ಮೂಡು ದಿಸೆಯಲಿ ಸೂರ್ಯನಿಂದು
ಕನ್ನಡಮ್ಮನ ಹರಸುತ
ಪಡುವ ಕಡಲಲಿ ಹೊನ್ನ ಬಣ್ಣದಿ
ಸಾಗಿ ನಲಿಸುತ ಕುಣಿಸುತ
ತಾಯೆ ಸರಸ್ವತಿ ನುಡಿಗಳೆಡೆಯಲಿ
ಕುಳಿತು ಸ್ವರಗಳ ಬರೆಸುತ
ತನುವಿನಾಳದ ಮನಸ್ಸಿನಾಳಕೆ
ನೆಲದ ನುಡಿಯನು ಕಲಿಸುತ
ಮೌನವಾಗಿಹ ಜನರ ನಡುವೆಯೆ
ಇರುತ ಒಲವಲಿ ಬೆರೆಯುತ
ನಮ್ಮ ನಡೆಗದು ನುಡಿಯ ತತ್ವದ
ಚೆಲುವ ಸಂಸ್ಕೃತಿ ತಿಳಿಸುತ
ಭಾಷೆ ಕನ್ನಡ ವೇಷ ಕನ್ನಡ
ತಿಳಿವು ಕನ್ನಡ ಚಿಮ್ಮುತ
ಜಗದ ಭಾಷೆಗೆ ಸಮವು ಎನ್ನುತ
ಹೆಜ್ಜೆ ಇಡುತಲೆ ಹೊಮ್ಮುತ
ಮನದ ಕನ್ನಡ ನುಡಿಯ ನಡೆಯದು
ನಾಡಿನೆಲ್ಲೆಡೆ ಕಾಣುತ
ನಾಡ ಭಾಷೆಯೆ ನನ್ನ ಉಸಿರದು
ಜನತೆಯೆಂದೂ ಹಾಡುತ
ಜಯತು ಜಯ ಎಂದೆನುತ ಹೇಳುತ
ವಿಜಯಿಯಾಗುತ ಸಾಗುತ
ಜಯಘೋಷ ಸುತ್ತಲು ಮೊಳಗಿದಾಗ
ನಾಡ ದೇವಿಯು ನಲಿಯುತ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!