ಇದು ಸಿದ್ಧಾಂತ ಅಲ್ಲ
ವಿಕೃತ ಕಲ್ಪನೆಯ ಚಿತ್ರಣ
ಬರೆಯೋಕೆ ಅಪ್ಪಣೆ ಬೇಕಿಲ್ಲ
ಗೆಳೆಯ ಓದು ಕವನ
ಸತ್ಮೇಲೆನೈತೆ ಬರಿಸೊನ್ನೆ
ಅಂತಕರಣಕೆ ಬೆಲೆ ಇಲ್ಲ
ಭಾವನೆ ಹಳೆ ಸಾಮಾನು
ಎಲ್ಲ ಹರಾಜಾಗಿದೆ ನೋಡು
ಖರೀದಿ ಮಾಡಿಬಿಡು ಜಾಣ
ಸತ್ಮೇಲೆನೈತೆ ಬರಿಸೊನ್ನೆ
ಬದುಕಿರೊದ್ ನಾಲ್ಕೆ ದಿನ
ಯೋಚನೆ ಮಾಡಕ್ಕೇನಿಲ್ಲ
ಮೂರು ಬಿಟ್ಟೋನೆ ಮಾನವ
ಆಗಬೇಡ ನೀ ಪರಮಾತ್ಮ
ಸತ್ಮೇಲೆನೈತೆ ಬರಿಸೊನ್ನೆ
ಸರಿ ತಪ್ಪಿಗೆ ವ್ಯತ್ಯಾಸ ಇಲ್ಲ
ಪಶ್ಚಾತಾಪ ಬೇಡ ತಮ್ಮ
ನಿಯತ್ತನ್ನ ಗಾಳಿಗೆ ತೂರು
ಆಸೆ ಬದುಕಿರೊವಾಗ್ಲೆ
ಸತ್ಮೇಲೆನೈತೆ ಬರಿಸೊನ್ನೆ
ನೆನ್ನೆ ಮಾಡಿದ್ ತಪ್ಪಿಗೆ
ನಾಳೆ ಸಿಗುತ್ತೆ ಉತ್ತರ
ಸಾಮಾನ್ಯ ಮುಕ್ತಿ ನಿನಗಲ್ಲ
ಕಂಡವರ್ಯಾರು ಪರಲೋಕ
ಸತ್ಮೇಲೆನೈತೆ ಬರಿಸೊನ್ನೆ
ಸತ್ಯಕ್ಕೆ ಅರ್ಥನೆ ಇಲ್ಲ
ಸುಳ್ಳೇ ಜಗದೊಡೆಯ
ಯಾರಿಗು ಬೇಕಿಲ್ಲ ತರ್ಕ
ಬೇಕಾಗಿದ್ ಮಾಡು ಮಗನೆ
ಸತ್ಮೇಲೆನೈತೆ ಬರಿಸೊನ್ನೆ
ಕವನ ಓದಿದ್ ಮೇಲೆ
ಹಾಕಬೇಡಿ ಯಾರು ಶಾಪ
ಬರೆಯೊ ಕಾರಣ ನಂಗೊತ್ತಿಲ್ಲ
ಕ್ಷಮಿಸಿಬಿಡಿ ಹಾಗೆ ಸುಮ್ಮನೆ
ಸತ್ಮೇಲೆನೈತೆ ಬರಿಸೊನ್ನೆ
- ಪ್ರಮೋದ್ ಗೌಡ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮತ್ತೆ ಮತ್ತೆ ಒಲವು
ಒಂದೆರಡು ಸಾಲು
ಕಿಟಕಿ ಪಕ್ಕದ ಹುಡುಗಿ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)