ಬರೇ   ನನ್ನೊಬ್ಬನಿಂದೇನಾಗುವುದು!!!!!!



ಮರಳಿನ ಕಣ ಕಣ ಹೀಗೆಂದಿದ್ದರೆ  
ಪ್ರಥ್ವಿಗೆ ನೆಲವು ಎಲ್ಲಿರುತ್ತಿತ್ತು?
ನೀರಿನ ಪ್ರತಿ ಅಣು ಹೀಗೆಂದಿದ್ದರೆ
ಇಹದಾ ಸಾಗರಕರ್ಥವು  ಇತ್ತೆ?

ಸ್ವರವೊಂದೊಂದೂ ಹೀಗೆಂದಿದ್ದರೆ  
ಸಂಗೀತವಂತೂ ಎಲ್ಲಿರುತ್ತಿತ್ತು?
ಅಕ್ಷರವೊಂದು ಹೀಗೆಂದಿದ್ದರೆ
ಓದಲು ನಮಗೆ ಏನಿರುತ್ತಿತ್ತು?

 
ಪೈರು ಪಚ್ಛೆಗಳೆಲ್ಲಿಯ ಬಯಲು,  
ಧಾನ್ಯದ ಕಾಳೂ ಹೀಗೆಂದಿದ್ದರೆ   
ಮನೆಯೇ ಇರುವುದು ಸಂಶಯವಿತ್ತು  
ಇಟ್ಟಿಗೆಯಂತೂ ಹೀಗೆಂದಿದ್ದರೆ  
 

ನಮ್ಮಲ್ಲೆಲ್ಲರೂ ಹೀಗೆಂದಿದ್ದರೆ  
ಶಾಂತಿ ಪ್ರೀತಿಯ ಹೆಸರಿರುತ್ತಿತ್ತೇ?
ಈ ವ್ಯತ್ಯಯವರಿತರೆ ನಾವೂ
ನಡುವಿನ ಅಂತರ ನೀಗದೇ ಮತ್ತೇ