ಹಾಗೆಯೇ ಮದುವೆಗೆ ಎಷ್ಟು ಜನ ಆಗಬಹುದೆಂದು ಬಾಳೇಕಾಯಿ ಭವಿಷ್ಯ ಹೇಳಿತು ಎಂದರೆ ನಂಬುವಿರೇ??
ಸಮಸ್ಯೆ ಪ್ರಾರಂಭ ಇಲ್ಲಿಂದ, ಅಡುಗೆ ವ್ಯವಸ್ಥೆ ಹೇಗೆ? ಎಷ್ಟು ಜನಕ್ಕಾಗಿ ಊಟದ ವ್ಯವಸ್ಥೆ ಮಾಡುವುದು ಎಂದು ಲೆಕ್ಕವೇ ಸಿಗದಂತಾಯಿತು. ಬಂದ್ ಪ್ರಬಲವಾಗಿದ್ದರೆ ಮಾಡಿದ್ದೆಲ್ಲಾ ಮದುಮಗ ಮದುಮಗಳು ಕೂತು ತಿನ್ನಬೇಕಷ್ಟೇ ಎಂದು ಹೇಳುವವರು, ಅಲ್ಲಾ ೫೦೦ ಎಸ್ಟಿಮೇಶನ್ ಅಡುಗೆಯಲ್ಲಿ ಜನ ೨೫೦ ಆದರೆ?ಉಳಿದ ೨೫೦ ಜನರ ಊಟ ನಾವಿಬ್ಬರು ಕುಳಿತು ತಿಂದು ಖಾಲಿ ಮಾದುವುದೇ??
ಮದುವೆದಿನ ಊಟವೆಲ್ಲ ಆದನಂತರ ಲೆಕ್ಕ ಸಿಕ್ಕಿತು. ಹರಸಿ ಉಂಡು ಹೋದವರ ಸಂಖ್ಯೆ ೩೫೦ ಅಂದಾಜೇ ಇರಬಹುದು.. ಮಾಡಿದ ಅಡುಗೆ ಯಾವುದಕ್ಕೂ ಕೊರತೆಯಾಗಿಲ್ಲ ಉಳಿದು ಹೋಗಲೂ ಇಲ್ಲ!! ಅಬ್ಬಾ ನಂಬಲೇ ಬೇಕಾಯ್ತಲ್ಲಾ.. ಬಾಳೇಕಾಯಿ ಭವಿಷ್ಯ ನುಡಿದಿದ್ದನ್ನ!


ಪ್ರತಿಕ್ರಿಯೆ (6)