1. Work in progress ಆಗಿರಬೇಕಿತ್ತು ಅಂತೀರಾ?.. ಹೂಂ..ಮತ್ತೆ ಪಾಪ 'ಪ್ರಗತಿ' ಆದ್ರೂ ಏನ ಮಾಡ್ಲಿಕ್ಕೆ ಸಾಧ್ಯ? 'ಕೆಲಸ' ತನ್ನ ಕರ್ತವ್ಯ ಸರಿಯಾಗಿ ಮಾಡ್ಲಿಲ್ಲಾಂದ್ರೆ? ಸಾಧನೆ ಆಗ್ಬೇಕು, ದೇಶ ಮುಂದೆ ಬರ್ಬೆಕಲ್ವಾ? ಅದಕ್ಕೆ 'ಪ್ರಗತಿ' ಜವಾಬ್ದಾರಿನ ತನ್ನ ತಲೆ ಮೇಲೆಯೇ ಹೊತ್ಕೊಂಡು ಕೆಲಸಕ್ಕಿಳಿದುಬಿಟ್ಟಿದೆ ಇಲ್ಲಿ!

 

2. ಈ ಗ್ಲೊಬಲೈಜೆಷನ್  ಕಾಲದಲ್ಲಿ ಎಲ್ಲರೂ ಸುಲಭದಲ್ಲೆ ಇಂಟರನಾಶನಲ್ ಫಿಗರಗಳಾಗ್ತಿರಬೇಕಾದ್ರೆ..ನಮ್ಮ ಪೂಜಾರಪ್ಪನ್ನ ಮಡಗಿದಂಗಿರು ನೀ ಹಳ್ಳಿಯಲ್ಲೇ ಅಂತಾ ಹೇಳಿದ್ರೆ ಕೇಳ್ತಾರಾ ಸ್ವಾಮಿ?? ಅದಕ್ಕೆ ತಮಗೆ ತಾವೆ ಬಡ್ತಿ ಕೊಡ್ಕೊಂಡು ಈ ಸೀಮೋಲ್ಲಂಘನ ಮಾಡಿದಾರೆ..ಈಗ ಅವರು ಭಾರತದ ಪೂಜಾರಿಗಳು!. ಭಾರತದ ವ್ಯಾಪ್ತಿಯಲ್ಲಿರುವ ಭೂತಗಳಿಗೆ ಚಿಕಿತ್ಸೆ ಮಾಡಬಲ್ಲರು. ಬೇಡಿಕೆ ಹೆಚ್ಚಾದ್ರೆ ಸಧ್ಯದಲ್ಲೆ ಮತ್ತೆ ಬಡ್ತಿ ಸಿಕ್ಕು 'ಜಗತ್ತಿನ ಪೂಜಾರಿ ಎಂ.ಮುನಿಶಾಮಪ್ಪ' ನವರಾದರೆ ಆಶ್ಚರ್ಯವಿಲ್ಲಾ..

 

ಆಕರ: ಈ-ಮೇಲ್

ಕೃತಜ್ಞತೆಗಳು: ಮೂಲ ಸಂಗ್ರಹಕಾರನಿಗೆ