ನಂಗೂ ಚಿತ್ರ ಬರ್ಯೋದನ್ನ ಅಮ್ಮ ಹೇಳ್ಕೋಟ್ಟಿದಾರೆ .

ಹೊಸದಾಗಿ ಮದುವೆಯಾಗಿ ಸಂಸಾರ ಸ್ಥಾಪಿಸಿದ ಮೇಲೆ ತಲೆಗೆ ಬರುವ ಮೊದಲ ಕೊರತೆಯೆಂದರೆ, ಮನೆಯನ್ನು ತುಂಬಲು ಅಲ್ಲಿನ ವಾತಾವರಣದಲ್ಲಿ ಲವಲವಿಕೆ, ಮತ್ತು ಸಂಭ್ರಮದ ಹೊನಲನ್ನು ತರುವ ಹಲವಾರು ಪರಿಕರಗಳಲ್ಲಿ  ಪುಟ್ಟ ಜೀವಿಯೊಂದರ ಆವಶ್ಯಕತಯೂ ಹೌದೆನ್ನಿಸುತ್ತದೆ. ಆ ’ಪುಟ್ಟ ಪಾಪಚ್ಚ”ಯ ಜೀವನದ ಹಲವು ಸ್ತರಗಳು ಗಂಡಹೆಂಡಿರ ಒಲವು ಸಂಬಂಧಗಳನ್ನು ಹೆಚ್ಚು ಹೆಚ್ಚು ಬಿಗಿದು ಹಿಡಿಯಲು ಸಹಾಯ ಮಾಡುತ್ತವೆ. ಗಂಡ ಮನೆಗೆ ಓಡಿಬರುತ್ತಾನೆ. ಹೆಂಡತಿ ತನ್ನ ಒಡಲಿನ ಕುಡಿಗೆ ಎಳ್ಳಷ್ಟೂ ತೊಂದರೆಯಾಗದಂತೆ ನಿಗಾವಹಿಸುತ್ತಾಳೆ. ಕೊನೆಕೊನೆಗೆ ದಿನದ ೨೪ ಗಂಟೆಗಳೂ ಅವಳಿಗೆ ಕಡಿಮೆಯೆನ್ನಿಸುವ ಹಲವಾರು ಕ್ಷಣಗಳೂ ಇಲ್ಲದಿಲ್ಲ. ಮಕ್ಕಳ ಪ್ರತಿ ’ಕಾರನಾಮಗಳೂ’ ಅದೇನೊ ಹೊಸತರಹವೆನ್ನಿಸುತ್ತವೆ...

ಏನ್ ಬರಿಲಪ್ಪ 

ಆಯ್ತಪ್ಪ ಸದ್ಯ, ಈ ಬಣ್ಣದ ರಾಮಾಯಣ....

ಸದ್ಯ ಚಿತ್ರ ಬಿಡಿಸಿದ್ದು ಆಯ್ತು .....

 ಇದನ್ನು ಬಿಡಿಸಿದ ಖ್ಯಾತ ಚಿತ್ರಗಾರ್ತಿ ಯಾರೆಂದರೆ.....ಇದು ಗುಟ್ಟು ಹೇಳಲ್ಲ.  ಆ ಮಗುವಿನ ಹೆಸರು...ಗ, ಗಾ, ಗಿ, ಗೀ, ಗು, ಗು ,ಗೆ, ಗೈ , ಗೋ, ಮುಂದೆ ಹೋಗುತ್ತದೆ. _ ಇಂದ ಶುರುವಾಗೊದಂತು ನಿಜ....