
ಪ್ರಜಾವಾಣಿ ಫೊಟೊಗ್ಯಾಲರಿಯ ಸೌಜನ್ಯದಿಂದ
ಜರ್ಮನಿಯಲ್ಲಿ ಎಲ್ಲರ ಕಣ್ಣೂ ಆಕ್ಟೊಪಸ್ ಪೌಲ್ ಮೇಲೆ ಕೇಂದ್ರೀಕೃತವಾಗಿದೆ. ಆಕ್ಟೊಪಸ್ ನಾಳೆ ನಡೆಯಲಿರುವ ಮ್ಯಾಚ್ ನಲ್ಲಿ ಸ್ಪೇನ್ ಗೆಲ್ಲುವುದೆಂದು ಹೇಳಿ ವಿಶ್ವದಾದ್ಯಂತ ತವಕ, ಸಂತಸ, ವಿಷಾದಗಳನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ.
-ಪ್ರಜಾವಾಣಿ ಫೊಟೊಗ್ಯಾಲರಿಯ ಸೌಜನ್ಯದಿಂದ
ಜರ್ಮನಿಯಲ್ಲಿ ಎಲ್ಲರ ಕಣ್ಣೂ, 'ಆಕ್ಟೊಪಸ್ ಪೌಲ್ ' ಮೇಲೆ ಕೇಂದ್ರೀಕೃತವಾಗಿದೆ. ಆಕ್ಟೊಪಸ್ ನಾಳೆ ನಡೆಯಲಿರುವ 'ವಿಶ್ವಕಪ್ ಫೈನಲ್ ಮ್ಯಾಚ್ ' ನಲ್ಲಿ ಸ್ಪೇನ್ ಗೆಲ್ಲುವುದೆಂದು ಹೇಳಿ ವಿಶ್ವದಾದ್ಯಂತ ತವಕ, ಸಂತಸ, ವಿಷಾದಗಳನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ.
ಬಾಯ್ತುಂಬಾ ಆಡಿದ್ದು ಆಡಿದ್ದೇ, "ವೈಜ್ಞಾನಿಕ ಮನೋಭಾವ ಇರಬೇಕ್ರಿ". ಕಾಗಮ್ಮನ ನಂಬ್ಕೊಂಡಿರಕ್ಕಾಗತ್ತೇನ್ರಿ. ? ಈಗ ನಾವು ಮಾಡ್ತಿರೊದೇನು ? ಕಾಗಮ್ಮ ಅಲ್ಲ. "ಗಿಣಿಯಮ್ಮ", "ಆಕ್ಟೊಪಸ್ಸಮ್ಮ" ಮತ್ತೆ ಇನ್ನು ಎಷ್ಟೊ "ಅಮ್ಮಂದಿರ" ಮೊರೆಹೊಗ್ತಿವಲ್ಲ. ಅದಕ್ಕೆ ಹೇಳೊದು ವಿಜ್ಞಾನ , ಮತ್ತೆ ಕಾರಣ, ಫಲಿತಾಂಷಗಳು ನಮ್ಮ ಕೈಗೆಟುಕದಾಗ ನಾವು, ಯಾರೇ ಆಗ್ಲಿ, ಯಾವ ದೇಶವೇ ಆಗ್ಲಿ, ಬೇರೆ ಯೇನೊ ಅರಸ್ಕೊಂಡ್ ಹೋಗ್ತಿವಿ. ದೆವ್ವ, ಭೂತ, ಅದು ಇದು ಅಂತ. ಇದನ್ನ ತಪ್ಪು ಅನ್ನಕ್ಕೂ ಆಗದ ಪರಿಸ್ಥಿತಿ ಬಂದೊದಾಗ !
ಜರ್ಮನಿಲಿ ಇರೋ "ಆಕ್ಟೊಪಸ್ಸಮ್ಮ", ಯಾಕ್ ಹೇಳುತ್ತೆ ಜರ್ಮನಿ ಗೆಲ್ಲೊಸಾಧ್ಯತೆ ಇಲ್ಲ. ಅಂತ. ಅದ್ ಹೇಳುತ್ತೊ ಬಿಡತ್ತೊ. ಅದರ ಅಕ್ಕ ಪಕ್ಕದಲ್ಲಿ ಸುತ್ ತಿರುವ ಜನಗಳು ಅದು ಹೀಗ್ ಹೇಳ್ತು. ಅಂತ ಅರ್ಥೈಸ್ತಾರೆ. ಜರ್ಮನಿ ಜನ ಎಲ್ಲ ಕೋಪಮಾಡ್ಕಂಡವ್ರೆ, ಆ ಆಕ್ಟೊಪಸ್ ಅಮ್ಮನ್ ಮ್ಯಾಗೆ ! ಒಟ್ನಾಗೆ ಏಳಿದ್ದೇನ್ ಸುಳ್ಳಾ ? ಅಲ್ವಲ್ಲ. ಸುಮ್ಕೆ ಅದರ್ಮ್ಯಾಲೇಕ್ ನಮ್ ಕ್ವಾಪಾ, ತರ ಅಲ್ಲ ಅಲ್ವರಾ ?
