ಸಂಪದ ಸಮ್ಮಿಲನ ಕಾರ್ಯಕ್ರಮಕ್ಕೆಂದೇ ಮೀಸಲಾಗಿಟ್ಟಿದ್ದ ಕವನವನ್ನು ಇಲ್ಲಿ ಹಾಕುತ್ತಿದ್ದೇನೆ. ಬೇಸರಿಸಿಕೊಳ್ಳಬೇಡಿ ಅಬ್ಬಾ ಎಂಥಾ ಕವನವನ್ನು ಮುಂಚೆಯೇ ಪ್ರಕಟಿಸಿದನ್ನಲ್ಲಾ ಇವನು ಎಂದು. ಆದರೂ ಮನಸ್ಸು ಒಪ್ಪದೇ ಕವನವನ್ನು ಇಗೋ ನಿಮ್ಮ ಮುಂದೆ ಇಟ್ಟಿದ್ದೇನೆ.
ಅಲ್ಲಿ ಓದಿದಾಗ ಕೆಲವರು ವೇದಿಕೆಗೆ ಬಂದು ಹಾರ ಹಾಕಿದರೆ ನನ್ನ ಹೆಂಡರ ಮುಂದೆ ಮುಜಗರವಾಗುತ್ತದೆ ಎಂಬ ಕಾರಣಕ್ಕಾಗಿ ಹಾಕಿದ್ದೇನೆ. ಅದೂ ಅಲ್ಲದೆ ನನ್ನ ಕವನದಿಂದ ನಿಮ್ಮ ಕವನಗಳು ಡವನ್ ಆಗಬಾರದು ಎನ್ನುವ ಉದ್ದೇಸ ನನ್ನದು. ಅದೂ ಅಲ್ಲದೆ ನನ್ನ ಕವನದಿಂದಾಗಿ 2ಗಂಟೆ ನಡೆಯಬೇಕಾಗಿದ್ದ ಕಾರ್ಯಕ್ರಮ ಎಲ್ಲಿ ಹತ್ತೇ ನಿಮಿಷಕ್ಕೆ ಮುಗಿದು ಬಿಡುತ್ತದೆ ಎನ್ನುವ ಭಯ ಕೂಡ. ಯಾವುದಾದರೂ ಇದಕ್ಕೆ ಬಹುಮಾನ ನೀಡಬೇಕೆಂದು ನಿಮಗೆ ಅನ್ನಿಸಿದರೆ. ತಿಳಿಸಿ. ವಿಳಾಸ ನೀಡುತ್ತೇನೆ. ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಂಡು ಮನ್ನಿಸಿ ಬಿಡಿ. ಹೊರ ಹಾಕಬೇಡಿ.
ಅಬ್ಬಾ ಎಂಥಾ ಕವನ
ತಲೆ ಇಲ್ಲ, ಬುಡವಂತೂ ಮೊದಲೇ ಇಲ್ಲ
ಆದರೂ ಇದೊಂದು ಕವನ
ಇದಕ್ಕೆ ಬಂದಿತು ಒಂದು ಬಹುಮಾನ
ಅದನ್ನು ತೋರಿಸಿದರೆ ಆಗುತ್ತದೆ ಅಪಮಾನ
ನೋಡಿದಾಗಲೆಲ್ಲಾ ಹೆಚ್ಚುತ್ತದೆ ದೇಹದ ತಾಪಮಾನ
ಕವನ ಬರೆಯುವುವಾಗಲೆಲ್ಲಾ ಭಯ ಹುಟ್ಟಿಸುತ್ತದೆ ಬಹುಮಾನ
ಅದಕ್ಕೆ ಎಲ್ಲಿಯೂ ಪಡೆಯುವುದಿಲ್ಲ ಸನ್ಮಾನ
ಕವನ ಪಡೆಯಲು ಊಟ,ತಿಂಡಿ,ಕಾಫಿ ಕಡೆಗೆ ಬೀಡಿ, ಬೀಡಿ ಜೊತೆ ಹೊಗೆನೂ ಬಿಟ್ಟೆ
ಶ್ರಮಕ್ಕೆ ದೇವರು ಕಳಿಸಿದ ಒಂದು ಕವನ
ಅದುವೇ ನಮ್ಮ ಪಕ್ಕದ ಮನೆಯ ಕವನ
ಲೇ ಕವನ.... ಬರೆಯಬೇಕು ಕಾಫಿ ಕೊಡೆ
ಅಂಕಲ್ ನಾನು ಕೊಡಲಾ ಅಂದಳು ಕವನ
ಬೇಡಮ್ಮಾ. ಕೈ ಸುಟ್ಕೊತೀಯಮ್ಮಾ
ನಿನ್ನ ಕವನಕ್ಕೆ ಬೆಂಕಿ ಹಾಕ. ಅಂದಳು ಹೆಂಡರು
ಲೇ ಯಾವ ಕವನಾನೇ
ಕವನ ಬರೆಯುವುದು ಹುಡುಗಾಟವೇ ಅಂದಳು ಹೆಂಡರು
ಯಾಕೆ ಆಗುವುದಿಲ್ಲ, ಮನಸ್ಸಿದ್ದರೆ ಮಾರ್ಗ
ಆಗ ಅದು ಕವನ ಆಗುವುದಿಲ್ಲವೋ ಮೂದೇವಿ
ಮತ್ತೇನಾಯ್ತದೆ, ತಲೆಗೊಂದು ಮಟಕಿ
ಅದು ನವಕ ಆಗುತ್ತದೆ.
