ಗಣಪ ಭೂಮಿಗೆ ಬಂದಾಗ ಮಾನವರು ಸಂಪ್ರದಾಯಗಳನ್ನು ತಿರುಚಿ ಕ್ರುತಿಮ ವಿಧಾನಗಳಿಂದ ಹೇಗೆ ಸಜ್ಜನರನ್ನು ಹಿಂಸಿಸುತ್ತಾರೆ ಗೊತ್ತೆ?.
ಅಂತಹ ಪ್ರಶ್ನೆಗಳಿಗೆ ಉತ್ತರವನ್ನು ಅವರ ತಾಯಿ ಪಾರ್ವತಮ್ಮ ಹೇಳಬೇಕು ನಮ್ಮನ್ನು ಆಶೀರ್ವದಿಸಬೇಕು. ನಿಮಗೆ ಸರಿ ಎಂದು ತೋರಬಹುದು. ಗಣಪನನ್ನು ಅವನ ತಾಯಿಯನ್ನು ಪ್ರಾರ್ಥಿಸಿ ಬರೆಯುತ್ತಿರುವೆ.ಶಿವಶಶಿ ಎಂಬ ಲೇಖನಿ ನಾಮದಲ್ಲಿ ಬರೆಯುವೆ.
ಕಿವಿ ತೂತು
ಪಾರ್ವತಮ್ಮ ನಡು ಬೀದೀಲಿ ನಿನ್ನ ಮಗ ಕುಳಿತು
ಅರಚಿಸಿ ಕಿರುಚಿಸಿ ನಮ್ಮ ಕಿವಿಯಾಗುತಿವೆ ತೂತು
ನಾಟ್ಯವಾಡುತ್ತಾನೆ ಹದಿನಾರರ ಹೆಣ್ಣುಗಳ ಕಲೆತು
ಹೇಳಬಾರದೆ ನೀನು ಸ್ವಲ್ಪನಾದರೂ ಬುದ್ಧಿ ಮಾತು.
ಸಂದಿ ಗಣಪ
ಪಾರ್ವತಮ್ಮ ನಿನ್ನ ಮಗನು ಈ ಭೂಮಿಗೆ ಬಂದು
ಕುಳತುಬಿಡ್ತಾನೆ ಹುಡುಕಿಕೊಂಡು ಸಂದು ಗೊಂದು
ಪೋಲಿಗಳೆಲ್ಲಾ ಹೇಳುತ್ತಿದ್ದಾರೆ ಅವನೆಂದು ಬಂಧು
ಈ ಅರಿಕೆಯ ಮಾಡ್ತಿದ್ದಾರೆ ಸಂಪ್ರದಾಸ್ಥರು ನೊಂದು.
ಗಿರಿಜೆಗೆ ವರದಿ
ನಿನ್ನ ಮಗನು ಮಾಡಿದ್ದಾನೆ ಪೋಕರಿಗಳ ಸಹವಾಸ
ರವುಡಿಗಳ ಮನೆ ಮನೆಗೆ ಕಳುಹಿಸಿ ಕೀಳಿಸ್ತಾನೆ ಕಾಸ
ಅಷ್ಟೂ ಅಲ್ಲದೆ ಕ್ಯಾಬರೆ ಹಾಡಿಗೆ ಆಗಿದ್ದಾನವ್ವ ದಾಸ
ಭೂ ಲೋಕದ ಪೋಲೀ ಬೀದೀಲಿ ಮಾಡ್ತಾನೆ ವಾಸ.
ತಾಯಿಯ ಕಣ್ಣೀರು
ಅಮ್ಮ ನಿನ್ನ ಪರಮೇಶ್ವರನ ಪವಿತ್ರ ಕ್ಯಲಾಸವೆಲ್ಲಿ ?
ನಮ್ಮೂರ ಗಟಾರಗಳು ತುಂಬಿರುವ ಗಲ್ಲಿಗಳೆಲ್ಲಿ ?
ಗಣಪನ ಸಹವಾಸದ ಜನಗಳಂತೂ ಸಿಲ್ಲಿ ಸಿಲ್ಲಿ
ಕಣ್ಣೀರು ಹಾಕುವೆ ತಾಯಿ ನೀನೇ ಬಂದರೆ ಇಲ್ಲಿ!.
