ಮಮತೆಯ ಮುಗಿಲಲ್ಲಿ ತೇಲಾಡಿದೆ ನಾ
ಕರುಣೆಯ ಕಡಲಲ್ಲಿ ಮುಳುಗಿದೆ ನಾ
ಪ್ರೀತಿಯ ಮಡಿಲಲ್ಲಿ ಮಲಗಿದೆ ನಾ
ಆಸೆಯೆ೦ಬ ಮಾಯೆಯ ಮರಿಚಿಕೆಯಲ್ಲಿ ಕಳೆದು ಹೋದೆ ನಾ
ಕಂಡು ಕಾಣದೆ ಲೋಕದ ಜಾಲದಲ್ಲಿ ಸಿಲುಕಿ ಹೋದೆ ನಾ....

 

*********************************************************************

 

ಕಂಡು ಕಾಣದ ಪ್ರೀತಿ


ಎದುರಿದ್ದು ಕಾಡುವೆ ನನ್ನನ್ನು
ಜೊತೆಯಲಿದ್ದು ಸೇರುವೆ ನನ್ನನ್ನು
ಕ್ಷಣದಲ್ಲಿ ಮೈಮರೆತು
ಕಣ್ಣುಗಳ ಸೆರೆಯಲ್ಲಿ ಮರೆಮಾಡಿ ನನ್ನನ್ನು
ನಿನ್ನ ಪ್ರೀತಿಯ ಸುಧೆಯನ್ನು ನೀಡದೆ
ಕೊಲ್ಲುವುದು ಏಕೆ ನನ್ನನ್ನು!!!!