ಮಗ ಅಂದ ಅಪ್ಪ ಬರೀ ಒಂದು ಕವನವಾ
ಅದೇನಂತೆ, ಮೇಲಿಹುದು ಕೋತಿ
ಇಲ್ಲಿದೇ ಬಾಲವಿಲ್ಲದ ಕೋತಿ.ಅದು ಮರದ ಮೇಲಿನ ವಾಸಿ
ಇದು ನೆಲದ ಮೇಲಿನ ವಾಸಿ. ಬಾಲವಿಲ್ಲದ ಕೋತಿ
ಆಡುತ್ತೆ ಮರಕೋತಿ.
ಹೆಂಡರು ಅಂದಳು ಬರೀ ಒಂದು ಕವನವಾ ನನ್ನ ಮ್ಯಾಕೆ.
ಲೇ..... ಯಾಕ್ಲಾ. ಅಂತಾಳೆ ನನ್ನ ಹೆಂಡರು
ನನ್ನ ಮೇಲೆ ವಸಿ ಕೋಪ ಸ್ಯಾನೆ ಪಿರುತಿ
ಸಿಟ್ಟಾದಾಗ ತಲೆ ಮೇಲೆ ಮಟುಕುವ ಇವಳು
ಪಿರುತಿ ಬಂದಾಗ ತಟ್ಟೆಯಲ್ಲಿ ಮಡುಗುತ್ತಾಳೆ
ತಂಗಳು ಮುದ್ದೆ, ತಂಗಳು ಬಸ್ಸಾರು.
ಅದನ್ನೇ ತಿಂದ ನನ್ನ ಜೀವನ ಪಾವನವಾಯಿತು.
ಪಕ್ಕದ್ಮನೆ ಪದ್ಮ ಕಂಡಾಗ ಕಣ್ಣು ಹೊಡಿಯುತ್ತಾಳೆ
ಅದಕ್ಕೆ ಮನ ಸೋತ ನಾನು ತಲೆ ಬಾಚುತ್ತೇನೆ
ಇಬ್ಬರದೂ ಬೇರೆ ಬೇರೆ ಸಿಗ್ನಲ್, ಆದರೆ ಆಡುವ ನಾಟಕ ಮಾತ್ರ ಒಂದೇ.
ಪದ್ಮಳ ಕಣ್ಣಿಗೆ ಮೋಡಿಯಾದ ನಾನು "ಪದ್ಮಳ ಕಣ್ಣು ಎಷ್ಟು ಚೆನ್ನಾಗಿದೆ.
ಅಯ್ಯೋ ಮೂದೇವಿ ಅದು ಕಣ್ಣು ಐಬು ಎಂದಳು ಹೆಂಡರು.
ಬಾಸು ಲೇ ಕೋಮಲಾ ಎಲ್ಲೋ
ಏನ್ ಸಾರ್, ಅದೇ ಅದೇ
ಓಹಾ ಅದಾ ಇಲ್ಲೇ ಐಯ್ತಲ್ಲಾ ಸಾ
ಏನೋ, ಅದೇ ನೀವು ಕೇಳಿದ್ದು.
ಓಹ್ ಅದಾ, ಇದೇನಾ.
ಪುರಂದರದಾಸರ ಪದಗಳು ಓದಲು,ಬರೆಯಲು ಸುಲಭ
ಪರಂದರ ದಾಸನಾಗಲು ಸಾನೆ ಕಸ್ಟ
ಯಾಕೆ, ಬೀದಿ ಬೀದಿ ಸುತ್ತಿದ್ದರೆ
ಬೆನ್ನುತ್ತದೆ ಬೀದಿ ನಾಯಿ
ಕಾರ್ಪರೇಸನ್ಗೆ ಪೋನ್ ಮಾಡಿ
ದಾಸನಾದರೆ ಉಳಿಯುತ್ತದೆ ಹದಿನಾಲ್ಕು ಇಂಜೆಕ್ಸನ್
ಇಲ್ಲವಾದರೆ ಸೇರಬೇಕು ಸಾರ್ವಜನಿಕ ಶವಾಗಾರ
ಸಂಪದ ಸಮ್ಮಿನಲದಲ್ಲಿ ಓದಿದರು ಕವನ
ಅರ್ಥವಾಗದೇ ಮೇಲೆ ನೋಡುತ್ತಾ ಕುಳಿತ ನನಗೆ
ಪಕ್ಕದಲ್ಲಿದ ಹೆಂಡರು ಅಂದಳು ಇದೇ ಕವನ
ಏ ಅವಳು ಇಲ್ಲೂ ಬಂದಿದ್ದಾಳಾ
ತಲೆ ಮೇಲೆ ಮಟುಕಿ, ನೋಡಿಲ್ಲಿ
ಚೆಂದವಾಗಿ ಓದುತ್ತಿದ್ದಾರೆ ಕವನ, ಅಕ್ಷರ ಬದಲಿಸಿ ನೀ ಬರಿ ಒಂದು ಕವನ
ಲೇ ಅದು ರಿಮೇಕ್. ರೀಮಿಕ್ಸ್.
ಕವನ
ವನಕ
ನವಕ
ಕನವ
ನಕವ ಹೀಗಾಗುತ್ತೆ
ತಮಾಸೆಗೆ.
ಪ್ರತಿಕ್ರಿಯೆ (2)