ಕೆರೆ ಹಾಳು
ಗಲ್ಲಿ ಗಲ್ಲಿಗಳಲ್ಲಿ ಶಬ್ಧವನ್ನು ನೀನೇ ಒಮ್ಮೆ ಕೇಳು
ನಾಗರೀಕರು ಅಪ್ಪುತ್ತಿದ್ದಾರೆ ಕಿವುಡುತನದ ಬಾಳು
ಕಡೆಗೆ ನಮ್ಮೂರ ಪರಂಪರೆಯ ಕೆರೆಗಳೂ ಹಾಳು
ಗಿರಿಜಮ್ಮ ಮಗನಿಗೆ ಬುದ್ಧಿ ಹೇಳ್ತೀನಂದರೆ ಹೇಳು.
ಢವ್ವ ಢವ್ವ
ನಿನ್ನ ಮಗನು ಬಂದಾಗ ತರುತ್ತಾನೆ ಕಿವಿಗೆ ನೊವ್ವ
ಅವನ ಭಕ್ತರ ನೋಡಿದರೋ ಅನ್ನುತ್ತೆ ಢವ್ವ ಢವ್ವ
ಕಡೆ ದಿನದ ಮೆರವಣಿಗೆಯೋ ಅಯ್ಯಯ್ಯೋ ಅವ್ವ
ನೀನಾದರೂ ಬಂದು ಬುದ್ಧಿಯ ಹೇಳು ಪಾರ್ವತವ್ವ.
ಮಗನ ಕಾಪಾಡು
ಅವನ ಪೋಲೀ ಭಕ್ತರು ತೋರಿಸುತ್ತಾರೆ ಠೀವಿ
ಅವರ ಭಕ್ತಿ ಗೀತೆಯ ಕೇಳಿ ಹಾಳಾಗುತ್ತಿವೆ ಕಿವಿ
ಕಡೇಗೆ ನೋಡಮ್ಮ ಕಾಣಿಸ್ತಾರೆ ಪಾಳು ಬಾವಿ
ಮಗನ ನೀನೇ ಕಾಪಾಡಬೇಕು ಪಾರ್ವತಿದೇವಿ.
ನೀ ಸಲಹು ತಾಯಿ
ಪಾರ್ವತಮ್ಮ ಬೆಂಗಳೂರನ್ನು ನೋಡು ಸುತ್ತಾಡಿ
ನಿನ್ನ ಮಗನ ಸುತ್ತುವರಿದಿದ್ದಾನೆ ನಮ್ಮೂರ ರವುಡಿ
ಅವನೊಡನೆ ಸೇರಿ ಗಣಪನೂ ಆಗಿರುವನು ಕೇಡಿ
ಗಿರಿಜವ್ವ ನೀ ಸಲಹು ಸಂಪ್ರದಾಯಸ್ಥರ ಕಾಪಾಡಿ.
ಭೂತ ಪ್ರೇತ
ಈ ಜೋಡಿ ಕ್ಯ ಎತ್ತಿ ಮುಗಿಯುವೆ ಪಾರ್ವತೀಸುತ
ನಡು ಬೀದೀಲಿ ಕೂರಬೇಡ ಕೇಳಪ್ಪ ನನ್ನ ಮಾತ
ಅಲ್ಲಿ ಬೀದಿಯನ್ನು ನಿಯಂತ್ರಿಸುತ್ತಿದೆ ಒಂದು ಭೂತ
ಅದೇ ನೋಡು ನಿನ್ನ ಭಕ್ತರ ಪಾಲಿಗಾಗಿದೆ ಪ್ರೇತ.
ಗಣಪನ ಸಲಿಗೆ
ಮನೆ ಮನೆಗೆ ಹೊಕ್ಕಿ ಬೆದರಿಸಿ ಮಾಡ್ತಾರೆ ಸುಲಿಗೆ
ಅವರಿಗೆಲ್ಲಾ ನಿನ್ನ ಮಗ ಕೊಟ್ಟವ್ನೆ ಪೂರ್ತಾ ಸಲಿಗೆ
ನಿನ್ನ ಮಗ ಅಂತ ಸುಮ್ಮಗಿದೆ ನಮ್ಮ ಜನರ ನಾಲಿಗೆ
ಪಾರ್ವತವ್ವ್ ಉಳಿದಿರೋಳು ನೀನೇ ನಮ್ಮ ಪಾಲಿಗೆ.
ರಚನೆ: ಶಿವಶಶಿ.
ದಿನಾಂಕ 17-09-2010
ಶುಕ್ರವಾರ.
ಬೆಂಗಳೂರು-560 011.
ಪ್ರತಿಕ್ರಿಯೆ (4)