ಬರೀ ಕಲೆ ಎಂದವರ ನುಡಿಗೆ,ಮನ ಮುರಿದಿದೆ ಕಾಂತ 

ಬೆಲೆಯಿಲ್ಲದ ಲೋಕದಲ್ಲಿ, ಕಲೆಯು ಕರಗಿದೆ ಕಾಂತ

ಚಪ್ಪಾಳೆಗಾಗಿ ಕುಣಿದವರಿಗೆ, ಸಿಕ್ಕಿತು ಸಂಭ್ರಮ 

ಭಾವ ಅಳಿದಿಹ ಎದೆಲಿ,ಏನು ಉಳಿದಿದೆ ಕಾಂತ

ಕಣ್ಣೀರೇ ಶಾಯಿಯಾಗಿ,ಹರಿದಿದೆ ಪುಟದ ಮೇಲೆ 

ಓದುವರಿಲ್ಲದೆ ಅಳುತ ಕವಿತೆಯು,ಅಳಿದಿದೆ ಕಾಂತ

ಹಣದ ಹಿಂದೆಯೇ ಓಡುವ, ಜನರ ಆತುರ ನೋಡು 

ನಿಜವಾದ ಪ್ರತಿಭೆಯನ್ನು,ಲೋಕ ಸುಲಿದಿದೆ ಕಾಂತ 

ಸುಮ್ಮನಾದ ಮೇಲೆ, ಬೆಲೆಯೇ ಬೇಡವೆಂದ ಈಶ

ಅವನೊಳಗಿನ ಸಾಹಿತ್ಯ, ಹಾಗೆಯೇ ಮುದುಡಿದೆ ಕಾಂತ 

-ಹಾ.ಮ ಸತೀಶ ಬೆಂಗಳೂರು