ಕನ್ನಡದಲೆ ಶಬ್ಧಗಳು ಸಿಗದೇನು ಕವಿಗಳಿಗೆ

ಚಿನ್ನದಂತಾ ನುಡಿಗಳ ಕಲಿಸಿರೊ ಜನಗಳಿಗೆ


ಸ್ವಚ್ಛಂದ ಇರುವಲ್ಲಿ ಭಾಷೆಯದು ಉಳಿವುದೆ

ನಾಡನುಡಿ ಸಂಗೀತವ ಉಣಿಸಿರೊ ಕಿವಿಗಳಿಗೆ


ಕಡತಂದ ಮಾತುಗಳಿಗೆ ಬೆಲೆಯಿದೆಯೆ ನೆಲದಲಿ

ಉಸಿರಿರುವ ತನಕವೂ ದಿನದಿನವು ಹೊಸಗಳಿಗೆ


ಇರಲೆಂದೂ ಹಳೆಗನ್ನಡ ನಡುಗನ್ನಡ ಹೊಸಗನ್ನಡ 

ಅವರವರ ಕಲಿಕೆಯೊಳು ಇರಲಯ್ಯಾ ಖುಷಿಗಳಿಗೆ


ಚೆಂದವಿರುವ ನೆಲದಲೀಶ ಬನ್ನಪಡದೆಲೆ ಇಹನಯ್ಯ

ನಾಡ ದೇವಿಯ ಜೊತೆಗೇ ಬದುಕುತಿರೆ ಸವಿಗಳಿಗೆ

-ಹಾ ಮ ಸತೀಶ ಬೆಂಗಳೂರು