ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನು
ಶಾಖವನು ಜತೆಗೇ ಕೂಡಿಸಿದ ಬೇಸಗೆಯ
ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನು
ಸಾಗರದ ವೈಶಾಲ್ಯ ಮತ್ತು ಶಾಂತತೆಯ
ಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ
ಮತ್ತೆ ಕದಡಿದ ಅದನು ಸೇರಿಸುತ ಅದನೂ
ಗರುಡನಾ ಶಕ್ತಿಯನು, ವಯಸ್ಸಿನಾ ಜ್ಞಾನವ,
ಮುಗಿದಿಲ್ಲ ಉಳಿದಿವೆ ಹಲಕೆಲವು ಇನ್ನೂ
ಮುಂಜಾವಿನ ವಸಂತದ ಖುಷಿಯನ್ನೂ
ಆ ಸಾಸಿವೆ ಬೀಜದ ನಂಬುಗೆಯನೂ
ಮತ್ತೆ ಅನಂತತೆಯ ತಾಳ್ಮೆಯನ್ನೂ
ಕುಟುಂಬದ ಅಗತ್ಯತೆಯ ಆಳವನೂ
ಎಲ್ಲಾ ಗುಣ ಲಕ್ಷಣಗಳನೆ ಒಂದೆಡೆಗೆ
ಸೇರಿಸುತ ಪರಮಾತ್ಮ ರೂಪಿಸಿದ
ಮೇರು ಕೃತಿ ಕಳುಹಿಸುತ ನಮ್ಮೆಡೆಗೆ
ಅದಕೆ ಹೆಸರಿಟ್ಟು "ತಂದೆ" ಯೆಂದ
ಮಿಂಚಂಚೆಯಿಂದ ಆಧರಿಸಿ
ಪ್ರತಿಕ್ರಿಯೆ (4)