕೆ ಬೇರೆ ಸಮರ್ಥ ಆಟಗಾರರನ್ನು ಬಳಸಿಕೊಳ್ಳಬೇಕಾಗಿದೆ. ಇದುವರೆಗೆ ಬಂದಿರುವ ವರದಿಗಳ ಪ್ರಕಾರ, ಗಾಯಾಳುಗಳಾಗಿ ಬದಿಯಲ್ಲಿದ್ದ ರಾಬಿನ್ ಜೋರಿಸ್ ಇಂದು ಆಟವಾಡಲು ಸಾಧ್ಯವಾಗುವ ಸೂಚನೆಗಳು ಒಡಮೂಡಿವೆ.
ಬ್ರೆಝಿಲ್ ವಿರುದ್ದದ ಆಟದಲ್ಲಿ ಮಂಡಿನೋವಿಗೆ ಒಳಗಾಗಿದ್ದ ವ್ಯಾನ್ ಪರ್ಸಿ ಪಂದ್ಯಾವಳಿಯಲ್ಲಿ ಆಡಿದ ಐದು ಗೆಲುವಿನಲ್ಲಿ ಏಕೈಕ ಗೋಲ್ ಹೊಡೆದಿದ್ದರು. ಮಿಡ್ ಫೀಲ್ಡರ್ ವೆಸ್ಲೆ, ಸ್ನೈಝರ್, ೪ ಗೋಲ್ ಹೊಡೆದಿದ್ದರು. ಬ್ರೆಝಿಲ್ ಮೇಲೆ ೨ ಗೋಲ್ ಬಾರಿಸಿ,ತಂಡದ ಮರುಹೋರಾಟಕ್ಕೆ ಕಾರಣರಾಗಿದ್ದರು. ಉರುಗ್ವೆ ತನ್ನ ಸ್ಟಾರ್ ಖಿಲಾಡಿ ಸುರೇಝ್ ಸೇವೆಯಿಂದ ವಂಚಿತರಾಗುವ ಸಂಭವಗಳು ಹೆಚ್ಚಾಗಿವೆ. ಆದರೆ ಡಿಯಾಗೋ ಪೋರ್ಲಿನ್ ತಂಡದಲ್ಲಿದ್ದು ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ೩ ಗೋಲ್ ಬಾರಿಸಿದ್ದಾರೆ.
 

ಇಂದಿನ ಸೆಮಿಫೈನಲ್ ನಲ್ಲಿ "ಡಚ್ ತಂಡ" ದೊಡನೆ ಸೆಣೆಸಲು ಭುಜಕ್ಕೆ ಭುಜಕೊಟ್ಟು ಮುಂದಾಗಿರುವ "ಉರುಗ್ಚೆ ತಂಡ "!

-ಚಿತ್ರ : ಕೃಪೆ : ಟೈಮ್ಸ್ ಆಫ್ ಇಂಡಿಯ, ಮಂಗಳವಾರ, ಜುಲೈ, ೬, ೨೦೧೦.

 

 

ಈಗ ಸದ್ಯಕ್ಕೆ ಉಳಿದಿರುವ ದಕ್ಷಿಣ  ಅಮೆರಿಕದ ಬಲಿಷ್ಟತಂಡ, ಉರುಗ್ವೆ, ಯೂರೊಪಿಯನ್ ವೀರರಲ್ಲೊಬ್ಬರಾದ ನೆದರ್ಲ್ಯಾಂಡ್ ಬಣವನ್ನು ಇಂದು, 'ದಕ್ಷಿಣ  ಆಫ್ರಿಕದ ಕೇಪ್ ಟೌನ್ ನ ಗ್ರೀನ್ ಪಾಯಿಂಟ್ ಸ್ಟೇಡಿಯಮ್’ ನಲ್ಲಿ ಎದುರಿಸಲಿದೆ.


ಉರುಗ್ವೆ ತಂಡದ ಪುಟ್ಟಪೂರ್ವೊತ್ತರಗಳು :

 

೧೬ ನೆಯ ಶ್ರೇಯಾಂಕಾಂಕಿತ ಈ ಟೀಮು, ಉರುಗ್ವೆ ಘಾನಾ ವಿರುದ್ಧದ ಕ್ವಾರ್ಟರ್ ಫೈನಲ್ ಮ್ಯಾಚ್ ನಲ್ಲಿ ಹೆಚ್ಚುವರಿ ಸಮಯದಲ್ಲಿ ಲೂಯಿಸ್ ಸುಯೇಝ್ ರ ಭರ್ಜರಿ ಗೋಲ್ ಸಹಾಯದಿಂದ ಅದ್ಭುತ ವಿಜಯವನ್ನು ಹಾಸಿಲ್ ಮಾಡಿತ್ತು. ಉರುಗ್ವೆಯ ಡಿಫೆಂಡರ್ ವಿಕ್ಟೋರಿನೊ ಡಚ್ ಕೋಚ್ ನ್ನು ಹೊಗಳಿ ಡಚ್ ತಂಡದ ಇಂದಿನ ರೂಪಕ್ಕೇ ಅವರೇ ಕಾರಣರೆಂದು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದಾರ‍ೆ.

