ನೋಡ್ಲಾ ಕೋಮಲ್, ಹೋದ್ ದಪ ನೀವೆಲ್ಲಾ ಸೇರಿ ರಾಮಾಣ್ಯ ನಾಟಕ ಗಬ್ಬು ಎಬ್ಬಿಸಿದರಿ. ಈ ಬಾರಿ ಮಹಾಭಾರತ ನಾಟಕ ಆಡುವಾ, ಭಾಸೆ, ವೇಸ ಎಲ್ಲಾ ಸರಿಯಾಗಿರಬೇಕು. ಆಗ್ಲೇ ಮೇಸ್ಟ್ರುಗೆ ಅಡ್ವಾನ್ಸ್ ಕೊಟ್ಟು ಬಂದೀವ್ನಿ ಅಂದ ಗೌಡಪ್ಪ. ಸರಿ ನಾನೂ ಭೀಮ ಆಯ್ತೀನಿ ಅಂದಾ ಗೌಡಪ್ಪ, ಕೋಮಲಾ ನೀನು ದುರ್ವೋಧನ, ಸುಬ್ಬ ಕಿಸ್ನ, ಕಟ್ಟಿಗೆ ಒಡೆಯೋ ಕಿಸ್ನ ಅರ್ಜುನ, ಗೌಡಪ್ಪನ ಮೊದಲನೆ ಹೆಂಡರು ಲಕ್ಸ್ಮಿನ್ನ ಗಾಂಧಾರಿ, ಹೆಣ್ಣಿನ ತರಾ ಇದ್ದ ರಂಗ ದ್ರೌಪದಿ ಹಿಂಗೆ ಎಲ್ಲಾ ಪಾಲ್ಟು ಸೆಲೆಕ್ಟ್ ಮಾಡಿದ್ದು ಆತು. ನಾಟಕದಾಗೆ ಅರ್ಧಕ್ಕರ್ಧ ಜನ ಗೌಡಪ್ಪನ ಕುಟುಂಬನೇ ಇತ್ತು. ಹಂಗಾಗಿ ಪ್ರಾಕ್ಟೀಸ್ ಮಾಡುವಾಗ ಸುಗರ್ ಲೆಸ್ ಚಾ, ಮುಗ್ಗು ಹೋಗಿದ್ದ ಬಿಸ್ಕತ್ತು ಎಲ್ಲಾ ಫ್ರೀ. ಬಿಸ್ಕತ್ತು ತಿಂದ್ ಮ್ಯಾಕೆ ಬಾಯ್ನಾಗೆಲ್ಲಾ ಬಡ್ಡೆ ಹತ್ತಾವು ಬೆರಳು ಹಾಕಿ ತೊಳಿಸ್ತಿದ್ವು. ಹಲ್ಲಿಗೆ ಬಿಸ್ಕತ್ತು ಅಂಟುಕೊಂಡರೆ ಸರಿಯಾಗಿ ಡೈಲಾಗ್ ಬರಕ್ಕಿಲ್ಲಾ ಅಂತಾ.  ನಾಟಕ ಪ್ರಾಕ್ಟೀಸ್ ಮುಗಿದ್ ಮ್ಯಾಕೆ ರೂಂ ನೋಡಿದ್ರೆ, ಒಂದು ಮಣ ಬೀಡಿ ತುಂಡು ಬಿದ್ದಿರೋದು. ಗೌಡಪ್ಪನ ಹೆಂಡರು ಕೆಮ್ಕತ್ತಾ ಕಸ ಗುಡಿಸೋವು. ಏ ಥೂ ಅಂತಾ.

