ಜೋಗಯ್ಯ ಜೋಗಿಯ ಪಾರ್ಟ್ 2. ನಿರ್ದೇಶನ ಪ್ರೇಮ್, ಹೀರೋ ಶಿವರಾಜ್ಕುಮಾರ್.

ಜೋಗಿ ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಶಿವಣ್ಣ ರೌಡಿಯಾಗುತ್ತಾನೆ. ಕ್ಲೈಮ್ಯಾಕ್ಸ್ ನಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದೊಂದಿಗೆ ಚಿತ್ರ ಅಂತ್ಯಗೊಳ್ಳುತ್ತದೆ.

ಇದೀಗ "ಜೋಗಯ್ಯ" ಚಿತ್ರ ಇನ್ನೂ ಸೆಟ್ ಏರಿಲ್ಲ. ಆಗಲೇ ಅಬ್ಬರದ ಪ್ರಚಾರ ಆರಂಭವಾಗಿದೆ. ಇದರ ವಿಮರ್ಶೆ ಈ ರೀತಿ ಇರಬಹುದೆ ಎಂದು ತಮಾಷೆಗಾಗಿ ಬರೆಯುತ್ತಿದ್ದೇನೆ.

 

"ಜೋಗಯ್ಯ" ಇವನು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾನೆ. ದಾಸರ ಜಾತಿಗೆ ಸೇರಿದ ಮನೆತನ. ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವುದು. ಹಣೆಗೆ ವಿಭೂತಿ ಪಡೆಯಲು ಕಾಸು ಇಲ್ಲದಾದ್ದರಿಂದ. ಮನೆ ಮುಂದೆ ಹಾಕಿದ ಒಲೆಯ ಬೂದಿಯನ್ನೇ ಮೈಗೆ, ಮುಖಕ್ಕೆ ಹಚ್ಚಿಕೊಳ್ಳಬೇಕು. ಕೆಲವೊಮ್ಮೆ ಅದರಲ್ಲಿ ಇದ್ದಿಲು ಹಾಗೇ ಇದ್ದುದರಿಂದ ಬೂದಿ ಬಳೆದ ನಂತರ ಹೊಸ ಕಲರ್. ಇನ್ನೂ ತ್ರಿಶೂಲ. ಕಬ್ಬಿಣದಾದ್ದರಿಂದ ಸುಮಾರು 5ಕೆಜಿ ಭಾರ ಎತ್ಕಂಡು ಮನೆ ಮನೆ ತಿರಗಬೇಕು. ಬರೀ ಲಂಗೋಟಿ ಹಾಕ್ಕೋಳದ್ರಿಂದ ಮಳೆಗಾಲದಾಗೆ ಮತ್ತು ಚಳಿಗಾಲದಾಗೆ ಕೈ ಕಾಲು ಎಲ್ಲಾ ಸೆಟ್ಕಂಡ್ ಹೋಗುತ್ತೆ. ಮನೆಗಳಲ್ಲಿ ಕೊಟ್ಟ ಹಳಸಿದ್ದು, ಪಳಸಿದ್ದು ತಿಂದು ಖುಷಿ ಪಡಬೇಕಾದ ಅನಿವಾರ್ಯತೆ. ದೀಪಾವಳಿ ಹಬ್ಬ. ಎಲ್ಲರಲ್ಲ ಮನೆಯಲ್ಲೂ ಹಬ್ಬದ ಊಟ. ಬಡತನದಿಂದಾಗಿ ಜೋಗಯ್ಯನ ಮನೆಯಲ್ಲಿ ಮತ್ತೆ ಅದೇ ಹಳಸಿದ್ದು ಊಟ. ಇದರಿಂದ ಬೇಸತ್ತ ಜೋಗಯ್ಯ " ಈ ಹಳ್ಳೀಲಿ ಎಷ್ಟಂದ್ರೂ ಇದೇ ಊಟ. ಅದಕ್ಕಾಗಿ ನಾನು ಬೆಂಗಳೂರು ಓಯ್ತಾ ಇದೀನಿ ಅಪ್ಪಾ. ಆಸೀರ್ವಾದ ಮಾಡು. ಅಲ್ಲಿ ಮನೆ ಮಾಡಿದ್ ಮ್ಯಾಕೆ ಅಪ್ಪ,ಅವ್ವ ನಿಮ್ಮನ್ನು ಕರಸ್ಕೊಂತೀನಿ" ಅಂತಾ ಬೆಂಗಳೂರು ಹೋಗೇ ಬಿಟ್ಟ.

