"ನಗೆಯ ಹೂವಾಗಿ.  "

ಕೋಟಿ ನಕ್ಷತ್ರಗಳಿದ್ದರೇನು
ಸುತ್ತಲೂ  ಬರೀ ಕತ್ತಲು

ಹುಣ್ಣಿಮೆಯ  ಚಂದಿರ

ನೀನೊಂದು ಮನದ ಬೆಳಕು

ತಿಂಗಳು  ಪೂರ   ಕಾಯುವೆ

ನೀ ಬರುವ ದಾರಿಗೆ  ನಗೆಯ ಹೂವಾಗಿ.

ಮುಂಗಾರಿನ ಮಿಂಚಾಗಿ.

ಒಲವು ಚೆಲ್ಲಿದ ಹೊಲದಲ್ಲಿನ ಬೀಜದ ಮೊಳಕೆಯಾಗಿ.

ವಸಂತಕಾಲದ  ಕೋಗಿಲೆಯಾಗಿ,

ಜೀವವನ್ನೇ ಮುಡಿಪಾಗಿಟಿರುವೆ...

ನನ್ನೆದೆಯಲ್ಲಿ ನಿನ್ನಯ ಪಾದದ ಸ್ಪರ್ಶಕ್ಕಾಗಿ

ಇಂತಿ  ನಿನ್ನವ...................