ಸರಿ ನಾಟಕ ದಿನಾ ಬಂದೇ ಹೋಯ್ತು. ಸುಬ್ಬನ ಮೈಗೆ ಲ್ಯಪ್ಪ ಹಾಕಿ, 3ಲೀಟರ್ ನೀಲಿ ಏಸಿಯನ್ ಪೇಂಟ್ ಬಳಿದಿದ್ವಿ. ಸ್ಯಾನೆ ಸೆಕೆ ಐತೆ ಅಂತಾ ಆಗಾಗ ನೀರು ಹುಯ್ತಾ ಇದ್ವಿ. ಚಕ್ರಕ್ಕೆ ಸಣ್ಣ ಮೋಟರ್ ಸಿಗಲಿಲ್ಲಾ ಅಂತಾ ಗದ್ದೆಗೆ ನೀರು ಹೊಡಿಯೋ 0.5ಹೆಚ್ ಪಿ ಮೋಟರ್. 3ಕೆಜಿ ಕಬ್ಬಿಣದ ಚಕ್ರ. ಸುಬ್ಬ ಚೂರು ಹೆಚ್ಚು ಕಮ್ಮಿಯಾದರೂ ತಲೆ ಢಮಾರ್. ಅದಕ್ಕೆ ಸುಬ್ಬ ಬಕ್ಕೊಂಡೇ ಆಕ್ಟಿಂಗ್ ಮಾಡೋನು. ಮೊದಲನೆ ಸೀನ್ ದ್ರೌಪದಿ ವಸ್ತ್ರಾಪಹರಣ. ಧೃತರಾಷ್ಟ್ರನ್ನಾಗಿ ಕ್ಸಯ ರೋಗದ ಸೀನನ್ನ ಮಾಡಿದ್ವಿ. ದಿನಾ ಒಂದು ಹತ್ತು ಕಟ್ಟು ಬೀಡಿ ಹೊಡೆಯೋನು. ಒಂತರಾ ಸಣ್ಣ ರೈಲ್ವೆ ಇಂಜಿನ್ ಇದ್ದ ಹಾಗೆ. ಪದೇ ಪದೇ ಉಗೀತಿದ್ದರಿಂದ ತುಪ್ಪ ಮ್ಯಾನುಫಾಕ್ಚರಿಂಗ್ ಫ್ಯಾಕಟ್ರಿ ಅನ್ನೋರು. ಮಗ ನಾಟಕದಾಗೂ ಕೆಮ್ತಾನೇ ಇದ್ದ. ಕೆಮ್ಮಿದ ತಕ್ಷಣ ತಾನಾಗೇ ಕಣ್ಣು ಮೇಲೆ ಹೋಗೋದು. ಮೇಸ್ಟ್ರು ಏನ್ ಆಕ್ಟಿಂಗ್ ನೋಡ್ರಲಾ ಅಂತಿದ್ರು. ಆಕ್ಟಿಂಗ್ ಮನೆಗೆ ಬೆಂಕಿ ಹಾಕಾ ಉಗಿಯೋಕ್ಕೆ ಪಾತ್ರೆ ಎಲ್ಲಿ ಅಂತಾ ಇದ್ದ ಸೀನ. ಗೌಡಪ್ಪ ಅವನ ಹೆಂಡರಿಗೆ ಸೈಡಿಗೆ ಬಾರೆ ನಿಂಗೂ ಕ್ಸಯ ಬತ್ತದೆ ಅಂದ್ರೆ. ನನ್ನ ಪತಿ ದೇವರ ಸೇವೆಯೇ ನನ್ನ ಧರ್ಮ ಅಂತಿದ್ಲು ಗೌಡಪ್ಪನ ಹೆಂಡರು. ಏ ಥೂ. ಎಲ್ರೂ ಅಮ್ಮಾ ಅಂತಾ ಗೌಡಪ್ಪನ ಹೆಂಡ್ತೀನಾ ತಬ್ಗೊಳ್ಳೆದೇಯಾ, ಗೌಡ ಹಲ್ಲನ್ನ ಕಟಕಟ ಅನ್ಸೋನು, ಸರಿ ದ್ರೌಪದಿಯನ್ನು ಎಳೆ ತನ್ನಿ ಅಂತಿದ್ದಾಗೆನೇ ದುಸ್ಯಾಸನ ಆಗಿದ್ದ ನಿಂಗ ಇದೇ ಚಾನ್ಸ್ ಅಂತಾ ತಲೆ ಮೇಲೆ ಹೊಡ್ಕಂತಾ ರಂಗನ್ನ ಸ್ಟೇಜ್ಗೆ ಕರ್ಕಂಡ್ ಬಂದ. ಲೇ ಕೈ ಹಿಡ್ಕಂಡ್ ಬಾರಲೇ. ಏ ಇದು ನನ್ನ ಇಷ್ಟ ಅಂತಿದ್ದಾಗೆನೇ, ಧೃತರಾಷ್ಟ್ರ, ಗಕ್ಕೂ,ಗಕ್ಕೂ ಅಂತಾ ಕೆಮ್ಮೋನು. ಆಯಾಸ ಮಾಡ್ಕಬೇಡಿ ಸಿವಾ. ನಾಟಕ ಮುಗಿಯದ್ರಾಗೆ ರೈಟ್ ಹೇಳಿದ್ರೆ ಹೆಂಗೆ ಅಂದಾ ಗೌಡಪ್ಪ,  ದ್ರೌಪದಿ ವಸ್ತ್ರಾಪಹರಣ, ನಿಂಗ ಸೀರೆ ಎಳೆಯೋಕ್ಕೆ ಸುರು ಹಚ್ಕೊಂಡ. ಲೇ ಕಿಸ್ನ ಎಲ್ರಲಾ. ದಪ್ಪಗಿದ್ದ ರಂಗ, ಸೀರೆ ಎಳೀತಾ,ಎಳೀತಾ ಕಟ್ಟಿಗೆ ಒಡೆಯೋ ಕಿಸ್ನನ್ನ ತರಾ ಆಗಿದ್ದ. ಕಡೇ ಸೀರೆ ಎಳಿಬೇಕು ಅಷ್ಟರಾಗೆ ಸುಬ್ಬ ಸ್ಟೇಜ್ಗೆ ಡೈವ್ ಹೊಡೆದ. ಲೇ ಯಾರ್ರಲಾ ಹರಿದಿದ್ದ ಗೋಣಿ ಚೀಲ ಮಡಗಿದ್ದು, ನಿಂಗ ಸಿಟ್ಟಿಗೆ ಕಡೇ ಸೀರೆನ್ನೂ ಎಳೆದೇ ಬಿಟ್ಟ. ಮಗ ರಂಗ ಪಟಾಪಟಿ ಚಡ್ಡಿ, ಬನೀನ್ ಮ್ಯಾಕೆ ದರ್ಬೇಸಿ ತರಾ  ನಿಂತಿದ್ದ. ಲೇ ದ್ರೌಪದಿ ನೋಡ್ರಲಾ ಚಡ್ಡಿ ಹಾಕ್ಕಂಡವ್ಳೆ ಅನ್ನೋವು ನಮ್ಮ ಐಕ್ಳು.

ಗೌಡಪ್ಪ ಸುಬ್ಬನ್ನ ನೋಡಿ ಸಿಗು ಆಮೇಲೆ ಐತೆ ಅಂದಾ. ಸರಿ ಕಾಡು ದೃಸ್ಯ, ತುರುಕಿ ಸೊಪ್ಪ, ಕೆಸರಿನ ಸೊಪ್ಪ ಎಲ್ಲಾ ಮಡಗಿದ್ವಿ. ಸೀನ್ ರಿಯಲ್ ಆಗಿರಲಿ ಅಂತಾ. ಗೌಡಪ್ಪ ಮೂರು ರವಂಡ್ ಹೊಡೆಯದ್ರೋಗೆ, ಕಾಲ್ ಕೆರ್ಕೋಳೋಕೆ ಸುರು ಹಚ್ಕಂಡ. ಕಾಲ್ನೆಗೆಲ್ಲಾ ಕೆರೆದು ಕೆರೆದು ಬೊಬ್ಬೆ ಬಂದಿತ್ತು. ಗ್ಯಾಂಗ್ರೀನ್ ಆಯ್ತದೆ ಔಸಧಿ ತಗೋಳ್ರಿ. ಮಗಾ ದ್ರೌಪದಿ ರಂಗ ಮಾತ್ರ ಹಿಂದಗಡೇ ಅಂಗೇ ನಿಂತು. ಕಡೆಗೆ ಅವರ್ ಜೊತೆ ಸೇರ್ಕಳೋನು.