ಇಲ್ಲಿಗೆ ಬಂದು ಊರ ಹೊರಗೆ ಟೆಂಟ್ ಹೊಡ್ಕೊಂಡು ಜೀವನ ಆರಂಭಿಸುತ್ತಾನೆ ಜೋಗಯ್ಯ. ಒಂದು ದಿನ ಅಲಸೂರು ಕೆರೆಯಲ್ಲಿ ಸ್ನಾನ ಮಾಡುತ್ತಿರುವಾಗ ರೌಡಿ ಚಕ್ಕಲಿ ತಮ್ಮ ಕುಟ್ಟಿ ಜೋಗಯ್ಯನ ಲಂಗೋಟಿ ಮತ್ತು ಜೋಳಿಗೆ ತೆಗದುಕೊಂಡು ತಮಾಷೆ ಮಾಡುತ್ತಾನೆ. ಇದೇ ಸಿಟ್ಟಿಗೆ ತ್ರಿಶೂಲ ತಗೊಂಡು ಚುಚ್ಚಿ ಸಾಯಿಸಿ ಬಿಡುತ್ತಾನೆ. ಅಂಡರ್ ವಲ್ಡ್ ಗೆ ಎಂಟ್ರಿ. ಇಲ್ಲಿಗೆ ಕಾಲು ಪಿಚ್ಚರ್ ಮುಗೀತು. ಇನ್ನು ಅರ್ಧ ಪಿಚ್ಚರ್ ಬರೀ ಮಚ್ಚು, ಲಾಂಗ್ ಹಿಡ್ಕೊಂಡು ಸಾಯಿಸದೆಯಾ. ಸ್ರ್ಕೀನ್ ಎಲ್ಲಾ ರಕ್ತ ಮಯಾ. ದೊಡ್ಡ ರೌಡಿ ಜೋಗಯ್ಯ. ಉದ್ದ ಕೂದಲು ಇರೋದ್ರಿಂದ ಹೇನು ತೆಗೆಯಕ್ಕೆ ಹಾಗೇ ಬಾಚಕ್ಕೆ ಅಂತಾ ಒಬ್ಬ ಆಳು. ತಂತಿಯಿಂದ ಮಾಡಿದ ಬಾಚಣಿಗೆ. ವಿಭೂತಿ ಉಕ್ಕಡಗಾತ್ರಿಯದು. ಬೆಳ್ಳಗೆ ಐತೆ. ಅಟ್ಟೊತ್ತೊಗೆ ಅಪ್ಪ,ಅವ್ವ ಬೆಂಗಳೂರಿಗೆ ಬರ್ತಾರೆ. ಮಗನನ್ನು ನೋಡಿ ಖಷಿಯಾಗಿ ಹಾಗೇ ಅಪ್ಪಿಕೊಂಡು. ಮಗನೇ ನೀನು ರೌಡಿಯಾಗಿದ್ದು ಸಾನೇ ಸಂತೋಸ ಆಯ್ತು. ಹಿಂಗೇ ಮುಂದುವರೆಸಿ ರಾಜಕಾರಣಿ ಆಗು ಅಂತಾರೆ. ಬಂದು ಸ್ವಲ್ಪ ದಿನಕ್ಕೆ ಅಪ್ಪ,ಅವ್ವನ ಮಲ್ಡರ್. ಮತ್ತೆ ಜೋಗಯ್ಯ ಜೋಳಿಗೆಯೊಂದಿಗೆ,

ಬೇಡುವೆನು ಭಿಕ್ಸೆಯನ್ನ

ಕೊಡುತಾಯಿ ಹಳಸಿದ ಅನ್ನ

ಕಡೇ ತನಕ ಮರೆಯಲ್ಲ ಈ  ಜೋಗಯ್ಯ.

