ಆಗ ಬರೆಯುತ್ತಿದ್ದೆ ಕವನ
ಸಿಗುತಿತ್ತು ಯಾವುದಾದರೊಂದು ನೆವನ
ಈಗ ಬರೆಯುತ್ತಿರುವೆ ಕೋಡು
ಯಾರಿಗೂ ಹೇಳಬೇಡಿ ನನ್ನಯ ಪಾಡು
ಆಗ ನಿಸರ್ಗವೇ ಸ್ವರ್ಗ
ಪ್ರಕೃತಿಯೇ ಕವನದ ವಿಕೃತಿ
ಈಗ ಜಾವ ಡಾಟ್ ನೆಟ್ನಲ್ಲೆ ಸ್ವರ್ಗ
ಕಂಪೈಲಿಂಗ್ ಡಿಬಗ್ಗಿಂಗ್ನಲ್ಲೇ ವಿಕೃತಿ
ಆಗ ಕಸವೆಲ್ಲ ರಸವಗುತ್ತಿತ್ತು
ಕ್ಷಣವೆಲ್ಲ ತೋರಣವಾಗುತ್ತಿತ್ತು
ಈಗ ಕಸವೆಲ್ಲ ಬುಟ್ಟಿಗೆ
ಕ್ಷಣವೆಲ್ಲ ಹಣದ ಗಣನೆಗೆ
ಆಗಲೂ ಬರೆಯುತ್ತಿದ್ದೆ ಕವನ
ಕಲ್ಪನಾ ಅನಾವರಣದ ಚಿಲುಮೆಯಿಂದ
ಈಗಲೂ ಬರೆಯುತ್ತಿರುವೆ ಕವನ
ಬರೆಯಲೇಬೇಕು ಎನ್ನುವ ಹುಸಿ ಪ್ರೇರಣೆಯಿಂದ
ಪ್ರತಿಕ್ರಿಯೆ (2)