ಬದುಕಿನಲಿ ಬಯಸದಿರು
ಬಯಸದಿರು ವಿಷಗಳಿಗೆ
ವಿಷಗಳಿಗೆಯೊಳಗೆ ಸೇರಿ
ಸೇರಿ ಎಲ್ಲವನ್ನೂ ಕಳೆದು
ಕಳೆದು ದೂರಕೆ ಹೋದೆ
ಹೋದೆ ಎಲ್ಲಿಗೆ ಬಯಸಿ
ಬಯಸಿ ತಿಳಿವೆನು ನಾನು
ನಾನು ಅರಿಯುವೆನು ಈಗ
ಈಗ ನಿನ್ನಯ ಪಥವನು
ಪಥವನರಸುತಲೇ ಸಾಗಿ
ಸಾಗಿಹೆನು ಮೂಡು ದಿಕ್ಕಿನಲ್ಲೆ
ದಿಕ್ಕಿನಲ್ಲೇ ಸಾಗಿರಲು ಇಂದು
ಇಂದು ಹೋಗಿದ್ದ ನಿನ್ನ ಹೆಜ್ಜೆ
ಹೆಜ್ಜೆ ಗುರುತನ್ನು ಕಂಡೆನಿಂದು
ಕಂಡೆನಿಂದು ಕೊನೆಗೂ ನಿನ್ನ
ನಿನ್ನ ನೋಡಿ ಸಂತೋಷಗೊಂಡೆನು
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!