ಸುಭಂ

ಇದರ ಬಗ್ಗೆ ಪ್ರೇಮ್ ರವರನ್ನು ಮಾತನಾಡಿಸಿದಾಗ

ಜೋಗಯ್ಯದಲ್ಲಿ ಅರ್ಧ ಪಿಚ್ಚರ್ ತನಕ ಹೀರೋಗೆ ಕಾಸ್ಟೂಮ್ ಇಲ್ಲ. ಬರೀ ಲಂಗೋಟಿ. ಹಾಗಾಗಿ ಒಂದು ಐದು ಮೀಟರ್ ಪಂಚೆ ತರೆಸಿ ಮಾಡಿದ್ದೇವೆ. ಇನ್ನು ಅಪ್ಪ, ಅವ್ವನಿಗೆ ಬರೀ ಹರಿದಿದ್ದು ಬಟ್ಟೆಯಾ. ಇದನ್ನೆಲ್ಲಾ ಡಿಸೈನ್ ಮಾಡಿದ್ದು ನನ್ನ ಪತ್ನಿ ರಕ್ಷಿತಾನೆ. ಇದು ನಮ್ಮದೇ ಪ್ರೊಡಕ್ಸನ್ ಆಗಿರೋದ್ರಿಂದ ಸ್ವಲ್ಪ ಲೋ ಬಜೆಟ್ ನಲ್ಲಿ ಮಾಡಬೇಕು ಅಂತಾ ಈ ರೀತಿ ಕಾಸ್ಟೂಮ್ ಮಾಡಿದ್ದಾಳೆ ಅವಳು ದುಡ್ಡು ಉಳಿಸೋದ್ರಲ್ಲಿ ಎತ್ತಿದ ಕೈ. ಯಾಕೇಂದ್ರ ರಾತ್ರಿ ಅನ್ನ ಉಳಿದ್ರೆ. ಬೆಳಗ್ಗೆ ಚಿತ್ರಾನ್ನ ಮಾಡಿ ನನಗೇ ಹಾಕ್ತಾಳೆ. ಇನ್ನು ಚಿತ್ರದ ಕತೆ ಎಂತದೂ ಇಲ್ಲ. ಎಂಟು ಫೈಟ್, ಆರು ಹಾಡು. ಇಟೆಯಾ. ಜೋಗಯ್ಯ ಮತ್ತು ಅಘೋರಿ ಮಿಕ್ಸ್ ಮಾಡಿರೋದ್ರಿಂದ ಶಿವಣ್ಣ ಹಿಂಗೆ ಡಿಫೆರೆಂಟ್ ಆಗಿ ಕಾಣ್ತಾರೆ. ಮೊದಲನೆ ದಿನ ಶಿವಣ್ಣನ ಮಕ್ಕಳು ಭಿಕ್ಸೆ ಹಾಕಿದಾಗಲೇ ಅವರ ನೈಜ ಆಕ್ಟಿಂಗ್ ಬಗ್ಗೆ ಎಮ್ಮೆ ಮೂಡಿದ್ದು. ಸೂಟಿಂಗ್ ಆದ್ ಮ್ಯಾಕೆ ಸ್ನಾನ. ಅದಕ್ಕೆ ಲಕ್ಸ್ ಜಾಹೀರಾತು ಹಾಕಿದೀವಿ. ಶಿವಣ್ಣಂಗೆ ಸುಮಾರು 10ಕೆಜಿ ಲಾಂಗ್ ಕೊಟ್ಟಿದೀವಿ. ಅದನ್ನ ಎತ್ತಿ, ಎತ್ತಿ ಬಲಗಡೆ ಷೋಲ್ಡರ್ ಡಿಸ್ ಲೊಕೇಟ್ ಆಗಿದೆ. ಅಲ್ಲಿ ಬ್ಯಾಂಡೇಜ್ ಹಾಕ್ಕೊಂಡೆ ಲಾಂಗ್ ಎತ್ತುತ್ತಾ ಇದಾರೆ. ಮುಂಚೆ 90ಡಿಗ್ರಿಗೆ ಎತ್ತೋರು ಈಗ ಒಂದು 45ಡಿಗ್ರಿಗೆ ಎತ್ತುತಾರೆ. ಇನ್ನು ಹೀರೋಯಿನ್ ಗೆ ಬಟ್ಟೆ ಹಾಕಿದೀವಿ. ಜೋಗಯ್ಯ ಮತ್ತು ಹೀರೋಯಿನ್ದೂ ಒಂದು ಬೂದಿಯಲ್ಲಿ ಸಾಂಗ್ ಇದೆ. ಸಾಂಗ್ ಮುಗಿದ ಮೇಲೆ ಕಡಿತ ಬರಬೋದು ಅಂತಾ ಇಚ್ ಗಾರ್ಡ್ ಒಂದು ಬಾಕ್ಸ್ ಮಡಿಗಿದೀವಿ. ಸೆಟ್ ಅಲ್ಲಿ ಇರೋರಿಗೆಲ್ಲಾ ಚಿತ್ರಾನ್ನ. ಕಡೇ ದಿನಾ ಮಾತ್ರ ಚಿಕನ್ ಸಾರು. 100ಡೇಸ್ ಗ್ಯಾರಂಟಿ. ನೋಡಿ ಜೋಗಯ್ಯನಾಗಿ ನಿಮ್ಮ ಪ್ರೇಮ್.

 

 

 

ಚಿತ್ರ : ಚಿತ್ರಲೋಕ.ಕಾಮ್