ಪ್ರೀತಿನೆ ಆ ದೇವರು ಕೊಟ್ಟ ವರ ಅಂತ  ನಾ ತಿಳಿದೆ,

 

ಅದಕ್ಕಾಗಿ ಪರಿತಪಿಸಿ ಅಲೆದಾಡಿದ ಜಾಗವಿಲ್ಲ

 

ಅದರೂ  ನನ್ನ ಪ್ರಯತ್ನ  ವಿಪಲವಾಗಲಿಲ್ಲ, ಕೊನೆಗೊಮ್ಮೆ   ದಕ್ಕಿತು

 

ಆ  ನನ್ನ ಪ್ರೀತಿಯ ಚಿಲುಮೆ ,

 

ಅದರಲ್ಲಿನ  ಸಿಹಿ ಕಂಡೆನೆ ಹೊರತು

 

ಅದರಲ್ಲೇ   ಮಿಂದು ಮೇಯುತಿರುವ, ಮೊಸಳೆಗಳ ನಾ ಅರಿಯದೆ ಹೋದೆ

 

ಆದರು   ಭಗಿರಥ ಪ್ರಯತ್ನದಿಂದ  ಈಜಾಲಾಗದೆ  

 

ಅದರಲ್ಲೇ ಮುಳುಗಿ ಹೋದೆ,  ನನಗೆ ಸಿಕ್ಕಿದೊಂದೇ  ದಿನ ದಿನವು  ಕಾಡುವ  ನೆನಪು,

 

ನಾ ಪಡೆದಿದ್ದೊಂದೇ  ಜ್ವಾಲಾಮುಖಿಯಂತೆ  ಬುಸುಗುಡುವ ಹುದುಗಲಾರದ   ಹೃದಯದ   ನೋವು,

 

ಅದು ದೇವರು ಕೊಟ್ಟ ವರವೋ  ಇಲ್ಲ ತನಗೆ ತಾನೇ ಪಡೆದುಕೊಂಡ  ದೊಡ್ಡ ಶಾಪವೋ 

 

ನಾನರಿಯೆ.................................?