"ಪಂಚರಂಗಿ" ನೋಡಿದ ಎಲ್ಲರೂ ಈಗ ಕವಿಗಳಾಗುತ್ತಿದ್ದಾರೆ,  ಅಂತೆಯೇ ಭಟ್ರ ಪಂಚರಂಗಿ ನೋಡಿ ಊರಿಂದ  ಕೆಲಸದ ಊರಿಗೆ ಹೊರಡುವ ಹೊತ್ತಲ್ಲಿ ನಾನು ಗೀಚಿದ ಕೆಲವು ಸಾಲು"ಗಳು" ಅನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.

 

ಮನೆ ಇಂದ ಹೊರಡಲೇ ಬೇಕಾದ ಗಳಿಗೆಗಳು, ಚಿಟಪಟ ಮಳೆಯ ಹನಿಗಳು, ಒದ್ದೆ ಪ್ಯಾಂಟು ಶರ್ಟ್ಗಳು,
ಸಿಟಿ ಬಸ್ಸಿನಲ್ಲಿ ಸೀಟ್ ಸಿಗದೇ ನೆತಾಡಿ ಬರಬೇಕಾದ ಫೂಟ್ ಬೋರ್ಡ್ ಗಳು,
ಕೈ ಬೀಸಿ ಕರೆವ ಕಂಡೆಕಟರ್ ಗಳು, ಹಬ್ಬದ ಸ್ಪೆಷಲ್ ಬಸ್ಗಳು, ತುಂಬಿದ ಸೀಟ್ ಗಳು
ರೋಡ್ ತುಂಬಾ ಸಣ್ಣ ದೊಡ್ಡ ಹೊಂಡಗಳು ಕೊನೆಯ ಸೀಟ್ ನಲ್ಲಿನ ಸರ್ಕಸ್ ಪ್ರಯಾಣಗಳು ನಿದ್ದೆಯಿಲ್ಲದ ರಾತ್ರಿಗಳು

 

 

ಸೋಮವಾರದ ಆಲಸ್ಯದ ಹಗಲುಗಳು, ಕೆಲಸ ಮಾಡಲು ಮನಸೇ ಬಾರದ ಪ್ರಾಜೆಕ್ಟ್ ಗಳು
ಊರಿನಿಂದ ತಂದ ಸಿಹಿ ತಿನಸುಗಳು, ಕ್ಯಾಂಟೀನ್ ನ ಹದಗೆಟ್ಟ ಊಟ ಉಪಚಾರಗಳು
ಅದೇ cubicle, desktop, mouse ಗಳು ,ನಿದ್ದೆಯಲ್ಲಿ ತೇಲುತ್ತಿರುವ ಹಳೇ ತಲೆಗಳು
ಇಂಥ ಪರಿಸ್ಥಿತಿಯ ನಡುವೆ ನಾನು ಹೇಗೆ ಕೆಲಸ ಮಾಡಲಿ ಎನ್ನುವ ಸಾಫ್ಟ್ವೇರ್ ಇಂಜಿನಿಯರ್ ಗಳು
ನಾನು ತಿರುಗಿ ನಿದ್ದೆಗೆ ಹೋಗಲೇ ? ಎನ್ನುವ ನನ್ನಂಥವರು ನಿಮ್ಮಂಥವರು !!!

 

ಮುಗಿದ ಗಣೇಶ ಹಬ್ಬದ ಕೊಡುಬಾಳೆ ಡಬ್ಬಗಳು, ಮನೆ ಇಂದ ತಂದ ಪಂಚಕಜ್ಜಾಯ ಅಪ್ಪಗಳು,

ಮನೆಯಲ್ಲಿನ ಹಿರಿಯ ಅಜ್ಜ ಅಜ್ಜಿಯರು ಮಮತೆಗಳು , ಅಕ್ಕ ತಂಗಿಯಂದಿರ ಒಡನಾಟಗಳು,

ಮಕ್ಕಳ ತುಂಟಾಟಗಳು,ಗೆಳೆಯರ ಪಿಕಲಾಟಗಳು, ಹೆಂಗಸರ ಕಿರಚಾಟಗಳು  

ಕಾಲೇಜ್ ಗೆಳೆಯನೊಡನೆ ನೋಡಿದ ಸಿನೆಮಾದ ಡೈಲಾಗ್ ಗಳು, ರಾತ್ರಿ ಬಯಲಲ್ಲಿ ಕಂಡ ಮದ್ದಲೆ ತಾಳ ಮೇಳಗಳು

ಕೆಲಸದ ನಡುವೆ ಎಲ್ಲಿಂದಲೋ ತೇಲಿಬರುವ ಈ ಎಲ್ಲ ಸವಿ ನೆನಪುಗಳು

.

.

.

ಈ ನಡುವೆ ದೀಪಾವಳಿ ಯಾವಾಗ ಬರುವುದೋ ಎಂಬ ಕಾತುರತೆಗಳು, ಮನೆಗೆ ಹೋಗಲು ಇಗಲೇ ಬುಕ್ ಮಾಡಬೇಕಾದ ksrtc ಟಿಕೆಟ್ ಗಳು