ನಾಲ್ಕು ಜನ ಸ್ನೇಹಿತರು ೩೦ ವರ್ಷಗಳ ಬಳಿಕ ಒಂದು ಗುಂಡಿನ ಪಾರ್ಟಿಯಲ್ಲಿ ಭೇಟಿಯಾದರು..

ಕೆಲವು ಪೆಗ್ಗುಗಳ ಬಳಿಕ ಒಬ್ಬಾತ ಶೌಚಕ್ಕೆಂದು ಹೋದ.. ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಮಾತಾಡಲು ಶುರು ಮಾಡಿದರು.

 

ಮೊದಲನೆಯವ ಹೇಳಿದ ನನ್ನ ಮಗ ನನ್ನ ಹೆಮ್ಮೆಯ ಪುತ್ರ.....ನನ್ನ ಮಗ ಎಂ.ಬಿ.ಎ. ಮುಗಿಸಿ ಒಂದು ಪ್ರತಿಷ್ಟಿತ ಕಂಪನಿಯಲ್ಲಿ

ಉನ್ನತ ಹುದ್ದೆಯಲ್ಲಿದ್ದಾನೆ.  ಅವನು ಈಗ ಎಷ್ಟು ಸಿರಿವಂತನೆಂದರೆ ತನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆಂದು ಮರ್ಸಿಡಿಸ್ ಕಾರನ್ನು

ಉಡುಗೊರೆಯಾಗಿ ನೀಡಿದ್ದಾನೆ.

 

ಎರಡನೆಯವ "ಹೌದಾ' ಎಂದು ಉದ್ಗಾರ ತೆಗೆದು..ನನ್ನ ಮಗನು ಏನು ಕಮ್ಮಿಯಿಲ್ಲ...ಅವನು ಪೈಲಟ್ ಟ್ರೈನಿಂಗ್ ಮುಗಿಸಿ

ಈಗ ಒಂದು ದೊಡ್ಡ ವಿಮಾನ ಯಾನ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಈಗ ತನ್ನದೇ ಆದ ಒಂದು ವಿಮಾನ ಯಾನ ಕಂಪನಿ

ತೆರೆದಿದ್ದಾನೆ..ಅವನು ತನ್ನ ಸ್ನೇಹಿತನ ಹುಟ್ಟು ಹಬ್ಬದ ಸಲುವಾಗಿ ಒಂದು ಪ್ರತ್ಯೇಕ ವಿಮಾನವನ್ನೇ ಉಡುಗೊರೆಯಾಗಿ ನೀಡಿದ್ದಾನೆ.

 

ಮೂರನೆಯವನ ಸರದಿ...ನನ್ನ ಮಗ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಹಾಗೆ ಪ್ರಪಂಚಂದ ಪ್ರತಿಷ್ಟಿತ

ಕಂಪನಿ ಒಂದರಲ್ಲಿ ಪ್ರಮುಖ ಪಾಲುದಾರನಗಿದ್ದಾನೆ. ಅವನು ತನ್ನ ಗೆಳೆಯನ ಹುಟ್ಟು ಹಬ್ಬದ ಸಲುವಾಗಿ ೩೦,೦೦೦ ಸಾವಿರ ಚದರ ಅಡಿಯ

ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾನೆ.

 

ಅಷ್ಟರಲ್ಲಿ ಶೌಚಕ್ಕೆಂದು ಹೋದ ವ್ಯಕ್ತಿ ಆಚೆ ಬಂದ.. ಏನು ಎಲ್ಲರು ಗಹನವಾದ ವಿಷಯದಲ್ಲಿ ಚರ್ಚೆ ಮಾಡುತ್ತಿರುವ ಹಾಗಿದೆ ಎಂದು ವಿಚಾರಿಸಿದಾಗ

ತಮ್ಮ ತಮ್ಮ ಮಕ್ಕಳ ಬಗ್ಗೆ ಎಂದು ಹೇಳಿ...ನಿಮ್ಮ ಮಗನ ಬಗ್ಗೆ ಹೇಳಿ ಎಂದರು.

 

ಆಗ ನಾಲ್ಕನೇ ವ್ಯಕ್ತಿ ನನ್ನ ಮಗ ಒಂದು ಕ್ಲಬ್ಬಿನಲ್ಲಿ ನೃತ್ಯ ಮಾಡುತ್ತಾನೆ ಎಂದು ಹೇಳಿದಾಗ ಉಳಿದವರು ಮೂಗು ಮುರಿದರು. ಆಗ ನಾಲ್ಕನೇ ವ್ಯಕ್ತಿ

ನನ್ನ ಮಗನನ್ನು ಅಷ್ಟು ಕೀಳಾಗಿ ಕಾಣಬೇಡಿ, ಎರಡು ವಾರದ ಹಿಂದೆ ಅವನ ಹುಟ್ಟು ಹಬ್ಬದ ಸಲುವಾಗಿ ಅವನ ಮೂವರು "ಬಾಯ್ ಫ್ರೆಂಡ್"  ಗಳು

ಅವನಿಗೆ ಒಂದು ಮರ್ಸಿಡಿಸ್ ಕಾರು, ಒಂದು ಪ್ರತ್ಯೇಕ ವಿಮಾನ ಹಾಗು ೩೦,೦೦೦ ಸಾವಿರ ಚದರ ಅಡಿಯ ಒಂದು ಬಂಗಲೆಯನ್ನು ಉಡುಗೊರೆಯಾಗಿ

ಕೊಟ್ಟಿದ್ದಾರೆ ಎಂದು ಹೇಳಿದ.

 

ಈಗ ಪೆಚ್ಚಾಗುವ ಸರದಿ ಆ ಮೂವರದು...