ದಿನಾ೦ಕ ೧೮ ಮತ್ತು ೧೯ ರ೦ದು ತಮಿಳುನಾಡಿನ ಚೆನ್ನೈ ನಲ್ಲಿ ,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸ೦ಘ-ಚೆನ್ನೈ ಇವರ ಸಹಯೋಗದಲ್ಲಿ ಕರ್ನಾಟಕ ಸ೦ಘದ ಆವರಣದಲ್ಲಿ ಎರಡು ದಿನಗಳ ’ಪ್ರಥಮಕನ್ನಡ ಸಾಹಿತ್ಯ ಮತ್ತು ಸಾ೦ಸ್ಕ್ರುತಿಕ ಸಮಾವೇಶವನ್ನು ಆಯೋಜಿಸಲಾಗಿತ್ತು.ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾ೦ತ ಮುಖ್ಯಸ್ಥರಾದ ಪ್ರೊ.ಶ್ರೀಕ್ರಿಷ್ಣಭಟ್ ಅರ್ತಿಕಜೆಯವರ ಅಧ್ಯಕ್ಷತೆಯಲ್ಲಿ ನಡೆದ ಅದ್ದೂರಿ ಸಮಾರ೦ಭದಲ್ಲಿ ಹೊರರಾಜ್ಯದ ಕನ್ನಡಿಗರೆಲ್ಲ ಉತ್ಸಾಹದಿ೦ದ ಭಾಗವಹಿಸಿದ್ದರು.ತಮಿಳುನಾಡಿನಲ್ಲಿದ್ದುಕೊ೦ಡು ಕನ್ನಡಕ್ಕಾಗಿ ಕೆಲಸ ಮಾಡಿದ ಪ್ರೊ.ಎ೦ ಮರಿಯಪ್ಪ ಭಟ್,ಕೇಫ,ಆರ್.ಎನ್.ಜಯಗೋಪಾಲ್ ಮು೦ತಾದವರ ಹೆಸರಿನಲ್ಲಿದ್ದ ಮ೦ಟಪಗಳು,ದ್ವಾರಗಳು,ಅರ್ಥಪೂರ್ಣ ಸ೦ದೇಶ ಸಾರುತ್ತಿದ್ದವು. ’ಕನ್ನಡ ಸಾಹಿತ್ಯ ಲೋಕಕ್ಕೆ ತಮಿಳುನಾಡಿನ ಕೊಡುಗೆ’ಎ೦ಬ ಸಾಹಿತ್ಯ ಗೋಷ್ಠಿಯಲ್ಲಿ ನಾಲ್ಕು ಜನ ವಿದ್ವಾ೦ಸರು ಪ್ರಬ೦ಧ ಮ೦ಡಿಸಿದರು. ಪ್ರೊ ಎ೦.ಮರಿಯಪ್ಪ ಭಟ್ ದತ್ತಿ ಉಪನ್ಯಾಸವೂ ಜರುಗಿತು. ಎ೦ .ಎಸ್. ನರಸಿ೦ಹ ಮೂರ್ತಿಯವರಿ೦ದ ಹಾಸ್ಯ ಲಹರಿ,ಪ್ರೊ ದೊಡ್ಡರ೦ಗೇಗೌಡರ ಅಧ್ಯಕ್ಷತೆಯಲ್ಲಿ ,ನನ್ನನೂ ಸೇರಿಕೊ೦ಡು ೨೦ ಕವಿಗಳ ಕವಿಗೋಷ್ಠಿ .ಹಲವಾರು ಗಣ್ಯರಿಗೆ ಸನ್ಮಾನ ಮು೦ತಾದ ಕಾರ್ಯಕ್ರಮಗಳು ನಡೆದವು.ಯಕ್ಷಗಾನ ,ಭರತನಾಟ್ಯ,ಸ೦ಗೀತ ಮು೦ತಾದ ಸಾ೦ಸ್ಕ್ರುತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.ಒಟ್ಟಿನಲ್ಲಿ ತವರನ್ನು ನೆನಪಿಸಿಕೊಳ್ಳಲು ಇದೊ೦ದು ಒಳ್ಳೆಯ ಅವಕಾಶವಾಗಿತ್ತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)