ಯುದ್ದದ ಸೀನ್, ಕಟ್ಟಿಗೆ ಒಡೆಯೋ ಕಿಸ್ನ ಬಿಲ್ಲನ್ನ ಕೊಡಲಿ ತರಾ ಎತ್ತೋನು. ಜನಕ್ಕೆ ಇವನು ಭೀಮನೋ ಅಥವಾ ಗೌಡಪ್ಪ ಭೀಮನೋ ಅನ್ನೋದು ಕನ್ಫೂಸ್ ಸುರು ಆಗಿತ್ತು. ಲೇ ಮಗನೇ ಬಿಲ್ ತರಾ ಇಟ್ಕಳಲೇ. ನನ್ನ ಇಮೇಜ್ ಹಾಳ್ ಮಾಡ್ ಬೇಡಲೇ. ಗೌಡ್ರೆ ಇದು ಸಾಗ್ವಾನಿದು ಭಾರ ಐತೆ ಎತ್ತಕ್ಕೆ ಆಯಕ್ಕಿಲ್ಲಾ ಅನ್ನೋನು. ಕಟ್ಟಿದ ತಂತಿ ಎಳೆದು ಬಿಟ್ರೆ. ಡೊಯ್್ಯಯಯಯ ಅಂತಾ ನಿಲ್ಲೋಕೆ ಹತ್ತು ನಿಮಿಸ ಬೇಕಾಗ್ತಿತ್ತು. ಅಲ್ಲಿ ತನಕ ಡೈಲಾಗ್ ಲೆಸ್ ನಾಟಕ ಆಗ್ತಾ ಇತ್ತು. ನಕುಲ, ಸಹದೇವ ನಾಯಿಗೆ ಹೊಡೆಯೋ ಕೋಲು ಇದ್ದಂಗೆ ಇದ್ವು. ಸೈಡ್ನಾಗೆ ನಿಂತು ಹಡುಗಿರೀಗೆ ಪೋಸ್ ಕೊಡೋರು. ಎಲ್ರಲಾ ಧರ್ಮರಾಯ ಅಂದ್ರೆ. ಅಣ್ಣಾ ಬೀಡಿ ಸೇದಕ್ಕೆ ಹೋಗವ್ನೆ, ಸರಿ ನನ್ನ ಮತ್ತು ಗೌಡಪ್ಪನ ಯುದ್ದದ ಸೀನ್. ಗಧೆ ಗರಡಿ ಮನೆ ಗುಂಡಿಗೆ ಒಂದು ರಾಡು ವೆಲ್ಡಿಂಗ್ ಮಾಡ್ಸಿದ್ವಿ. ಗಧೆ ಎತ್ತಿ ಎರಡು ನಿಮಿಸ ಆಕ್ತಿದ್ದಾಗೆನೇ ಗಧೆ ನೆಲಕ್ಕೆ ಮುಟ್ಟೋದು. ಆಟೊಂದು ಭಾರ. ಹೆಗಲ ಮೇಲೆ ಇಟ್ಕಂಡರೆ ಗುರುತು ಬೀಳಬಾರದು ಅಂತಾ ಗೋಣಿ ಚೀಲ ಹಾಕ್ಕೊಂಡು ಅದ್ರ ಮೇಲೆ ಸಲ್ಯ ಹಾಕಿದ್ವಿ. ಮಗಂದು ಬೇಳೆ ಗೋಣಿ ಚೀಲ ಅಂತಾ ಕಾಣ್ತದೆ. ಬರೀ ಕಿಟ್ಟೆ ಹುಳ. ನಾನು ಗೌಡ ಇಬ್ಬರೂ ಕೆರೆಯೋದೆಯಾ.

ಸರಿ ಯುದ್ದ. ಆ ಅಂತ ಬಂದು ಗಧೆ ಎತ್ತಿದೆ. ಭಾರ ತಡೆಯೋಕ್ಕೆ ಆಗದೆ. ಹಿಂದುಗಡೆ ಬ್ಯಾಲೆನ್ಸ್ ಹೋತು. ಕೂತಿದ್ದ ಕಿಸ್ನ ಸುಬ್ಬನ ತಲೆ ಮೇಲೆ ಗದೆ. ಕಾಲು ಗೌಡನ ಮುಖಕ್ಕೆ. ಅಂಗೇ ಒಂದು ಪಲ್ಟಿ. ಸುಬ್ಬ ಅಂಗೇ ಪ್ರಜ್ಞೇ ತಪ್ಪಿದ್ದ. ಗೌಡಪ್ಪನ ಬಾಯ್ನಾಗೆ ರಕ್ತ. ಲೇ ಅರಿಸಿನ. ಇವತ್ತು ಯಾವನಾದರೂ ಅರಿಸಿನ ಹಚ್ಚಿದ್ರೆ ಮಲ್ಡ್ರು ಮಾಡ್ತೀನಿ ಅಂದಾ ಗೌಡಪ್ಪ. ಇಬ್ಬರೂ ಗದೆ ತಗುಲಿದರೆ. ಕೈಯೆಲ್ಲಾ ವೈಬ್ರೇಟ್ ಆಗೋದು. ಗೌಡಪ್ಪ ಗದೆ ಎತ್ತುತ್ತಿದಂಗೆನೇ ಕೆಳಗೆ ಕುಂತೋವು ಏನ್ರಲಾ ಹಳಸೋದು ಫಲಾವು ವಾಸ್ನೆ ಬತ್ತದೆ ಅನ್ನೋವು. ಮಗಂದು ಮೂರು ಕಟ್ಟು ಊದಬತ್ತಿ ಹಚ್ಚಿದ್ರೂ ಗೌಡಪ್ಪನ ವಾಸ್ನೆಯೇ ಗ್ರೇಟ್. ಎಂಥಾ ಐಟಮ್ ನೋಡಿ.