 

ಬ್ರೆಝಿಲ್ ಅರ್ಜೆಂಟೀನ, ಪರಗ್ವೆ ಬಣಗಳು ಕ್ವಾರ್ಟರ್ ಒಫೈನಲ್ ನಲ್ಲಿ ನಿರ್ಗಮಿಸಿದ ಬಳಿಕ, ಉಳಿದೊಂದು ಟೀಮೇ ಅಂತಿಮ ೪ ರ ಘಟ್ಟಕ್ಕೇರಿದ ಏಕೈಕ ದಕ್ಷಿಣ ಅಮೆರಿಕದ ತಂಡ- ಉರುಗ್ವೆ ತಂಡ !  ೧೯೩೦ ಮತ್ತು ೧೯೫೦ ರಲ್ಲಿ ವಿಶ್ವಕಪ್ ಜಯಗಳಿಸಿರುವ ಉರುಗ್ವೆ ಟೀಂ, ೧೯೭೦ ರಲ್ಲಿ ಸೆಮಿಫೈನಲ್ ಗೇರಿ, ೪ ನೆಯ ಸ್ಥಾನದಲ್ಲಿತ್ತು.

 

ಹಾಲೆಂಡ್ ತಂಡದ ಪುಟ್ಟಪೂರ್ವೋತ್ತರಗಳು :

 

೧೯೭೪ ಹಾಗೂ ೧೯೭೮ ರ ವಿಶ್ವಕಪ್ ನಲ್ಲಿ ಅಥಿತೇಯ ಜರ್ಮನಿ, ಅರ್ಜೆಂಟೀನದಿಂದ ಪರಾಜಿತವಾಗಿತ್ತು. ವಿಶ್ವಕಪ್ ನಲ್ಲಿ ನಮ್ಮ ೫ ನೆಯ ಗೆಲುವು, ೨೪ ಪಂದ್ಯಗಳಲ್ಲಿ ಅಜೇಯವಾಗಿ ನಾಗಾಲೋಟದಿಂದ ಓಡುತ್ತಿರುವ ನೆದರ್ ಲ್ಯಾಂಡ್ಸ್ ೧೯೯೮ ರ ಬಳಿಕ ಮೊದಲಬಾರಿಗೆ ವಿಶ್ವಕಪ್ ನ ಸೆಮಿಫೈನಲ್ ಹಂತಕ್ಕೇರಿದೆ.

 

ಫ್ರಾನ್ಸ್ ನಲ್ಲಿ ಜರುಗಿದ ವಿಶ್ವಕಪ್ ನಲ್ಲಿ ಪೆನಾಲ್ಟಿ ಸಮಯದಲ್ಲಿ ಬ್ರೆಝಿಲ್ ಗೆ ಶರಣಾಗಿತ್ತು ಈ ತಂಡ.  ಬ್ರೆಝಿಲ್ ನ್ನು ಪರಾಭವಗೊಳಿಸಿದಮೇಲೆ, ನಮ್ಮ ಆತ್ಮ ವಿಶಾಸದಬಲ ನೂರ್ಮಡಿಯಾಗಿದೆ, ಅಂತಿಮ ಘಟ್ಟದಿಂದ ಮೇಲೇರಿ ಫೈನಲ್ ನಲ್ಲಿ ನಾವು ವಿಜೃಂಬಿಸುತ್ತೇವೆ ಇದು ಖಂಡಿತ", ಎನ್ನುತ್ತಾರೆ ಡಚ್ ಕ್ಯಾಪ್ಟನ್ ಜಿಯೊವೆನಿ ಬ್ರೋನ್ ಕೊರ್ಸ್ಟ್. ಡಚ್ ತಂಡ ಶ್ರೇಷ್ಟ ಕಠಿಣ ಪರಿಶ್ರಮಿಗಳು ಹಾಗೂ ಅವರ ದಾಳಿ ಹಾಗೂ ರಕ್ಷಣಾ ಕೋಟೆಯು ಸಮತೋಲನ ಸ್ತಿತಿಯಲ್ಲಿದೆ ; ಆಟಗಾರರನ್ನು ಹೊಂದಿದೆ.ಆಟದ ಶೈಲಿಗೆ ಟೀಕೆಗಳನ್ನು ಎದುರಿಸುತ್ತಿರುವ ಡಚ್ ತಂಡ ತನ್ನ ವಿನ್ನಿಂಗ್ ಗೆ ಹಾಕಿಕೊಂಡಿರುವ ವಿಧಾನದ ನಿಲುವನ್ನು ಬದಲಾಯಿಸಲು ಕೋಚ್ ನಿರಾಕರಿಸಿದ್ದಾರ‍ೆ. ಡಚ್ ರ ವಿರುದ್ಧ ಅಷ್ಟು ಸುಲಭವಾಗಿಲ್ಲ. ಯೇಕೆಂದರೆ ಇದು ಅಜೇಯವಾಗಿರುವ ತಂಡ ; ಅತ್ಯುತ್ತಮ ಆಟಗಾರರ ಪಡೆಯೇ ಇದರ ಹಿಂದಿದೆ.  


