ತನ್ನ ಪಾಡಿಗೆ ತಾನು,
ಕವಿತೆ ಗೀಚುತ್ತಾ ಇದ್ದ ಕವಿಗೆ,
ಒಲಿಯಿತು ಪ್ರಶಸ್ತಿಯ ಗರಿ.
ಕೊರಳ ತುಂಬ ಹಾರ ತುರಾಯಿ.
ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ.
ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ.
ಮತ್ಯಾವುದೋ ಅಧ್ಯಯನ ಕೇಂದ್ರದ ಸಾರಥ್ಯ.
ಕವಿ ಈಗ ಕಾರ್ಯನಿರತ,
ಕವಿತೆ ಮತ್ತೆ ಅನಾಥ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!