ಅದ್ಯಾರೊ ತಮಿಳ್ರೊನು, ಮುನಿಯಪ್ಪನಂತಪ್ಪ, ಸಿಂಗಪುರ್ದಗೆ, "ಮಣಿ " ಅಂತ ಎಸರ್ಮಡಿಗ್ಕೊಂಡು ಒಂದ್ "ಗಿಣಿ" ಸಾಕವ್ಮಂತೆ. ಅದರತ್ರನೂ ಬವಿಶ್ಯ ಕೇಳಕ್ಕೇ ಅಂತವ ಜನಗೋಳು ಬರ್ತಾನೆ ಅವ್ರಂತಪೊ. ಅದೇನ್ ಏಳ್ತು ಗೊತ್ತೇನು. ನಾಳಿನಾಗೆ ಆಡಲ್ವ, ಆ ಇಸ್ವ ಕಪ್ ಕಾಲ್ಚೆಂಡಾಟ್ದಾಗೆ, ಪೈನಲ್ ನಲ್ಲಿ, ಡಚ್ ದೇಸನೇ ಗೆಲ್ತಾದಂತೆ.
ಆದ್ರೆ, ಆಕ್ಟೊಪಸ್ಸಮ್ಮ ಅನ್ನೋದೇ ಬ್ಯಾರೆ. ಅದು ಏಳಿದ್ದೇನು, " ಸ್ಪೆಯಿನ್ ಗೆಲ್ತಾದಂತೆ ಅಂತಾವ".... ಇದ್ವರ್ಗು, ಈ ಯಮ್ಮ ಏಳಿದ್ದೆಲ್ಲಾ ದಿಟ ಆಗಿಲ್ವಾ ? ಅದ್ಕಾಗಿ ಇದರ್ದೇ ಎಚ್ಚು ಬೆಲೆ. ಇದರ್ಮಾತು ಅಂದ್ರೆ ಪೈನಲ್ ಇದ್ದಂಗೆ. ದೊಡ್ ಪ್ಯಾಪರ್ನಾಗೆಲ್ಲಾ ಬಾರಿ ಚರ್ಚೆ ಮಾಡ್ತರಂತಪ್ಪ !
ಇವತ್ತಿನ್ ಮ್ಯಾಚಿನ್ ಇಸ್ಯ, ಯಾರು ಮಾತೇ ಆಡ್ತಿಲ್ಲ. ಮೂರ್ನೆ ಜಾಗ ಅಂದ್ರೆ ಏನ್ ಕಮ್ಮಿನಾ. ಸಿವನ್ ಮುಕ್ಕಣ್ಣಿನ್ ತರ ಇದು. ಬಾರಿ ವಿಸೇಸದ್ದು. ಇಲ್ ಆಡ್ತಿರೊರೊ ಯಾರು. ಇಂದಿನ್ ಇಸ್ವ ಚಾಂಪಿಯನ್ ಜರ್ಮನಿಯೊರಲ್ವ ! ಉರುಗ್ವೆಯೊರ್ಮ್ಯಾಗೆ ಆಡ್ತವ್ರೆ !
ಇಲ್ಲೂ ಅದೇನ್ ಆಗ್ತದೊ ಯಾರ್ ಗೆಲ್ತಾರೊ, ಎಂಗ್ ಏಳಾಕಾಯ್ತದೆ ? ದಿಟ ಒಂದೇ ಅನ್ನದನ್ನ ಗಿಣಿಯವ್ವನೂ ಮರ್ತವ್ಳೆ, ಮತ್ತೆ ಆಕ್ಟೊಪ್ಸಮ್ಮನೂ ಅಂತನ್ಸ್ತದಪ್ಪ್ಪ. ಇಬೃ ಇಂಗೆ ವಿರೊದ ಏಳಿದ್ರೆ, ಯಾರ್ನ್ ನಂಬೊದು ಯಾರ್ನ್ ಬಿಡೊದು ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!