ಪಂದ್ಯದಲ್ಲಿ ಈಗ ಗಾಯಗೊಂಡು ಎದುರಿಸುತ್ತಿರುವ ಕ್ರೀಡಾಳುಗಳ ಅನುಪಸ್ಥಿಯ ಸಮಸ್ಯೆ :


ಉರುಗ್ವೆ ದಲ್ಲಿ, ಖಾಲಿ ಉಳಿದಿದ್ದ ಸ್ಥಾನದಲ್ಲಿ ವಾನ್ ಮಾರ್ವಿಜಿಕ್ ಮತ್ತು ವೋಸ್ಕರ್ ಟಬರೇಝ್ ತಂಡ ಸೇರಲಿದ್ದಾರೆ. ಡಚ್ಚರ ವಿರುದ್ಧದ ೩೯ ಮ್ಯಾಚ್ ಗಳಲ್ಲಿ ೪೩ ಬಾರಿ ಸ್ಕೋರ್ ದಾಖಲಿಸಿರುವ ಸುರೇಜ್ ಸಸ್ಪೆಂಡ್ ಆಗಿ ಹೊರಗುಳಿದ ಪ್ರಮುಖ ಕ್ರೀಡಾಳುವಾಗಿದ್ದಾರ‍ೆ.

 

ಘಾನ ವಿರುದ್ಧಆಡಿದ ಆಟದ ಸಮಯದಲ್ಲಿ ಬಲಮಂಡಿಗೆ ಏಟುಬಿದ್ದು ನರಳುತ್ತಿರುವ ಉರುಗ್ವೆ ನಾಯಕ ಡಿಯಾಗೋ ಲುಗಾನೋ ಇಂದಿನ  ಆಟವಾಡುವ ಪ್ರಯಾಸದಲ್ಲಿದ್ದಾರ‍ೆ.ಬ್ರೆಝಿಲ್ ವಿರು ಪಂದ್ಯಾವಳಿಯ ಸಮಯದಲ್ಲಿ ೨ ನೇ ಬಾರಿಗೆ ಹಳದಿ ಚೀಟಿಪಡೆದ ಗ್ರೆಗೊರಿ ಮತ್ತು ಮಿಡ್ ಫೀಲ್ಡರ್ ನೈಜಿಲ್ ಅರ್ಹರಾಗಿಲ್ಲ. ಡಚ್ ತಂಡ ಇದಕ್ಕೆ ಬೇರೆ ಸಮರ್ಥ ಆಟಗಾರರನ್ನು ಬಳಸಿಕೊಳ್ಳಬೇಕಾಗಿದೆ.

 

ಇದುವರೆಗೆ ಬಂದಿರುವ ವರದಿಗಳ ಪ್ರಕಾರ, ಗಾಯಾಳುಗಳಾಗಿ ಬದಿಯಲ್ಲಿದ್ದ ರಾಬಿನ್ ಜೋರಿಸ್ ಇಂದು ಆಟವಾಡಲು ಸಾಧ್ಯವಾಗುವ ಸೂಚನೆಗಳು ಒಡಮೂಡಿವೆ.ಬ್ರೆಝಿಲ್ ವಿರುದ್ದದ ಆಟದಲ್ಲಿ ಮಂಡಿನೋವಿಗೆ ಒಳಗಾಗಿದ್ದ ವ್ಯಾನ್ ಪರ್ಸಿ ಪಂದ್ಯಾವಳಿಯಲ್ಲಿ ಆಡಿದ ಐದು ಗೆಲುವಿನಲ್ಲಿ ಏಕೈಕ ಗೋಲ್ ಹೊಡೆದಿದ್ದರು. ಮಿಡ್ ಫೀಲ್ಡರ್ ವೆಸ್ಲೆ, ಸ್ನೈಝರ್, ೪ ಗೋಲ್ ಹೊಡೆದಿದ್ದರು.

 

ಬ್ರೆಝಿಲ್ ಮೇಲೆ ೨ ಗೋಲ್ ಬಾರಿಸಿ,ತಂಡದ ಮರುಹೋರಾಟಕ್ಕೆ ಕಾರಣರಾಗಿದ್ದರು. ಉರುಗ್ವೆ ತನ್ನ ಸ್ಟಾರ್ ಖಿಲಾಡಿ ಸುರೇಝ್ ಸೇವೆಯಿಂದ ವಂಚಿತರಾಗುವ ಸಂಭವಗಳು ಹೆಚ್ಚಾಗಿವೆ. ಆದರೆ ಡಿಯಾಗೋ ಪೋರ್ಲಿನ್ ತಂಡದಲ್ಲಿದ್ದು ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ೩ ಗೋಲ್ ಬಾರಿಸಿದ್ದಾರೆ.

 

ದ್ವಿತೀಯ ಸೆಮಿಫೈನಲ್ ನಲ್ಲಿ ಸ್ಪೇನ್ ಜರ್ಮನಿ ವಿರುದ್ಧ ಕಾದಲಿವೆ