ಮುಂಜಾನೆಯ ಮಂಜಲ್ಲಿ ಜಗವೆಲ್ಲ ಹಾಡಿದೆ
ಮೌನವೆಂಬ ಗೀತೆ ..ಧನ್ಯನಾದೆ ನಾನು
ವಿಧಿಯೆ ಬರೆಯಲು ಬಾಳ ಪುಟದಲಿ
ನಿನ್ನ ಸ್ನೇಹವೆಂಬ ಸುಮಧುರ ಕವಿತೆ
ಅನಂತ ಭಾವಗಳು ಮುಕ್ತವಾಗಿ ಹಾರಲು
ಯುಗಳರಾಗದ ನಾಂದಿಗೆ ಆತ್ಮವೆ ಸಾಕ್ಷಿ
ನೀನಲ್ಲವೆ ಗೆಳತಿ ಅಂತರಂಗದಲಿ
ಪ್ರಶ್ನೆಯಾಗಿ ಉಳಿದ ಕಲ್ಪನೆಗಳ ಅಕ್ಷಿ!!
ಪರಿಚಯದ ಖುಷಿಯಲಿ ಕರಗಿದೆ ಸಮಯ
ವಿಮುಕ್ತನಾದ ಖೈದಿಯಂತೆ ನನ್ನ ಹೃದಯ
ಕಾಲದ ಮರೆಯಲಿ ಬೆಳೆಯಲು ಬಾಂಧವ್ಯ
ಅರ್ಥ ಉಳಿದುದೆ ಹೆಮ್ಮೆಯ ವಿಷಯ!!
ನಿನ್ನ ಮೈತ್ರಿಗಿಂತ ಮಿಗಿಲಾದುದೇನಿಲ್ಲ
ಗೆಳತಿ ಸೃಷ್ಟಿಯಲಿ..ನಮೂದಾಗಿದೆ
ಚರಿತ್ರೆಯ ಹಾಳೆಯಲಿ ಈ ಗೆಳೆತನ
ಸ್ನೇಹವೆಂಬ ಧರ್ಮಕೆ ನಾವೇ ಲಾಂಛನ
ನೂರೊಂದು ಕನಸುಗಳು ನುಡಿಸಿರಲು
ಇಂಪಾದ ಸಂಗೀತ,, ಅರಿವಿನ ಆಲಯದಲಿ
ಚಿಗುರೊಡೆದಿದೆ ನೆನಪುಗಳ ಅಂಕಣಕೆ
ಹೀಗೊಂದು ಭಾವನಾತೀತ ಸಾಹಿತ್ಯ..
- ಪ್ರಮೋದ್ ಗೌಡ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮತ್ತೆ ಮತ್ತೆ ಒಲವು
ಒಂದೆರಡು ಸಾಲು
ಕಿಟಕಿ ಪಕ್ಕದ ಹುಡುಗಿ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)