ಅದೇ ಕಾದು ಕುಗ್ಗಿರುವ,

ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ -

ಒಂದೇ ಮಳೆಗೆ ಬಾಗಿ

ಎಲ್ಲ ಸತ್ತ್ವವನ್ನೂಹೊರಗೆಳೆದು

ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ

ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸತ್ಯ

ಕಾಣಲು

ಆ ಬೇಸಿಗೆ, ಆ ಮಳೆ, ಆ ನೆಲ, ಮತ್ತದೇ ಮಣ್ಣಿನಲ್ಲುಕ್ಕುವ ಹುಲ್ಲೇ

ಆಗಬೇಕಿತ್ತು ನೋಡಿ!