ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ

ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ

ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು

 

೧. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ ನೇರವಾದ ಮರಗಳನ್ನು ಕತ್ತರಿಸಲಾಗುತ್ತೆ ಮತ್ತು ಪ್ರಾಮಾಣಿಕನು ಮೊದಲು ತೊಂದರೆಗೊಳಗಾಗುತ್ತಾನೆ

೨.ಹಾವಿಗೆ ವಿಷವಿಲ್ಲದಿದ್ದರು ವಿಷದ ಹಾವಿನಂತೆ ಬುಸುಗುಡಬೇಕು

೩ ನಿನ್ನ ರಹಸ್ಯಗಳನ್ನು ಎಂದಿಗು ಯಾರಲ್ಲಿಯು ಹಂಚಿಕೊಳ್ಳಬೇಡ ಅದು ನಿನ್ನ ನಾಶಕ್ಕೆ ಕಾರಣಾವಾಗಬಲ್ಲದು

೪. ಯಾವ ಗೆಳೆತನೆವೆ ಆಗಲಿ ಯಾವುದೊ ಉದ್ದೇಶದಿಂದಲೆ ಕೂಡಿರುತ್ತದೆ , ಸ್ವಂತ ಉಪಯೋಗದ ದೂರದೃಷ್ಟಿಯಿಲ್ಲದ ಗೆಳೆತನ ಯಾವುದು ಇಲ್ಲ , ಇದು ಕಹಿ ಸತ್ಯ

೫ ಯಾವುದೇ ಕೆಲಸಕ್ಕೆ ಮುಂಚೆ ನಿಮ್ಮನ್ನು ಪ್ರಶ್ನಿಸಿಕೊಳ್ಳಿ ೧.ನಾನು ಏತಕ್ಕೆ ಈ ಕೆಲಸ ಮಾಡಬೇಕು ೨.ಈ ಕೆಲಸದ ಪರಿಣಾಮವೇನು ಮತ್ತು ೩.ಈ ಕೆಲಸದಲ್ಲಿ ನಾನು ಯಶಸ್ವಿಯಾಗುವೆನಾ?

೬ ಭಯ ನಿಮ್ಮನ್ನು ಸಮೀಪಿಸುತ್ತಿರುವಂತೆಯೆ ನೀವೆ ಅದರ ಮೇಲೆ ಆಕ್ರಮಣ ನಡೆಸಿ ನಾಶಪಡಿಸಿ

೭. ಒಮ್ಮೆ ನೀವು ಕೆಲಸ ಪ್ರಾರಂಬಿಸಿದ ನಂತರ ನಿಲ್ಲಿಸದಿರಿ ಮತ್ತು ಯಶಸ್ಸಿನ ಬಗ್ಗೆ ಹೆದರದಿರಿ

೮. ಹೂವಿನ ಸುಗಂದ ಗಾಳಿಬೀಸಿದತ್ತ ಮಾತ್ರ ಹರಡುತ್ತದೆ ಆದರೆ ಮನುಷ್ಯನ ಒಳ್ಳೆಯತನದ ಪರಿಣಾಮ ಎಲ್ಲ ದಿಕ್ಕಿನಲ್ಲು ಹರಡುತ್ತದೆ

೯. ಮನುಷ್ಯ ತನ್ನ ಸಾದನೆಯಿಂದಷ್ಟೆ ದೊಡ್ಡವನು ಹುಟ್ಟಿನಿಂದಲ್ಲ

೧೦ ಮೂರ್ಖನ ಕೈಯಲ್ಲಿರುವ ಉತ್ತಮ ಪುಸ್ತಕವು ಕುರುಡನ ಕೈಯಲ್ಲಿನ ಕನ್ನಡಿಯಂತೆ