ಬೇಗ ಸಾಯಲೇ ಗದೆ ಭಾರ ತಡೆಯೋಕ್ಕೆ ಆಯ್ತಾ ಇಲ್ಲ. ಗೌಡನ ಕಿರೀಟಕ್ಕೆ ಒಂದು ದಪಾ ಹೊಡದ್ರೆ ಅದು ಎಲ್ಲಿ ಹೋತು ಅಂತಾ ಹುಡಕಕ್ಕೆ ಅರ್ಧ ಗಂಟೆ ಆಗಿತ್ತು. ನಾಳೆ ಹತ್ತು ಸಾವಿರ ಸಾಲ ಕೊಡೋಂಗೆ ಆದ್ರೆ ಮಾತ್ರ ಸಾಯ್ತೀನಿ. ಸರಿ ಕನ್ಲಾ. ಬಡ್ಡಿ ಇಲ್ಲಾ. ಸುಬ್ಬ ಕಿಸ್ನಂಗೆ ಅಲ್ಲೇ ಇದ್ದ ಕೊಳಕು ನೀರು ಹೊಡಿದು ಎಬ್ಬಿಸಿದರೆ. ತಲೆ ಒಳಗೆ ಏನೋ ಆಯ್ತಾ ಐತೆ. ಏನ್ಲಾ ನನ್ನ ಮೈಗೆ ಹಿಂಗೆ ಬಣ್ಣ ಬಳಿದಿದೀರಾ ಅಂದ. ಸರಿ ಅಂತಿಮ ದೃಸ್ಯ, ಮಗ ಧೃತರಾಷ್ಟ್ರ ಮಾತ್ರ ಗೌಡರ ಹೆಂಡರ ಹೆಗಲ ಮೇಲಿನ ಕೈ ತೆಗೆದೇ ಇರಲಿಲ್ಲ. ಗೌಡಪ್ಪ ತೆಗಿತಿಯೋ ಮತ್ತೆ ಅಂತಿದ್ದಾಗೆನೇ, ಗಕ್ಕೂ, ಗಕ್ಕೂ ಅಂತಾ ಕೆಮ್ಕಂಡು ಹೋಗಿ ಸ್ಟೇಜ್ ಪಕ್ಕಕ್ಕೆ ಉಗೆದ. ಲೇ ಯಾವನ್ಲಾ ಉಗೀದಿದ್ದು ಅಂತಾ ಲೈಟಿಂಗ್ ನೋನು. ನಾಟಕ ಮುಗಿಯೋದು ಲೇಟ್ ಆಯ್ತದೆ ಅಂತಾ ಸ್ಟೇಜ್ ಪಕ್ಕದಾಗೆ ಮಲಗಿದ್ದ. ಕಟ್ಟಿಗೆ ಒಡೆಯೀ ಕಿಸ್ನ ಬಿಲ್ಲನ್ನು ಒಂದು ಮಣ ಕಟ್ಟಿಗೆ ತರೋ ತರಾ ಬಂದು ನಿಂತ. ಸರಿ ಪದ್ಯ ಹಾಡಿ. " ನಮೋ ವೆಂಕಟೇಸ, ನಮೋ ತಿರುಮಲೇಸ. ಲೇ ಏನ್ರಲಾ ಇದು ಅಂದ್ರು ಮಾಸ್ಟರು. ಗೌಡ್ರೆ ಮುಂದಿನ ದಪಾ ಯಾವ ನಾಟಕ ಆಡುವಾ. ಮುಂದಿನ ದಪಾ ಕಂಸ ಕಿಸ್ನ. ಹೆಂಗಸರು ಆಕ್ಟಿಂಗ್ ಬೇಡ. ಮನೆಗೆ ನಡೀ ಯಮ್ಮಿ ಅಂತಾ ಹೆಂಡರು ಉಗ್ದ. ಹೊಟ್ಟೆ ಕಿಚ್ಚು ಏ ಥೂ.