ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನೂ ತಾವು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು,ಹಿಂದೆ ನಡೆದ ಹಗರಣಗಳತ್ತ ಬೊಟ್ಟುಮಾಡಿ,ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣ್ಣವನ್ನು ಹೆಗ್ಗಣ್ಣವಲ್ಲ ಎಂದು ನಂಬಿಸಲು ಹೊರಟ್ಟಿದಾರೆ.ಇವರೆಲ್ಲಾ ಜನರನ್ನು ಮೂರ್ಖರೆಂದು ತಿಳಿದಿದ್ದಾರೆಯೇ?.ಕಣ್ಣಮುಂದೆಯೇ ಅನ್ಯಾಯ ನಡೆಯುತ್ತಿದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಜನಸಾಮಾನ್ಯನಿದ್ದರೆ,ನಾಡಿನ ರಕ್ಷಣೆಗೆ ಪ್ರಾಮಾಣಿಕವಾಗಿ ಮುಂದಾಗುವ ನಾಯಕರ ಕೊರತೆ ಮತ್ತೊಂದೆಡೆ.ಈ ಸಂದರ್ಭದಲ್ಲಿ ಬುದ್ದಿಜೀವಿಗಳು,ಕನ್ನಡಹೋರಾಟಗಾರರು(ಕನ್ನಡವೆಂದರೇ ಅದು ಭಾಷೆ ಮಾತ್ರವಲ್ಲ.ಕನ್ನಡ ನೆಲ,ಜಲವೂ ಹೌದು) ಮೌನವಹಿಸಿರುವುದು ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.ಇನ್ನಾದರೂ ಜನರು ತಮ್ಮ ಪ್ರಜಾಶಕ್ತಿಯನ್ನು ಅರಿತು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವ ಅಗತ್ಯವಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬಿಡುಗಡೆ
ಕವಿ ಮತ್ತು ಕವಿತೆ
ಕೊಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುವುದೆ?
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!